ಸೂರ್ಯ ಗ್ರಹಣ: ಅರು​ಣಾ​ಚಲಪ್ರದೇಶ, ಲಡಾಖ್‌ನಲ್ಲಿ ಗೋಚರ!

By Suvarna News  |  First Published Jun 10, 2021, 11:48 AM IST

ಈ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಕೌಂಟ್‌ಡೌನ್

ಭಾರತದಲ್ಲಿ ಅರು​ಣಾ​ಚಲ ಪ್ರದೇಶ ಮತ್ತು ಲಡಾಖ್‌ನ ಕೆಲವೇ ಕೆಲವು ಭಾಗ​ಗ​ಳಲ್ಲಿ ಮಾತ್ರವೇ ಕಾಣಿಸಲಿದೆ ಕೌತುಕ

ಉತ್ತರ ಅಮೆ​ರಿಕ, ಯುರೋಪ್‌ ಮತ್ತು ಏಷ್ಯಾದ ಭಾಗ​ಗ​ಳಲ್ಲಿ ಪೂರ್ತಿ ಗ್ರಹಣ ಗೋಚರಿಸಲಿದೆ


ನವದೆಹಲಿ(ಜೂ.10): ವಾರ್ಷಿಕ ಸೂರ್ಯ ಗ್ರಹ​ಣವು ಗುರು​ವಾರ ಸಂಭ​ವಿ​ಸ​ಲಿದೆ. ಆದರೆ ಅರು​ಣಾ​ಚಲ ಪ್ರದೇಶ ಮತ್ತು ಲಡಾಖ್‌ನ ಕೆಲವೇ ಕೆಲವು ಭಾಗ​ಗ​ಳಲ್ಲಿ ಮಾತ್ರವೇ ಈ ಗ್ರಹಣ ಕಾಣಿ​ಸಿ​ಕೊ​ಳ್ಳ​ಲಿದೆ ಎಂದು ಖಭೌತ ​ಶಾ​ಸ್ತ್ರ​ಜ್ಞರು ತಿಳಿ​ಸಿ​ದ್ದಾರೆ.

ದೇಶದ ಈಶಾನ್ಯ ಭಾಗ​ಗ​ಳಾದ ಅರು​ಣಾ​ಚಲ ಪ್ರದೇಶ ಮತ್ತು ಲಡಾ​ಖ್‌​ನಲ್ಲಿ ಮಾತ್ರವೇ ಈ ಗ್ರಹಣ ಸಂಭ​ವಿ​ಸ​ಲಿದ್ದು, ದೇಶದ ಯಾವುದೇ ಭಾಗ​ಗ​ಳಲ್ಲಿ ಸೂರ್ಯ ಗ್ರಹಣ ಕಂಡು​ಬ​ರು​ವು​ದಿಲ್ಲ. ಈ ಪ್ರಕಾರ ಅರು​ಣಾ​ಚ​ಲ ​ಪ್ರ​ದೇ​ಶ​ದಲ್ಲಿ ಸಂಜೆ 5.52ಕ್ಕೆ ಮತ್ತು ಲಡಾ​ಖ್‌​ನಲ್ಲಿ ಸಂಜೆ 6.15ರ ವೇಳೆಗೆ 3-4 ನಿಮಿ​ಷ​ಗಳ ಕಾಲ ಗ್ರಹಣ ಗೋಚ​ರಿ​ಸ​ಲಿದೆ.

Tap to resize

Latest Videos

undefined

ಆದರೆ ಉತ್ತರ ಅಮೆ​ರಿಕ, ಯುರೋಪ್‌ ಮತ್ತು ಏಷ್ಯಾದ ಭಾಗ​ಗ​ಳಲ್ಲಿ ಪೂರ್ತಿ ಗ್ರಹಣ ಕಂಡು​ಬ​ರ​ಲಿದೆ ಎಂದು ಅಧಿ​ಕಾ​ರಿ​ಗಳು ತಿಳಿ​ಸಿ​ದ್ದಾರೆ.

ಪ್ರತೀ ಬಾರಿ ಗ್ರಹಣ ಬಂದಾಗ ನಂಬಿಕೆ ಅಪನಂಬಿಕೆ ಬಗ್ಗೆ ಚರ್ಚೆ ಶುರುವಾಗುತ್ತವೆ. ವಿಜ್ಞಾನಿಗಳ ಪ್ರಕಾರ ಸೂರ್ಯಗ್ರಹಣ ಎನ್ನುವಂತದ್ದು ಸೌರಮಂಡಲದಲ್ಲಿ ನಡೆಯುವ ಒಂದು ಸಹಜ ಪ್ರಕ್ರಿಯೆ ಹಾಗೂ ಒಂದು ಕೌತುಕ. ಆದರೆ, ಜ್ಯೋತಿಷಿಗಳು ಹೇಳೋ ಪ್ರಕಾರ ಈ ಗ್ರಹಣ ತುಂಬಾ ಅಪಾಯಕಾರಿ. ಗ್ರಹಣದ ಪ್ರಭಾವದಿಂದ ಪಂಚಭೂತಗಳಲ್ಲಿ ವ್ಯತ್ಯಾಸ ಉಂಟಾಗಿ, ಪ್ರಕೃತಿ ವಿಕೋಪಗಳು ಹೆಚ್ಚಾಗಬಹುದು ಎಂದು ವಿಶ್ಲೇಷಿಸುತ್ತಾರೆ. 

click me!