Oldest Family Tree: 5700 ವರ್ಷಗಳಷ್ಟು ಹಳೆ ಸಮಾಧಿಯಲ್ಲಿದೆ ವಿಶ್ವದ ಅತ್ಯಂತ ಹಳೆಯ ಕುಟುಂಬದ ರಹಸ್ಯ!

By Suvarna News  |  First Published Dec 26, 2021, 10:49 AM IST

ವಿಜ್ಞಾನಿಗಳ ತಂಡವು ಬ್ರಿಟನ್‌ನ  ಸಮಾಧಿಯೊಂದರಲ್ಲಿನ 35 ವ್ಯಕ್ತಿಗಳ ಮೂಳೆಗಳು ಮತ್ತು ಹಲ್ಲುಗಳಿಂದ ಬೇರ್ಪಡಿಸಿದ ಡಿಎನ್‌ಎಯನ್ನು (DNA) ವಿಶ್ಲೇಷಿಸಿದೆ. ಇವರಲ್ಲಿ 27 ವ್ಯಕ್ತಿಗಳು  ಜೈವಿಕ ಸಂಬಂಧಿಗಳು ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ.


Tech Desk: ಸುಮಾರು 5,700 ವರ್ಷಗಳ ಹಿಂದೆ ವಾಸಿಸುತ್ತಿದ್ದ 35 ವ್ಯಕ್ತಿಗಳ ಅವಶೇಷಗಳ ಪುರಾತತ್ವ ಮತ್ತು ಆನುವಂಶಿಕ ವಿಶ್ಲೇಷಣೆಯನ್ನು ನಡೆಸುವ ಮೂಲಕ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ."ವಿಶ್ವದ ಅತ್ಯಂತ ಹಳೆಯ ಕುಟುಂಬ ವೃಕ್ಷ"ದ (Family Tree) ಬಗ್ಗೆ ವರದಿ ನೀಡಿದೆ. ಸುಮಾರು ಒಂದು ಶತಮಾನದ ಹಿಂದೆ ಬ್ರಿಟನ್‌ನಲ್ಲಿ ಕೃಷಿಯನ್ನು (Agriculture) ಮೊದಲು ಪರಿಚಯಿಸಿದ ಸ್ಥಳದಲ್ಲಿ ಈ ಅವಶೇಷಗಳು ಕಂಡುಬಂದಿವೆ.

ಈ ಬಗ್ಗೆ ನೇಚರ್ ಜರ್ನಲ್‌ನಲ್ಲಿ ( Nature Journal) ಪ್ರಕಟವಾದ ಅಧ್ಯಯನದಲ್ಲಿ,  ಇದು ಇತಿಹಾಸಪೂರ್ವ (ಲಿಖಿತ ದಾಖಲೆಗಳ ಹಿಂದಿನ ಅವಧಿ) ಕುಟುಂಬಗಳು ಹೇಗೆ ರಚನೆಗೊಂಡಿವೆ ಎಂಬುದನ್ನು ವಿವರವಾಗಿ ಬಹಿರಂಗಪಡಿಸುವ ಮೊದಲ ಪ್ರಯತ್ನ ಎಂದು ಹೇಳಲಾಗಿದೆ. ಈ ಅಧ್ಯಯನವು ನವಶಿಲಾಯುಗದ ಕಾಲದಲ್ಲಿ (Neolithic) ಪ್ರಚಲಿತದಲ್ಲಿದ್ದ ಸಮಾಧಿ ಮತ್ತು ರಕ್ತಸಂಬಂಧ ಪದ್ಧತಿಗಳ (Blood Relations) ಬಗ್ಗೆ ಹೊಸ ಒಳನೋಟಗಳನ್ನು ಒದಗಿಸುತ್ತದೆ ಎಂದು ಲೇಖಕರು ಹೇಳುತ್ತಾರೆ.

