ಜೂ. 21ಕ್ಕೆ ಸ್ಟ್ರಾಬೆರಿ ಮೂನ್ ಗೋಚರ, ಮಿಸ್ ಮಾಡಬೇಡಿ ಇದಕ್ಕೂ ಹನಿಮೂನ್‌ಗೂ ಇದೆ ಸಂಬಂಧ!

By Chethan KumarFirst Published Jun 18, 2024, 8:54 PM IST
Highlights

ಖಗೋಳ ಕೌತುಕ ವೀಕ್ಷಿಸಲು ಸಜ್ಜಾಗಿ. ಜೂನ್ 21ಕ್ಕೆ ಆಗಸದಲ್ಲಿ ಸ್ಟ್ರಾಬೆರಿಮೂನ್ ಗೋಚರಿಸಲಿದೆ. ಹಣ್ಣಿನ ಹೆಸರಿನಲ್ಲಿರುವ ಚಂದ್ರನಿಗೂ ಹನಿಮೂನ್‌ಗೂ ಒಂದು ಸಂಬಂಧ ಇದೆ. ಜೂನ್ 21ರಂದು ಆಗಸದಲ್ಲಿ ಚಂದ್ರನ ನೋಡಲು ಮರೆಯಬೇಡಿ.
 

ನವದೆಹಲಿ(ಜೂ.18) ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಗಳು, ಭೂಮಿ ಸುತ್ತ ತಿರುಗುವ ಚಲನೆ, ಬಾಹ್ಯಾಕಾಶದ ಕೌತುಕ ಬಗೆದಷ್ಟು ಹೆಚ್ಚಾಗುತ್ತದೆ. ಇದೀಗ ಜೂನ್ 21ರ ದಿನಾಂಕ ನೆನಪಿಟ್ಟುಕೊಳ್ಳಿ. ಕಾರಣ ಜೂನ್ 21 ರಂದು ಆಗಮದಲ್ಲಿ ಚಂದ್ರ ವಿಶೇಷವಾಗಿ ಗೋಚರಿಸಲಿದ್ದಾನೆ. ಹೌದು, ಜೂನ್ 21ಕ್ಕೆ ಸ್ಟ್ರಾಬೆರಿ ಮೂನ್ ಗೋಚರಿಸಲಿದೆ. ಪೂರ್ಣ ಚಂದಿರ ಆಗಸದಲ್ಲಿ ಕಾಣಿಸಲಿದ್ದು, ಬಣ್ಣದಲ್ಲೂ ಎಲ್ಲನ್ನೂ ಆಕರ್ಷಿಸಲಿದೆ.

ಬೇಸಿಗೆ ಕಾಲದ ಅಂತ್ಯ ಅಂದರೆ ಖಗೋಳ ಬೇಸಿಗೆ ಅಂತ್ಯಗೊಂಡು ಹೊಸ ಕಾಲಮಾನಕ್ಕ ಹೊರಳು ಈ ದಿನ ಚಂದಿರ ಪೂರ್ಣವಾಗಿ ಗೋಚರಿಸಲಿದೆ. ಆದರೆ ಈ ವೇಳೆ ಚಂದ್ರ ಸ್ಟ್ರಾಬೆರಿ ಬಣ್ಣದಲ್ಲಾಗಲಿ, ಅಥವಾ ಕೆಂಪು, ಪಿಂಕ್ ಬಣ್ಣದಲ್ಲಿ ಗೋಚರಿಸುವುದಿಲ್ಲ.  ಈ ವೇಳೆ ಚಂದ್ರ ಸಾಮಾನ್ಯಕ್ಕಿಂತ ತುಸು ಹೆಚ್ಚಾದ ಹಳದಿ ಮಿಶ್ರಿತ ಚಿನ್ನದ ಬಣ್ಣದಲ್ಲಿ ಕಂಗೊಳಿಸಲಿದೆ.  

Latest Videos

ಇಂದು ರಾತ್ರಿ ಅಪ್ಪಳಿಸಲಿದೆ ವಿಮಾನ ಗಾತ್ರದ ಉಲ್ಕೆ, 71 ಸಾವಿರ ಕಿ.ಮಿ ವೇಗದಲ್ಲಿ ಭೂಮಿಯತ್ತ ಚಲನೆ!

ಇದಕ್ಕೆ ಸ್ಟ್ರಾಬೆರಿ ಮೂನ್, ಹಾಟ್ ಮೂನ್ , ಹನಿಮೂನ್, ರೋಸ್ ಮೂನ್  ಎಂದೂ ಕರೆಯುತ್ತಾರೆ. ಉತ್ತರ ಅಮೆರಿಕದಲ್ಲಿ ಸ್ಟ್ರಾಬೆರಿ ಮೂನ್ ಗೋಚರಿಸಿದ ಬಳಿಕ ಸ್ಟ್ರಾಬೆರಿ ಹಣ್ಣಿನ ಬೆಳೆ ಬೆಳೆಯಲು ಆರಂಭಿಸುತ್ತಾರೆ ಎಂದು ಇತಿಹಾಸ ಹೇಳುತ್ತದೆ. ಜೂನ್ ತಿಂಗಳಲ್ಲಿ ಅಂತಿಮ ವಾರದಲ್ಲಿ ಸ್ಟ್ರಾಬೆರಿ ಮೂನ್ ಗೋಚರಿಸಲಿದೆ. ಇಲ್ಲಿಂದ ಬಳಿಕ ಮಳೆ ತೀವ್ರತೆ ಹೆಚ್ಚಾಗಲಿದೆ. ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿದೆ. ಇದೇ ವೇಳೆ ಗುಲಾಬಿ ಹೂವುಗಳು ಹೆಚ್ಚಾಗಿ ಹೂವು ಬಿಡುತ್ತದೆ. ಹೀಗಾಗಿ ಈ ಹೆಸರಿನಿಂದ ಕರೆಯುತ್ತಾರೆ. 

ಉತ್ತರ ಅಮೆರಿಕ ಹಾಗೂ ಯೂರೋಪ್ ದೇಶಗಳಲ್ಲಿ ಸ್ಟ್ರಾಬೆರಿ ಮೂನ್ ಬಳಿಕ ಮದುವೆಗಳು ಹೆಚ್ಚಾಗಿ ನಡೆಯುತ್ತಿದೆ. ಮದುವೆ ಬಳಿಕ ನವ ಜೋಡಿ ಹನಿಮೂನ್‌ಗೆ ತೆರಳುತ್ತಾರೆ. ಅಮೆರಿಕ ಖಗೋಳ ವಿಜ್ಞಾನಿ ಜ್ಯಾಕಿ ಪ್ರಕಾರ, ಆಯಾ ಭಾಗದಲ್ಲಿ ಸ್ಟ್ರಾಬೆರಿ ಮೂನ್‌ಗೆ ಹಲವು ಹೆಸರುಗಳಿವೆ. ಅಲ್ಲಿನ ಸಂಸ್ಕೃತಿ, ಸಂಪ್ರದಾಯ, ಹಬ್ಬಗಳಿಗೆ ಅನುಗುಣವಾಗಿ ಹಲವು ಹೆಸರುಗಳಿವೆ ಎಂದಿದ್ದಾರೆ.

ಇನ್ಮುಂದೆ ಕತ್ತಲು ಕಡಿಮೆ, ಹಗಲು ಹೆಚ್ಚಂತೆ: ವಿಜ್ಞಾನಿಗಳಿಂದ ಬಯಲಾಯ್ತು ಸತ್ಯ!
 

click me!