Chandrayaan Mission: ಕನಸು ಕಂಡಿದ್ದು ವಾಜಪೇಯಿ, ನೆಹರು ಜನ್ಮದಿನಕ್ಕೆ ಚಂದ್ರನಲ್ಲಿತ್ತು ಇಸ್ರೋ!

By Santosh Naik  |  First Published Aug 22, 2023, 12:18 PM IST

ಚಂದ್ರನ ಪರಿಶೋಧನೆ ಅಥವಾ ಲೂನಾರ್‌ ಎಕ್ಸ್‌ಪ್ಲೋರೇಷನ್‌ ಅನ್ನೋದೇ ಈಗ ಸಾಮಾನ್ಯ ಪದವಾಗಿ ಬಿಟ್ಟಿದೆ. ಭಾರತದ ಚಂದ್ರನ ಪರಿಶೋಧನೆಗೆ ಈಗ 14 ವರ್ಷ. 2008ರಲ್ಲಿ ಆರಂಭವಾಗಿದ್ದ ಈ ಯೋಜನೆ ಚಂದ್ರಯಾನ-3ವರೆಗೆ ಬಂದು ನಿಂತಿದೆ. ಭಾರತದ ಚಂದ್ರಯಾನದ ಕನಸನ್ನು ಮೊದಲು ಕಂಡಿದ್ದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ.


ಬೆಂಗಳೂರು (ಆ.22): ಅದಿನ್ನೂ 2000 ಇಸವಿಯ ಆರಂಭವಷ್ಟೇ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಎದುರು ಮುಂದೇನು ಅನ್ನೋ ಪ್ರಶ್ನೆಗಳಿದ್ದವು. ಆ ಹೊತ್ತಿಗಾಗಲೇ ಇಸ್ರೋದ ಸಂಸ್ಥಾಪಕರಾಗಿದ್ದ ವಿಕ್ರಮ್‌ ಸಾರಾಭಾಯಿ, ಭಾರತದ ಬಾಹ್ಯಾಕಾಶ ಯೋಜನೆಯ ನಿಟ್ಟಿನಲ್ಲಿ ಇಟ್ಟಿದ್ದ ಗುರಿಗಳನ್ನು ಇಸ್ರೋ ಮುಟ್ಟಿಯಾಗಿತ್ತು. ಉಪಗ್ರಹ ಉಡಾವಣೆಯಲ್ಲಿ ಸ್ವ ಅವಲಂಬನೆ, ರಾಕೆಟ್‌ ಉಡಾವಣಾ ವ್ಯವಸ್ಥೆ, ಬಜೆಟ್‌ ಎಲ್ಲವೂ ಇಸ್ರೋ ಪಾಲಿಗೆ ಸಿಕ್ಕಿತ್ತು.ಬಹುಶಃ ಅಧಿಕಾರದಲ್ಲಿದ್ದ ಎಲ್ಲಾ ಸರ್ಕಾರಗಳು ಇಸ್ರೋ ಪಾಲಿಗೆ ಅದನ್ನು ಮಾಡಿದ್ದವು. ಮುಂದೇನು ಅನ್ನೋ ಪ್ರಶ್ನೆ ಇದ್ದಾಗ 1999ರಲ್ಲಿಇಂಡಿಯನ್‌ ಅಕಾಡೆಮಿ ಆಫ್‌ ಸೈನ್ಸ್‌ನಲ್ಲಿ ಚಂದ್ರನ ಪರಿಶೋಧನೆಯ ಯೋಜನೆಗಳು ಮೊದಲಿಗೆ ಪ್ರಸ್ತಾಪವಾಗಿದ್ದವು. ಭಾರತದ ಆಸ್ಟ್ರೋನಾಟಿಕಲ್‌ ಸೊಸೈಟಿ ಆಫ್‌ ಇಂಡಿಯಾ 2000 ಇಸವಿಯಲ್ಲಿ ಈ ಯೋಜನೆಯನ್ನು ಸರ್ಕಾರದ ಮುಂದಿಟ್ಟಿತ್ತು. ಅಂದು ದೇಶದ ಪ್ರಧಾನಿಯಾಗಿದ್ದವರು ಅಟಲ್‌ ಬಿಹಾರಿ ವಾಜಪೇಯಿ. ಪೋಖ್ರಾಣ್‌ ಮೂಲಕ ಅಣುಬಾಂಬ್‌ ವಿಚಾರದಲ್ಲಿ ಸ್ವಾವಲಂಬಿಯಾಗಿದ್ದ ಭಾರತದ ಮುಂದೆ ಚಂದ್ರನ ಯೋಜನೆ ಇದ್ದಾಗ ಅದಕ್ಕೆ ಸರ್ವಸಮ್ಮತ ಒಪ್ಪಿಗೆಯನ್ನು ವಾಜಪೇಯಿ ನೀಡಿದ್ದರು. ಅದರ ಬೆನ್ನಲ್ಲಿಯೇ ಇಸ್ರೋ ನ್ಯಾಷನಲ್‌ ಲೂನಾರ್‌ ಮಿಷನ್‌ ಟಾಸ್ಕ್‌ ಫೋರ್ಸ್‌ ರಚಿಸಿ, ಭಾರತಕ್ಕೆ ಚಂದ್ರ ಯೋಜನೆಯ ಸಾಮರ್ಥ್ಯ ಇದೆಯೇ ಎಂದು ಪರಿಶೀಲಿಸಲು ಸಿದ್ಧವಾಯಿತು.

