
ಸೂರ್ಯ ಗ್ರಹಣವು ಆಕಾಶದಲ್ಲಿ ನಡೆಯುವ ಕುತೂಹಲಕಾರಿ ಖಗೋಳ ವಿಸ್ಮಯವಾಗಿದೆ. ಇದರಲ್ಲಿ ಭೂಮಿ ಮತ್ತು ಸೂರ್ಯನ ನಡುವೆ ಚಂದ್ರನು ಹಾದುಹೋಗುತ್ತಾನೆ. ಇದರಿಂದಾಗಿ ಸ್ವಲ್ಪ ಸಮಯ ಭೂಮಿಯಿಂದ ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮರೆಯಾಗುತ್ತದೆ. ಅಕ್ಟೋಬರ್ 14ರಂದು ಸಂಭವಿಸಲಿರುವ ಸೂರ್ಯಗ್ರಹಣವು ಬಾಹ್ಯಾಕಾಶದಲ್ಲಿ ವಿಸ್ಮಯಕ್ಕೆ ಕಾರಣವಾಗಲಿದೆ. ಮತ್ತು ಖಗೋಳಾಸಕ್ತರಿಗೆ ಸುಂದರ ಅನುಭವವನ್ನು ನೀಡಲಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ (NASA) ಹೇಳಿದೆ.
ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ. ಅಮೆರಿಕ ಸೇರಿ ಇತರ ಪಾಶ್ಚಿಮಾತ್ಯ ದೇಶಗಳಲ್ಲಿ ಇದು ಗೋಚರವಾಗುತ್ತದೆ. ಆದರೆ, ಈ ಬಾರಿಯ ಸೂರ್ಯಗ್ರಹಣವು ವೈಜ್ಞಾನಿಕ ಸಲಕರಣೆಗಳ ಮೂಲಕ ನೋಡುವವರಿಗೆ ಸುಂದರ ಕಲಾಕೃತಿಯಂತೆ ಗೋಚರಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ವರ್ಷದ ಕೊನೆಯ ಚಂದ್ರಗ್ರಹಣ ಯಾವಾಗ? ಚಂದ್ರ ಗ್ರಹಣದಲ್ಲಿ ಎಷ್ಟು ವಿಧಗಳಿವೆ?
ಅಮೆರಿಕದಲ್ಲಿ ಸಂಭವಿಸಲಿರುವ ಸೂರ್ಯಗ್ರಹಣವು, ಉತ್ತರದಲ್ಲಿರುವ ಒರೆಗಾನ್‌ನಿಂದ ದಕ್ಷಿಣದ ಟೆಕ್ಸಾಸ್‌ಗೆ ಚಲಿಸುವಾಗ ಜನರು ಅದ್ಭುತವಾದ ನೈಸರ್ಗಿಕ ಘಟನೆಯನ್ನು ನೋಡಲು ಸಾಧ್ಯವಾಗುತ್ತದೆ. ಪೂರ್ಣ ಸೂರ್ಯಗ್ರಹಣದ ವೇಳೆಯಲ್ಲಿ ಸೂರ್ಯನು ಉರಿಯುವ ಪ್ರಕಾಶಮಾನವಾದ ವೃತ್ತದಂತೆ ಗೋಚರಿಸಲಿದ್ದಾರೆ (ಬೆಂಕಿಯ ಉಂಗುರ) ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಬೆಳವಣಿಗೆ ಖಗೋಳ ವಿದ್ಯಮಾನಗಳ ಆಸಕ್ತಿಯುಳ್ಳವರಿಗೆ ಹಾಗೂ ಛಾಯಾಚಿತ್ರಕಾರರಿಗೆ ಉತ್ತಮ ದೃಶ್ಯ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಈ ಸಂಬಂಧ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.
ಅಕ್ಟೋಬರ್ ನಲ್ಲಿ ಸಂಭವಿಸಲಿರುವ ಸೂರ್ಯಗ್ರಹಣವನ್ನು ತನ್ನ ಸಾಮಾಜಿಕ ಜಾಲತಾಣದ ಅಕೌಂಟ್‌ಗಳಲ್ಲಿ , ಅಧಿಕೃತ ವೆಬ್ ಸೈಟ್ ನಲ್ಲಿ ನೇರ ಪ್ರಸಾರ ಮಾಡುವುದಾಗಿ ಇಸ್ರೋ ಘೋಷಿಸಿದೆ. ಮೆಕ್ಸಿಕೋ ಕೊಲ್ಲಿಯಿಂದ ನೇರವಾಗಿ ಪ್ರಸಾರ ಮಾಡಲಾಗುತ್ತದೆ ಎಂದು ಹೇಳಿದೆ.
2023 ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 20 ರಂದು ಘೋಚರಿಸಿತ್ತು. ಇದು ಅಪರೂಪದ ಹೈಬ್ರಿಡ್ ಸೂರ್ಯಗ್ರಹಣವಾಗಿತ್ತು ಮತ್ತು ಭಾರತದಲ್ಲಿ ಇದು ಘೋಚರಿಸಿರಲಿಲ್ಲ. ದಕ್ಷಿಣ ಮತ್ತು ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾದಲ್ಲಿ ಭಾಗಶಃ ಗೋಚರಿಸಿತ್ತು. ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯಲ್ಲಿ ಸಂಪೂರ್ಣವಾಗಿ ಗೋಚರಿಸಿತ್ತು.
ಚಂದ್ರಯಾನ 3 ಮಿಷನ್‌ನಲ್ಲಿ ಕೆಲಸ ಮಾಡಿದ ಪ್ರಮುಖ ವಿಜ್ಞಾನಿಗಳ ಶೈಕ್ಷಣಿಕ ಅರ್ಹತೆಗಳು
ಈ ವರ್ಷ ಒಟ್ಟು ನಾಲ್ಕು ಗ್ರಹಣಗಳು:
2023ರಲ್ಲಿ 2 ಸೂರ್ಯಗ್ರಹಣ, 2 ಚಂದ್ರಗ್ರಹಣ ಇದೆ. ಏಪ್ರಿಲ್ 10 ಮತ್ತು ಅಕ್ಟೋಬರ್ 14 ರಂದು ಸೂರ್ಯಗ್ರಹಣ. ಮೇ 5 ಮತ್ತು ಅಕ್ಟೋಬರ್ 28 ರಂದು ಚಂದ್ರಗ್ರಹಣ. ಅಕ್ಟೋಬರ್ 28 ರಂದು ಭಾಗಶಃ ಚಂದ್ರಗ್ರಹಣವಿರುತ್ತದೆ ಮತ್ತು ಇದು ಪೂರ್ವ ಅಮೆರಿಕ, ಯುರೋಪ್, ಆಫ್ರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾದ ಭಾಗಗಳಲ್ಲಿ ಗೋಚರಿಸುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.