ಭಾರತ ಈಗಾಗಲೇ ಚಂದ್ರ ಮೇಲೆ ಯಶಸ್ವಿಯಾಗಿ ಲ್ಯಾಂಡರ್ ಇಳಿಸಿ ಅಧ್ಯಯನ ನಡೆಸಿ ಸಾಧನೆ ಮಾಡಿದೆ. ಇದೀಗ ಚಂದ್ರಯಾ 5 ಮಿಷನ್ ತಯಾರಿ ಆರಂಭಗೊಂಡಿದೆ. ಈ ಮಿಷನ್‌ಗೆ ಮೋದಿ ಸರ್ಕಾರ ಅನುಮೋದನೆ ನೀಡಿದೆ. ಇದರ ಜೊತೆಗೆ ಮತ್ತೊಂದು ಸಿಹಿ ಸುದ್ದಿಯನ್ನು ಇಸ್ರೋ ಹಂಚಿಕೊಂಡಿದೆ.
ಬೆಂಗಳೂರು(ಮಾ.17) ಬಾಹ್ಯಾಕಾಶ ಅಧ್ಯಯನದಲ್ಲಿ ಜಗತ್ತನ್ನೇ ನಿಬ್ಬೆರಗಾಗಿಸಿದ ಇಸ್ರೋ ಇದೀಗ ಮತ್ತೊಂದು ಸಾಹಸಕ್ಕೆ ಇಳಿದಿದೆ. 250 ಕೆಜಿ ತೂಕದ ರೋವರ್‌ನ್ನು ಚಂದ್ರನ ಮೇಲೆ ಇಳಿಸಿ ಅಧ್ಯಯನ ನಡೆಸಲು ಇಸ್ರೋ ಮುಂದಾಗಿದೆ. ಈ ಕುರಿತ ಚಂದ್ರಯಾನ 5 ಮಿಷನ್‌ಗೆ ಇದೀಗ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಸಂತಸವನ್ನು ಇಸ್ರೋ ಅಧ್ಯಕ್ಷ ವಿ ನಾರಾಯಣನ್ ಖಚಿತಪಡಿಸಿದ್ದಾರೆ. ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದು ಅಧ್ಯಯನ ನಡೆಸಿದ ಪ್ರಗ್ಯಾನ್ ರೋವರ್ ತೂಕ 25 ಕೆಜಿ. ಆದರೆ ಚಂದ್ರಯಾನ 5 ಮಿಷನ್ ತೂಕ ಬರೋಬ್ಬರಿ 250 ಕೆಜಿಯಾಗಿದೆ. ಹೀಗಾಗಿ ಈ ಬಾರಿ ಇಸ್ರೋ ಮತ್ತಷ್ಟು ತಯಾರಿಯೊಂದಿಗೆ ಚಂದ್ರನ ಕುತೂಹಲ ಅಧ್ಯಯನಕ್ಕೆ ಮುಂದಾಗಿದೆ.
ಚಂದ್ರಯಾನ 5 ಮಿಷನ್‌ನಲ್ಲಿ ಹಲವು ಹೊಸತನಗಳಿವೆ. ಕಾರಣ ಇದು ಜಪಾನ್ ಜೊತೆ ಜಂಟಿಯಾಗಿ ಕೈಗೊಂಡಿರುವ ಚಂದ್ರನ ಅಧ್ಯಯನವಾಗಿದೆ. ಅನೇಕ ಯೋಜನೆಗಳಿವೆ. ಚಂದ್ರಯಾನ 4 ತಯಾರಿಗಳು ನಡೆಯುತ್ತಿದೆ. ಚಂದ್ರನ ಮೇಲೆ ಮತ್ತೆ ರೋವರ್ ಇಳಿಸಿ ಅಧ್ಯಯನದ ಅಂತಿಮ ಹಂತದ ಪರೀಕ್ಷೆಗಳು ಹಾಗೂ ಪ್ರಯೋಗ ನಡೆಯುತ್ತಿದೆ. ಇದರ ನಡುವೆ ಚಂದ್ರಯಾನ 5 ಅನುಮೋದನೆ ಪಡೆದಿದ್ದೇವೆ ಎಂದು ವಿ ನಾರಾಯನ್ ಹೇಳಿದ್ದಾರೆ.
ಭೂಮಿ ರೀತಿ ಜೀವಿಗಳು ವಾಸಿಸಲು ಯೋಗ್ಯವಾದ ಹೊಸ ಗ್ರಹ ಪತ್ತೆ, ಇಲ್ಲಿ ಏಲಿಯನ್ ಇದೆಯಾ?
ಇಸ್ರೋ ಯಶಸ್ವಿಯಾಗಿ ಮೂರು ಚಂದ್ರಯಾನ ಮಿಷನ್‌ಗಳನ್ನು ಕೈಗೊಂಡಿದೆ. ಈ ಪೈಕಿ ಚಂದ್ರಯಾನ-3 ಚಂದ್ರನ ಮೇಲೆ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಿದೆ. ಚಂದ್ರಯಾನ-4 ಮಿಷನ್‌ಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕಳೆದ ವರ್ಷ ಹೇಳಿದ್ದರು. ಇದು ಚಂದ್ರನ ಮೇಲೆ ಇಳಿಯುವ ಮತ್ತು ಭೂಮಿಗೆ ಸುರಕ್ಷಿತವಾಗಿ ಮರಳುವ ಸಾಮರ್ಥ್ಯವನ್ನು ಹೊಂದಿದೆ. ಚಂದ್ರಯಾನ 4 ಮಿಷನ್‌ನಲ್ಲಿ ಚಂದ್ರನ ಮೇಲಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಮರಳಲಿದೆ ಎಂದು ವಿ ನಾರಾಯಣನ್ ಹೇಳಿದ್ದಾರೆ.
