ಗ್ಯಾಸ್ ಸ್ಟೌವ್ ಹೊರಸೂಸುವ ಅನಿಲಗಳಿಂದ ಶ್ವಾಸಕೋಶಕ್ಕೆ ವಿಪರೀತ ಹಾನಿ: ಅಧ್ಯಯನ!

By Suvarna News  |  First Published Jan 30, 2022, 5:08 PM IST

ಹಳೆಯ ಮತ್ತು ಹೊಸ ಗ್ಯಾಸ್ ಸ್ಟೌವ್‌ಗಳು ನಿರಂತರವಾಗಿ ಮೀಥೇನ್ ಅನ್ನು ಹೊರಸೂಸುತ್ತವೆ. ಇದು ನೈಸರ್ಗಿಕ ಅನಿಲದಲ್ಲಿ ಪ್ರಬಲವಾದ ಮುಖ್ಯ ಅಂಶವಾಗಿದ್ದು ಗ್ಯಾಸ್ ಸ್ಟೌವ್‌ಗಳಿಂದ ಈ ಸೋರಿಕೆಗಳು ಹಲವು ತೊಂದರೆಗಳಿಗೆ ಕಾರಣವಾಗುತ್ತಿವೆ ಎಂದು  ಸ್ಟ್ಯಾನ್‌ಫೋರ್ಡ್‌ನ ಹೊಸ ವರದಿಯ ತಿಳಿಸಿದೆ. 
 


Tech Desk: ಭಾರತ ಸೇರಿದಂತೆ ಪ್ರಪಂಚದ ಅನೇಕ ದೇಶಗಳಲ್ಲಿ ಕೊರೋನಾ (Coronavirus) 3ನೇ ಅಲೆ ಭೀತಿ ಈಗ ಆರಂಭವಾಗಿದೆ. ಕೊರೋನಾ ಆರಂಭವಾದಾಗಿನಿಂದ ಜಗತ್ತಿನಾದ್ಯಂತ ಹವಾಮಾನ ಬದಲಾವಣೆ ಸೇರಿದಂತೆ ಪರಿಸರಕ್ಕೆ ಸಂಬಂಧಪಟ್ಟ ಹಲವು ಚರ್ಚೆಗಳು ನಡೆಯುತ್ತಿವೆ. ಗಾಳಿಯನ್ನು ಶುದ್ಧವಾಗಿಡುವ ಪ್ರಯತ್ನದಲ್ಲಿ ಜಗತ್ತಿನ ಅನೇಕ ಕಂಪನಿಗಳು ಮತ್ತು ವಿಶ್ವವಿದ್ಯಾಲಯಗಳು ನಾನಾ ಸೌಲಭ್ಯಗಳನ್ನು ಕಲ್ಪಿಸುವ ಹೊಸ ಹೊಸ ಮಾದರಿಯ ವಸ್ತುಗಳನ್ನು ಬಿಡುಗಡೆ ಮಾಡಿವೆ. ಆದರೆ ನಾವು ಮನೆಯಲ್ಲಿ ಬಳಸುವ ಗ್ಯಾಸ್ಟ ಸ್ಟೋವ್‌ಗಳು ಹೊರ ಸೂಸುವ ಅನಿಲವೇ ನಮ್ಮ ಆರೋಗ್ಯಕ್ಕೆ  ಅಪಾಯಕಾರಿ ಎಂಬ ವರದಿಯೊಂದು ಈಗ ಬಿಡುಗಡೆಯಾಗಿದೆ.

