ಹಬಲ್ ಕಣ್ಣಿಗೆ ಬಿತ್ತು ಏಡಿಯಾಕಾರದ ನೆಬ್ಯುಲಾ| 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಹಬಲ್ ಟೆಲಿಸ್ಕೋಪ್| ಏಡಿಯಾಕಾರದ ನೆಬ್ಯುಲಾ ಕಂಡು ಹಿಡಿದ ಹಬಲ್| ಭೂಮಿಯಿಂದ ಸಾವಿರಾರು ಜ್ಯೋತಿವರ್ಷ ದೂರ ಇರುವ Hen 2-104 ನೆಬ್ಯುಲಾ| ಏಡಿಯ ಕಾಲಿನ ಆಕಾರದಲ್ಲಿ ಹರಡಿರುವ ಬೆಳಕು ಮತ್ತು ಅನಿಲ|
ವಾಷಿಂಗ್ಟನ್(ಏ.22): ವಿಶ್ವದ ಅಧ್ಯಯನದಲ್ಲಿ ನಿರತವಾದ ನಾಸಾದ ಹಬಲ್ ಟೆಲಿಸ್ಕೋಪ್ 29ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಸತತ 29 ವರ್ಷಗಳಿಂದ ಅಸಂಖ್ಯ ಗ್ರಹಕಾಯಗಳನ್ನೂ, ಹೊಸ ನಕ್ಷತ್ರಳನ್ನೂ, ದೂರದ ನೆಬ್ಯುಲಾಗಳನ್ನು ಪತ್ತೆ ಹಚ್ಚಿರುವ ಹಬಲ್, ತನ್ನ ಕರ್ತವ್ಯವನ್ನು ಮುಗಿಸುವ ಕ್ಷಣ ಹತ್ತಿರವಾಗಿದೆ.
ಅದರಂತೆ ತನ್ನ 29ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಹಬಲ್ ಟೆಲಿಸ್ಕೋಪ್ ಹೊಸ ನೆಬ್ಯುಲಾವೊಂದನ್ನು ಪತ್ತೆ ಹಚ್ಚಿದೆ. ಭೂಮಿಯಿಂದ ಸಾವಿರಾರು ಜ್ಯೋತಿವರ್ಷ ದೂರ ಇರುವ Hen 2-104 ನೆಬ್ಯುಲಾ ನೋಡಲು ಆಕರ್ಷಣೀಯವಾಗಿದೆ.
undefined
ದ್ವಿಮಾನದ ವ್ಯವಸ್ಥೆಯಲ್ಲಿರುವ ಈ ನೆಬ್ಯುಲಾ, ತನ್ನ ಸುತ್ತಲೂ ಗಡಿಯಾರದ ಆಕಾರದಲ್ಲಿ ಬೆಳಕು ಚೆಲ್ಲಿರುವುದನ್ನು ಹಬಲ್ ಸ್ಪಷ್ಟವಾಗಿ ಗುರುತಿಸಿದೆ. ಎರಡು ಜೋಡಿ ನಕ್ಷತ್ರಗಳ ಮಧ್ಯೆ ಸ್ಪೈಡರ್ ಸುರುಳಿಯಾಕಾರದಲ್ಲಿ ಬೆಳಕು ಮತ್ತು ಅನಿಲ ಹರಡಿರುವುದು ಈ ನೆಬ್ಯುಲಾದ ವಿಶೇಷ.
ಸೆಂಟಾರಸ್ ನಕ್ಷತ್ರ ಸಮೂಹದ ದಕ್ಷಿಣ ಗೋಳಾರ್ಧದಲ್ಲಿರುವ Hen 2-104 ನೆಬ್ಯುಲಾದ ಬೆಳಕು ಮತ್ತು ಅನಿಲ ಏಡಿಯ ರೂಪದಲ್ಲಿ ನಕ್ಷತ್ರದ ಸುತ್ತಲೂ ಹರಡಿರುವುದು ಕಾಣಬಹುದಾಗಿದೆ.