Latest Videos

ಇನ್ಮುಂದೆ ಕತ್ತಲು ಕಡಿಮೆ, ಹಗಲು ಹೆಚ್ಚಂತೆ: ವಿಜ್ಞಾನಿಗಳಿಂದ ಬಯಲಾಯ್ತು ಸತ್ಯ!

By Suchethana DFirst Published Jun 17, 2024, 12:50 PM IST
Highlights

ಭೂಮಿಯ ಒಳಭಾಗದಲ್ಲಿ ಅಚ್ಚರಿಯ ಬೆಳವಣಿಗೆ ಕುರಿತು ಅಧ್ಯಯನದಿಂದ ಆತಂಕಕಾರಿ ವಿಷಯಗಳು ಬಯಲಾಗಿದೆ. ಇದರಿಂದ ಆಗುವ ಪರಿಣಾಮಗಳೇನು?  
 

ಪ್ರಕೃತಿಯ ವೈಚಿತ್ರದ ಮುಂದೆ ಮನುಷ್ಯನ ತಿಳಿವಳಿಕೆ, ಬುದ್ಧಿವಂತಿಕೆ ಎಲ್ಲವೂ ಶೂನ್ಯ. ಮನುಷ್ಯನ ಊಹೆಗೂ ಮೀರಿದ ಅದೆಷ್ಟೋ ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಅಂಥವುಗಳಲ್ಲಿ ಕೆಲವೊಂದನ್ನು ಅಧ್ಯಯನಗಳ ಮೂಲಕ ಪ್ರಸ್ತುತಪಡಿಸಲಾಗುತ್ತದೆ. ಇದೀಗ ಭೂಮಿಯ ಒಳಭಾಗದ ಕುರಿತು ವಿಶೇಷ ಅಧ್ಯಯನವೊಂದನ್ನು ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ್ದು, ಅಚ್ಚರಿಯ ಫಲಿತಾಂಶವನ್ನು ಕಂಡುಕೊಂಡಿದ್ದಾರೆ. 
ಭೂಮಿಯ ಒಳಭಾಗ ಅಥವಾ ಒಳತಿರುಳು  ಗ್ರಹದ ಮೇಲೈಗಿಂತ ಹೆಚ್ಚು ನಿಧಾನವಾಗಿ ತಿರುಗುತ್ತಿದೆ ಎಂಬ ಆತಂಕದ ವಿಷಯವೀಗ ಬಯಲಿಗೆ ಬಂದಿದೆ. ಈ ಒಳ ಪದರವು ಭೂಮಿ ಮೇಲಿನ ಪದರಕ್ಕಿಂತ ಅತ್ಯಂತ ಕಡಿಮೆ ವ್ಯಾಸ ಹೊಂದಿರುವ ಪ್ರದೇಶವಾಗಿದೆ. ಒಳಗಿನ ತಿರುಳು   ಕಬ್ಬಿಣ ಮತ್ತು ನಿಕಲ್‌ನ ಅತಿ ಬಿಸಿಯಾದ ಮತ್ತು ಅತಿ ದಟ್ಟವಾದ ಗೋಳವಾಗಿದ್ದು ಸುಮಾರು 4,800 ಕಿ.ಮೀ.ಗಿಂತ ಹೆಚ್ಚು ವ್ಯಾಪಿಸಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. 

