ಭೂಮಿಯಿಂದ 131 ಕೋಟಿ ಕಿ.ಮೀ ಹೆಚ್ಚಿನ ದೂರದಲ್ಲಿರುವ ಶನಿ ಗ್ರಹ, ಭಾನುವಾರ ರಾತ್ರಿ ದೆಹಲಿಯಲ್ಲಿ ಬರಿಗಣ್ಣಿಗೆ ಕಾಣಿಸಿದೆ. ಆಕಾಶದಲ್ಲಿ ಶನಿ ಗ್ರಹ ಮತ್ತು ಅದರ ಸುತ್ತಲಿನ ಉಂಗುರವು ಸ್ಪಷ್ಟವಾಗಿ ಗೋಚರಿಸಿರುವ ಈ ವಿಡಿಯೋ ವೈರಲ್ ಆಗಿದೆ.
ನವದೆಹಲಿ: ಭೂಮಿಯಿಂದ 131 ಕೋಟಿ ಕಿ.ಮೀ ಹೆಚ್ಚಿನ ದೂರದಲ್ಲಿರುವ ಶನಿ ಗ್ರಹ, ಭಾನುವಾರ ರಾತ್ರಿ ದೆಹಲಿಯಲ್ಲಿ ಬರಿಗಣ್ಣಿಗೆ ಕಾಣಿಸಿದೆ. ಆಕಾಶದಲ್ಲಿ ಶನಿ ಗ್ರಹ ಮತ್ತು ಅದರ ಸುತ್ತಲಿನ ಉಂಗುರವು ಸ್ಪಷ್ಟವಾಗಿ ಗೋಚರಿಸಿರುವ ಈ ವಿಡಿಯೋವನ್ನು ಅನಿಮೆ ಕುಂಗ್‌ಪು ಎಂಬ ಬಳಕೆದಾರರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ರಾತ್ರಿ 1.30ರ ಸುಮಾರಿಗೆ ಜಿಎಸ್ 12 ಇಂಚಿನ ಡಾಬ್ಸೋನಿಯನ್‌ನಲ್ಲಿ ಅಳವಡಿಸಲಾದ ಐಫೋನ್ 14 ಪ್ರೊ ಬಳಸಿಕೊಂಡು ಈ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ಕುಂಗ್‌ಪು ಬರೆದುಕೊಂಡಿದ್ದಾರೆ.
Bengaluru: ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಹಾ ಟ್ರೇ ಹಿಡಿದು ಸರ್ವರ್ ಆದ ಇಸ್ರೋ ಚಂದ್ರಯಾನ ವಿಜ್ಞಾನಿ!
undefined
Reddit ನಲ್ಲಿನ ಹಲವಾರು ಬಳಕೆದಾರರು ಶನಿ ಗೃಹದ ಈ ವೀಡಿಯೋಗೆ ಉತ್ಸಾಹದಿಂದ ಪ್ರತಿಕ್ರಿಯಿಸಿದ್ದಾರೆ. ನೀವು ಅದ್ಭುತ ವ್ಯಕ್ತಿ. ನೀವು ಐಫೋನ್ ಅನ್ನು ಅದರ ಸಾಮರ್ಥ್ಯಕ್ಕೆ ಬಳಸುತ್ತಿರುವ ಅಪರೂಪದ ವ್ಯಕ್ತಿ ಎಂದು ಬಳಕೆದಾರ ID ಹೊಂದಿರುವ ಒಬ್ಬ ಬಳಕೆದಾರರು - decorous_gru - ಪ್ರತಿಕ್ರಿಯಿಸಿದ್ದಾರೆ.
ಬಹುಪತ್ನಿತ್ವ ನಿಷೇಧಕ್ಕೆ ಅಸ್ಸಾಂ ಮಹತ್ವದ ಹೆಜ್ಜೆ, ಜನಾಭಿಪ್ರಾಯಕ್ಕೆ ಆಹ್ವಾನ
ಮತ್ತೊಬ್ಬ ಬಳಕೆದಾರ ಸ್ಕ್ವೇರ್-ಟೆಕ್ನಾಲಜಿ ಹೀಗೆ ಕಾಮೆಂಟ್ ಮಾಡಿದ್ದಾರೆ, "ವಾವ್. ನಾನು ಎಲ್ಲೋ ಓದಿದ್ದೇನೆ ಎಂದು ನಾನು ಭಾವಿಸುತ್ತೇನೆ 27/28 ಆಗಸ್ಟ್ 2023 ರಂದು ಗ್ರಹವು ಭೂಮಿಗೆ ಹತ್ತಿರವಾಗಿರುವುದರಿಂದ ಉತ್ತಮ ವೀಕ್ಷಣೆಯ ದಿನಾಂಕಗಳನ್ನು ನಿರೀಕ್ಷಿಸಲಾಗಿದೆ. ಮತ್ತು ಇದನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಅದ್ಭುತ! ಎಂದಿದ್ದಾರೆ.
ಈ ಮಧ್ಯೆ ವೀಡಿಯೊದ ಸತ್ಯಾಸತ್ಯತೆಯ ಬಗ್ಗೆ ಇನ್ನೂ ಅಧಿಕೃತ ದೃಢೀಕರಣ ಸಿಕ್ಕಿಲ್ಲ. ಶನಿಯು ಆಗಸ್ಟ್ 27 ರಂದು ಭೂಮಿಗೆ ಹತ್ತಿರದಲ್ಲಿರಲಿದೆ. ರಾತ್ರಿಯಿಡೀ ಗೋಚರಿಸುತ್ತದೆ. ಪ್ರಕಾಶಮಾನವಾದ ಹಳದಿ ನಕ್ಷತ್ರದಂತೆ ಕಾಣುತ್ತದೆ ಎಂದು ಸುದ್ದಿ ಇದೆ.
Saturn from Delhi (with a Telescope)
by u/Anime-kungfu in delhi