ಉಡಾವಣೆಗೆ ಸಜ್ಜಾದ ದೇಶದ ಹೊಸ ಹವಾಮಾನ ಉಪಗ್ರಹ, ಶಾರ್‌ ತಲುಪಿದ INSAT-3DS

By Santosh Naik  |  First Published Jan 27, 2024, 10:00 PM IST

ಜಿಯೋಸಿಂಕ್ರೊನಸ್ ಲಾಂಚ್ ವೆಹಿಕಲ್ (GSLV-F14) ಮೂಲಕ ಉಡಾವಣೆ ಮಾಡುವ ಸಲುವಾಗಿ,  INSAT-3DS ಉಪಗ್ರಹವನ್ನು ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SDSC) ಅಂದರೆ, ಶಾರ್‌ಗೆ (SHAR) ಕಳಿಸಿಕೊಡಲಾಗಿದೆ.


ಬೆಂಗಳೂರು (ಜ.27): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಹೊಸ ಹವಾಮಾನ ಉಪಗ್ರಹವನ್ನು ಬಾಹ್ಯಾಕಾಶಕ್ಕೇರಿಸಲು ಸಜ್ಜಾಗಿದೆ. ಜನವರಿ 25 ರಂದು ಹೊಸ ಹವಾಮಾನ ಉಪಗ್ರಹವಾದ  INSAT-3DS ಅನ್ನು ಜಿಯೋಸಿಂಕ್ರೊನಸ್ ಲಾಂಚ್ ವೆಹಿಕಲ್ (GSLV-F14) ಮೂಲಕ ಉಡಾವಣೆ ಮಾಡಲು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SDSC) ಅಂದರೆ ಶಾರ್‌ಗೆ ಕಳಿಸಿಕೊಡಲಾಗಿದೆ. ಭೂ ವಿಜ್ಞಾನ ಸಚಿವಾಲಯಕ್ಕಾಗಿ (MoES) ಬೆಂಗಳೂರಿನ ಯು ಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗಿದೆ. "ಉಪಗ್ರಹವನ್ನು ಬೃಹತ್‌ ಪ್ರಮಾಣದಲ್ಲಿ ಹವಾಮಾನ ವೀಕ್ಷಣೆ ಮತ್ತು ಹವಾಮಾನ ಮುನ್ಸೂಚನೆ ಮತ್ತು ವಿಪತ್ತು ಎಚ್ಚರಿಕೆಗಾಗಿ ಭೂಮಿ ಮತ್ತು ಸಾಗರ ಮೇಲ್ಮೈಗಳ ಮೇಲ್ವಿಚಾರಣೆಗಾಗಿ ವಿನ್ಯಾಸಗೊಳಿಸಲಾಗಿದೆ" ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.

ಮೊದಲ ಬಾರಿ ಚಂದ್ರನ ಮೇಲೆ ಇಳಿಯಲಿದೆ ಖಾಸಗಿ ಲ್ಯಾಂಡರ್!

Latest Videos

undefined

ಇಸ್ರೋದ ಹಿರಿಯ ಅಧಿಕಾರಿಗಳ ಪ್ರಕಾರ ಫೆಬ್ರವರಿ ಮೊದಲ ವಾರದಲ್ಲಿ GSLV-F14 ಬಾಹ್ಯಾಕಾಶಕ್ಕೆ ಉಡ್ಡಯನ ಮಾಡಲಾಗುತ್ತದೆ. INSAT-3DS ಮಿಷನ್ ಇಸ್ರೋ ಮತ್ತು ಭಾರತೀಯ ಹವಾಮಾನ ಇಲಾಖೆಯ ನಡುವಿನ ಸಹಯೋಗವಾಗಿದೆ. ಇದು ಹವಾಮಾನ ಸೇವೆಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹವಾಮಾನ ವೀಕ್ಷಣಾಲಯದ ಉಪಗ್ರಹಗಳ ಸರಣಿಯ ಭಾಗವಾಗಿದೆ, ಈಗಾಗಲೇ ಕಕ್ಷೆಯಲ್ಲಿರುವ ಇನ್ಸಾಟ್-3D ಮತ್ತು ಇನ್ಸಾಟ್-3ಡಿಆರ್ ಸೇರಿದಂತೆ ಮೂರು ಮೀಸಲಾದ ಭೂ ವೀಕ್ಷಣಾ ಉಪಗ್ರಹಗಳನ್ನು ಒಳಗೊಂಡಿದೆ.

ಆದಿತ್ಯ ಎಲ್‌1 ಸೌರ ವೀಕ್ಷಣಾಲಯದ ಕುರಿತ 10 ಪ್ರಶ್ನೆಗೆ ಇಲ್ಲಿದೆ ಉತ್ತರ..!

GSLV-F14/INSAT-3DS Mission:

INSAT-3DS, ISRO's latest meteorological satellite, developed at the U R Rao Satellite Centre in Bengaluru for the Ministry of Earth Science (MoES), has been flagged off to SDSC-SHAR, Sriharikota, for launch aboard GSLV-F14.https://t.co/47wpxKyxdp pic.twitter.com/nelmNjN8hu

— ISRO (@isro)
click me!