ಬಾಹ್ಯಾಕಾಶದಲ್ಲಿ ಇಂದು ಭಾರತದ ಶಿರಿಶಾ ಇತಿಹಾಸ : ಖಾಸಗಿ ನೌಕೆಯಲ್ಲಿ 90 ನಿಮಿಷ ಸಾಹಸ

By Kannadaprabha News  |  First Published Jul 11, 2021, 7:29 AM IST
  •  ಖಾಸಗಿ ಬಾಹ್ಯಾಕಾಶ ನೌಕೆಯೊಂದು ಭಾನುವಾರ ಅಮೆರಿಕದಿಂದ ಅಂತರಿಕ್ಷಕ್ಕೆ ಉಡಾವಣೆ
  • ನೌಕೆಯ ನಾಲ್ಕನೇ ಯಾತ್ರಿಕರಾಗಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಶಿರಿಶಾ ಪ್ರಯಾಣ
  • ನೌಕೆಯ ನಾಲ್ಕನೇ ಯಾತ್ರಿಕರಾಗಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ

 ಹೂಸ್ಟನ್‌ (ಜು.11):  ಖಾಸಗಿ ಬಾಹ್ಯಾಕಾಶ ನೌಕೆಯೊಂದು ಭಾನುವಾರ ಅಮೆರಿಕದಿಂದ ಅಂತರಿಕ್ಷಕ್ಕೆ ಉಡಾವಣೆಯಾಗಲಿದೆ. ಈ ನೌಕೆಯ ನಾಲ್ಕನೇ ಯಾತ್ರಿಕರಾಗಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸಿ, ಈಗ ಅಮೆರಿಕದಲ್ಲಿ ನೆಲೆ ಕಂಡುಕೊಂಡಿರುವ 34 ವರ್ಷದ ಏರೋನಾಟಿಕಲ್‌ ಎಂಜಿನಿಯರ್‌ ಶಿರಿಶಾ ಬಾಂಡ್ಲಾ ತೆರಳುತ್ತಿದ್ದಾರೆ. 90 ನಿಮಿಷಗಳ ಈ ಯಾನ ಇಡೀ ವಿಶ್ವದ ಗಮನಸೆಳೆದಿದೆ.

2003ರಲ್ಲಿ ಬಾಹ್ಯಾಕಾಶ ಯಾನ ವೇಳೆ ಸಂಭವಿಸಿದ ಅಪಘಾತದಲ್ಲಿ ಮಡಿದ ಭಾರತ ಮೂಲದ ಕಲ್ಪನಾ ಚಾವ್ಲಾ ನಂತರ ಅಂತರಿಕ್ಷಕ್ಕೆ ಪ್ರಯಾಣ ಬೆಳೆಸುತ್ತಿರುವ ಭಾರತದಲ್ಲಿ ಜನಿಸಿದ 2ನೇ ಮಹಿಳೆ ಎಂಬ ಹಿರಿಮೆ ಶಿರಿಶಾ ಅವರದ್ದಾಗಿದೆ. ಭಾರತೀಯ ಮೂಲದ ದಂಪತಿಗೆ ಅಮೆರಿಕದಲ್ಲಿ ಜನಿಸಿದ ಸುನಿತಾ ವಿಲಿಯಮ್ಸ್‌ ಅವರನ್ನೂ ಲೆಕ್ಕಕ್ಕೇ ತೆಗೆದುಕೊಂಡರೆ ಶಿರಿಶಾ ಭಾರತೀಯ ಮೂಲದ ಮೂರನೇ ಮಹಿಳೆಯಾಗುತ್ತಾರೆ. ಆದರೆ ಕಲ್ಪನಾ ಚಾವ್ಲಾ ಹಾಗೂ ಸುನಿತಾ ಅವರು ಹೋಗಿದ್ದು ಅಮೆರಿಕ ಸರ್ಕಾರದ ಸ್ವತಂತ್ರ ಬಾಹ್ಯಾಕಾಶ ಸಂಸ್ಥೆ ನಾಸಾ ಗಗನನೌಕೆ ಮೂಲಕ. ಆದರೆ ಶಿರಿಶಾ ತೆರಳುತ್ತಿರುವುದು ಖಾಸಗಿ ನೌಕೆಯಲ್ಲಿ ಎಂಬುದು ಗಮನಾರ್ಹ.

Latest Videos

undefined

ಮಂಗಳದಲ್ಲಿ ಆಕ್ಸಿಜನ್‌ ತಯಾರಿಸಿದ ನಾಸಾ!

ಉಡಾವಣೆ ಹೇಗೆ? ಎಷ್ಟೊತ್ತಿಗೆ?

ಸಹಸ್ರಕೋಟ್ಯಧೀಶ ಉದ್ಯಮಿ, ವರ್ಜಿನ್‌ ಗ್ಯಾಲಾಕ್ಟಿಕ್‌ ಕಂಪನಿಯ ಒಡೆಯ ಸರ್‌ ರಿಚರ್ಡ್‌ ಬ್ರಾನ್ಸನ್‌ ಅವರು ಈ ಖಾಸಗಿ ಬಾಹ್ಯಾಕಾಶ ಯಾನದ ಮುಖ್ಯ ರೂವಾರಿ. ಅವರು ಶಿರಿಶಾ ಹಾಗೂ ಇತರರ ಜತೆ ಅಂತರಿಕ್ಷಕ್ಕೆ ಭಾನುವಾರ ತೆರಳುತ್ತಿದ್ದಾರೆ.

