ಸುನೀತಾ ವಿಲಿಯಮ್ಸ್‌ ಹೊಸ ಫೋಟೋ ಕಂಡು ನಾಸಾ ದಿಗ್ಭ್ರಮೆ, ಸಣಕಲು ಕಡ್ಡಿಯಾದ ಗಗನಯಾತ್ರಿ!

Published : Nov 09, 2024, 07:44 PM IST
ಸುನೀತಾ ವಿಲಿಯಮ್ಸ್‌ ಹೊಸ ಫೋಟೋ ಕಂಡು ನಾಸಾ ದಿಗ್ಭ್ರಮೆ, ಸಣಕಲು ಕಡ್ಡಿಯಾದ ಗಗನಯಾತ್ರಿ!

ಸಾರಾಂಶ

ಸುನೀತಾ ವಿಲಿಯಮ್ಸ್‌ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ನಿಗದಿಗಿಂತ ಹೆಚ್ಚಿನ ಸಮಯ ವಾಸ್ತವ್ಯ ಮಾಡಿದ್ದಾರೆ. ಇದರಿಂದಾಗಿ ದೊಡ್ಡ ಮಟ್ಟದಲ್ಲಿ ತೂಕನಷ್ಟ ಅನುಭವಿಸಿದ್ದು, ಇದರಿಂದ ನಾಸಾ ಕೂಡ ಅಚ್ಚರಿಯಾಗಿದೆ.

ನವದೆಹಲಿ (ನ.9): ಸುನೀತಾ ವಿಲಿಯಮ್ಸ್‌ ಆರೋಗ್ಯದ ಬಗ್ಗೆ ಸ್ವತಃ ನಾಸಾ ದಿಗ್ಭ್ರಮೆ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಬ್ಯಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿಕೊಂಡಿರುವ  ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್‌ ಹಾಗೂ ಬಚ್‌ ವಿಲ್ಮೋರ್‌ ಅಗತ್ಯಕ್ಕಿಂತ ಹೆಚ್ಚಿನ ಕಾಲ ವಾಸ ಮಾಡುತ್ತಿದ್ದಾರೆ. ಇದರಿಂದಾಗಿ ಸುನೀತಾ ವಿಲಿಯಮ್ಸ್‌ ನಾಟಕೀಯ ರೀತಿಯಲ್ಲಿ ತೂಕ ಕಳೆದುಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಇತ್ತೀಚೆಗೆ ಸುನೀತಾ ವಿಲಿಯಮ್ಸ್‌ ಅವರ ಹೊಸ ಫೋಟೋಗಳು ಪ್ರಸಾರವಾಗಿದ್ದವು. ಈ ವೇಳೆ ಅವರ ಮುಖದಲ್ಲಿ ಯಾವ ಲವಲವಿಕೆ ಕೂಡ ಇದ್ದಿರಲಿಲ್ಲ. ಅವಧಿಗಿಂತ ಹೆಚ್ಚಿನ ಕಾಲ ಬ್ಯಾಹಾಕಾಶದಲ್ಲಿ ಉಳಿದುಕೊಂಡಿದ್ದ ಕಾರಣದಿಂದಾಗಿ ಅವರ ದೇಹರಚನೆ ಸಂಪೂರ್ಣವಾಗಿ ಬದಲಾಗಿದೆ. ವಿಪರೀತವಾಗಿ ತೂಕನಷ್ಟ ಕಂಡು ಸಣಕಲು ಕಡ್ಡಿಯಾಗಿದ್ದಾರೆ. ಕೇವಲ ಎಂಟು ದಿನಕ್ಕಾಗಿ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ್ದ ಸುನೀತಾ ವಿಲಿಯಮ್ಸ್‌ ಹಾಗೂ ಬಚ್‌ ವಿಲ್ಮೋರ್‌, ಬೋಯಿಂಗ್‌ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಆದ ಸಮಸ್ಯೆಇಂದಾಗಿ 150ಕ್ಕೂ ಅಧಿಕ ದಿನಗಳ ಕಾಲ ಐಎಸ್ಎಸ್‌ನಲ್ಲಿ ವಾಸ ಮಾಡುವಂತಾಗಿದೆ.