ಹಳೆಯ ಮತ್ತು ಹೊಸ ಗ್ಯಾಸ್ ಸ್ಟೌವ್‌ಗಳು ನಿರಂತರವಾಗಿ ಮೀಥೇನ್ ಅನ್ನು ಹೊರಸೂಸುತ್ತವೆ. ಇದು ನೈಸರ್ಗಿಕ ಅನಿಲದಲ್ಲಿ ಪ್ರಬಲವಾದ ಮುಖ್ಯ ಅಂಶವಾಗಿದ್ದು ಗ್ಯಾಸ್ ಸ್ಟೌವ್‌ಗಳಿಂದ ಈ ಸೋರಿಕೆಗಳು ಹಲವು ತೊಂದರೆಗಳಿಗೆ ಕಾರಣವಾಗುತ್ತಿವೆ ಎಂದು  ಸ್ಟ್ಯಾನ್‌ಫೋರ್ಡ್‌ನ ಹೊಸ ವರದಿಯ ತಿಳಿಸಿದೆ. 

Tap to resize

Latest Videos

undefined

ಇದನ್ನೂ ಓದಿ: 18 ನಿಮಿಷಗಳಿಗೊಮ್ಮೆ ರೇಡಿಯೊ ಸಿಗ್ನಲ್‌ ಹೊರಸೂಸುತ್ತಿರುವ ಅಜ್ಞಾತ ಬಾಹ್ಯಾಕಾಶ ವಸ್ತು ಪತ್ತೆ!

ಸಣ್ಣ ಸೋರಿಕೆಗಳಿಂದ ಕೂಡ ಪರಿಣಾಮ:  "ಸ್ಟೌವ್‌ಗಳ ಅಸ್ತಿತ್ವವು ನಿಜವಾಗಿಯೂ ಮೀಥೇನ್ ಹೊರಸೂಸುವಿಕೆಗೆ ಚಾಲನೆ ನೀಡುತ್ತಿದೆ" ಎಂದು ಪಿಎಸ್‌ಇ ಹೆಲ್ತಿ ಎನರ್ಜಿಯ ಸಂಶೋಧನಾ ವಿಜ್ಞಾನಿ ಮತ್ತು ವರದಿಯ ಪ್ರಮುಖ ಲೇಖಕ ಎರಿಕ್ ಲೆಬೆಲ್ (Eric Lebel) ಹೇಳಿದ್ದಾರೆ. "ಒಲೆ ಆಫ್  ಆಗಿರುವಾಗ ಕೂಡ ಸ್ಟೌವ್‌ಗಳಿಂದ ಮೀಥೇನ್ ಹೊರಸೂಸುವಿಕೆಯ ಮುಕ್ಕಾಲು ಭಾಗದಷ್ಟು ಹೊರಸೂಸುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ. ಆದ್ದರಿಂದ ಒಲೆಗಳಿಂದ ಈ ಸಣ್ಣ ಸಣ್ಣ ಸೋರಿಕೆಗಳು ಕೂಡ ಪರಿಣಾಮ ಬಿಳುತ್ತದೆ" ಎಂದು ಅವರು ಹೇಳಿದ್ದಾರೆ.

ಯುಎಸ್‌ನ ಮೂರನೇ ಒಂದು ಭಾಗದಷ್ಟು ಮನೆಗಳಲ್ಲಿ ಬಳಸಲಾಗುವ ಗ್ಯಾಸ್ ಸ್ಟೌವ್‌ಗಳು ಹವಾಮಾನ ಬದಲಾವಣೆಗೆ (Climate Change) ಕೊಡುಗೆ ನೀಡುವುದಿಲ್ಲ. ಆದರೆ ಆಸ್ತಮಾ  ಮತ್ತು ಹೃದಯರಕ್ತನಾಳದ ಕಾಯಿಲೆ ಸೇರಿದಂತೆ ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿರುವ ಹಾನಿಕಾರಕ ಮಾಲಿನ್ಯಕಾರಕಗಳಿಗೆ ಲಕ್ಷಾಂತರ ಜನರನ್ನು ಒಡ್ಡುತ್ತವೆ ಎಂದು ಸಂಶೋಧನೆ ತಿಳಿಸಿದೆ.

