ಜ. 29 ರಂದು ಗೋಚರಿಸಲಿದೆ ಮಂಗಳ-ಚಂದ್ರನ ಸಂಯೋಗ: ವೀಕ್ಷಿಸುವುದು ಹೇಗೆ?

By Suvarna News  |  First Published Jan 29, 2022, 5:13 PM IST

ಜನವರಿ 29ರ ರಾತ್ರಿ ಚಂದ್ರ ಮತ್ತು ಮಂಗಳ ಗ್ರಹ ಕೇವಲ 2 ಡಿಗ್ರಿಗಳಷ್ಟು ಅಂತರದಲ್ಲಿರುತ್ತವೆ. ಭಾರತದಲ್ಲಿ ಈ ಸಂಯೋಗವು  ರಾತ್ರಿ 8:34 ಕ್ಕೆ ಗೋಚರಿಸಲಿದೆ
 


Tech Desk: ಇಂದು ರಾತ್ರಿ (ಜನವರಿ 29) ಚಂದ್ರ (Moon) ಮತ್ತು ಮಂಗಳ (Mars) ಗ್ರಹ ಕೇವಲ 2 ಡಿಗ್ರಿಗಳಷ್ಟು ಅಂತರದಲ್ಲಿರುತ್ತವೆ. ಭಾರತದಲ್ಲಿ ಈ ಸಂಯೋಗವು  ರಾತ್ರಿ 8:34 ಕ್ಕೆ ಗೋಚರಿಸಲಿದೆ. ಎರಡು ಆಕಾಶಕಾಯಗಳು ಒಂದೇ ಬಲ ಆರೋಹಣವನ್ನು (Right Ascension) ಹಂಚಿಕೊಳ್ಳುತ್ತವೆ. ಚಂದ್ರ ಮಂಗಳದ ದಕ್ಷಿಣಕ್ಕೆ ಹಾದುಹೋಗುತ್ತದೆ.  ಚಂದ್ರ ಮತ್ತು ಮಂಗಳ ಜತೆಗೆ ಅದರ ಸಮೀಪದಲ್ಲಿ ಭೂಮಿಯ ಹತ್ತಿರದ ಗ್ರಹ ಶುಕ್ರ ಕೂಡ ಇರುತ್ತದೆ. ಚಂದ್ರ ಮತ್ತು ಮಂಗಳವು, ದಕ್ಷಿಣ ಗೋಳಾರ್ಧದಲ್ಲಿ ಅತಿದೊಡ್ಡ ನಕ್ಷತ್ರಪುಂಜ ಮತ್ತು  ಹನ್ನೆರಡು ರಾಶಿಚಕ್ರಗಳಲ್ಲಿ ಒಂದಾದ ಧನು ರಾಶಿಯಲ್ಲಿ ಇರುತ್ತವೆ.  

ನೀವು ಕಟ್ಟಡಗಳು ಮತ್ತು ಮರಗಳ ಮಧ್ಯೆ ಇದನ್ನು ನೋಡಲು ಸಫಲರಾದರೇ, ಚಂದ್ರ ಮತ್ತು ಮಂಗಳ ಪರಸ್ಪರ ಹತ್ತಿರ ಸುಳಿದಾಡುವುದು ನೋಡಲು ಸಾಧ್ಯವಾಗುತ್ತದೆ. ನೀವು ಶುಕ್ರನನ್ನು ಸಹ ವೀಕ್ಷಿಸಬಹುದು. ಬುಧವು ತುಂಬಾ ಮಂದವಾಗಿ ಕಾಣಿಸಿದರೂ, ಎಡಕ್ಕೆ ಸ್ವಲ್ಪ ಮುಂದೆ  ಪ್ರಕಾಶಮಾನವಾಗಿ ಶನಿ ಗೋಚರಿಸುತ್ತದೆ. 

