
ಆಲ್ಮಟಿ[ಫೆ.07]: ಕಳೆದ 11 ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸವಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಗಗನಯಾತ್ರಿ ಕ್ರಿಸ್ಟಿನಾ ಕೋಚ್ ಗುರುವಾರ ಸುರಕ್ಷಿತವಾಗಿ ಭೂಮಿಗೆ ಮರಳಿದರು. ಈ ಮೂಲಕ ಬಾಹ್ಯಾಕಾಶದಲ್ಲಿ ಮಹಿಳಾ ಗಗನಯಾತ್ರಿಯೊಬ್ಬರು ಅತೀ ದೀರ್ಘಕಾಲೀನ ಯಾತ್ರೆ ಕೈಗೊಂಡ ಕೀರ್ತಿ ಕೋಚ್ ಅವರ ಪಾಲಾಗಿದೆ.
2016-17ರಲ್ಲಿ ನಾಸಾದ ಹಿರಿಯ ಗಗನಯಾತ್ರಿ ಪೆಗ್ಗಿ ವಿಟ್ಸನ್ 289 ದಿನಗಳ ಕಾಲ ಬಾಹ್ಯಾಕಾಶದಲ್ಲಿ ವಾಸವಿದ್ದಿದ್ದು ಇದುವರೆಗಿನ ದಾಖಲೆಯಾಗಿತ್ತು. ಯುರೋಪ್‌ನ ಬಾಹ್ಯಾಕಾಶವಾಗಿರುವ ಲೂಕಾ ಪರ್ಮಿಟನೊ ಹಾಗೂ ರಷ್ಯಾದ ಅಲೆಕ್ಸಾಂಡರ್ ಸ್ಕೊ$್ವಟ್ರ್ಸೊವ್ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಬಾಹ್ಯಾಕಾಶದಲ್ಲಿ 328 ದಿನಗಳ ಕಾಲ ಕಾಲ ಕಳೆದಿರುವ ಕೋಚ್ ಅವರು ಗುರುವಾರ ಬೆಳಗ್ಗೆ 9.12 ನಿಮಿಷಕ್ಕೆ ಭೂಮಿ ಮೇಲೆ ಕಾಲಿಟ್ಟರು.
ಸೂರ್ಯಾಸ್ತದ ನೆರಳಲ್ಲಿ ಮಿಲ್ಕಿ ವೇ : ಗ್ರ್ಯಾಂಡ್ ಕ್ಯಾನ್ಯನ್ ಮಡಿಲಲ್ಲಿ ಮಲಗಿದ ಕ್ಷಿರಪಥ!
ಕಳೆದ ವರ್ಷದ ಮಾಚ್‌ರ್ 14ರಂದು ಕೋಚ್ ಅವರು ಬಾಹ್ಯಾಕಾಶ ಯಾತ್ರೆಗೆ ತೆರಳಿದ್ದರು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.