ಭೂಮಿಗೆ 12 ಕಿಲೋಮೀಟರ್ ಆಳದ ರಂಧ್ರ ಕೊರೆಯಲು ಮಾನವ ರೆಡಿ!

By Suvarna News  |  First Published Mar 15, 2022, 5:52 PM IST

ಭೂಮಿಯ ಆಳದಿಂದ ಶಕ್ತಿ ಸಂಪಾದನೆಗೆ ಮುಂದಾದ ಮಾನವ

ಭೂಮಿಯ ಆಳಕ್ಕೆ 12 ಕಿಲೋಮೀಟರ್ ವರೆಗೆ ರಂಧ್ರ ಕೊರೆಯಲಿದೆ ಕ್ವೈಸ್ ಎನರ್ಜಿ

ಇದಕ್ಕಾಗಿ 40 ಮಿಲಿಯನ್ ಡಾಲರ್ ಮೊತ್ತವನ್ನು ಪಡೆದುಕೊಂಡಿರುವ ಕಂಪನಿ


ನವದೆಹಲಿ (ಮಾ. 15): ಮಾನವನ ಆಸೆ, ಕನಸಿಗೆ ಮಿತಿಯಿಲ್ಲ. ಬಾಹ್ಯಾಕಾಶದಲ್ಲಿ ನಿರೀಕ್ಷೆಯೇ ಮಾಡದ ದೂರದಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು (james webb space telescope) ಯಶಸ್ವಿಯಾಗಿ ಕಾರ್ಯಾಚರಣೆಗೆ ಇಳಿಸಿದ ಬಳಿಕ, ಭೂಮಿಯ ಆಳಕ್ಕೆ ಮಾನವನ ಆಸೆಗೆ ಸಿಕ್ಕಿದೆ. ಭೂಮಿ ಆಳಕ್ಕೆ ರಂಧ್ರ ಕೊರೆಯುವುದು ಹೊಸ ಪರಿಕಲ್ಪನೆಯಲ್ಲ.ಯಾಕೆಂದರೆ, ಭೂಮಿಯ ಆಳದಲ್ಲಿ ಪ್ರತಿ ಇಂಚು ಇಳಿದಾಗಲೂ ಅಗಾಧವಾದ ಒತ್ತಡ ನಿರ್ಮಾಣವಾಗುತ್ತದೆ. ರಷ್ಯಾದ ಮರ್ಮನ್ಸ್ಕ್‌ನಲ್ಲಿರುವ ಕೋಲಾ ಬಾವಿ (Kola well in Murmansk, Russia) ಮನುಷ್ಯನು ಈವರೆಗೂ ಭೂಮಿಯಲ್ಲಿ ಅತ್ಯಂತ ಆಳವಾಗಿ ತೆಗೆದಿರುವ ರಂಧ್ರವಾಗಿದೆ.

ರಷ್ಯಾದಲ್ಲಿ ಈ ಯೋಜನೆ ಆರಂಭವಾಗಿದ್ದು 1970 ರಲ್ಲಿ. ಈ ವೇಳೆ 23 ಸಾವಿರ ಫೀಟ್ ಅಂದರೆ, ಅಂದಾಜು 7 ಕಿಲೋಮೀಟರ್ ಆಳದ ರಂಧ್ರವನ್ನು ಮಾಡಲಾಗಿತ್ತು. ಆದರೆ, ಅಂದು ಇಡೀ ಯೋಜನೆಯ ಉದ್ದೇಶ ಸಂಶೋಧನೆ ಮಾತ್ರವೇ ಆಗಿತ್ತು. 1992ರಲ್ಲಿ ರಂಧ್ರ ಕೊರೆಯುವಿಕೆ 23 ಸಾವಿರ ಫೀಟ್ ಗೆ ನಿಲ್ಲಿಸಲಾಗಿತ್ತು. ಇದಕ್ಕೆ ಮುಖ್ಯ ಕಾರಣವಾಗಿದ್ದು ತಾಪಮಾನ. ನಿರೀಕ್ಷೆ ಮಾಡಿದ್ದಕ್ಕಿಂತ ದುಪ್ಪಟ್ಟು ಅಂದರೆ 180 ಡಿಗ್ರಿ ಸೆಂಟಿಗ್ರೇಡ್ ಅನ್ನು ಇದು ತಲುಪಿತ್ತು. ಆ ಬಳಿಕ ಈ ರಂಧ್ರ ಕಾರ್ಯ ಮುಂದುವರಿಯಲು ಸಾಧ್ಯವಾಗಲಿಲ್ಲ. ತದ ನಂತರ ಸೋವಿಯತ್ ಒಕ್ಕೂಟ ಕೂಡ ಒಡೆದ ಚೂರಾಗಿದ್ದರಿಂದ ಯೋಜನೆಯನ್ನೂ ನಿಲ್ಲಿಸಲಾಯಿತು.

