ಆಮ್ಲಜನಕ ಇಲ್ಲದೆಯೇ ಬದುಕಬಲ್ಲ ಪ್ರಾಣಿ ಪತ್ತೆ!

By Kannadaprabha News  |  First Published Feb 28, 2020, 7:31 AM IST

ಆಮ್ಲಜನಕ ಇಲ್ಲದೆಯೇ ಬದುಕಬಲ್ಲ ಪ್ರಾಣಿ ಪತ್ತೆ| ಹೆನ್ನೆಗುಯಾ ಸಾಲ್ಮಿನಿಕೋಲಾ ಹೆಸರಿನ ಸೂಕ್ಷ್ಮ ಪರಾವಲಂಬಿ ಶೋಧ


ಜೆರುಸಲೆಂ[ಫೆ.28]: ಪ್ರಾಣಿಗಳು ಬದುಕಲು ಆಮ್ಲಜನಕ ಅತ್ಯವಶ್ಯಕ. ಆಮ್ಲಜನಕ ಇಲ್ಲದೇ ಪ್ರಾಣಿಗಳಲ್ಲಿ ತಮ್ಮ ದೇಹಕ್ಕೆ ಬೇಕಾದ ಶಕ್ತಿ ಉತ್ಪಾದನೆ ಸಾಧ್ಯವಿಲ್ಲ ಎಂಬುದು ವಿಜ್ಞಾನದ ಮೂಲ ನಿಯಮ. ಆದರೆ, ಆಮ್ಲಜನಕ ಇಲ್ಲದೆಯೂ ಬದುಕಬಲ್ಲ ಪ್ರಾಣಿಯೊಂದನ್ನು ವಿಜ್ಞಾನಿಗಳು ಇದೇ ಮೊದಲ ಬಾರಿಗೆ ಪತ್ತೆಹಚ್ಚಿದ್ದಾರೆ. ಜೆಲ್ಲಿ ಫಿಶ್‌ ರೀತಿಯ ಪರಾವಲಂಬಿ ಜೀವಿ ಇದಾಗಿದೆ. ಹೆನ್ನೆಗುಯಾ ಸಾಲ್ಮಿನಿಕೋಲಾ ಹೆಸರಿನ ಸೂಕ್ಷ್ಮ ಪರಾವಲಂಬಿ ಜೀವಿ ಸಾಲ್ಮನ್‌ ಜಾತಿಯ ಮೀನುಗಳ ಸ್ನಾಯುಗಳಲ್ಲಿ ಜೀವಿಸುತ್ತವೆ ಎಂದು ಅಮೆರಿಕದ ನ್ಯಾಷನಲ್‌ ಪ್ರೊಸಿಡಿಂಗ್ಸ್‌ ಆಫ್‌ ಅಕಾಡೆಮಿ ಆಫ್‌ ಸೈನ್ಸ್‌ ಜರ್ನಲ್‌ನಲ್ಲಿ ಸಂಶೋಧನಾ ವರದಿಯೊಂದು ತಿಳಿಸಿದೆ.

10 ಜೀವ ಕೋಶಗಳನ್ನು ಹೊಂದಿರುವ ಇದರಲ್ಲಿ ಉಸಿರಾಟ ವ್ಯವಸ್ಥೆಗೆ ಅಗತ್ಯವಿರುವ ಬಹುಕೋಶೀಯ ವ್ಯವಸ್ಥೆಯೇ ಇಲ್ಲ. ಹೀಗಾಗಿ ಇದಕ್ಕೆ ಉಸಿರಾಡಬೇಕಾದ ಅಗತ್ಯವಿಲ್ಲ. ಆಮ್ಲಜನಕದ ಅಗತ್ಯವಿಲ್ಲದೇ ಚಯಾಪಚಯ ಕ್ರಿಯೆಗೆ ಅಗತ್ಯವಿರುವ ಶಕ್ತಿ ಉತ್ಪಾದಿಸಬಲ್ಲದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಸಂಶೋಧನೆ ಪ್ರಾಣಿಗಳ ಕುರಿತುವ ವಿಜ್ಞಾನದ ಗ್ರಹಿಕೆಯನ್ನೇ ಬದಲಿಸಿದೆ.

Tap to resize

Latest Videos

ಜೆಲ್ಲಿಫಿಶ್‌ ಮತ್ತು ಹವಳ ಜೀವಿಗಳ ಪ್ರಜಾತಿಗೆ ಸೇರಿದ ಪ್ರಾಣಿ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ. ಇವು ವಿಕಾಸಗೊಳ್ಳುತ್ತಾ ಹೋದಂತೆ ಕೆಲವು ಏಕ ಕೋಶ ಜೀವಿಗಳಂತೆ ಉಸಿರಾಡುವುದನ್ನು ನಿಲ್ಲಿಸಿವೆ ಮತ್ತು ಆಮ್ಲಜನಕರಹಿತವಾಗಿ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಿವೆ ಎಂದು ಇಸ್ರೇಲ್‌ನ ಟೆಲ್‌ ಅವೀವ್‌ ವಿಶ್ವವಿದ್ಯಾಲಯ ಪ್ರೊಫೆಸರ್‌ ಡೊರೋಥಿ ಹುಚೋನ್‌ ತಿಳಿಸಿದ್ದಾರೆ.

click me!