
ಭೂಮಿ, ಸೂರ್ಯ, ಚಂದ್ರ ಸೇರಿದಂತೆ ಭೂಮಂಡಲ ಕೌತುಕದ ಆಗರ. ಬಾಹ್ಯಾಕಾಶದ ವಿಸ್ಮಯಗಳು, ಭೂಮಿಯ ಚಲನೆ, ಸೂರ್ಯ ಸೇರಿದಂತೆ ಸೌರಮಂಡಲದ ಕುರಿತು ಸಂಶೋಧನೆಗಳು ಅಧ್ಯಯನಗಳು ನಡೆಯುತ್ತಲೇ ಇರುತ್ತದೆ. ವಿಶೇಷ ಅಂದರೆ ಭೂಮಿ ತಿರುಗುತ್ತೆ ಎಂದು ಶಾಲೆಯಿಂದ ಕಲಿಯುತ್ತಾ ಬಂದರೂ ಪ್ರತಿಯೊಬ್ಬರಲ್ಲೂ ಹಲವು ಪ್ರಶ್ನೆಗಳು ಉದ್ಭವಿಸುವುದು ಸಾಮಾನ್ಯ. ಸೂರ್ಯನ ಬೆಳಕಿನಲ್ಲಿ ಭೂಮಿ, ಚಂದ್ರನ ಬೆಳಕಿನ ಭೂಮಿ ಹೇಗೆ ಕಾಣುತ್ತೆ, 24 ದಿನದಲ್ಲಿ ಏನೆಲ್ಲಾ ನಡೆಯುತ್ತೆ ಅನ್ನೋ ಕುರಿತ ಅದ್ಭುತ ವಿಡಿಯೋವನ್ನು ಬಾಹ್ಯಾಕಾಶದಿಂದ ಸೆರೆ ಹಿಡಿಯಲಾಗಿದೆ.
ನಾಸಾ ಗಗನಯಾತ್ರಿ ಸೋಫಿ ಅಡೆನಾಟ್ ಬಾಹ್ಯಾಕಾಶದಿಂದ ಭೂಮಿಯ ಸಂಪೂರ್ಣ ಚಲನೆ ವಲನೆಗಳನ್ನು ಸೆರೆ ಹಿಡಿದಿದ್ದಾರೆ. ಸೋಫಿ ಅಡೆನಾಟ್ ಪ್ರಮುಖವಾಗಿ ಭೂಮಿ ಚಂದ್ರನ ಬೆಳಕಿನಲ್ಲಿ ಹೇಗೆ ಕಾಣುತ್ತೆ. ಇದೇ ವೇಳೆ ಭೂಮಿ ಚಲನೆ, ಆಗಸದಲ್ಲಿನ ಮಿಂಚು ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಸೆರೆ ಹಿಡಿಯಲಾಗಿದೆ. ಬಾಹ್ಯಾಕಾಶ ನೌಕೆಯ ವಿಂಡೋದಿಂದ ಈ ವಿಡಿಯೋ ಸೆರೆ ಹಿಡಿಯಲಾಗಿದೆ. ಇದೇ ವೇಳೆ ಇಲ್ಲಿಂದ ಕಣ್ಣಾರೆ ನೋಡುವ ದೃಶ್ಯ ಕ್ಯಾಮೆರಾ ಕಣ್ಣಿಗೆ ಸಾಟಿಯಾಗಲಾರದು. ಕಣ್ಣಿಗೆ ಕಾಣುವ ಅದ್ಭುತ ದೃಶ್ಯವನ್ನು ಕ್ಯಾಮೆರಾ ಅಷ್ಟೇ ಅದ್ಭುತವಾಗಿ ಸೆರೆಹಿಡಿಯುವುದಿಲ್ಲ ಎಂದಿದ್ದಾರೆ. ನಮ್ಮ ಕಣ್ಣಿನಿಂದ ನೋಡುವುದೇ ಅದ್ಭುತ ಅನುಭವ ಎಂದಿದ್ದಾರೆ.
ಭೂಮಿಯ ಮೇಲಿರುವ ಬಾಹ್ಯಾಕಾಶ ನೌಕೆ ಸುತ್ತುವ ಕಾರಣ ಭೂಮಿ ಚಲನೆ, ಪ್ರಕ್ರಿಯೆಗಳನ್ನು ಸೆರೆ ಹಿಡಿಯಲಾಗಿದೆ. ಭೂಮಿ ಯಾವ ರೀತಿ ತಿರುಗುತ್ತೆ ಅನ್ನೋದು ಗಮನಿಸಬಹುಗು. ಮಿಂಚು ಹುಳದಂತೆ ಮಿನುಗುವ ಸಿಡಿಲು ಮಿಂಚು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಚಂದ್ರ ಉದಯಿಸುತ್ತಿರುವ ದೃಶ್ಯ, ಚಂದ್ರನ ಬೆಳಕಿನಲ್ಲಿ ಇಡಿ ಭೂಮಿ ಮೇಲಿನ ಪ್ರಕ್ರಿಯೆಗಳು ಸೆರೆಯಾಗಿದೆ.ಕತ್ತಲೆಯ ನಡುವೆ ಹರಡಿರುವ ನಗರಗಳ ಬೆಳಕಿನ ವಿನ್ಯಾಸಗಳು, ಮೋಡಗಳ ಚಲನೆ ಹಾಗೂ ವಾತಾವರಣದ ತೆಳುವಾದ ಪದರವು ಅತ್ಯಂತ ಸ್ಪಷ್ಟವಾಗಿ ಸೆರೆಯಾಗಿದೆ. ಈ ಅದ್ಭುತ ವಿಡಿಯೋಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ಬಾಹ್ಯಾಕಾಶ ನೌಕೆಯ ಕಿಟಕಿಯಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ, ನಾನಾಗಿದ್ದರೆ ಈ ದೃಶ್ಯ ನೋಡುತ್ತಾ ಕುಳಿತುಕೊಳ್ಳುತ್ತಿದ್ದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಅದು ನಂಬಲು ಅಸಾಧ್ಯವಾದ ಅದ್ಭುತ ದೃಶ್ಯ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
Jour 150, orbite 2326 — L’une de mes vues préférées depuis l’orbite : La Terre de nuit ✨🌍, illuminée par les activités humaines et les phénomènes naturels. Que notre planète est belle !
🎥 @ESA / @NASA#εpsilon • @esaspaceflight • @ESA_fr • @Space_Station • @NASAJohnson… pic.twitter.com/y9FTcM36Lb— Adenot Sophie (@Soph_astro) July 13, 2026
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.