ನಾಸಾದಿಂದ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿ ಪ್ರಯೋಗ!

By Kannadaprabha News  |  First Published Sep 5, 2021, 10:17 AM IST

* ಶಬ್ದ ಹಾಗೂ ಮಾಲಿನ್ಯರಹಿತವಾಗಿರುವ ಎಲೆಕ್ಟ್ರಿಕ್‌ ವಾಹನಗಳ ಬಗ್ಗೆ ಜನರು ಹೆಚ್ಚಿನ ಒಲವು

* ನಾಸಾದಿಂದ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿ ಪ್ರಯೋಗ

* ಖಾಸಗಿ ಕಂಪನಿಯ ಕಾಪ್ಟರ್‌ ಇದು


ನ್ಯೂಯಾರ್ಕ್(ಸೆ.05): ಶಬ್ದ ಹಾಗೂ ಮಾಲಿನ್ಯರಹಿತವಾಗಿರುವ ಎಲೆಕ್ಟ್ರಿಕ್‌ ವಾಹನಗಳ ಬಗ್ಗೆ ಜನರು ಹೆಚ್ಚಿನ ಒಲವು ತೋರುತ್ತಿರುವಾಗಲೇ, ಇನ್ನೂ ಹಲವು ಹೆಜ್ಜೆ ಮುಂದೆ ಹೋಗಿರುವ ಅಮೆರಿಕದ ವೈಮಾಂತರಿಕ್ಷ ಸಂಸ್ಥೆ ‘ನಾಸಾ’ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿ ಪ್ರಯೋಗಕ್ಕೆ ಇಳಿದಿದೆ.

ಕ್ಯಾಲಿಫೋರ್ನಿಯಾ ಮೂಲದ ಸ್ಟಾರ್ಟಪ್‌ ಕಂಪನಿ ಜಾಬಿ ಏವಿಯೇಷನ್‌ ಆರು ರೋಟರ್‌ಗಳನ್ನು ಹೊಂದಿರುವ ಎಲೆಕ್ಟ್ರಿಕ್‌ ಹೆಲಿಕಾಪ್ಟರ್‌ ಅಭಿವೃದ್ಧಿಪಡಿಸಿದೆ. ಇದರ ಪ್ರಯೋಗ ಕ್ಯಾಲಿಫೋನಿರ್ಯಾದ ಬಿಗ್‌ ಸೂರ್‌ನಲ್ಲಿರುವ ಜಾಬಿ ಎಲೆಕ್ಟ್ರಿಕ್‌ ನೆಲೆಯಲ್ಲಿ ಆರಂಭವಾಗಿದ್ದು, ಸೆ.10ರವರೆಗೆ ಮುಂದುವರಿಯಲಿದೆ.

Latest Videos

undefined

ಹೇಗಿ​ರು​ತ್ತದೆ ಎಲೆ​ಕ್ಟ್ರಿಕ್‌ ಟ್ಯಾಕ್ಸಿ?:

ಅತ್ಯಂತ ಜನನಿಬಿಡ ನಗರಗಳಲ್ಲೂ ಜನತೆಗೆ ಯಾವುದೇ ಸಮಸ್ಯೆ ಮಾಡದೆ ಹೆಚ್ಚಿನ ಶಬ್ದ ಮಾಡದೆ ಹಾರಾಡುವಂತೆ ಈ ಹೆಲಿಕಾಪ್ಟರ್‌ ಅನ್ನು ಜಾಬಿ ಏವಿಯೇಷನ್‌ ವಿನ್ಯಾಸಗೊಳಿಸಿದೆ. ಇದೀಗ ನಾಸಾ ಎಂಜಿನಿಯರ್‌ಗಳು ಈ ಹೆಲಿಕಾಪ್ಟರ್‌ ಹೊರಸೂಸುವ ಶಬ್ದದ ಮೇಲೆ ಮುಖ್ಯವಾಗಿ ಗಮನಹರಿಸಿ, ದತ್ತಾಂಶವನ್ನು ಸಂಗ್ರಹಿಸಲಿದ್ದಾರೆ. ಇದರಿಂದ ಭವಿಷ್ಯದಲ್ಲಿ ನಗರ ಪ್ರದೇಶಗಳಲ್ಲಿ ಇಂತಹ ವಾಹನ ಬಳಸುವುದಕ್ಕೆ ಬೇಕಾದ ನಿಯಮ ರೂಪಿಸಲು ಅಡಿಪಾಯ ದೊರೆತಂತಾಗುತ್ತದೆ.

ಹೆಲಿಕಾಪ್ಟರ್‌ ಎಂದರೆ ಸಾಮಾನ್ಯವಾಗಿ ಶಬ್ದ ಹೆಚ್ಚು. ಆದರೆ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿಯನ್ನು ಜಾಬಿ ಏವಿಯೇಷನ್‌ ಅತ್ಯಂತ ವಿಶಿಷ್ಟವಾಗಿ ವಿನ್ಯಾಸಗೊಳಿಸಿದೆ. ಆರು ರೋಟರ್‌ಗಳು ಇದ್ದು, ಅವು ಶಬ್ದ ಕಡಿಮೆ ಮಾಡುತ್ತವೆ. ಒಮ್ಮೆಗೆ ಚಾಜ್‌ರ್‍ ಮಾಡಿದರೆ 240 ಕಿ.ಮೀ. ದೂರವನ್ನು ಈ ಕಾಪ್ಟರ್‌ ಕ್ರಮಿಸುತ್ತದೆ. ಗಂಟೆಗೆ 320 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. 2017ರಿಂದ ಏರ್‌ ಟ್ಯಾಕ್ಸಿ ಮಾದರಿ ಪ್ರಯೋಗ ನಡೆಸಲಾಗಿದೆ. 1000 ಬಾರಿ ಪರೀಕ್ಷಾರ್ಥ ಹಾರಾಟ ನಡೆದಿದೆ. 2023ರ ವೇಳೆಗೆ ಅಮೆರಿಕದಲ್ಲಿ ಅನುಮತಿ ದೊರಕುವ ನಿರೀಕ್ಷೆ ಇದ್ದು, 2024ರಿಂದ ವಾಣಿಜ್ಯ ಸೇವೆ ಆರಂಭವಾಗಲಿದೆ ಎಂದು ಜಾಬಿ ಏವಿಯೇಷನ್‌ ತಿಳಿಸಿದೆ.

click me!