ಚಂದ್ರಯಾನ-5 ಲೂಪೆಕ್ಸ್ ಮಿಷನ್ ಹೆಚ್ಚಿನ ಸಾಮರ್ಥ್ಯದ ಲ್ಯಾಂಡರ್ ಅನ್ನು ಪ್ರದರ್ಶಿಸಲು ಯೋಜಿಸಲಾಗುತ್ತಿದೆ, ಇದು ಭವಿಷ್ಯದ ಲ್ಯಾಂಡಿಂಗ್ ಮಿಷನ್‌ಗಳಿಗೆ ನಿರ್ಣಾಯಕ ಅಂಶವಾಗಿದೆ, ಇದರಲ್ಲಿ ಚಂದ್ರನ ಮೇಲ್ಮೈಯಲ್ಲಿ ಮಾನವ ಲ್ಯಾಂಡಿಂಗ್ ಕೂಡ ಸೇರಿದೆ.ಇದರ ಜೊತೆಗೆ, ಭಾರತವು 2035 ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಿರುತ್ತದೆ ಎಂದು ವಿ ನಾರಾಯಣನ್ ಘೋಷಿಸಿದ್ದಾರೆ.
ನಾವು ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಯೋಜಿಸಿದ್ದೇವೆ. ಭಾರತೀಯ ನಿರ್ಮಿತ ರಾಕೆಟ್‌ನಲ್ಲಿ ಭಾರತೀಯರನ್ನು ಚಂದ್ರನಿಗೆ ಕಳುಹಿಸಲು ಮತ್ತು ಮರಳಿ ತರಲು ಸರ್ಕಾರ ಸರ್ಕಾರದ ಅನುಮೋದನೆ ಹಾಗೂ ಯೋಜನಾ ಅನುಮತಿಯನ್ನು ಕೇಳಲಾಗಿದೆ ಎಂದಿದ್ದಾರೆ.
ನಾನು ಭಾರತ ಸರ್ಕಾರ ಮತ್ತು ನಮ್ಮ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಪಿಎಂಗೆ ಒಂದೇ ಗುರಿ ಇದೆ, ಅದು ಅಭಿವೃದ್ಧಿ ಹೊಂದಿದ ದೇಶ. ನನಗೆ ಈ ಹುದ್ದೆ ಸಿಗಲು ಕಾರಣ ನಾನಲ್ಲ, ನಾನು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದೇನೆ. ನನ್ನೊಂದಿಗೆ ಕೆಲಸ ಮಾಡಿದ ಎಲ್ಲ ಸ್ನೇಹಿತರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ವಿ ನಾರಾಯಣನ್ ಹೇಳಿದ್ದಾರೆ. ಚಂದ್ರಯಾನ 2 ಯಶಸ್ವಿಯಾಗದಿದ್ದಾಗ, "ಇದು ತುಂಬಾ ತೊಂದರೆಯಾಗಿತ್ತು ಮತ್ತು ವರ್ಷಗಳ ಶ್ರಮ ವ್ಯರ್ಥವಾಯಿತು ಎಂದು ಅನಿಸಿತು ಎಂದಿದ್ದಾರೆ.
"ನಾವು 131 ಉಪಗ್ರಹಗಳನ್ನು ವಿನ್ಯಾಸಗೊಳಿಸಿ ಉಡಾವಣೆ ಮಾಡಿದ್ದೇವೆ. ನಾವು ಅವುಗಳನ್ನು ಸಾರ್ಕ್ ದೇಶಗಳಿಗೆ ನೀಡಿದ್ದೇವೆ.. ಬೇರೆ ಯಾವುದೇ ದೇಶ ಮಾಡದ ಸಾಧನೆಯನ್ನು ನಾವು 34 ದಿನಗಳಲ್ಲಿ ಸಾಧಿಸಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ಭಾರಿ ಪ್ರಗತಿಯಾಗಿದೆ. ನಮ್ಮ ಭಾರತೀಯ ನೆಲದಿಂದ ನಾವು ಯಶಸ್ವಿಯಾಗಿ 433 ಉಪಗ್ರಹಗಳನ್ನು ಕಳುಹಿಸಿದ್ದೇವೆ, ಇದು 90 ಪ್ರತಿಶತದಷ್ಟು ಯಶಸ್ಸಿನ ಪ್ರಮಾಣವನ್ನು ಸಾಧಿಸುತ್ತಿದೆ ಎಂದಿದ್ದಾರೆ.
ಚಂದ್ರಯಾನ 3 ಅಧ್ಯಯನ ವರದಿ ಬಹಿರಂಗ, ಚಂದ್ರನ ಮೇಲಿದೆ ಮಂಜುಗಡ್ಡೆ