Breaking: ಭಾರತದ ಬಳಿಕ ಚಂದ್ರನ ನೆಲದ ಮೇಲೆ ಕಾಲಿಟ್ಟ ಜಪಾನ್‌ನ SLIM

By Santosh Naik  |  First Published Jan 19, 2024, 9:00 PM IST

ಭಾರತದ ಬಳಿಕ ಜಪಾನ್‌ ಐತಿಹಾಸಿಕ ಮೂನ್‌ ಲ್ಯಾಂಡಿಂಗ್‌ ಮಾಡಿದೆ. ಸೆಪ್ಟೆಂಬರ್‌ 6 ರಂದು ನಭಕ್ಕೆ ಹಾರಿದ್ದ ಜಪಾನ್‌ ಏರೋಸ್ಪೇಸ್‌ ಎಕ್ಸ್‌ಪ್ಲೋರೇಷನ್‌ ಏಜೆನ್ಸಿಯ ಸ್ಲಿಮ್‌ ನೌಕೆ, ಶನಿವಾರ ಚಂದ್ರನ ಮೇಲೆ ಕಾಲಿಟ್ಟಿದೆ.
 


ನವದೆಹಲಿ (ಜ.19): ಭಾರತದ ಚಂದ್ರಯಾನ-3 ಬಳಿಕ ಜಪಾನ್‌ನ ಬಹುನಿರೀಕ್ಷಿತ ಸ್ಲಿಮ್‌ ನೌಕೆ ಚಂದ್ರನ ಮೇಲೆ ಯಶಸ್ವಿಯಾಗಿ ಕಾಲಿಟ್ಟಿದೆ. ಶನಿವಾರ ಜಪಾನ್‌ ಏರೋಸ್ಪೇಸ್‌ ಎಕ್ಸ್‌ಪ್ಲೋರೇಷನ್‌ ಏಜೆನ್ಸಿ ಅಂದರೆ ಜಾಕ್ಸಾ ಸ್ಲಿಮ್‌ ನೌಕೆಯನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್‌ ಮಾಡುವಲ್ಲಿ ಯಶಸ್ವಿಯಾಗಿದೆ.  ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ (JAXA) ಸ್ಲಿಮ್‌ ಇಳಿಯಲು ಆರಂಭ ಮಾಡಿದ ನಂತರ 20 ನಿಮಿಷಗಳಲ್ಲಿ ಲ್ಯಾಂಡಿಂಗ್‌ ಪ್ರಯತ್ನವನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿತ್ತು. 2023ರ ಸೆಪ್ಟೆಂಬರ್ 6 ರಂದು ಉಡಾವಣೆಯಾಗಿದ್ದ ಸ್ಲಿಮ್‌ ಸಣ್ಣ ಕಾರಿನ ಗಾತ್ರದ ಬಾಹ್ಯಾಕಾಶ ನೌಕೆಯಾಗಿದೆ. 2023ರ ಕ್ರಿಸ್‌ಮನ್‌ ದಿನದಂದು ಈ ನೌಕೆ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ಸ್ಲಿಮ್‌ ಅನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸುವ ಮೂಲಕ ಚಂದ್ರನ ಮೇಲೆ ಕಾಲಿಟ್ಟಿ ವಿಶ್ವದ ಐದನೇ ದೇಶ ಎನ್ನುವ ಸಾಧನೆ ಮಾಡಿದೆ.