Tap to resize

Latest Videos

undefined

ಇದನ್ನೂ ಓದಿ: Margi Shukra 2022: ಇಂದಿನ ಶುಕ್ರ ಮಾರ್ಗಿಯಿಂದ ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

ಇನ್ ದಿ ಸ್ಕೈ ( In The Sky) ವರದಿ ಪ್ರಕಾರ ಈ ಸಂಯೋಗವು 15:04 UTC (20:34 IST: ರಾತ್ರಿ 8:30) ಗೆ ನಡೆಯುತ್ತದೆ. ಆದಾಗ್ಯೂ, ಮಂಗಳ ಮತ್ತು ಚಂದ್ರ ವ್ಯಾಪಕವಾಗಿ ಪ್ರತ್ಯೇಕಿಸಲ್ಪಡುವುದರಿಂದ ದೂರದರ್ಶಕದ ವೀಕ್ಷಣಾ ಕ್ಷೇತ್ರದೊಳಗೆ (Telescope's Field Of View) ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಅವು ಬರಿಗಣ್ಣಿಗೆ ಅಥವಾ  ಬೈನಾಕ್ಯುಲರ್‌ಗಳ ಮೂಲಕ ಗೋಚರಿಸುತ್ತವೆ.

ಇದು ಎರಡು ಅಥವಾ ಹೆಚ್ಚಿನ ಖಗೋಳ ಕಾಯಗಳು ಒಂದೇ ಬಲ ಆರೋಹಣವನ್ನು ಹಂಚಿಕೊಂಡಾಗ ಸಂಭವಿಸುವ ಒಂದು ಆಕಾಶ ಘಟನೆಯಾಗಿದೆ. ಸರಳವಾಗಿ ಹೇಳುವುದಾದರೆ, ಆಕಾಶ ವಸ್ತುಗಳ ಹತ್ತಿರ ಬರುವುದನ್ನು  ಸಾಮಾನ್ಯವಾಗಿ ಸಂಯೋಗ (conjunction) ಎಂದು ಕರೆಯಲಾಗುತ್ತದೆ. ಆದಾಗ್ಯೂ ನಿಖರವಾಗಿ ಇಂತಹ ಗುಂಪುಗಳಿಗೆ ಆಪಲ್ಸ್ (Appulse) ಪದವನ್ನು ಬಳಸಲಾಗುತ್ತದೆ. ಆಪಲ್ಸ್ ಸಂಯೋಗವಾಗಿರಬಹುದು ಅಥವಾ ಇಲ್ಲದಿರಬಹುದು.

 

The Moon and Mars pass within 2°24' of each other on Sat Jan 29. Read more here: https://t.co/nmesqnCCid

— In The Sky (@intheskyorg)

 

ಜಗತ್ತಿನ ಮೊದಲ ಸ್ಪೇಸ್ ಫಿಲ್ಮ್ ಸ್ಟುಡಿಯೋ 2024ರಲ್ಲಿ ಶುರು! : ಮಾನವ ಎಣಿಕೆಗೆ ಕೊನೆಯೇ ಇಲ್ಲ, ಕನಸಿಗೆ ಮಿತಿಯೇ ಇಲ್ಲ ಎಂದು ಹೇಳುವುದು ಇದಕ್ಕೆ. ಬಾಹ್ಯಾಕಾಶದಲ್ಲಿ ಫಿಲ್ಮ್ ಸ್ಟುಡಿಯೋ ಮಾಡಬಹುದಾ? ಖಂಡಿತ ಇದು ಓದೋದಕ್ಕೆ ಚೆನ್ನಾಗಿರುತ್ತದೆ, ಕತೆ-ಕಾದಂಬರಿಗಳಲ್ಲಿ ರಿಯಲ್ ಆಗಿರುತ್ತದೆ ಎಂದು ಭಾವಿಸಬೇಡಿ. ಇಂಥದೊಂದು ನಿಜವಾಗುವ ಕಾಲ ಸನ್ನಿಹಿತವಾಗಿದೆ. ಬಾಹ್ಯಾಕಾಶದಲ್ಲೇ ಜಗತ್ತಿನ ಮೊದಲ ಎಂಟರ್‌ಟೈನ್ಮೆಂಟ್ ಸ್ಟುಡಿಯೂವೊಂದು 2024ರಲ್ಲಿ ಕಾರ್ಯಾರಂಭ ಮಾಡಲಿದೆ. ಭೂಮಿಯ ಮೇಲಿನ ಸ್ಟುಡಿಯೋಗಳು ಯಾವ ರೀತಿಯಲ್ಲಿ ಇರಲಿವೆಯೋ ಅದೇ ರೀತಿಯ ಸ್ಟುಡಿಯೋ ಆಕಾಶದಲ್ಲಿ ತಲೆ ಎತ್ತಲಿದೆ! ಅಂದ ಹಾಗೆ, ಹಾಲಿವುಡ್‌ನ ಫೇಮಸ್ ನಟ ಟಾಮ್ ಕ್ರೂಸ್ ಗೊತ್ತಲ್ಲ, ಅವರ ಸಿನಿಮಾ ಇಲ್ಲಿ ಚಿತ್ರೀಕರಣಗೊಳ್ಳಲಿದೆಯಂತೆ.

