ಮಂಗಳಗ್ರಹದ 2 ವರ್ಷದ ಪ್ರಯಾಣ ಎರಡೇ ತಿಂಗಳಿಗೆ ಇಳಿಕೆ, ನಾಸಾ ರೆಡಿ ಮಾಡ್ತಿದೆ 'ಪ್ಲಾಸ್ಮಾ ರಾಕೆಟ್‌'

By Santosh Naik  |  First Published May 20, 2024, 7:48 PM IST

ನಾಸಾ ಹೊಸ ಮಾದರಿಯ ರಾಕೆಟ್‌ ಅಭಿವೃದ್ಧಿಯಲ್ಲಿ ನಿರತವಾಗಿದೆ. ಹಾಗೇನಾದರೂ ಇದು ಸಿದ್ದಗೊಂಡಲ್ಲಿ ಗಗನಯಾತ್ರಿಗಳು ಕೇವಲ ಎರಡೇ ತಿಂಗಳಲ್ಲಿ ಮಂಗಳಗ್ರಹಕ್ಕೆ ಪ್ರಯಾಣ ಮಾಡಲು ಸಾಧ್ಯವಾಗಲಿದೆ. ಇದಕ್ಕೆ ಪಲ್ಸಡ್‌ ಪ್ಲಾಸ್ಮಾ ರಾಕೆಟ್‌ ಎಂದು ಹೆಸರಿಡಲಾಗಿದೆ.


ನವದೆಹಲಿ (ಮೇ.20): ಮಂಗಳ ಗ್ರಹಕ್ಕೆ ಮನುಷ್ಯರನ್ನು ಕಳಿಸುವ ಯೋಜನೆ ಅತ್ಯಂತ ಕಷ್ಟಕರ ಹಾಗೂ ಬಹಳ ಸಮಯ ತೆಗೆದುಕೊಳ್ಳುವ ಯೋಜನೆ. ಯಾಕೆಂದರೆ, ಅಷ್ಟು ದೂರದ ಮಂಗಳಗ್ರಹಕ್ಕೆ ಬೇಗ ಹೋಗೋಕೆ ಸಾಧ್ಯಾನೇ ಇಲ್ಲ. ಮಂಗಳಗ್ರಹದ ಯೋಜನೆಗೆ ಹೊಸ ರೀತಿಯ ಟ್ರಾನ್ಸ್‌ಪೋರ್ಟ್‌ ವ್ಯವಸ್ಥೆಯ ಸಿದ್ಧತೆಯಲ್ಲಿ ನಾಸಾ ತೊಡಗಿಕೊಂಡಿದೆ. ಇದರಿಂದಾಗಿ ಅತೀ ಕಡಿಮೆ ಸಮಯದಲ್ಲಿ ಮಂಗಳ ಗ್ರಹದ ದೂರವನ್ನು ಕ್ರಮಿಸಲು ಸಾಧ್ಯವಾಗಲಿದೆ ಅಂತಾರೆ ನಾಸಾದ ವಿಜ್ಞಾನಿಗಳು. ಸಾಮಾನ್ಯವಾಗಿ ಭೂಮಿ ಹಾಗೂ ಮಂಗಳ ಗ್ರಹದ ನಡುವಿನ ಅಂತರವು ಬದಲಾಗುತ್ತಲೇ ಇರುತ್ತದೆ. ಇಂದಿನ ತಂತ್ರಜ್ಞಾನದಲ್ಲಿ ಭೂಮಿಯಿಂದ ಮಂಗಳ ಗ್ರಹಕ್ಕೆ ತಲುಪಲು ಕನಿಷ್ಠ 22 ರಿಂದ 24 ತಿಂಗಳುಗಳು ಅಂದರೆ 2 ವರ್ಷ ಬೇಕಾಗುತ್ತದೆ. ಭವಿಷ್ಯದ ರಾಕೆಟ್‌ಗಾಗಿ ನಾಸಾ ಯೋಜನೆಯನ್ನು ಸಿದ್ಧಮಾಡುತ್ತಿದ್ದು, ಈ ನಿಟ್ಟಿನಲ್ಲಿ ಕೆಲಸ ಕೂಡ ಆರಂಭಿಸಿದೆ. ಇದರ ಪ್ರಕಾರ ಎರಡೇ ತಿಂಗಳಲ್ಲಿ ರಾಕೆಟ್‌ ಭೂಮಿಯಿಂದ ಮಂಗಳ ಗ್ರಹಕ್ಕೆ ತಲುಪಲಿದೆ. ಈ ರಾಕೆಟ್‌ನ ಹೆಸರು ಪಲ್ಸ್‌ಡ್ ಪ್ಲಾಸ್ಮಾ ರಾಕೆಟ್ (ಪಿಪಿಆರ್). ಈ ರಾಕೆಟ್‌ ವಿಚಾರದಲ್ಲಿ ಗಂಭೀರವಾಗಿ ಕೆಲಸ ಮಾಡಲು ಹೋವ್‌ ಇಂಡಸ್ಟ್ರೀಸ್‌ಗೆ ನಾಸಾ ಧನಸಹಾಯವನ್ನು ನೀಡಿದೆ.

