
ಸ್ಟಾಕ್‌ಹೋಮ್[ಅ.10]: ಮೊಬೈಲ್ ಫೋನ್, ಲ್ಯಾಪ್‌ಟಾಪ್ ಹಾಗೂ ಇಲೆಕ್ಟ್ರಿಕ್ ಕಾರುಗಳಲ್ಲಿ ಬಳಸಲಾಗುವ ಲೀಥಿಯಂ-ಅಯಾನ್ ಬ್ಯಾಟರಿಗಳನ್ನು ಆವಿಷ್ಕರಿಸಿದ ಮೂವರು ವಿಜ್ಞಾನಿಗಳಿಗೆ 2019ರ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ.
ಅಮೆರಿಕದ ಜಾನ್ ಗುಡ್‌ಎನಫ್, ಬ್ರಿಟನ್‌ನ ಸ್ಟ್ಯಾನ್ಲೀ ವಿಟ್ಟಿಂಗ್‌ಹ್ಯಾಂ ಹಾಗೂ ಜಪಾನ್‌ನ ಅಕೀರಾ ಯೊಶಿನೊ ಅವರು ಕೆಮಿಸ್ಟ್ರಿ ನೊಬೆಲ್‌ಗೆ ಭಾಜನರಾದವರು. ಇವರಲ್ಲಿ ಜಾನ್ ಗುಡ್‌ಎನಫ್ 97 ವರ್ಷ ವಯಸ್ಸಿನವರಾಗಿದ್ದು, ಈ ಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ಎನ್ನಿಸಿಕೊಂಡಿದ್ದಾರೆ. ಪ್ರಶಸ್ತಿಯು 9.14 ಲಕ್ಷ ಡಾಲರ್ ಬಹುಮಾನ ಹೊಂದಿದ್ದು, ಎಲ್ಲರಿಗೂ ಸಮನಾಗಿ ಹಂಚಲಾಗುತ್ತದೆ.
ಕಾಸ್ಮೋಲಾಜಿಗೆ ಭೌತಶಾಸ್ತ್ರದ ನೊಬೆಲ್: ಹೇಳ್ಲಿಲ್ವಾ ದಿಗಂತವೇ ಪವರ್‌ಫುಲ್!
ಲೀಥಿಯಂ-ಅಯಾನ್ ಬ್ಯಾಟರಿಗಳ ಬಳಕೆ ಆರಂಭವಾದ ಬಳಿಕ, ಮಾಲಿನ್ಯಕಾರಕ ಫಾಸಿಲ್ ಇಂಧನದ ಬಳಕೆ ಬಹುವಾಗಿ ಕಮ್ಮಿಯಾಯಿತು. ಇದರಿಂದ ಮಾಲಿನ್ಯ ನಿಯಂತ್ರಣಗೊಂಡು ಪರಿಸರಕ್ಕೆ ನೆರವಾಯಿತು ಎಂದು ನೊಬೆಲ್ ಸಮಿತಿ ಶ್ಲಾಘಿಸಿದೆ.
ಸಂಶೋಧನೆ ಏನು?:
1970ರಲ್ಲಿ ವಿಶ್ವವು ತೈಲ ಬಿಕ್ಕಟ್ಟು ಎದುರಿಸಿತು. ಆಗ ವಿಟ್ಟಿಂಗ್‌ಹ್ಯಾಂ ಅವರು ನೀರಿನ ಮೇಲೆ ತೇಲುವಷ್ಟುತೆಳುವಾದ ಲೋಹ ಹೊಂದಿರುವ ಲೀಥಿಯಂನಲ್ಲಿನ ಇಂಧನದ ಮೂಲಕ ಬ್ಯಾಟರಿ ಆವಿಷ್ಕಾರಕ್ಕೆ ಯತ್ನಿಸಿದರು. ಬಳಿಕ ಗುಡ್‌ಎನಫ್ ಅವರು ವಿಟ್ಟಿಂಗ್‌ಹ್ಯಾಂ ಅವರ ಸಂಶೋಧನೆ ಆಧರಿಸಿ ಬೇರೆ ಲೋಹ ಬಳಸಿ 4 ವೋಲ್ಟ್ ಬ್ಯಾಟರಿ ಕಂಡುಹಿಡಿದರು.
ಜೀವಕೋಶಗಳ ಕುರಿತ ಸಂಶೋಧನೆಗೆ ವೈದ್ಯ ನೊಬೆಲ್!
ನಂತರ 1985ರಲ್ಲಿ ಜಪಾನ್‌ನ ಯೋಶಿನೊ ಅವರು ಲೀಥಿಯಂ ಅಯಾನ್ ಸಂಗ್ರಹಿಸಬಲ್ಲ ಕಾರ್ಬನ್ ಮೂಲದ ವಸ್ತುವಿನ ಮೂಲಕ ವಾಣಿಜ್ಯಿಕವಾಗಿ ಬಳಸಬಲ್ಲ ಬ್ಯಾಟರಿ ಸಂಶೋಧಿಸಿದರು. 1991ರಿಂದ ಈ ಬ್ಯಾಟರಿಗಳ ಬಳಕೆ ಆರಂಭವಾಗಿ ಇಂಧನ ಕ್ಷೇತ್ರದಲ್ಲಿ ಕ್ರಾಂತಿಯೇ ನಡೆಯಿತು. ಇವನ್ನು ಈಗ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಹಾಗೂ ಇಲೆಕ್ಟ್ರಿಕ್ ವಾಹನಗಳ ರೀಚಾರ್ಜ್‌ಗೆ ಬಳಸಲಾಗುತ್ತದೆ ಎಂದು ಪ್ರಶಸ್ತಿ ಘೋಷಿಸಿದ ತೀರ್ಪುಗಾರರು ಹೇಳಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.