ಭೂಮಿಗಪ್ಪಳಿಸಲಿದೆ ಸೌರ ಚಂಡಮಾರುತ: GPS, ನೆಟ್‌ವರ್ಕ್‌ ಸಮಸ್ಯೆ

By Suvarna NewsFirst Published Jul 11, 2021, 1:25 PM IST
Highlights
  • ಭೂಮಿಗೆ ಅಪ್ಪಳಿಸಲಿದೆ ಸೌರ ಚಂಡ ಮಾರುತ
  • ಜಿಪಿಎಸ್, ನೆಟ್‌ವರ್ಕ್ ಸಮಸ್ಯೆಯಾಗೋ ಸಾಧ್ಯತೆ

ಪ್ರಬಲ ಸೌರ ಚಂಡಮಾರುತವು 1.6 ದಶಲಕ್ಷ ಕಿಲೋಮೀಟರ್ ವೇಗದಲ್ಲಿ ಭೂಮಿಯನ್ನು ಸಮೀಪಿಸುತ್ತಿದೆ. ಈ ಚಂಡಮಾರುತವು ಭಾನುವಾರ ಅಥವಾ ಸೋಮವಾರ ಭೂಮಿಯನ್ನು ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸೂರ್ಯನ ವಾತಾವರಣದಿಂದ ಹುಟ್ಟಿದ ಚಂಡಮಾರುತವು ಭೂಮಿಯ ಕಾಂತಕ್ಷೇತ್ರದ ಪ್ರಾಬಲ್ಯವಿರುವ ಬಾಹ್ಯಾಕಾಶ ಪ್ರದೇಶದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ.

ಆಕಾಶ ಬೆಳಕಿನ ನೋಟ

ಸೌರ ಚಂಡಮಾರುತದಿಂದಾಗಿ, ಉತ್ತರ ಅಥವಾ ದಕ್ಷಿಣ ಧ್ರುವದಲ್ಲಿ ವಾಸಿಸುವ ಜನರಿಗೆ ಸುಂದರವಾದ ಆಕಾಶದ ಬೆಳಕಿನ ನೋಟ ಕಾಣಬಹುದು. ಈ ಪ್ರದೇಶಗಳಿಗೆ ಹತ್ತಿರ ವಾಸಿಸುವ ಜನರು ರಾತ್ರಿಯಲ್ಲಿ ಸುಂದರವಾದ ಬೆಳಕಿನ ನೋಟ ನಿರೀಕ್ಷಿಸಬಹುದು.

1.6 ಮಿಲಿಯನ್ ವೇಗ

ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಕಾರ, ಸೌರ ಚಂಡಮಾರುತವು ಗಂಟೆಗೆ ಸುಮಾರು 1.6 ದಶಲಕ್ಷ ಕಿಲೋಮೀಟರ್ ವೇಗದಲ್ಲಿ ಭೂಮಿಯ ಕಡೆಗೆ ಚಲಿಸುತ್ತಿದೆ. ಬಹುಶಃ ಅದರ ವೇಗ ಮತ್ತಷ್ಟು ಹೆಚ್ಚಾಗಲಿದೆ. ಸೌರ ಬಿರುಗಾಳಿ ಉಪಗ್ರಹ ಸಂಕೇತಗಳನ್ನು ಅಡ್ಡಿಪಡಿಸಬಹುದು ಎಂದು ನಾಸಾ ಹೇಳಿದೆ.

ಭೂಮಿಯ ಮೇಲೆ ಸೌರ ಚಂಡಮಾರುತದ ಪರಿಣಾಮ

ಸೌರ ಬಿರುಗಾಳಿಗಳಿ ಭೂಮಿಯ ಹೊರಗಿನ ವಾತಾವರಣ ಬಿಸಿ ಮಾಡಬಹುದು. ಇದು ಉಪಗ್ರಹಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಜಿಪಿಎಸ್ ನ್ಯಾವಿಗೇಷನ್, ಮೊಬೈಲ್ ಫೋನ್ ಸಿಗ್ನಲ್ ಮತ್ತು ಸ್ಯಾಟಲೈಟ್ ಟಿವಿಯಲ್ಲಿ ತೊಂದರೆಗೆ ಕಾರಣವಾಗಬಹುದು. ವಿದ್ಯುತ್ ಲೈನ್‌ಗಳಲ್ಲಿ ಪ್ರವಾಹವು ಅಧಿಕವಾಗಿರಬಹುದು, ಇದು ಟ್ರಾನ್ಸ್‌ಫಾರ್ಮರ್‌ಗಳನ್ನು ಸಹ ಸ್ಫೋಟಿಸುತ್ತದೆ.

click me!