5 ಗಗನಯಾತ್ರಿಗಳ ಜೊತೆ ಭಾರತೀಯ ಮಹಿಳೆ ಸಿರೀಶಾ ಬಂಡ್ಲ ಅಂತರಿಕ್ಷ ಯಾನ ..

ಭಾನುವಾರ ಸಂಜೆ 6.30ಕ್ಕೆ (ಭಾರತೀಯ ಕಾಲಮಾನ) ಅಮೆರಿಕದ ನ್ಯೂಮೆಕ್ಸಿಕೋದಿಂದ ‘ವಿಎಸ್‌ಎಸ್‌ ಯುನಿಟಿ’ ಎಂಬ ಈ ಬಾಹ್ಯಾಕಾಶ ನೌಕೆಯನ್ನು ‘ವಿಎಂಎಸ್‌ ಈವ್‌’ (ಈವ್‌ ಎಂಬುದು ಬ್ರಾನ್ಸನ್‌ ಅವರ ತಾಯಿ ಹೆಸರು) ಎಂಬ ಮಾತೃನೌಕೆ ಹೊತ್ತೊಯ್ಯಲಿದೆ. 50 ಸಾವಿರ ಅಡಿ ಎತ್ತರಕ್ಕೆ ಹೋದ ಬಳಿಕ ಈವ್‌ ನೌಕೆಯಿಂದ ಯುನಿಟಿ ಪ್ರತ್ಯೇಕಗೊಳ್ಳಲಿದೆ. ರಾಕೆಟ್‌ ಸಹಾಯದಿಂದ ಯುನಿಟಿ ನೌಕೆ ಶಬ್ದಕ್ಕಿಂತ 3 ಪಟ್ಟು ವೇಗವಾಗಿ ಕ್ರಮಿಸಿ ಬಾಹ್ಯಾಕಾಶದ ಅಂಚನ್ನು ತಲುಪಲಿದೆ. ಅಲ್ಲಿ ರಾಕೆಟ್‌ ಸ್ಥಗಿತಗೊಳಿಸಲಾಗುತ್ತದೆ. ಭೂಮಿಯಿಂದ 3 ಲಕ್ಷ ಅಡಿಗಳ ಎತ್ತರದಲ್ಲಿ ಬ್ರಾನ್ಸನ್‌, ಶಿರಿಶಾ ಸೇರಿ ಎಲ್ಲ 6 ಮಂದಿ ಯಾತ್ರಿಕರು 4 ನಿಮಿಷಗಳ ಕಾಲ ನಿರ್ವಾತದ ಅನುಭವ ಪಡೆಯಲಿದ್ದಾರೆ. ಬಳಿಕ ಅದೇ ನೌಕೆಯಲ್ಲಿ ಭೂಮಿಗೆ ಮರಳಲಿದ್ದಾರೆ. ಒಟ್ಟಿನಲ್ಲಿ 90 ನಿಮಿಷಗಳಲ್ಲಿ ಈ ಯಾನ ಮುಕ್ತಾಯಗೊಳ್ಳಲಿದೆ.

ಏನಿದರ ಉದ್ದೇಶ?

ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೇಜೋಸ್‌ ಹಾಗೂ ಬ್ರಾನ್ಸನ್‌ ಇಬ್ಬರೂ ಸಹಸ್ರ ಕೋಟ್ಯಧೀಶ ಉದ್ಯಮಿಗಳು. ಬಾಹ್ಯಾಕಾಶ ಪ್ರವಾಸೋದ್ಯಮ ಆರಂಭಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಬೇಜೋಸ್‌ ಅವರ ಬಾಹ್ಯಾಕಾಶ ನೌಕೆ ಜು.20ರಂದು ಉಡಾವಣೆಯಾಗಲಿದೆ. ಅದಕ್ಕೂ ಮುನ್ನವೇ ಬ್ರಾನ್ಸನ್‌ ತಮ್ಮ ನೌಕೆ ಉಡಾವಣೆ ಮಾಡಿಸುತ್ತಿದ್ದಾರೆ.

ಯಾರು ಈ ಶಿರಿಶಾ?

ಆಂಧ್ರದ ಗುಂಟೂರು ಜಿಲ್ಲೆಯವರು. ಇವರಿಗೆ 4 ವರ್ಷ ಇದ್ದಾಗ ಪೋಷಕರು ಅಮೆರಿಕಕ್ಕೆ ವಲಸೆ ಹೋದರು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇರುವ ಹೂಸ್ಟನ್‌ನಲ್ಲೇ ಶಿರಿಶಾ ಬೆಳೆದರು. ಬಾಲ್ಯದಿಂದಲೂ ಗಗನಯಾತ್ರಿಯಾಗಬೇಕು ಎಂಬ ಮಹದಾಸೆ ಹೊಂದಿದ್ದರು. ಆದರೆ ದೃಷ್ಟಿಯಲ್ಲಿ ಸಮಸ್ಯೆ ಇದ್ದ ಕಾರಣ ಪೈಲಟ್‌ ಅಥವಾ ಗಗನಯಾತ್ರಿ ಆಗಲು ಸಾಧ್ಯವಾಗಲಿಲ್ಲ. ಪಡ್ರ್ಯೂ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ವರ್ಜಿನ್‌ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಆ ಕಂಪನಿಯ ಸರ್ಕಾರಿ ವ್ಯವಹಾರಗಳು ಹಾಗೂ ಸಂಶೋಧನಾ ವಿಭಾಗದ ಉಪಾಧ್ಯಕ್ಷೆ.

click me!