ಕ್ವೈಸ್‌ನಿಂದ (Quaise ) 2020 ರಲ್ಲಿ ಪ್ರಾರಂಭವಾದ ಹೊಸ ಯೋಜನೆಯು ಅದರ ಮಹತ್ವಾಕಾಂಕ್ಷೆಯ ಸ್ವಭಾವ ಮತ್ತು 'ಅನಿಯಮಿತ' ಶಕ್ತಿಯನ್ನು ಅನ್ಲಾಕ್ ಮಾಡುವ ಸಾಧ್ಯತೆಗಾಗಿ ವೈಜ್ಞಾನಿಕ ಪ್ರಪಂಚದ ಗಮನವನ್ನು ಸೆಳೆದಿದೆ. ಈ ಯೋಜನೆಯು ಹಿಂದೆಂದಿಗಿಂತಲೂ ಭೂಮಿಯ ಆಳಕ್ಕೆ ಮತ್ತಷ್ಟು ರಂಧ್ರ ಕೊರೆಯುವ ಗುರಿಯನ್ನು ಹೊಂದಿದೆ. ಈ ಸಾಹಸಿಕ ಯೋಜನೆಗಾಗಿ ಮೊದಲ ಹಂತದಲ್ಲಿ 40 ಮಿಲಿಯನ್ ಯುಎಸ್ ಡಾಲರ್ ಬಂಡವಾಳ ನಿಧಿಯನ್ನು ಕಂಪನಿ ಪಡೆದುಕೊಂಡಿದೆ. ಇದು ಭೂಶಾಖದ ವಿದ್ಯುತ್ ಯೋಜನೆಯ (Geothermal energy) ಪ್ರಾರಂಭಿಸಲು ಸದ್ಯಕ್ಕೆ ಸಾಕಾಗಿದೆ. ಇಲ್ಲಿನ ವಿದ್ಯುತ್ ಗ್ರಹದ ಸಂಪೂರ್ಣ ಜನಸಂಖ್ಯೆಗೆ ಸಹಾಯ ಮಾಡುತ್ತದೆ.