ಲ್ಯಾಂಡಿಂಗ್‌ಗಾಗಿ 600x4000 ಕಿಮೀ ಪ್ರದೇಶವನ್ನು ಶೋಧನೆ ಮಾಡಲಾಗಿತ್ತು ಎಂದು ಜಪಾನಿನ ಬಾಹ್ಯಾಕಾಶ ಸಂಸ್ಥೆ JAXA ಹೇಳಿದೆ. ಸ್ಲಿಮ್ ಇದೇ ಪ್ರದೇಶದಲ್ಲಿ ಇಳಿದಿದೆ. ಈ ಸ್ಥಳವು ಚಂದ್ರನ ಧ್ರುವ ಪ್ರದೇಶದಲ್ಲಿದೆ. ಮಹತ್ವದ ವಿಚಾರವೆಂದರೆ, ನೌಕೆಯು ಲ್ಯಾಂಡಿಂಗ್ಗಾಗಿ ಆಯ್ಕೆ ಮಾಡಿದ ಸ್ಥಳದ ಬಳಿ ನಿಖರವಾಗಿ ಲ್ಯಾಂಡಿಂಗ್ ಮಾಡಿದೆ. ಏಕೆಂದರೆ ತನ್ನ ಬಾಹ್ಯಾಕಾಶ ನೌಕೆಯು ಲ್ಯಾಂಡಿಂಗ್ ಸೈಟ್‌ನಿಂದ 100 ಮೀಟರ್ ಒಳಗೆ ಇಳಿಯಬೇಕು ಎಂಬುದು ಜಪಾನ್‌ನ ಗುರಿಯಾಗಿತ್ತು. ಈ ಕೆಲಸದಲ್ಲಿ ಜಪಾನ್‌ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಈ ಲ್ಯಾಂಡಿಂಗ್ ಸೈಟ್ ಹೆಸರು ಶಿಯೋಲಿ ಕ್ರೇಟರ್ ಎನ್ನಲಾಗಿದೆ. ಇದು ಚಂದ್ರನ ಮೇಲಿರುವ ಕಪ್ಪು ಚುಕ್ಕೆ ಎಂದು ಹೇಳಲಾಗುತ್ತದೆ. ಮತ್ತೊಂದು ಲ್ಯಾಂಡಿಂಗ್ ಸೈಟ್ ಆಗಿ ಮೇರ್ ನೆಕ್ಟರಿಸ್ ಅನ್ನು ಜಪಾನ್‌ ಗುರುತಿಸಿತ್ತು. ಇದನ್ನು ಚಂದ್ರನ ಸಮುದ್ರ ಎಂದು ಕರೆಯಲಾಗುತ್ತದೆ. ಸ್ಲಿಮ್ ಸುಧಾರಿತ ಆಪ್ಟಿಕಲ್ ಮತ್ತು ಇಮೇಜ್ ಪ್ರೊಸೆಸಿಂಗ್ ತಂತ್ರಜ್ಞಾನವನ್ನು ಹೊಂದಿದೆ.

Tap to resize

Latest Videos

undefined

ಜಪಾನ್‌ನ ಸ್ಲಿಮ್‌ ಲ್ಯಾಂಡಿಂಗ್‌ ಹೇಗೆ ಭಿನ್ನವಾಗಿತ್ತು: ಸಾಮಾನ್ಯವಾಗಿ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ಅನ್ನು ಚಂದ್ರನ ಮೇಲ್ಮೈನಿಂದ ಕೆಲವು ಕಿಲೋಮೀಟರ್‌ ದೂರ ಇರುವಾಗಲೇ ಪ್ರಾರಂಭವಾಗುತ್ತದೆ. ಭಾರತ ಸೇರಿದಂತೆ ಚಂದ್ರನ ಮೇಲೆ ಕಾಲಿಟ್ಟ ಎಲ್ಲಾ ದೇಶಗಳು ಕೂಡ ಇದೇ ಮಾದರಿಯನ್ನು ಅನುಸರಿಸಿದ್ದವು. ಆದರೆ, ತನ್ನ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿರುವ ಜಪಾನ್‌, ಮೊಟ್ಟ ಮೊದಲ ಬಾರಿಗೆ ಪಿನ್‌ ಪಾಯಿಂಟ್‌ ಲೂನಾರ್‌ ಲ್ಯಾಂಡಿಂಗ್‌ಅನ್ನು ಸಾಧಿಸಿದೆ. ಕೇವಲ 100 ಮೀಟರ್‌ ರೇಡಿಯಸ್‌ನಲ್ಲಿ ಸ್ಲಿಮ್‌ನ ಲ್ಯಾಂಡಿಂಗ್‌ ಪ್ರಕ್ರಿಯೆ ಆರಂಭ ಮಾಡಿತ್ತು.

ಎಕ್ಸ್-ರೇ ಇಮೇಜಿಂಗ್ ಮತ್ತು ಸ್ಪೆಕ್ಟ್ರೋಸ್ಕೋಪಿ ಮಿಷನ್ (XRISM) ಸಹ ಸ್ಲಿಮ್‌ ಜೊತೆ ಚಂದ್ರನ ನೆಲ ತಲುಪಿದೆ. ಇದು ಚಂದ್ರನ ಸುತ್ತ ಸುತ್ತಲಿದ್ದು, ಚಂದ್ರನ ಮೇಲೆ ಹರಿಯುವ ಪ್ಲಾಸ್ಮಾ ಮಾರುತಗಳನ್ನು ಪರೀಕ್ಷೆ ಮಾಡಲಿದೆ. ಇದರಿಂದ ವಿಶ್ವದಲ್ಲಿ ನಕ್ಷತ್ರಗಳು ಮತ್ತು ಗೆಲಕ್ಸಿಗಳ ಮೂಲವನ್ನು ತಿಳಿಯಬಹುದು. ಇದನ್ನು ಜಪಾನ್, ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಜಂಟಿಯಾಗಿ ರಚಿಸಿದೆ.

