ಹಾರ್ವರ್ಡ್ ಅಧ್ಯಯನಕ್ಕೆ ಬೆಚ್ಚಿ ಬಿದ್ದ ಜಗತ್ತು, ಭೂಮಿ ಮೇಲೆ ಮನುಷ್ಯನ ವೇಷದಲ್ಲಿದೆ ಅನ್ಯಗ್ರಹ ಜೀವಿ!

By Chethan Kumar  |  First Published Jun 14, 2024, 10:10 PM IST

ಅನ್ಯಗ್ರಹ ಜೀವಿ ಇನ್ಯಾವುದೋ ಗ್ರಹದಲ್ಲಿಲ್ಲ. ಇದೇ ಭೂಮಿ ಮೇಲೆ ನಮ್ಮ ಜೊತೆಗೆ ಇದೆ. ಆದರೆ ಮನುಷ್ಯ ವೇಷ ಧರಿಸಿರುವ ಈ ಅನ್ಯಗ್ರಹ ಜೀವಿ ಭೂಮಿಯಲ್ಲೇ ಇದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ಅಧ್ಯಯನ ವರದಿ ಹೇಳುತ್ತಿದೆ.
 


ಕೇಂಬ್ರಿಡ್ಜ್(ಜೂ.14) ಅನ್ಯಗ್ರಹ ಜೀವಿ ಕುರಿತು ಹಲವು ಸಂಶೋಧನೆಗಳು ನಡೆದಿದೆ. ಇನ್ನು ಈ ಕುರಿತು ಕೆಲ ವಿಡಿಯೋಗಳು ಹರಿದಾಡಿದೆ. ಆದರೆ ಇದ್ಯಾವುದಕ್ಕೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಇದೀಗ ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಯನ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಅನ್ಯಗ್ರಹ ಜೀವಿಗಳಿಗೆ ಚಂದ್ರನ ಮೇಲೆ, ಇತರ ಗ್ರಹದ ಮೇಲೆ ಹುಡುಕುವ ಅಗತ್ಯವಿಲ್ಲ. ಇದೇ ಭೂಮಿ ಮೇಲಿದೆ. ಮುಷ್ಯರ ಜೊತೆಗೆ ವಾಸಿಸುತ್ತಿದೆ. ಮನುಷ್ಯನ ವೇಷ ಧರಿಸಿ ಅನ್ಯಗ್ರಹ ಜೀವಿಗಳು ಇಲ್ಲೇ ಇದೆ ಎಂದು ಈ ಅಧ್ಯಯನ ವರದಿ ಹೇಳುತ್ತಿದೆ.

ಭೂಮಿ ಮೇಲೆ ಅನ್ಯಗ್ರಹ ಜೀವಿಗಳು ರಹಸ್ಯವಾಗಿ ಬದುಕುತ್ತಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ಸಂಶೋಧನೆ ಹೇಳುತ್ತಿದೆ. ಹ್ಯೂಮನ್ ಫ್ಲೋರಿಶಿಂಗ್ ಪ್ರೋಗ್ರಾಮ್ ಸಂಶೋಧಕರ ತಂಡ ಈ ಮಹತ್ವದ ಅಧ್ಯಯನ ನಡೆಸಿ ವರದಿ ನೀಡಿದೆ. ಭೂಮಿಯಲ್ಲಿ ಮುಷ್ಯರ ನಡುವೆ ರಹಸ್ಯವಾಗಿ ಬದುಕುತ್ತಿರುವ ಅನ್ಯಗ್ರಹ ಜೀವಿಗಳು ಇತರ ಗ್ರಹದಲ್ಲಿರುವ ಅನ್ಯಗ್ರಹ ಜೀವಿಗಳ ಕುಟುಂಬ, ಸ್ನೇಹಿತರನ್ನು ಭೇಟಿಯಾಗಲು ಅಂತರಿಕ್ಷ ನೌಕೆಗಳನ್ನು ಬಳಸುತ್ತಿರುವ ಸಾಧ್ಯತೆಯನ್ನೂ ಈ ಸಂಶೋಧನೆ ಬೆಳಕು ಚೆಲ್ಲುತ್ತಿದೆ. ಇದೇ ಅಂತರಿಕ್ಷ ನೌಕೆಗಳು ಅಲ್ಲೊಂದು ಇಲ್ಲೊಂದು ಪ್ರತ್ಯಕ್ಷವಾಗಿ ಅನ್ಯಗ್ರಹ ಜೀವಿ ಭೂಮಿಗೆ ಬಂದಿದೆ ಅನ್ನೋ ಆತಂಕ ಸೃಷ್ಟಿಯಾಗಿರುವ ಸಾಧ್ಯತೆಗಳಿವೆ ಎಂದು ಅಧ್ಯಯನ ಹೇಳುತ್ತಿದೆ.  