SRK+: ಓಟಿಟಿ ಮಾರುಕಟ್ಟೆಗೆ ಶಾರುಖ್ ಎಂಟ್ರಿ? ಟ್ವೀಟರ್‌ನಲ್ಲಿ ಕಿಂಗ್‌ಖಾನ್‌ ಸುಳಿವು!
ಕಂಪನಿಯು ಸಾಂಪ್ರದಾಯಿಕ ರಂಧ್ರ ಕೊರೆಯುವ ವಿಧಾನಗಳೊಂದಿಗೆ ಅತ್ಯಾಧುನಿಕ ಮೆಗಾವ್ಯಾಟ್-ಪವರ್ ಫ್ಲ್ಯಾಷ್‌ಲೈಟ್‌ನೊಂದಿಗೆ ಸಂಯೋಜಿಸಲು ಭೂಮಿಯ ಮಧ್ಯಭಾಗಕ್ಕೆ ಹತ್ತಿರವಾಗಲು ಗುರಿಯನ್ನು ಹೊಂದಿದೆ, ಇದು ಮುಂದಿನ ದಿನಗಳಲ್ಲಿ ಪರಮಾಣು ಸಮ್ಮಿಳನಕ್ಕೆ ಕಾರಣವಾಗಬಹುದು. ಈ ನವೀಕರಿಸಬಹುದಾದ ಶಕ್ತಿಯ ಮೂಲದಿಂದ ಅನೇಕ ಪ್ರಯೋಜನಗಳ ಹೊರತಾಗಿಯೂ ಭೂಶಾಖದ ಶಕ್ತಿಯನ್ನು ಮರೆತುಬಿಡಲಾಗಿದೆ. ಹಸಿರು ಶಕ್ತಿ ಮಾರುಕಟ್ಟೆಯಲ್ಲಿ ( Green Energy Market )  ಪ್ರಾಬಲ್ಯ ಹೊಂದಿರುವ ಸೌರ ( Solar ) ಮತ್ತು ಪವನ ಶಕ್ತಿ( Wind Power ) ಮೂಲಗಳ ಜೊತೆಗೆ, ಭೂಶಾಖವು ವರ್ಷಗಳಲ್ಲಿ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಮತ್ತು ಶಕ್ತಿಯನ್ನು ಬಳಸಿಕೊಳ್ಳಲು ಹೊಸ ತಂತ್ರಗಳನ್ನು ಅಭಿವೃದ್ಧಿಪಡಿಸಲು ಅಗತ್ಯವಾದ ನಿಧಿಯ ವಿಷಯಕ್ಕೆ ಬಂದಾಗ ಕಡಿಮೆ ಗಮನವನ್ನು ನೀಡಲಾಗಿದೆ.

Lava Z3: 5000mAh ಬ್ಯಾಟರಿಯೊಂದಿಗೆ ಅತೀ ಅಗ್ಗದ ಸ್ಮಾರ್ಟ್‌ಫೋನ್‌ ಲಾಂಚ್‌: ಏನೆಲ್ಲಾ ವಿಶೇಷತೆಗಳಿವೆ?
ಪ್ರಸ್ತುತ, ಪ್ರಪಂಚದ ಶಕ್ತಿಯ ಅರ್ಧ ಶೇಕಡಾಕ್ಕಿಂತ ಕಡಿಮೆ (ಶೇಕಡಾ 0.5 ಕ್ಕಿಂತ ಕಡಿಮೆ) ಮಾತ್ರ ಭೂಶಾಖದ ಮೂಲಗಳಿಂದ ಪಡೆಯಲಾಗಿದೆ. ಅಂತಹ ಮೂಲದ ನಮ್ಮ ಬಳಕೆಯು ಎಷ್ಟು ಬೆಳೆಯಬೇಕು ಎಂಬುದಕ್ಕೆ ಇದು ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. 2050 ರ ವೇಳೆಗೆ ನಾವು ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ತಲುಪಬೇಕಾದರೆ ಭೂಶಾಖದ ಶಕ್ತಿಯು ವರ್ಷಕ್ಕೆ ಸುಮಾರು 13 ಪ್ರತಿಶತದಷ್ಟು ಬೆಳೆಯಬೇಕು ಎಂದು ಅಂತರರಾಷ್ಟ್ರೀಯ ಶಕ್ತಿ ಸಂಸ್ಥೆ (IEA) ಅಂದಾಜಿಸಿದೆ. ಪ್ರಸ್ತುತ ಬೆಳವಣಿಗೆಯ ದರವು ಅದರ ಅಂಚುಗಿಂತ ಕಡಿಮೆಯಾಗಿದೆ. 

Tap to resize

Latest Videos

click me!