ಇಸ್ರೋ ಆರ್ಬಿಟರ್‌ನಿಂದ ಚಂದ್ರನ ಮೇಲೆ ನೀರಿನ ಕಣ ಪತ್ತೆ!

By Suvarna News  |  First Published Aug 13, 2021, 8:39 AM IST

* ಚಂದ್ರನ ಮೇಲೆ ನೀರಿನ ಕಣ, ಹೈಡ್ರಾಕ್ಸಿಲ್‌ ಪತ್ತೆ

* ಮತ್ತೊಮ್ಮೆ ಖಚಿತಪಡಿಸಿದ ಇಸ್ರೋದ ಚಂದ್ರಯಾನ- 2


ನವದೆಹಲಿ(ಆ.13): ಜೀವರಾಶಿಗಳ ಉಳಿವಿನ ಮೂಲವಾದ ನೀರಿನ ಕಣಗಳು ಚಂದ್ರನ ಮೇಲೆ ಇರುವುದನ್ನು ಇಸ್ರೋದ ಚಂದ್ರಯಾನ-2 ಮತ್ತೊಮ್ಮೆ ಖಚಿತಪಡಿಸಿದೆ. ಜೊತೆಗೆ ಚಂದ್ರನ ಮೇಲ್ಮೈನಲ್ಲಿ ಹೈಡ್ರೋಕ್ಸಿಲ್‌ ಕೂಡಾ ಇರುವುದನ್ನು ಇಸ್ರೋ ಖಚಿತಪಡಿಸಿದೆ. ಇಸ್ರೋದ ಚಂದ್ರಯಾನ-1 2008ರಲ್ಲೇ ಚಂದ್ರನ ಮೇಲೆ ನೀರಿನ ಕಣಗಳ ಇರುವಿಕೆಯ ಸುಳಿವು ನೀಡಿತ್ತು. ಇದೀಗ ಚಂದ್ರಯಾನ -2 ಅದನ್ನು ಮತ್ತಷ್ಟುಖಚಿತಪಡಿಸಿದೆ.

2019ರಲ್ಲಿ ಇಸ್ರೋ ಉಡ್ಡಯನ ಮಾಡಿದ್ದ ಚಂದ್ರಯಾನ-2ದ ವೇಳೆ ಲ್ಯಾಂಡರ್‌ ಮತ್ತು ರೋವರ್‌ ಸುರಕ್ಷಿತವಾಗಿ ಇಳಿಯುವಲ್ಲಿ ವೈಫಲ್ಯ ಕಂಡಿದ್ದವು. ಆದರೆ ಆರ್ಬಿಟರ್‌ ಈಗಲೂ ಚಂದ್ರನ ಸುತ್ತಲು ಸುತ್ತುವ ವೇಳೆ ಅಮೂಲ್ಯವಾದ ಮಾಹಿತಿ ಸಂಗ್ರಹಿಸಿ ಅದನ್ನು ಭೂಮಿಗೆ ರವಾನಿಸುತ್ತಿದೆ. ಆರ್ಬಿಟರ್‌ನಲ್ಲಿರುವ ಇಮೇಜಿಂಗ್‌ ಇನಾ್ೊ್ರರೆಡ್‌ ಸ್ಪೆಕ್ಟ್ರೋಮೀಟರ್‌ ರವಾನಿಸಿರುವ ದತ್ತಾಂಶಗಳನ್ನು ಇಸ್ರೋ ವಿಜ್ಞಾನಿಗಳು ಕೂಲಂಕಷವಾಗಿ ಅಧ್ಯಯನಕ್ಕೆ ಒಳಪಡಿಸಿದ್ದು, ಈ ವೇಳೆ ಚಂದ್ರನ ಮೇಲ್ಮೈನಲ್ಲಿ ಹೈಡ್ರಾಕ್ಸಿಲ್‌ ಮತ್ತು ನೀರಿನ ಕಣಗಳು ಪತ್ತೆಯಾಗಿವೆ ಎಂದು ಕರೆಂಟ್‌ ಸೈನ್ಸ್‌ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾದ ವರದಿ ತಿಳಿಸಿದೆ.

Tap to resize

Latest Videos

ಈ ಫಲಿತಾಂಶವು, ಮುಂದಿನ ದಿನಗಳಲ್ಲಿ ನಾನಾ ಅಧ್ಯಯನಕ್ಕಾಗಿ ಚಂದ್ರನಲ್ಲಿಗೆ ತೆರಳುವ ದೇಶಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಜೊತೆಗೆ ಚಂದ್ರನಲ್ಲಿನ ಭೌಗೋಳಿಕತೆ, ಅಲ್ಲಿನ ಖಭೌತ, ರಾಸಾಯನಿಕಗಳ ಸಂಯೋಜನೆ, ಸೂರ್ಯನ ಗಾಳಿಯ ಸಂಪರ್ಕ ಮತ್ತು ಅದರ ಪರಿಣಾಮಗಳ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ನೆರವು ನೀಡುತ್ತದೆ ಎಂದು ವರದಿ ಹೇಳಿದೆ.

click me!