ಇದನ್ನೂ ಓದಿ: 18 ನಿಮಿಷಗಳಿಗೊಮ್ಮೆ ರೇಡಿಯೊ ಸಿಗ್ನಲ್‌ ಹೊರಸೂಸುತ್ತಿರುವ ಅಜ್ಞಾತ ಬಾಹ್ಯಾಕಾಶ ವಸ್ತು ಪತ್ತೆ!

ಹೌದು ಇದೆಲ್ಲವೂ ನಿಜ. ಸ್ಪೇಸ್ ಎಂಟರ್‌ಟೈನ್ಮೆಂಟ್ ಎಂಟರ್‌ಪ್ರೈಸಸ್(Space Entertainment Enterprise-SEE) ಇಂಥದೊಂದು ಸಾಹಸಕ್ಕೆ ಮುಂದಾಗಿದೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ಕಾರ್ಯನಿರ್ವಹಿಸುವ ಜಗತ್ತಿನ ಮೊದಲು ಬಹುಪಯೋಗಿ ಎಂಟರ್‌ಟೈನ್ಮೆಂಟ್ ಸ್ಟುಡಿಯೋ ಲಾಂಚ್ ಮಾಡುವುದಾಗಿ ಹೇಳಿಕೊಂಡಿದೆ. ಈ ಕಂಪನಿಯೇ ಟಾಮ್ ಕ್ರೂಸ್ ಅವರ ಮುಂಬರಲಿರುವ ಸ್ಪೇಸ್ ಮೂವಿ ನಿರ್ಮಾಣ ಕೂಡ ಮಾಡುತ್ತಿದೆ. 

ಕ್ರೀಡಾ ಮತ್ತು ಎಂಟರ್‌ಟೈನ್ಮೆಂಟ್ ಸ್ಟುಡಿಯೊಗಳು ಮಾತ್ರವಲ್ಲದೇ ಕಂಟೆಂಟ್ ಸ್ಟುಡಿಯೋ ಕೂಡ ನಿರ್ಮಾಣ ಮಾಡಲಿದೆ. ಈ ಬಾಹ್ಯಾಕಾಶದಲ್ಲಿನ ಸ್ಟುಡಿಯೋ 2024ರ ಡಿಸೆಂಬರ್ ಹೊತ್ತಿಗೆ ಪೂರ್ಣಗೊಳ್ಳಲಿದೆ. ಇದಕ್ಕೆ ಎಸ್ಇಇ-1 (SEE-1) ಎಂದು ನಾಮಕರಣ ಮಾಡಲಾಗಿದೆ. ಇಲ್ಲಿ ನೀವು ಸಿನಿಮಾ, ದೂರದರ್ಶನ, ಸಂಗೀತ ಮತ್ತು ಕ್ರೀಡಾ ಇವೆಂಟ್‌ಗಳನ್ನು ಆಯೋಜಿಸಬಹುದು. ಮೈಕ್ರೋ ಗ್ರಾವಿಟ್ ಹಾಗೂ ಲೋ ಆರ್ಬಿಟ್‌ನಲ್ಲಿ ಕಲಾವಿದರು, ನಿರ್ಮಾಣಕರು, ನಿರ್ದೇಶಕರು ತಮಗೆ ಬೇಕಾದ ಕಂಟೆಂಟ್ ಅನ್ನು ಇಲ್ಲಿ ಸೃಷ್ಟಿಸಬಹುದು. ಈ ಮಾಡ್ಯೂಲ್‌ನಲ್ಲಿ ಎಸ್ಇಇ ತನ್ನ ಸ್ವಂತ ಕಂಟೆಂಟ್ ರೂಪಿಸುವುದು ಮಾತ್ರವಲ್ಲದೇ ಥರ್ಡ್ ಪಾರ್ಟಿಗಳಿಗೂ ಇಲ್ಲಿ ತಮ್ಮ ಕಂಟೆಂಟ್ ರೂಪಿಸಲು ಕೊಳ್ಳಲು ಅವಕಾಶ ನೀಡಲಿದೆ.

click me!