ಈ ಸಂಶೋಧನೆಯು ಗ್ರಹಗಳ ಯಂತ್ರಶಾಸ್ತ್ರದ ಬಗ್ಗೆ ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಷ್ಟಕ್ಕೂ ಇದರಿಂದ ಆಗುವ ಪರಿಣಾಮ ಮೇಲ್ನೋಟಕ್ಕೆ ಅತಿ ಚಿಕ್ಕದು ಎನಿಸಿದರೂ ಇದೊಂದು ರೀತಿಯಲ್ಲಿ ಆತಂಕದ ವಿಷಯವೇ ಎನ್ನುವುದು ಸಂಶೋಧಕರ ಅನಿಸಿಕೆ. ಈ ನಿಧಾನಗತಿಯ ತಿರುಗುವಿಕೆಯಿಂದ  ಭೂಮಿಗೆ ಯಾವ ರೀತಿ ಹಾನಿಯಾಗಲಿದೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಆದರೆ ಭೂಮಿಯ ವೇಗದಲ್ಲಿ ಹಾಗೂ ಹಗಲು ರಾತ್ರಿಯ ನಡುವೆ ಒಂದು ಸೆಕೆಂಡ್‌ನಷ್ಟು ಇದರಿಂದ ಬದಲಾವಣೆ ಕಂಡುಬರಲಿದೆ ಎಂದು ಅಂದಾಜಿಸಲಾಗಿದೆ. ಈ ಒಂದೇ  ಒಂದು ಸೆಕೆಂಡ್​ನ ಅಂತರ ಬಹು ದೊಡ್ಡ  ಬದಲಾವಣೆಗೆ ಕಾರಣವಾಗಬಹುದು ಎನ್ನುತ್ತಿದ್ದಾರೆ  ವಿಜ್ಞಾನಿಗಳು. ಇದೇ ರೀತಿ ಒಳಗಿನ ತಿರುಳು ತನ್ನ ಬೇಗ ಕಡಿಮೆ ಮಾಡುತ್ತಾ ಬಂದರೆ ಭೂಮಿಯ ತಿರುಗುವಿಕೆಯ ವೇಗ ಸಹ ಕಡಿಮೆ ಆಗಬಹುದು. ಇದರಿಂದ ಹತ್ತಾರು ರೀತಿಯ ಸಮಸ್ಯೆ ಎದುರಿಸಬೇಕಾಗುತ್ತದೆ. ಅದರಲ್ಲೂ ಭೂಮಿ ಮೇಲೆ ವಾಸಿಸುವ ಜೀವರಾಶಿಗಳ ಮೇಲೆ ಅದರ ಪರಿಣಾಮ ಉಂಟಾಗಲಿದೆ.

ಹಾರ್ವರ್ಡ್ ಅಧ್ಯಯನಕ್ಕೆ ಬೆಚ್ಚಿ ಬಿದ್ದ ಜಗತ್ತು, ಭೂಮಿ ಮೇಲೆ ಮನುಷ್ಯನ ವೇಷದಲ್ಲಿದೆ ಅನ್ಯಗ್ರಹ ಜೀವಿ!


ನೇಚರ್‌ನಲ್ಲಿ ಪ್ರಕಟವಾದ ಅಧ್ಯಯನವು 2010 ರ ಸುಮಾರಿಗೆ ಭೂಮಿ ಒಳಭಾಗವು ತನ್ನ ವೇಗವನ್ನು ಕಡಿಮೆ ಮಾಡಲು ಪ್ರಾರಂಭಿಸಿತು ಎಂದು ತಿಳಿಸಲಾಗಿದೆ. ಇದರ  ಪರಿಣಾಮವಾಗಿ ಆದರೆ ಭೂಮಿಯ ವೇಗದಲ್ಲಿ ಹಾಗೂ ಹಗಲು ರಾತ್ರಿಯ ನಡುವೆ ಒಂದು ಸೆಕೆಂಡ್‌ನಷ್ಟು ಇದರಿಂದ ಬದಲಾವಣೆ ಕಂಡುಬರಲಿದೆ. ಇದು  ಭೂಮಿಯ ಕಾಂತಕ್ಷೇತ್ರದ ಸ್ಥಿರತೆ ಮತ್ತು   ದಿನಗಳ ಅವಧಿಯ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಎಂದು ಅದರಲ್ಲಿ ವಿವರಿಸಲಾಗಿದೆ.  ಇದು ಸುಮಾರು 40 ವರ್ಷಗಳಲ್ಲಿ ಮೊದಲ ಬಾರಿಗೆ ಭೂಮಿಯ ನಿಲುವಂಗಿಗಿಂತ ನಿಧಾನವಾಗಿ ಚಲಿಸುತ್ತಿದೆ ಎಂದು ಕಂಡು ಹಿಡಿಯಲಾಗಿದೆ. ಇದು ಅಂತಿಮವಾಗಿ ಇಡೀ ಗ್ರಹದ ತಿರುಗುವಿಕೆಯನ್ನು ಬದಲಾಯಿಸಬಹುದು, ನಮ ದಿನಗಳನ್ನು ಹೆಚ್ಚಿಸಬಹುದು. ಒಳಗಿನ ತಿರುಳನ್ನು ಹಿಮೆಟ್ಟಿಸುವುದು ಒಂದು ಸೆಕೆಂಡಿನ ಭಿನ್ನರಾಶಿಗಳಿಂದ ಒಂದು ದಿನದ ಉದ್ದವನ್ನು ಬದಲಾಯಿಸಬಹುದು ಎಂದು ವಿಡೇಲ್‌ ಹೇಳಿದರು: ಸೆಕೆಂಡಿನ ಸಾವಿರ ಭಾಗದ ಕ್ರಮದಲ್ಲಿ, ಸಮುದ್ರಗಳು ಮತ್ತು ವಾತಾವರಣದ ಮಂಥನದ ಶಬ್ದದಲ್ಲಿ ಬಹುತೇಕ ಕಳೆದುಹೋಗಿರುವುದನ್ನು ಗಮನಿಸುವುದು ತುಂಬಾ ಕಷ್ಟ ಎಂದಿದ್ದಾರೆ.