ಸುನೀತಾ ವಿಲಿಯಮ್ಸ್‌ ಆರೋಗ್ಯದ ಬಗ್ಗೆ ನಾಸಾ ಪ್ರತಿಕ್ರಿಯೆ: ಬಾಹ್ಯಾಕಾಶ ನನ್ನ ಎರಡನೆ ತವರು ಎಂದು ಹೇಳುವ ಸುನೀತಾ ವಿಲಿಯಮ್ಸ್‌, ಬಾಹ್ಯಾಕಾಶ ನಿಲ್ದಾಣದಲ್ಲಿ ಹೆಚ್ಚಿನ ದಿನಗಳ ಕಾಲ ಉಳಿಯಬೇಕಾಗಬಹುದು ಎಂದಾಗ ಬೇಸರ ವ್ಯಕ್ತಪಡಿಸಿರಲಿಲ್ಲ. ಇದರಿಂದಾಗಿ ಸಮಸ್ಯೆ ಎದುರಿಸಿದ್ದ ಬೋಯಿಂಗ್‌ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆ ಗಗನಯಾತ್ರಿಗಳಿಲ್ಲದೆ ಭೂಮಿಗೆ ವಾಪಾಸಾಗಿತ್ತು. ಆದರೆ, ಈಗ ಸುನೀತಾ ವಿಲಿಯಮ್ಸ್‌ ಅವರ ತೂಕದಲ್ಲಿ ಭಾರೀ ನಷ್ಟವಾಗಿದ್ದು ನಾಸಾ ಕಳವಳಕ್ಕೆ ಕಾರಣವಾಗಿದೆ. ಈ ಯೋಜನೆಯೊಂದಿಗೆ ಕೆಲಸ ಮಾಡುತ್ತಿರುವ ನಾಸಾ ಅಧಿಕಾರಿಗಳು ಕೂಡ ಸುನೀತಾ ಅವರ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆಕೆಯ ಕೆನ್ನೆಗಳು ಗುಳಿಬಿದ್ದಿವೆ, ಅದಲ್ಲದೆ, ಬಹಳಷ್ಟು ತೂಕ ಕಳೆದುಕೊಂಡಿದ್ದಾಳೆ ಎಂದು ವಿವರಿಸಿದ್ದಾರೆ.

ಮೂಳೆಗಳ ಮೇಲೆ ಚರ್ಮ ಇರಿಸಿದಂತೆ ಆಕೆ ಕಾಣುತ್ತಿದ್ದಾಳೆ ಎಂದು ನಾಸಾ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ. ಆಕೆಯ ತೂಕವನ್ನು ಸಮಪ್ರಮಾಣ ಮಾಡುವುದು ನಾಸಾದ ಮೊದಲ ಆದ್ಯತೆಯಾಗಿದೆ. ಆಕೆಯಲ್ಲಿ ಆಗಿರುವ ಅತಿವೇಗದ ಬದಲಾವಣೆಯಲ್ಲಿ ಇನ್ನು ಕೆಲ ದಿನದಲ್ಲಿಯೇ ಬದಲಾವಣೆ ಕಾಣಬಹುದು ಎಂದಿದ್ದಾರೆ.

'ಆಕೆಯ ಕೊನೆಯ ಚಿತ್ರವನ್ನು ನೋಡಿದಾಗ ಜೋರಾಗಿ ಉಸಿರುಗಟ್ಟುವಂಥ ಅನುಭವ ನನಗಾಯಿತು. ಈ ಬಗ್ಗೆ ನಾವು ಮಾತನಾಡಲೇಬೇಕಿದೆ. ಇದು ನಿಜವಾದ ಕಾಳಜಿ. ಆಕೆಯ ಆರೋಗ್ಯವನ್ನು ಈಗ ಎಲ್ಲರೂ ಗಂಭೀರವಾಗಿ ತೆಗೆದುಕೊಂಡಿದ್ದಾರೆ' ಎಂದಿದ್ದಾರೆ.

