‘ವಿಕ್ರಮ್‌’ ಇಳಿಯಬೇಕಿದ್ದ ಜಾಗದ ಚಿತ್ರ ಸೆರೆ ಹಿಡಿದ ನಾಸಾ ಆರ್ಬಿಟರ್‌!

By Web Desk  |  First Published Oct 18, 2019, 8:40 AM IST

‘ವಿಕ್ರಮ್‌’ ಇಳಿಯಬೇಕಿದ್ದ ಜಾಗದ ಚಿತ್ರ ಸೆರೆ ಹಿಡಿದ ನಾಸಾ ಆರ್ಬಿಟರ್‌| ಕಳೆದ ಬಾರಿಗಿಂತ ಸ್ಪಷ್ಟ ಬೆಳಕಿನಲ್ಲಿ ಫೋಟೋ ಕ್ಲಿಕ್‌| ಚಿತ್ರ ವಿಶ್ಲೇಷಣೆ, ಶೀಘ್ರದಲ್ಲೇ ನಾಸಾ ಮಾಹಿತಿ


ನವದೆಹಲಿ[ಅ.18]: ಚಂದ್ರನ ಅಂಗಳದಿಂದ ಕೆಲವೇ ಕ್ಷಣಗಳ ಅಂತರದಲ್ಲಿರುವಾಗ ನಿಗೂಢ ರೀತಿಯಲ್ಲಿ ನಾಪತ್ತೆಯಾದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಚಂದ್ರಯಾನ-2 ನೌಕೆಯ ‘ವಿಕ್ರಮ್‌’ ಲ್ಯಾಂಡರ್‌ ಇಳಿಯಬೇಕಿದ್ದ ಜಾಗದ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಆರ್ಬಿಟರ್‌ ಮತ್ತೊಮ್ಮೆ ಸೆರೆ ಹಿಡಿದಿದೆ.

ಇಸ್ರೋ ವಿಕ್ರಮ್ ಲ್ಯಾಂಡರ್ ಎಲ್ಲಿದೆ?: ಈಗಲಾದರೂ ನಾಸಾ ಉತ್ತರ ಕೊಡಲಿದೆ?

Latest Videos

undefined

ಸೆಪ್ಟೆಂಬರ್‌ನಲ್ಲೂ ನಾಸಾದ ಆರ್ಬಿಟರ್‌ ‘ವಿಕ್ರಮ್‌’ ಜಾಗದ ಚಿತ್ರ ಸೆರೆ ಹಿಡಿದು, ರವಾನಿಸಿತ್ತು. ಆದರೆ ಆಗ ಚಂದ್ರನ ದಕ್ಷಿಣ ಧ್ರುವದಲ್ಲಿ ನೆರಳು ಆವರಿಸಿದ್ದ ಕಾರಣ ವಿಕ್ರಮ್‌ ಸುಳಿವು ಪತ್ತೆಯಾಗಿರಲಿಲ್ಲ. ಆದರೆ ಕಳೆದ ಸೋಮವಾರ ನಾಸಾ ಆರ್ಬಿಟರ್‌ ಚಂದ್ರನ ದಕ್ಷಿಣ ಧ್ರುವದ ಮೇಲೆ ಹಾದು ಹೋಗಿ, ದೃಶ್ಯ ಕ್ಲಿಕ್ಕಿಸಿದಾಗ ಸ್ಪಷ್ಟವಾದ ಬೆಳಕಿತ್ತು. ಹೀಗಾಗಿ ವಿಕ್ರಮ್‌ ಲ್ಯಾಂಡರ್‌ನ ಕುರುಹು ಪತ್ತೆಯಾಗುವ ನಿರೀಕ್ಷೆಯಲ್ಲಿ ವಿಜ್ಞಾನಿಗಳು ಇದ್ದಾರೆ.'

ಭಲೇ ಚಂದ್ರಯಾನ: ಸೌರಜ್ವಾಲೆ ಗುರುತಿಸಿದ ಭಾರತದ ಮಾನ!

ಆರ್ಬಿಟರ್‌ ಸೆರೆ ಹಿಡಿದಿರುವ ದೃಶ್ಯ ಬೃಹತ್‌ ಪ್ರಮಾಣದ್ದಾಗಿರುವ ಹಿನ್ನೆಲೆಯಲ್ಲಿ ಅದನ್ನು ನಾಸಾ ವಿಜ್ಞಾನಿಗಳು ವಿಶ್ಲೇಷಣೆಗೆ ಒಳಪಡಿಸಿ, ಹೆಚ್ಚಿನ ಮಾಹಿತಿಯನ್ನು ಇಸ್ರೋ ವಿಜ್ಞಾನಿಗಳ ಜತೆ ಹಂಚಿಕೊಳ್ಳಲಿದ್ದಾರೆ. ನ.10ರಂದು ನಾಸಾದ ಆರ್ಬಿಟರ್‌ ಮತ್ತೊಮ್ಮೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಹಾದುಹೋಗಲಿದೆ. ಆಗಲೂ ಮತ್ತೊಮ್ಮೆ ಫೋಟೋ ತೆಗೆಯಲಾಗುತ್ತದೆ.

ಚಂದಿರ ನೀನದೆಷ್ಟು ಸುಂದರ: ಅರ್ಬಿಟರ್ ಕ್ಲಿಕ್ಕಿಸಿದ ಫೋಟೋಗಳೇ ಆಧಾರ!

ಸೆ.7ರಂದು ನಸುಕಿನ ಜಾವ ಚಂದ್ರನ ಅಂಗಳದ ಮೇಲೆ ಇಳಿಯುವ ವೇಳೆ ಕೇವಲ 2 ಕಿ.ಮೀ. ಅಂತರದಲ್ಲಿದ್ದಾಗ ಲ್ಯಾಂಡರ್‌ ಸಂಪರ್ಕ ಕಳೆದುಕೊಂಡಿತ್ತು. ಅದರ ಜತೆ ಸಂಪರ್ಕ ಮರು ಸಾಧಿಸಲು ಇಸ್ರೋ ವಿಜ್ಞಾನಿಗಳು 15 ದಿನಗಳ ಕಾಲ ಶ್ರಮ ಹಾಕಿದ್ದರಾದರೂ ಫಲ ಸಿಕ್ಕಿರಲಿಲ್ಲ.

click me!