ಹಲವು ಮುಂದೂಡಿಕೆಗಳ ಬಳಿಕ ಸೆಪ್ಟೆಂಬರ್‌ 6 ರ ಬೆಳಿಗ್ಗೆ ತಂಗಶಿಮಾ ಬಾಹ್ಯಾಕಾಶ ಕೇಂದ್ರದ ಯೋಶಿನೋಬು ಉಡಾವಣಾ ಸಂಕೀರ್ಣದಿಂದ ಜಪಾನ್‌ ತನ್ನ ಮೂನ್‌ ಮಿಷನ್‌ ಆರಂಭ ಮಾಡಿತ್ತು. H-IIA ಜಪಾನ್‌ನ ಅತ್ಯಂತ ವಿಶ್ವಾಸಾರ್ಹ ರಾಕೆಟ್ ಸ್ಲಿಮ್‌ಅನ್ನು ನಭಕ್ಕೆ ಹಾರಿಸಿದ್ದು, ಇದು ಈ ರಾಕೆಟ್‌ನ 47ನೇ ಮಿಷನ್‌ ಆಗಿತ್ತು. ಈ ರಾಕೆಟ್‌ಅನ್ನು ತಯಾರಿಸಿದ್ದು ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್. ಇದರ ಯಶಸ್ಸಿನ ಪ್ರಮಾಣ 98% ಆಗಿದೆ. SLIM ಹಗುರವಾದ ರೋಬೋಟಿಕ್ ಲ್ಯಾಂಡರ್ ಆಗಿದೆ. ಈ ಕಾರ್ಯಾಚರಣೆಯನ್ನು ಮೂನ್ ಸ್ನೈಪರ್ ಎಂದೂ ಕರೆಯಲಾಗುತ್ತಿದೆ. ಈ ಮಿಷನ್ 831 ಕೋಟಿ ರೂ.ಗೂ ಹೆಚ್ಚು ಹಣವನ್ನು ಜಪಾನ್‌ ಖರ್ಚು ಮಾಡಿದೆ.

3ನೇ ಬಾರಿ ಜಪಾನ್ ಚಂದ್ರಯಾನ ಉಡಾವಣೆ ರದ್ದು, 30 ನಿಮಿಷ ಮೊದಲು ಲಾಂಚ್ ಕೈಬಿಟ್ಟ JAXA!

ಭಾರತಕ್ಕೂ ಮುನ್ನ 2023ರಲ್ಲಿ ರಷ್ಯಾ ಚಂದ್ರನ ಮೇಲೆ ತನ್ನ ಲೂನಾ 25 ನೌಕೆಯನ್ನು ಇಳಿಸುವ ಆತುರದ ಪ್ರಯತ್ನ ಮಾಡಿತ್ತು. ಆದರೆ, ಬಹುಕೋಟಿ ವೆಚ್ಚದ ಈ ಯೋಜನೆ ಚಂದ್ರನ ಮೇಲೆ ಅಪ್ಪಳಿಸುವ ಮೂಲಕ ವಿಫಲವಾಗಿತ್ತು. ಅದಾದ ಬಳಿಕ ಭಾರತ ತನ್ನ ಚಂದ್ರಯಾನ-3 ನೌಕೆಯನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡಿಂಗ್‌ ಮಾಡುವ ಮೂಲಕ ವಿಶ್ವದ ಮೆಚ್ಚುಗೆಗೆ ಪಾತ್ರವಾಗಿತ್ತು.

Moon Mission: ಜಪಾನ್‌ನ ಸ್ಲಿಮ್‌ ಚಂದ್ರಯಾನ ಮುಂದೂಡಿಕೆ, ಏನು ಕಾರಣ?

月面着陸の瞬間(テレメ上で)のパブリックビューイング、緊張感やばかった pic.twitter.com/t5CJLrTOiX

— ぐりぺん (@guripen)
click me!