ಸುನೀತಾ ವಿಲಿಯಮ್ಸ್‌ ಬಾಹ್ಯಾಕಾಶ ಪ್ರಯಾಣ ಮಾಡುವಾಗ ಅವರು 63 ಕಕೆಜಿ ಇದ್ದರು. ಆದರೆ, ಅವಧಿಗಿಂತ ಹೆಚ್ಚಿನ ಕಾಲ ಬಾಹ್ಯಾಕಾಶದಲ್ಲಿ ಇರುವ ಕಾರಣ ಹೈ ಕ್ಯಾಲರಿ ಇಂಟೇಕ್‌ ಪಡೆದುಕೊಳ್ಳುವುದು ಕಡಿಮೆಯಾಗಿದೆ. ಕ್ಯಾಲರಿ ಇಂಟೇಕ್‌ ಇದ್ದಲ್ಲಿ ಮಾತ್ರವೇ ಆಕೆಯ ತೂಕ ಸರಿಯಾಗಿರಲಿ ಸಾಧ್ಯ. ಅವರು ಒಂದು ದಿನಕ್ಕೆ 3500 ರಿಂದ 4 ಸಾವಿರ ಕ್ಯಾಲೋರಿಯ ಆಹಾರ ತಿನ್ನಬೇಕು. ಹಾಗಿದ್ದಾಗ ಮಾತ್ರವೇ ಅವರು ಇದ್ದ ತೂಕವನ್ನು ಮೇಂಟೇನ್‌ ಮಾಡಲು ಸಾಧ್ಯ. ಇದನ್ನು ಮಾಡಲು ಸಾಧ್ಯವಾಗದೇ ಇದ್ದಾಗ, ವೇಗವಾಗಿ ತೂಕ ಕಡಿಮೆ ಆಗುತ್ತದೆ. ಸುನೀತಾ ವಿಚಾರದಲ್ಲೂ ಹೀಗಾಗಿರಬಹುದು ಎಂದಿದ್ದಾರೆ.

ದಿನವೊಂದಕ್ಕೆ 16 ಬಾರಿ ಸೂರ್ಯೋದಯ, ಸೂರ್ಯಾಸ್ತ: ಬಾಹ್ಯಾಕಾಶದ ಕೌತುಕ ತೆರೆದಿಟ್ಟ ಸುನಿತಾ ವಿಲಿಯಮ್ಸ್​

ಸಮಸ್ಯೆ ಇನ್ನೂ ಮುಗಿದಿಲ್ಲ:ಸುನೀತಾಗೆ ಆಗಿರುವ ಸಮಸ್ಯೆ ಇನ್ನೂ ಹೆಚ್ಚಾಗಬಹುದು. ಬಾಹ್ಯಾಕಾಶದಲ್ಲಿ ಮಾಂಸಖಂಡಗಳು ಹಾಗೂ ಮೂಳೆಗಳು ಗಟ್ಟಿಯಾಗಿ ಇರಬೇಕಿದ್ದಲ್ಲಿ ಅವರು ದಿನಕ್ಕೆ 2 ಗಂಟೆಗಳ ಕಾಲ ವ್ಯಾಯಾಮ ಮಾಡಲೇಬೇಕು. ಇದು ಹೆಚ್ಚಿನ ಕ್ಯಾಲೋರಿಯನ್ನು ಬೇಡುತ್ತದೆ. ವೈರಲ್‌ ಫೋಟೋಗಳಿಗಿಂತ ಮುನ್ನವೇ ನಾಸಾ ವೈದ್ಯರು ವಿಲಿಯಮ್ಸ್‌ ಅವರ ತೂಕ ನಷ್ಟವನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ. ಬಾಹ್ಯಾಕಾಶ ಪ್ರಯಾಣದ ಸಮಯದಲ್ಲಿ ಚಯಾಪಚಯ ಕ್ರಿಯೆಯಲ್ಲಿನ ಬದಲಾವಣೆಗಳಿಂದಾಗಿ ಮಹಿಳಾ ಗಗನಯಾತ್ರಿಗಳು ತಮ್ಮ ಪುರುಷ ಗಗನಯಾತ್ರಿಗಳಿಗಿಂತ ಹೆಚ್ಚು ವೇಗವಾಗಿ ಸ್ನಾಯುವಿನ ನಷ್ಟವನ್ನು ಅನುಭವಿಸುತ್ತಾರೆ ಎಂದು ಅಧ್ಯಯನಗಳು ಸೂಚಿಸುತ್ತವೆ.

ಸುನೀತಾ ವಿಲಿಯಮ್ಸ್, ಬುಚ್‌ ವಿಲ್ಮೋರ್ ಕರೆತರಲು ಅಂತರಿಕ್ಷಕ್ಕೆ ವ್ಯೋಮನೌಕೆ ಉಡಾವಣೆ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