ಚೀನಾದಲ್ಲಿ ನೀಲಿ ತಿಮಿಂಗಿಲದಷ್ಟು ದೊಡ್ಡ ಎರಡು ಹೊಸ ಡೈನೋಸಾರ್ ಪಳಿಯುಳಿಕೆ ಪತ್ತೆ

By Suvarna News  |  First Published Aug 23, 2021, 4:43 PM IST

ವಾಯವ್ಯ ಚೀನಾದ ಪ್ರದೇಶದಲ್ಲಿ ಹೊಸ ಜಾತಿಯ ಎರಡು ಡೈನೋಸಾರ್‌ಗಳ ಪಳಿಯುಳಿಕೆಗಳನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಈ ಡೈನೋಸಾರ್‌ಗಳು ನೀಲಿತಿಮಿಂಗಿಲುಗಳಷ್ಟು ದೊಡ್ಡದಾಗಿವೆ ಎಂದು ಜರ್ನಲ್‌ನಲ್ಲಿ ಪ್ರಕಟಿಸಲಾಗಿರುವ ವೈಜ್ಞಾನಿಕ ವರದಿಯಲ್ಲಿ ವಿವರಿಸಲಾಗಿದೆ. 


ಸಾವಿರಾರು ವರ್ಷಗಳ ಹಿಂದೆ ಭೂಮಿಯ ಮೇಲೆ ಬದುಕಿ ನಶಸಿ ಹೋಗಿರುವ ಡೈನೋಸಾರ್‌ಗಳ ಬಗ್ಗೆ ಈಗಲೂ ನಮ್ಮಲ್ಲಿ ಸಂಶೋಧನಗೆಳು ನಡೆಯುತ್ತಿವೆ. ಅವುಗಳ ಬಗ್ಗೆ ಕುತೂಹಲಕಾರಿ ಮಾಹಿತಿ ಹೊರ ಬೀಳುತ್ತಲೇ ಇವೆ.

ಈಗ ಹೊಸ ಸುದ್ದಿ ಏನೆಂದರೆ, ಚೀನಾ ವಾಯವ್ಯ ಭಾಗದಲ್ಲಿ ವಿಜ್ಞಾನಿಗಳು ಎರಡು ಹೊಸ ಜಾತಿಯ ಡೈನೋಸಾರ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಈ ಡೈನೋಸಾರ್‌ರಗಳು ಎರಡು ಬ್ಲೂವ್ಹೇಲ್‌ಗಳಷ್ಟು ದೊಡ್ಡಾಗಿದ್ದವು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Tap to resize

Latest Videos

undefined

ಈ ಬಗ್ಗೆ ಸೈಂಟಿಫಿಕ್ ರಿಪೋರ್ಟ್ಸ್‌ ಅನ್ನು ಪ್ರಕಟಿಸಲಾಗಿದೆ. ಸುಮಾರು 13 ರಿಂದ 12 ಕೋಟಿ ವರ್ಷಗಳ ಹಿಂದೆ ಮೂರು ವಿಭಿನ್ನ ಡೈನೋಸಾರ್‌ಗಳ ಪಳೆಯುಳಿಕೆಗಳು ಚೀನಾ ಟರ್ಪನ್-ಹಾಮಿ ಜಲಾನಯನ ಪ್ರದೇಶದಲ್ಲಿ ಸುಮಾರು 2 ರಿಂದ 5 ಕಿಮೀ ಅಂತರದಲ್ಲಿ ಕಂಡುಬಂದಿವೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಚೀನಾದ ಅಕಾಡೆಮಿ ಆಫ್ ಸೈನ್ಸ್ಆಂಡ್ ದಿ ನ್ಯಾಷನಲ್ ಮ್ಯೂಸಿಯಂ ಆಫ್ ಬ್ರೆಜಿಲ್‌ನ ಸಂಶೋಧಕರು ತಮ್ಮ ಈ ವೈಜ್ಞಾನಿಕ ಅಧ್ಯಯನ ವರದಿಯನ್ನು ನೇಚರ್ ಫ್ಯಾಮಿಲಿ  ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ. 