ಭೂಮಿಯ ಈ ಅಧ್ಯಯನಕ್ಕಾಗಿ, ಸಂಶೋಧಕ ಜಾನ್ ವಿಡೇಲ್ ನೇತೃತ್ವದ ತಂಡವು  ದಕ್ಷಿಣ ಅಟ್ಲಾಂಟಿಕ್‌ನ ದಕ್ಷಿಣ ಸ್ಯಾಂಡ್‌ವಿಚ್ ದ್ವೀಪಗಳ ಸುತ್ತಲೂ 1991 ಮತ್ತು 2023 ರ ನಡುವೆ ದಾಖಲಾದ 121 ಪುನರಾವರ್ತಿತ ಭೂಕಂಪಗಳ ಸಮಯ ಹಾಗೂ ಆ ತೀವ್ರತೆಯನ್ನು ವಿಶ್ಲೇಷಿಸಿದ್ದಾರೆ. ಇದರ ಅಧ್ಯಯನ ಕೈಗೊಂಡ ಸಂದರ್ಭದಲ್ಲಿ  ಭೂಮಿಯ ಒಳ ಪದರ ಹಾಗೂ ಕಟ್ಟ ಕಡೆಯ ಪದರವು ಭೂಮಿ ಮೇಲ್ಮೈಗಿಂತ ಕಡಿಮೆ ವೇಗದಲ್ಲಿ ಸುತ್ತುತ್ತಿದ್ದು, ಇದು ಆರಂಭವಾಗಿದ್ದು  2010ರ ಬಳಿಕ ಎಂದು ತಿಳಿದುಬಂದಿದೆ.  ಇದು ಅಂತಿಮವಾಗಿ ಇಡೀ ಗ್ರಹದ ತಿರುಗುವಿಕೆಯನ್ನು ಬದಲಾಯಿಸಬಹುದು, ನಮ್ಮ ದಿನಗಳನ್ನು ಹೆಚ್ಚಿಸಬಹುದು.  ಒಂದು ಸೆಕೆಂಡಿನ ಅಂತರವೇ ಬಹುದೊಡ್ಡ ವಿಷಯವಾಗಿ  ಒಂದು ದಿನದ ವ್ಯಾಪ್ತಿಯನ್ನೇ ಬದಲಾಯಿಸಬಹುದು.  ಸೆಕೆಂಡಿನ ಸಾವಿರ ಭಾಗದ ಕ್ರಮದಲ್ಲಿ, ಸಮುದ್ರಗಳು ಮತ್ತು ವಾತಾವರಣದ ಮಂಥನದ ಶಬ್ದದಲ್ಲಿ ಬಹುತೇಕ ಕಳೆದುಹೋಗಿರುವುದನ್ನು ಗಮನಿಸುವುದು ತುಂಬಾ ಕಷ್ಟ ಎಂದು ವಿಡೇಲ್‌ ಹೇಳಿದ್ದಾರೆ. 

ಏಲಿಯನ್‌ಗಳು ನಮ್ಮ ಮಧ್ಯೆನೇ ಮನುಷ್ಯರ ಹಾಗೆ ವೇಷ ಮರೆಸಿಕೊಂಡು ಬದುಕ್ತಿರ್ಬೋದು! ಹಾರ್ವರ್ಡ್ ಅಧ್ಯಯನ
 

click me!