Tap to resize

Latest Videos

undefined

ಏಲಿಯನ್ ಸುಳಿವು ಪತ್ತೆ, 124 ಬೆಳಕಿನ ವರ್ಷ ದೂರದಲ್ಲಿನ ಈ ಪ್ಲಾನೆಟ್ ಕುರಿತು ಸಂಶೋಧನೆ ಆರಂಭ!

ಈ ಅಧ್ಯಯನ ವರದಿ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಿದೆ. ಇದರಲ್ಲಿ ಮಾನವನ ಅಸ್ಥಿತ್ವ, ಪ್ರಾಚಿನತೆ, ನಾಗರೀಕತಗಳ ಕುರಿತು ವಿವರಿಸಲಾಗಿದೆ. ಈ ಅಧ್ಯಯನ ವರದಿಯ ಕೆಲ ಪ್ರಮುಖ ಅಂಶಗಳು ಇಲ್ಲಿವೆ.

ಹ್ಯೂಮನ್ ಕ್ರಿಪ್ಟೋಟೆರೆಸ್ಟ್ರಿಯಲ್
ಪ್ರಾಚೀನ ಮಾನವನ ನಾಗರೀಕತೆ ನಶಿಸಿಹೋಗಿದೆ. ಆಧುನಿಕತೆ, ತಾಂತ್ರಿಕತೆ ಅಭಿವೃದ್ಧಿಯಲ್ಲಿ ಈ ಪ್ರಾಚೀನತೆ ನಾಶವಾಗಿದೆ. ಆದರೆ ಅದರ ಕರುಹುಗಳು ಅವಶೇಷ ರೂಪದಲ್ಲಿ ಅಸ್ತಿತ್ವದಲ್ಲಿದೆ ಎಂದು ಈ ಅಧ್ಯಯನ ವರದಿ ಹೇಳುತ್ತದೆ. ಈ ಪೈಕಿ ಹೋಮಿನಿಡ್ ಅಥವಾ ಥೆರೋಪಾಡ್ ಕ್ರಿಪ್ಟೋಟೆರೆಸ್ಟ್ರಿಯಲ್‌ ಭೂಮಿಯಲ್ಲಿರುವ ಪ್ರಾಣಿ ಸಂಕುಲದಿಂದ ಸೃಷ್ಟಿಯಾಗಿರುವ ಅಥವಾ ಅಭಿವೃದ್ಧಿಯಾಗಿರುವ ಸಂಕುಲವಾಗಿದೆ. ಅಂದರೆ ಮಂಗನಿಂದ ಮಾನವ ಅನ್ನೋ ರೀತಿ ಹೋಮಿನಿಡ್ ಸಂತತಿಯಾಗಿರಬಹುದು ಅಥವಾ ಡೈನೋಸಾರ್‌ನಂತಹ ಸಂತತಿಯಿಂದ ಟಿಸಿಲೊಡೆದ ವಂಶಸ್ಥರಾಗಿರಬಹುದು ಎಂದು ಈ ಅಧ್ಯಯನ ಹೇಳುತ್ತಿದೆ. 

ಆದರೆ ಇದರ ನಡುವೆ ಬೇರೆ ಗ್ರಹಗಳಿಂದ ಅನ್ಯಗ್ರಹ ಜೀವಿಗಳು ಭೂಮಿಗೆ ಆಗಮಿಸಬಹುದು. ಈ ಜೀವಿಗಳು ವಾಸಿಸಲು ಯೋಗ್ಯವಿರುವ ಗ್ರಹಗಳಲ್ಲಿ ಮರೆ ಮಾಚಿಕೊಂಡು ಜೀವಿಸಬಹುದು ಎಂದು ಹಾರ್ವರ್ಡ್ ವಿಶ್ವವಿದ್ಯಾಲಯ ಅಧ್ಯಯನ ಹೇಳುತ್ತಿದೆ.  

ಮೆಕ್ಸಿಕೋ ಸಂಸತ್ತಿನಲ್ಲಿ ಪ್ರದರ್ಶಿಸಿದ ಏಲಿಯನ್ಸ್‌ ಜೀವಂತವಾಗಿತ್ತು, ಬೆಚ್ಚಿ ಬೀಳಿಸಿದ ವೈದ್ಯರ ಪರೀಕ್ಷೆ!

click me!