Tap to resize

Latest Videos

undefined

ನವಶಿಲಾಯುಗದ ಅವಧಿಯಲ್ಲಿ ಯುರೋಪಿನ ಇತಿಹಾಸಪೂರ್ವ ಸಮಾಜಗಳು ಆಧುನಿಕತೆಗ (Modernity)  ಪರಿಚಿತವಾಗಲು ಪ್ರಾರಂಭಿಸಿದವು ಮತ್ತು ಈ ಸಮಯದಲ್ಲಿ ಜನರು ಬೇಟೆಗಾರಿಕೆಯನ್ನು ನಿಲ್ಲಿಸಿದರು ಎಂದು ಪುರಾತತ್ತ್ವ ಶಾಸ್ತ್ರಜ್ಞ ಪೀಟರ್ (Peter Bogucki) ಬೊಗುಕಿಯವರು ಎನ್‌ಸೈಕ್ಲೋಪೀಡಿಯಾ ಆಫ್ ಆರ್ಕಿಯಾಲಜಿಯಲ್ಲಿ ಬರೆದಿದ್ದಾರೆ.

ಅಧ್ಯಯನದ ಪ್ರಮುಖ ಸಂಶೋಧನೆಗಳು ಯಾವುವು?

ವಿಜ್ಞಾನಿಗಳ ತಂಡವು ಬ್ರಿಟನ್‌ನ ಕಾಟ್ಸ್‌ವೋಲ್ಡ್ಸ್-ಸೆವೆರ್ನ್ ಪ್ರದೇಶದಲ್ಲಿನ ಹ್ಯಾಝೆಲ್ಟನ್ ನಾರ್ತ್ ಕೇರ್ನ್‌ನಲ್ಲಿ (Hazelton North cairn) ಸಮಾಧಿ ಮಾಡಿದ 35 ವ್ಯಕ್ತಿಗಳ ಮೂಳೆಗಳು ಮತ್ತು ಹಲ್ಲುಗಳಿಂದ (Teeth) ಬೇರ್ಪಡಿಸಿದ ಡಿಎನ್‌ಎಯನ್ನು (DNA) ವಿಶ್ಲೇಷಿಸಿದೆ. ಇವರಲ್ಲಿ 27 ವ್ಯಕ್ತಿಗಳು  ಜೈವಿಕ ಸಂಬಂಧಿಗಳು ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ನಿಕಟ ಸಂಬಂಧಿಗಳೆಂದು ನಿರ್ಧರಿಸಲಾಗದ ಉಳಿದ ಎಂಟು ಜನರ ಉಪಸ್ಥಿತಿಯು, ಬಹುಶಃ ಜನರನ್ನು ಸಮಾಧಿ ಮಾಡಲು ಜೈವಿಕ ಸಂಬಂಧ (Biological Relation) ಏಕೈಕ ಮಾನದಂಡವಲ್ಲ ಎಂದು ಸೂಚಿಸುತ್ತದೆ. ಹಾಗಗಿ ಜೈವಿಕ ಸಂಬಂಧ ಹೊಂದಿದ್ದ 27 ವ್ಯಕ್ತಗಳ ಜತೆ ಇವರನ್ನು ಸಮಾಧಿ ಮಾಡಲಾಗಿರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ.

ಪಿತೃಪ್ರಧಾನ ಕುಟುಂಬದ ಸೂಚನೆ!