ನಾಸಾ ಪ್ರಕಾರ, ಈ ರಾಕೆಟ್‌ನ ಪ್ರೊಪಲ್ಷನ್ ಸಿಸ್ಟಮ್ ತುಂಬಾ ವಿಶೇಷ ಮತ್ತು ಅತ್ಯಾಧುನಿಕವಾಗಿದೆ. ಇದು ಹೈ ಸ್ಪೆಸಿಫಿಕ್ ಇಂಪಲ್ಸ್ ಅಥವಾ ಎಲ್‌ಎಸ್‌ಪಿ ಮೂಲಕ ಹಾರುತ್ತದೆ. ಇದು ಅದರ ಎಂಜಿನ್‌ಗೆ ಬಲವನ್ನು ನೀಡುತ್ತದೆ. ಈ ಮೂಲಕ ಎರಡು ತಿಂಗಳಲ್ಲಿ ಮಂಗಳ ಗ್ರಹಕ್ಕೆ ಸರಕು ಮತ್ತು ಗಗನಯಾತ್ರಿಗಳನ್ನು ಕಳುಹಿಸಬಹುದು ಎಂದು ನಾಸಾ ಹೇಳಿದೆ. ಪ್ರಸ್ತುತ ಈ ಪರಿಕಲ್ಪನೆಯ ಮೇಲೆ ಕೆಲಸ ಮಾಡಲಾಗುತ್ತಿದೆ.

Tap to resize

Latest Videos

undefined

ಪಿಪಿಆರ್‌ನಲ್ಲಿ ನ್ಯೂಕ್ಲಿಯರ್ ಫ್ಯೂಷನ್ ಪವರ್ ಸಿಸ್ಟಮ್ ಅನ್ನು ಸ್ಥಾಪಿಸಲಾಗುವುದು. ಅದರ ಮೂಲಕ ರಾಕೆಟ್ ಶಕ್ತಿ ಪಡೆಯುತ್ತದೆ. ಇದರಲ್ಲಿ ಪರಮಾಣು ವಿದಳನ ಕ್ರಿಯೆ ನಡೆಯುತ್ತಿದೆ. ಪರಮಾಣುವಿನ ವಿದಳುವಿಕೆಯಿಂದ ಬೃಹತ್ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ. ಇದರಿಂದಾಗಿ ರಾಕೆಟ್ ವೇಗವಾಗಿ ಮುಂದಕ್ಕೆ ಚಲಿಸುತ್ತದೆ. ಆದರೆ ಅನೇಕ ರೀತಿಯ ರಾಕೆಟ್‌ಗಳಿಗೆ ಹೋಲಿಸಿದರೆ ಪಿಪಿಆರ್ ಚಿಕ್ಕದಾಗಿದೆ, ಸರಳ ಮತ್ತು ಕಡಿಮೆ ವೆಚ್ಚದ್ದಾಗಿರುತ್ತದೆ.

ಕ್ರೇನ್‌, ಹೆಲಿಕಾಪ್ಟರ್, ಕಮ್ಯುನಿಕೇಷನ್‌ ಸ್ಯಾಟಲೈಟ್‌: ಮಂಗಳ ಗ್ರಹಕ್ಕೆ ಇವುಗಳನ್ನು ಕಳಿಸಲಿದೆ ಇಸ್ರೋ!

ಅಷ್ಟೇ ಅಲ್ಲ, ಈ ರಾಕೆಟ್ ಚಿಕ್ಕದಾಗಿದ್ದರೂ ಭಾರವಾದ ಬಾಹ್ಯಾಕಾಶ ನೌಕೆಗಳನ್ನು ಬಾಹ್ಯಾಕಾಶದ ಆಳಕ್ಕೆ ಕಳುಹಿಸಲು ಸಾಧ್ಯವಾಗುತ್ತದೆ. ಇದು ಅಂತಹ ತಂತ್ರಜ್ಞಾನವನ್ನು ಹೊಂದಿದ್ದು, ಗ್ಯಾಲಕ್ಸಿಯ ಕಾಸ್ಮಿಕ್ ಕಿರಣಗಳನ್ನು ತಪ್ಪಿಸಲು ಗಗನಯಾತ್ರಿಗಳಿಗೆ ಅವಕಾಶ ಸಿಗುತ್ತದೆ. ಇದರೊಂದಿಗೆ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ದೀರ್ಘಕಾಲ ಪ್ರಯಾಣಿಸಲು ಸಾಧ್ಯವಾಗುತ್ತದೆ.

ಮಂಗಳ ಗ್ರಹದ ಮೇಲೆ ಲ್ಯಾಂಡರ್‌, ಪುಟ್ಟ ಹೆಲಿಕಾಪ್ಟರ್‌ ಕಳಿಸಲು ಸಿದ್ಧತೆ ಆರಂಭಿಸಿದ ಇಸ್ರೋ!

click me!