Latest Videos

ಇಂದು ರಾತ್ರಿ ಅಪ್ಪಳಿಸಲಿದೆ ವಿಮಾನ ಗಾತ್ರದ ಉಲ್ಕೆ, 71 ಸಾವಿರ ಕಿ.ಮಿ ವೇಗದಲ್ಲಿ ಭೂಮಿಯತ್ತ ಚಲನೆ!

By Chethan KumarFirst Published Jun 16, 2024, 9:21 PM IST
Highlights

ನಾಸಾ ಅತ್ಯಂತ ಪ್ರಮುಖ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಇತ್ತ ವಿಜ್ಞಾನಿಗಳು ಅಲರ್ಟ್ ಆಗಿದ್ದಾರೆ. ಕಾರಣ ಇಂದು ರಾತ್ರಿ ಉಲ್ಕಾಪಾತ ಸಂಭವಿಸುತ್ತಿದೆ. ವಿಮಾನ ಗಾತ್ರದ ಉಲ್ಕೆಯೊಂದು ಬರೊಬ್ಬರಿ ಗಂಟೆಗೆ 71 ಸಾವಿರ ಕಿ.ಮಿ ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದೆ. 
 

ಖಗೋಳದ ವಿಸ್ಮಯಗಳಲ್ಲಿ ಉಲ್ಕಾಪಾತ ಅತೀ ಅಪಾಯಾಕಾರಿ.ನಾಸಾ ಎಚ್ಚರಿಕೆ ಬೆನ್ನಲ್ಲೇ ವಿಜ್ಞಾನಿಗಳು ಅಲರ್ಟ್ ಆಗಿದ್ದಾರೆ. ಆತಂಕ, ಕುತೂಹಲ ಹೆಚ್ಚಾಗಿದೆ.2024 ಎಲ್‌‌ಜೆಡ್4 ಅನ್ನೋ ಉಲ್ಕೆಯೊಂದು ಬರೋಬ್ಬರಿ 71 ಸಾವಿರ ಕಿಲೋಮೀಟರ್ ವೇಗದಲ್ಲಿ ಉಲ್ಕೆಯೊಂದು ಭೂಮಿಯತ್ತ ಧಾವಿಸುತ್ತಿದೆ. ಇಂದು ರಾತ್ರಿ ಈ ಉಲ್ಕೆ ಭೂಮಿಯತ್ತಆಗಮಿಸಲಿದೆ ನಾಸಾ ಎಚ್ಚರಿಸಿದೆ. ಈ ಉಲ್ಕೆಯ ಗಾತ್ರ 72 ಅಡಿ ವಿಸ್ತೀರ್ಣ ಹೊಂದಿದೆ. ಅಂದರೆ ವಿಮಾನ ಗಾತ್ರದಷ್ಟಿರುವ ಉಲ್ಕೆ ಭೂಮಿಯತ್ತ ಧಾವಿಸುತ್ತಿದೆ. ಆದರೆ ಜನ ಸಮಾನ್ಯರು ಆತಂಕ ಪಡಬೇಕಿಲ್ಲ. ಕಾರಣ ಈ ಉಲ್ಕೆ ಭೂಮಿಯಿಂದ 1.80 ಮಿಲಿಯನ್ ಮೈಲುಗಳ ದೂರದದಲ್ಲಿ ಹಾದು ಹೋಗಲಿದೆ ಎಂದು ನಾಸಾ ಹೇಳಿದೆ.

ಒಟ್ಟು ಮೂರು ಉಲ್ಕೆಗಳು ಬಾಹ್ಯಾಕಾಶದಿಂದ ಪತನಗೊಂಡು ಭೂಮಿಯತ್ತ ಬೀಳಲಿದೆ. ಆದರೆ ಈ ಪೈಕಿ 024 ಎಲ್‌‌ಜೆಡ್4 ಅನ್ನೋ ಉಲ್ಕೆ ಭೂಮಿಗೆ ಹತ್ತರಿದಿಂದ ಹಾದು ಹೋಗಲಿದೆ. ಈ ಉಲ್ಕೆ ಪ್ರತಿ ಗಂಟೆಗೆ 71,109 ಕಿ.ಮೀ ಹಾಗೂ ಪ್ರತಿ ಸೆಕೆಂಡ್‌ಗೆ 21.42 ಕಿ.ಮೀ ವೇಗದಲ್ಲಿ ಭೂಮಿಯತ್ತ ಚಲಿಸುತ್ತಿದೆ. ಈ ಉಲ್ಕೆ ಭೂಮಿಯಿಂದ ಕೇವಲ 1,73,000 ಮೈಲಿ ದೂರದಿಂದ ಪಾಸ್ ಆಗಲಿದೆ. ಭೂಮಿ ಹಾಗೂ ಚಂದ್ರನ ನಡುವಿನ ಅಂತರ 2,39,000 ಮೈಲಿ.