2003ರ ಏಪ್ರಿಲ್‌ ತಿಂಗಳಲ್ಲಿ ಭಾರತದ 100ಕ್ಕೂ ಅಧಿಕ ವಿಜ್ಞಾನಿಗಳ ತಂಡ ಟಾಸ್ಕ್‌ ಫೋರ್ಸ್‌ ನೀಡಿದ್ದ ಶಿಫಾರಸುಗಳನ್ನು ಒಪ್ಪಿ, ಚಂದ್ರನ ಪರಿಶೋಧನೆ ಭಾರತಕ್ಕೂ ಸಾಧ್ಯವಿದೆ ಅನ್ನೋದನ್ನು ಒಪ್ಪಿಕೊಂಡಿತ್ತಲ್ಲದೆ, ಭಾರತದ ಮುಂದಿನ ಯೋಜನೆ ಚಂದ್ರ ಅನ್ನೋದನ್ನು ಘೋಷಣೆ ಮಾಡಿತ್ತು. ಇದರಿಂದ ಸಂತಸದಲ್ಲಿದ್ದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ 2003ರ ಆಗಸ್ಟ್‌ 15ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಭಾರತದ ಈ ಯೋಜನೆಗೆ 'ಚಂದ್ರಯಾನ' ಎನ್ನುವ ಹೆಸರಿಟ್ಟು ಘೋಷಣೆಯನ್ನೂ ಮಾಡಿಬಿಟ್ಟರು. ವಾಜಪೇಯಿ ಘೋಷಣೆ ಮಾಡಿದ ಮೂರೇ ತಿಂಗಳಲ್ಲಿ ಸರ್ಕಾರ ಇದಕ್ಕೆ ಬೇಕಾದ ಅಗತ್ಯ ಹಣಕಾಸು ಅನುಮೋದನೆಯನ್ನೂ ನೀಡಿತು.

ಮೊದಲ ಹಂತದಲ್ಲಿ ಭಾರತ ಚಂದ್ರಯಾನ-1 ಘೋಷಣೆ ಮಾಡಿತ್ತು. ಚಂದ್ರನ ಕಕ್ಷಗೆ ಆರ್ಬಿಟರ್‌ಅನ್ನು ಕಳಿಸುವುದು ಮಾತ್ರವೇ ಗುರಿಯಾಗಿತ್ತು. ಆದರೆ, ಅಂದು ದೇಶದ ರಾಷ್ಟ್ರಪತಿಯಾಗಿ ವಿಜ್ಞಾನಿ ಅಬ್ದುಲ್‌ ಕಲಾಂ ಚಂದ್ರಯಾನ-1ರ ಸಭೆಯಲ್ಲಿ 'ನೌಕೆ ಚಂದ್ರನ ಕಕ್ಷೆಯವರೆಗೆ ಹೋಗುತ್ತದೆ ಎಂದಾದಲ್ಲಿ, ಚಂದ್ರನ ಮೇಲೆ ಉಪಗ್ರಹವನ್ನು ಇಳಿಸೋದಕ್ಕೆ ಸಮಸ್ಯೆ ಏನು' ಎಂದು ಪ್ರಶ್ನೆ ಮಾಡಿದ್ದರು. ಅದಾದ ಬಳಿಕ ಇಸ್ರೋ 'ಮೂನ್‌ ಇಂಪ್ಯಾಕ್ಟ್‌ ಪ್ರೋಬ್‌'ಅನ್ನು ಚಂದ್ರಯಾನ-1 ಆರ್ಬಿಟರ್‌ ಜೊತೆ ಕಳಿಸುವ ತೀರ್ಮಾನ ಮಾಡಿತ್ತು.