ಇದನ್ನೂ ಓದಿ: Artificial Lunar ಕೃತಕ ಚಂದ್ರನನ್ನೇ ಸೃಷ್ಟಿಸಿದ ಚೀನಾ, ಅಧ್ಯಯನದಿಂದ ಏನೇನು ಲಾಭ?

ನೈಟ್ರೋಜನ್ ಡೈಆಕ್ಸೈಡ್ ಬಿಡುಗಡೆ:  ಸ್ಟ್ಯಾನ್‌ಫೋರ್ಡ್ ಸಂಶೋಧಕರು ಕ್ಯಾಲಿಫೋರ್ನಿಯಾದ 53 ಮನೆಗಳಲ್ಲಿ ಒಳಾಂಗಣ ವಾಯು ಮಾಲಿನ್ಯವನ್ನು ಪರಿಶೀಲಿಸಿದ್ದಾರೆ.  ಅಧ್ಯಯನವು 3 ರಿಂದ 30 ವರ್ಷ ವರ್ಷ ಹಳೆಯ 18 ವಿಭಿನ್ನ ಬ್ರ್ಯಾಂಡ್ ಸ್ಟೌವ್‌ಗಳನ್ನು ಪರೀಶಿಲಿಸಿದೆ. ಹೊಸ ಸ್ಟೌವ್‌ಗಳು ಹಳೆಯವುಗಳಂತೆಯೇ ಮೀಥೇನ್ ಮತ್ತು NOx ( ನೈಟ್ರೋಜನ್ ಆಕ್ಸೈಡ್‌ಗ) ಅನ್ನು ಹೊರಸೂಸುತ್ತವೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.  ಸ್ಟ್ಯಾನ್‌ಫೋರ್ಡ್ ಸಂಶೋಧಕರು ನೈಟ್ರೋಜನ್ ಡೈಆಕ್ಸೈಡ್ ನೀವು ಪ್ರತಿ ಬಾರಿ ನಿಮ್ಮ ಸ್ಟೌವನ್ನು ಬೆಳಗಿಸಿದಾಗ ಉತ್ಪತ್ತಿಯಾಗುತ್ತದೆ ಇದು ಹಿಂದೆ ಅರ್ಥಮಾಡಿಕೊಂಡದ್ದಕ್ಕಿಂತ ಹೆಚ್ಚು ವೇಗವಾಗಿ ಬಿಡುಗಡೆಯಾಗತ್ತದೆ ಎಂದು ವರದಿ ತಿಳಿಸಿದೆ.  

ಲೆಬೆಲ್ ಮತ್ತು ಅವರ ಸಹೋದ್ಯೋಗಿಗಳು ಗಮನಿಸಿದ ಸೋರಿಕೆಗಳು ಸ್ಫೋಟಗಳನ್ನು ಉಂಟುಮಾಡುವಷ್ಟು ದೊಡ್ಡ ಮಟ್ಟದಾಗಿರಲಿಲ್ಲ. ಆದರೂ 2020 ರಲ್ಲಿ ಯುಎಸ್‌ನಲ್ಲಿ 284  ಗ್ಯಾಸ್ ಪೈಪ್‌ಲೈನ್ ಅಪಘಾತ ನಡೆದಿವೆ, ಇದರ ಪರಿಣಾಮವಾಗಿ 15 ಸಾವುಗಳು ಮತ್ತು $ 300 ಮಿಲಿಯನ್ ನಷ್ಟು ನಷ್ಟವಾಗಿದೆ. ಆದರೆ ಗ್ಯಾಸ್‌ ಸ್ಟೋವ್‌ ಸೋರಿಕೆಗಳು ಕೂಡ ಈ ಅಪಘಾತದ ಕಾರಣದ ಭಾಗವಾಗಿದೆ.  ಯುಎಸ್‌ನ ಇಂಗಾಲದ ಹೊರಸೂಸುವಿಕೆಯಲ್ಲಿ ಶಾಖ ಮತ್ತು ಅಡುಗೆಗಾಗಿ ಬಳಸುವ ಪಳೆಯುಳಿಕೆ ಇಂಧನಗಳು ಸುಮಾರು 10 ಪ್ರತಿಶತದಷ್ಟು ಕೊಡುಗೆ ನೀಡುತ್ತವೆ.