ಗಮನಾರ್ಹವಾಗಿ, ಸಮಾಧಿಯಲ್ಲಿ ಸಮಾಧಿ ಮಾಡಿದ ಹೆಚ್ಚಿನ ಜನರು ಒಂದೇ ಪುರುಷನೊಂದಿಗೆ ಮಕ್ಕಳನ್ನು ಹೊಂದಿದ್ದ ನಾಲ್ಕು ಮಹಿಳೆಯರಿಂದ ಬಂದವರು ಎಂದು ಅಧ್ಯಯನವು ಹೇಳುತ್ತದೆ.
ಈ ಜನರು ಸತ್ತಾಗ, ಅವರನ್ನು ಕೈರ್ನ್‌ನ (ಒಂದು ರೀತಿಯ ಸ್ಮಾರಕ) ಎರಡು ಕೋಣೆಗಳ ಪ್ರದೇಶಗಳಲ್ಲಿ (ಉತ್ತರ ಮತ್ತು ದಕ್ಷಿಣ) ಸಮಾಧಿ ಮಾಡಲಾಯಿತು. ಪುರುಷರನ್ನು ಅವರ ತಂದೆ ಅಥವಾ ಸಹೋದರರೊಂದಿಗೆ ಸಮಾಧಿ ಮಾಡಲಾಗಿದ್ದರೂ (ವಂಶಸ್ಥರು ಪಿತೃಪ್ರಧಾನ ಎಂದು ಸೂಚಿಸುತ್ತಾರೆ) ಯಾವುದೇ ವಯಸ್ಕ ಹೆಣ್ಣುಮಕ್ಕಳು ಇರಲಿಲ್ಲ ಎಂದು ಸಂಶೋಧನೆ ಸೂಚಿಸುತ್ತದೆ. ಅವರ ಅನುಪಸ್ಥಿತಿಯು ವಯಸ್ಕ ಹೆಣ್ಣು ಮಕ್ಕಳನ್ನು  ಅವರ ಪುರುಷ ಪಾಲುದಾರರೊಂದಿಗೆ ಬೇರೆಡೆ ಸಮಾಧಿ ಮಾಡಲಾಗಿದೆ ಎಂದು ಸೂಚಿಸುತ್ತದೆ.

ಇದಲ್ಲದೆ, ಸಮಾಧಿ ಮಾಡಲು ಸಮಾಧಿಯನ್ನು ಬಳಸುವ ಹಕ್ಕನ್ನು ತಂದೆಯ ಸಂಬಂಧಗಳ ಮೂಲಕ ನಿರ್ಧರಿಸಲಾಗುತ್ತದೆ. ಉತ್ತರ ಅಥವಾ ದಕ್ಷಿಣ ಕೊಠಡಿಯಲ್ಲಿ ವ್ಯಕ್ತಿಗಳನ್ನು ಸಮಾಧಿ ಮಾಡುವ ನಿರ್ಧಾರವು ಆರಂಭದಲ್ಲಿ ಅವರು ಬಂದ ಮೊದಲ ತಲೆಮಾರಿನ ಮಹಿಳೆಯ ಮೇಲೆ ಅವಲಂಬಿತವಾಗಿದೆ. " ಮೊದಲ ತಲೆಮಾರಿನ ಮಹಿಳೆಯರು ಈ ಸಮುದಾಯದ ನೆನಪುಗಳಲ್ಲಿ ಸಾಮಾಜಿಕವಾಗಿ ಮಹತ್ವ ಪಡೆದಿದ್ದರು ಎಂದು ಇದು ಸೂಚಿಸುತ್ತದೆ" ಎಂದು ನ್ಯೂಕ್ಯಾಸಲ್ ವಿಶ್ವವಿದ್ಯಾನಿಲಯದ ಪತ್ರಿಕಾ ಪ್ರಕಟಣೆಯು ತಿಳಿಸಿದೆ.

ಇದನ್ನೂ ಓದಿ:

1) Sound from Ganymede: ಸೌರವ್ಯೂಹದ ಅತಿದೊಡ್ಡ ಚಂದ್ರನ ಶಬ್ದ ಸೆರೆಹಿಡಿದ ನಾಸಾದ ಜುನೋ ಮಿಷನ್: ಇಲ್ಲಿದೆ ಆಡಿಯೋ!

2) Water Discovered in Mars: ಮಂಗಳನ ವ್ಯಾಲೆಸ್ ಮ್ಯಾರಿನೆರಿಸ್‌ ಕಣಿವೆಯಲ್ಲಿ ಪತ್ತೆಯಾಯಿತು ಜೀವಜಲ!

3) Plants Respond to Pain: ಪ್ರಾಣಿಗಳಷ್ಟೇ ಅಲ್ಲ, ನೋವಾದಾಗ ಸಸ್ಯಗಳೂ ಕಿರುಚುತ್ತವೆ ಗೊತ್ತಾ?

click me!