ವಾಜಪೇಯಿ ಕೆಂಪುಕೋಟೆಯಲ್ಲಿ ಘೋಷಣೆ ಮಾಡಿದ ಭರ್ತಿ ಆರು ವರ್ಷಗಳ ಬಳಿಕ 2008ರ ಅಕ್ಟೋಬರ್‌ 22 ರಂದು ಶ್ರೀಹರಿಕೋಟಾದ ಸತೀಶ್‌ ಧವನ್‌ ಸ್ಪೇಸ್‌ ಸೆಂಟರ್‌ನಿಂದ ಚಂದ್ರಯಾನ-1 ಯೋಜನೆ ಉಡಾವಣೆಯಾಗಿತ್ತು. 2008ರ ನವೆಂಬರ್‌ 8 ರಂದು ಚಂದ್ರಯಾನ-1 ನೌಕೆ ಲೂನಾರ್‌ ಟ್ರಾನ್ಸ್‌ಫರ್‌ ಟ್ರಾಜೆಕ್ಟರಿ ಮುಟ್ಟಿತ್ತು.

Tap to resize

Latest Videos

undefined

ಭಾರತದ ಬಾಹ್ಯಾಕಾಶ ಯೋಜನೆಯ ಕನಸು ಕಂಡಿದ್ದ ಮೊದಲ ಪ್ರಧಾನಿ ಜವಹರಲಾಲ್‌ ನೆಹರು ಅವರ ನೆನಪಿಗಾಗಿ ಅವರ ಜನ್ಮದಿನವಾದ ನವೆಂಬರ್‌ 14 ರಂದು ಚಂದ್ರನ ಮೇಲೆ ಮೂನ್‌ ಇಂಪ್ಯಾಕ್ಟ್‌ ಪ್ರೋಬ್‌ಅನ್ನು ಕ್ರ್ಯಾಶ್‌ ಲ್ಯಾಂಡ್‌ ಮಾಡಿಸುವುದು ಭಾರತದ ಗುರಿಯಾಗಿತ್ತು. ಅದರಂತೆ 2008ರ ನವೆಂಬರ್ 14 ರಂದು ಗಂಟೆಗೆ 1.6 ಕಿಲೋಮೀಟರ್ ವೇಗದಲ್ಲಿ ಚಲಿಸಿದ ಎಂಐಪಿ ಚಂದ್ರನ ಶೇಖಲ್ಟನ್‌ ಕಾರ್ಟರ್‌ನಲ್ಲಿ ಕುಸಿದು ಬೀಳುವ ಮುನ್ನ ಕೆಲವೊಂದು ಚಿತ್ರಗಳನ್ನು ಕಳಿಸಿಕೊಟ್ಟಿತ್ತು.

Chandrayaan-3 Updates: ಭಾರತ ಮಾತ್ರವಲ್ಲ, ಚಂದ್ರನಲ್ಲಿ ಇನ್ನೂ ಸಕ್ರಿಯವಾಗಿದೆ ಈ 6 ಮೂನ್‌ ಮಿಷನ್‌ಗಳು!

ಚಂದ್ರನ ಕಕ್ಷೆಯಲ್ಲಿ 9 ತಿಂಗಳು ಕಳೆದ ಬಳಿಕ ಚಂದ್ರಯಾನ-1 ನೌಕೆಯ ಸ್ಟಾರ್‌ ಸೆನ್ಸಾರ್‌ ವೈಫಲ್ಯ ಕಂಡಿತ್ತು. ಬ್ಯಾಕ್‌ಅಪ್‌ ಸೆನ್ಸಾರ್‌ ಕೂಡ ವೈಫಲ್ಯ ಕಂಡಾಗ, 2009ರ ಆಗಸ್ಟ್‌ 28 ರಂದು ಇಸ್ರೋ ಚಂದ್ರಯಾನ-1 ನೌಕೆಯ ಜೊತೆ ಸಂಪರ್ಕ ಕಳೆದುಕೊಂಡಿತು. 

 

Chandrayaan-3: ಇಸ್ರೋ ಮಾತ್ರವಲ್ಲ ವಿಕ್ರಮನ ಬೆನ್ನುಬಿದ್ದಿದೆ ನಾಸಾ, ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ!

click me!