"ಜ್ವಾಲೆಗಳಿಂದ ರೂಪುಗೊಂಡ NOx ಮತ್ತು ಮಾಲಿನ್ಯಕಾರಕಗಳು ತಕ್ಷಣವೇ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ" ಎಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ವರದಿಯ ಸಹ-ಲೇಖಕರಲ್ಲಿ ಒಬ್ಬರಾದ ರಾಬ್ ಜಾಕ್ಸನ್ ಹೇಳುತ್ತಾರೆ. "ಬರ್ನರ್‌ಗಳನ್ನು ಆನ್ ಮಾಡಿದ ತಕ್ಷಣ, ಸ್ಟೌವ್ ಈ ಮಾಲಿನ್ಯಕಾರಕಗಳನ್ನು ನಾವು ಉಸಿರಾಡುವ ಗಾಳಿಯಲ್ಲಿ ಹೊರಹಾಕಲು ಪ್ರಾರಂಭಿಸುತ್ತದೆ." ಅನೇಕ ಸಂದರ್ಭಗಳಲ್ಲಿ, ಒಳಾಂಗಣ ವಾಯುಮಾಲಿನ್ಯವು ಕೆಲವೇ ನಿಮಿಷಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಸೂಚಿಸಿದ ಶಿಫಾರಸು ಮಿತಿಗಳನ್ನು ಮೀರಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದಿನ ವರದಿಗಳು: ಈ ಹಿಂದೆ ರಾಕಿ ಮೌಂಟೇನ್ ಇನ್‌ಸ್ಟಿಟ್ಯೂಟ್ (RMI) 2020ರ ವರದಿಯು ಗ್ಯಾಸ್ ಸ್ಟೌವ್‌ಗಳನ್ನು ಹೊಂದಿರುವ ಮನೆಗಳು ಸುಮಾರು 50 ರಿಂದ 400 ಪ್ರತಿಶತದಷ್ಟು ಹೆಚ್ಚಿನ ನೈಟ್ರೋಜನ್ ಡೈಆಕ್ಸೈಡ್ ಮಟ್ಟವನ್ನು, 30 ಪಟ್ಟು ಹೆಚ್ಚು ಕಾರ್ಬನ್ ಮಾನಾಕ್ಸೈಡ್ ಮತ್ತು ಅವುಗಳಿಲ್ಲದ ಮನೆಗಳಿಗಿಂತ ಎರಡು ಪಟ್ಟು ಹೆಚ್ಚು PM2.5 ಅನ್ನು ಹೊಂದಿವೆ ಎಂದು ದಾಖಲಿಸಿತ್ತು. 2013ರ ವಿಶ್ಲೇಷಣೆಯ ಪ್ರಕಾರ ಗ್ಯಾಸ್ ಸ್ಟೌವ್ ಹೊಂದಿರುವ ಮನೆಗಳಲ್ಲಿನ ಮಕ್ಕಳು ಆಸ್ತಮಾಕ್ಕೆ ಸಂಬಂಧಿಸಿದ ರೋಗಲಕ್ಷಣಗಳನ್ನು ಅನುಭವಿಸುವ ಸಾಧ್ಯತೆ 42 ಪ್ರತಿಶತ ಹೆಚ್ಚು, ಮತ್ತು ಜೀವಿತಾವಧಿಯಲ್ಲಿ ಆಸ್ತಮಾ ರೋಗಕ್ಕೆ ತುತ್ತಾಗುವ  ಸಾಧ್ಯತೆ 24 ಪ್ರತಿಶತ ಹೆಚ್ಚು ಎಂದು ತಿಳಿದುಬಂದಿತ್ತು. 

click me!