10 ದಶಲಕ್ಷ ವರ್ಷ ಹಳೆಯ ಪಳೆಯುಳಿಕೆಗಳು ಪತ್ತೆ..!

ವಿಜ್ಞಾನಿಗಳು ಈ ಡೈನೋಸಾರ್‌ಗಳ ಜಾತಿಗೆ ಸಿಲುಟಿಟಾನ್ ಸಿನೆನ್ಸಿಸ್ ಅಥವಾ ಸಿಲು ಮತ್ತು ಹಮಿಟಿಟಾನ್ ಸಿಂಜಿಯಾನ್ಜೆನ್ಸಿಸ್ ಎಂಬ ಹೆಸರಿನ್ನಿಟ್ಟಿದ್ದಾರೆ. ಈ ಡೈನೋಸಾರ್‌ ಪಳೆಯುಳಿಕೆ ಮಾದರಿಯು ಕ್ಸಿಂಜಿಯಾಂಗ್ ನಲ್ಲಿ ಕಂಡುಬಂದಿದೆ ಹಾಗಾಗಿ ಈ ಹೆಸರುಗಳನ್ನು ಇಡಲಾಗಿದೆ. ಸಿಲು ಎಂದರೆ ಚೀನಾದ ಮ್ಯಾಂಡರಿನ್ ಭಾಷೆಯಲ್ಲಿ ರೇಷ್ಮೆ ರಸ್ತೆ ಎಂದರ್ಥ. ಪೂರ್ವ ಮತ್ತು ಪಶ್ಚಿಮವನ್ನು ಸಂಪರ್ಕಿಸುವ ಉತ್ತಮ ವ್ಯಾಪಾರ ಮಾರ್ಗದ ಸ್ಮರಣಾರ್ಥ ಇಡಲಾಗಿದೆ. ಹಾಗೆಯೇ ಹಮಿ ಎಂಬದು ನಗರ. ಪಳಿಯುಳಿಕೆಗೆಳು ಸಿಕ್ಕಿರುವ ನಗರದ ಸ್ಮರಣಾರ್ಥ ಆ ಹೆಸರನ್ನೇ ಇಡಲಾಗಿದೆ. 

ಸಿಲು ಡೈನೋಸಾರ್ ಹೊಸ ಜಾತಿಯ ಸೌರೋಪಾಡ್ ಕುಟುಂಬಕ್ಕೆ ಸೇರಿದ್ದಾಗಿದೆ. ಅಂದರೆ, ಅತಿ ಉದ್ದನೆಯ ಕುತ್ತಿಗೆ, ಉದ್ದನೆಯ ಬಾಲ, ಬೃಹತ್ ದೇಹ ಮತ್ತು ಚಿಕ್ಕ ಮೂತಿಯನ್ನು ಹೊಂದಿರುವ ಇದು ಸಸ್ಯಗಳನ್ನು ತಿನ್ನುವ ಡೈನೋಸಾರ್ ಆಗಿದೆ. 

ಡೈನೋಸಾರ್ ತನ್ನ ಕುತ್ತಿಗೆಯ ಕಶೇರುಖಂಡದಲ್ಲಿ ಕೆಲವು ಗುಣಲಕ್ಷಣಗಳನ್ನು ಹೊಂದಿದ್ದು ಇದು ಯುಹೆಲೋಪೊಡಿಡೆ ಎಂಬ ಸೌರೋಪಾಡ್ಸ್ ಕುಟುಂಬಕ್ಕೆ ಸೇರಿದ್ದಾಗಿದೆ. ಸಾಮಾನ್ಯವಾಗಿ ಈ ಜಾತಿಯ ಡೈನೋಸಾರ್‌ಗಳನ್ನು ಪೂರ್ವ ಏಷ್ಯಾದಲ್ಲಿ ಮಾತ್ರ ಕಾಣಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

15,000 ವರ್ಷ ಹಳೆಯ ಹಿಮಗಡ್ಡೆಯಲ್ಲಿ ವೈರಸ್ ಪತ್ತೆ, ವಿಜ್ಞಾನಿಗಳಿಗೂ ಶಾಕ್!
 