ಹಾರ್ವರ್ಡ್ ಅಧ್ಯಯನಕ್ಕೆ ಬೆಚ್ಚಿ ಬಿದ್ದ ಜಗತ್ತು, ಭೂಮಿ ಮೇಲೆ ಮನುಷ್ಯನ ವೇಷದಲ್ಲಿದೆ ಅನ್ಯಗ್ರಹ ಜೀವಿ!

ಬಾಹ್ಯಾಕಾಶದಲ್ಲಿ ಉಲ್ಕಾಪಾತಗಳು ಸಾಮಾನ್ಯ. ಹಲವು ಉಲ್ಕಾಪಾತ ಭೂಮಿಗೆ ಅಪ್ಪಳಿಸುವುದಿಲ್ಲ. ಭೂಮಿಯ ಸಮೀಪದಿಂದ ಹಾದು ಹೋಗಲಿದೆ. ಕೆಲ ಉಲ್ಕೆಗಳು ಭೂಮಿಗೆ ಅಪ್ಪಳಿಸಿದ ಊದಾಹರಣೆಗಳೂ ಇವೆ. ಆದರೆ ಇಲ್ಲಿ ಭೂಮಿಗೆ ಅಪ್ಪಳಿಸುವ ಉಲ್ಕೆಯ ಗಾತ್ರ ಅತ್ಯಂತ ಪ್ರಮುಖವಾಗಿದೆ. ಕಾರಣ 2024ರ ಜನವರಿ 21 ರಂದು  3.3 ಅಡಿ ವಿಸ್ತೀರ್ಣ ಉಲ್ಕೆ ಬರ್ಲಿನ್‌ ಪ್ರದೇಶದಲ್ಲಿ ಅಪ್ಪಳಿಸಿತ್ತು. ಆದರೆ ಬೃಹತ್ ಗಾತ್ರದ ಉಲ್ಕೆ ಭೂಮಿಗ ಅಪ್ಪಳಿಸಿದರೆ ಸಂಪೂರ್ಣ ಜೀವ ಸಂಕುಲ ನಾಶವಾಗಲಿದೆ. ಬರೋಬ್ಬರಿ 66 ಮಿಲಿಯನ್ ವರ್ಷಗಳ ಹಿಂದೆ ಬೃಹತ್ ಗಾತ್ರದ ಉಲ್ಕೆ ಭೂಮಿಗೆ ಅಪ್ಪಳಿಸಿತ್ತು. ಇದರ ಪರಿಣಾಮ ಡೈನೋಸಾರ್ ಸೇರಿದಂತೆ ಹಲವು ಜೀವ ಸಂಕುಲ ಸಂತತಿ ನಾಶವಾಗಿತ್ತು.

ಸದ್ಯ 2024 ಎಲ್‌‌ಜೆಡ್4 ಉಲ್ಕೆ ವಿಜ್ಞಾನಿಗಳ ಪ್ರಕಾರ ಭೂಮಿಗೆ ಹತ್ತಿರವಾಗಿದ್ದರೂ, ಸಾಕಷ್ಟು ದೂರದಲ್ಲಿ ಹಾದು ಹೋಗುತ್ತಿದೆ. ಹೀಗಾಗಿ ಅಪಾಯದ ಆತಂಕವಿಲ್ಲ. ಇದೀಗ ವಿಜ್ಞಾನಿಗಳು ಇದರ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಹಲವು ಉಲ್ಕಾಪಾತಗಳನ್ನು ವಿಜ್ಞಾನಿಗಳು ಸಂಶೋಧನೆ ಮೂಲಕ ಪತ್ತೆ ಹಚ್ಚಿ ಅನಾಹುತಗಳನ್ನೂ ತಪ್ಪಿಸಿದ ಉದಾಹರಣೆಗಳಿವೆ.

ಬಾಹ್ಯಾಕಾಶ ಕೇಂದ್ರದಲ್ಲೂ ವೈರಸ್‌: ಸುನಿತಾಗೆ ಆತಂಕ..!
 

click me!