ಇನ್ನು ಹಮಿ ಎಂದು ಹೆಸರಿಸಲಾಗಿರುವ ಡೈನೋಸಾರ್ ಸುಮಾರು 55 ಅಡಿ ಉದ್ದವಾಗಿದ್ದು, ದಕ್ಷಿಣ ಅಮೆರಿಕದಲ್ಲಿ ಕಂಡು ಬಂದಿದ್ದ ಸೌರೋಪಾಡ್ಸ್ ಜಾತಿಯ ಡೈನೋಸಾರ್‌ನ ಗುಣಲಕ್ಷಣಗಳನ್ನು ಹೊಂದಿದೆ. ಕಶೇರುಖಂಡಗಳ ಉದ್ದಕ್ಕೂ ಇರುವ ಆಕಾರ ಮತ್ತು ರೇಖೆಗಳು ಇದು ಏಷ್ಯಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಹೇರಳವಾಗಿರುವ ಟೈಟಾನೋಸಾರ್ಸ್ ಎಂದು ಕರೆಯಲಾಗುವ ಸೌರೋಪಾಡ್ಸ್ ಕುಟುಂಬಕ್ಕೆ ಸೇರಿದ್ದು ಎಂದು ಸೂಚಿಸುತ್ತದೆ.

ಸಿಲು ಡೈನೋಸಾರ್ ಅಂದಾಜು 65.6 ಅಡಿ ಉದ್ದ ಮತ್ತು ಹಿಮಿ ಡೈನೋಸಾರ್ ಅಂದಾಜು 55.77 ಅಡಿ ಉದ್ದವಾಗಿದ್ದು, ಇವು ಹೆಚ್ಚು ಕಡಿಮೆ ಎರಡು ಬ್ಲೂ ವ್ಹೇಲ್‌ಗಳಿಗಿಂತಲೂ ದೊಡ್ಡದಾಗಿವೆ.

ಅಧ್ಯಯನದ ಪ್ರಕಾರ, ಸುಮಾರು 160.3 ದಶಲಕ್ಷ ವರ್ಷಗಳ ಹಿಂದೆ ಜುರಾಸಿಕ್ ಅವಧಿಯ ಅಂತ್ಯದಿಂದ ಕ್ರಿಟೇಶಿಯಸ್ ಅವಧಿಯ ಅಂತ್ಯದವರೆಗೆ ವಾಸಿಸುತ್ತಿದ್ದ ಡೈನೋಸಾರ್‌ಗಳ ಒಂದು ಗುಂಪು ಸೋಂಫೋಸ್ಪಾಂಡೈಲನ್ ಸೌರೋಪಾಡ್ ಆಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.

ಕೈ ಮೀರಿ ಹೋಗುತ್ತಿದೆ ಜಾಗತಿಕ ತಾಪಮಾನ: ಹೀಗಾದರೆ ಮನುಕುಲ ಉಳಿಯುವುದೇ ಅನುಮಾನ

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈಶಾನ್ಯ ಚೀನಾದಲ್ಲಿ ಮತ್ತೊಂದು ಹೊಸ ಪ್ರಭೇದವನ್ನು ಕಂಡುಹಿಡಿಯಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯ ಮೇಲೆ ಬದುಕಿದ್ದ ಈ ದೈತ್ಯಾಕಾರದ ಜೀವಿಗಳ ಬಗ್ಗೆ ಅಧ್ಯಯನ ಹೆಚ್ಚು ಕುತೂಹಲ ಮೂಡಿಸಿವೆ. ಈ ಡೈನೋಸಾರ್‌ಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ಮತ್ತು ಸಂಸೋಧನಗಳು ನಡೆಯುತ್ತಲೇ ಇವೆ. ಆದರೂ, ಅವುಗಳ ಬಗೆಗಿನ ಕುತೂಹಸ ತಣಿದಿಲ್ಲ. ಜಗತ್ತಿನ ನಾನಾ ಕಡೆ ಅವುಗಳ ಅವಶೇಷಗಳು ಇಂದಿಗೂ ಪತ್ತೆಯಾಗುತ್ತಲೇ ಇವೆ.

click me!