
ಹೊಸದಿಲ್ಲಿ : ಮನುಷ್ಯನನ್ನು ಮತ್ತೆ ಚಂದ್ರನ ಕಕ್ಷೆಗೆ ಕಳುಹಿಸಿದ ನಾಸಾದ ಐತಿಹಾಸಿಕ 'ಆರ್ಟೆಮಿಸ್ 2' ಬಾಹ್ಯಾಕಾಶ ಯಾನ ಇದೀಗ ಅಂತಿಮ ಹಂತದಲ್ಲಿದೆ. ಈ 10 ದಿನಗಳ ರೋಚಕ ಪಯಣದಲ್ಲಿ ಗಗನಯಾತ್ರಿಗಳ ಆರೋಗ್ಯ ಕಾಪಾಡಲು ಅವರ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಜೀರ್ಣಕ್ರಿಯೆ ಹಾಗೂ ಮಲಬದ್ಧತೆ ನಿವಾರಕ ಔಷಧ 'ಡಲ್ಕೋಲಾಕ್ಸ್' ಕೂಡ ಸ್ಥಾನ ಪಡೆದಿದೆ. ಭಾರತದಲ್ಲಿ ಈ ಔಷಧಿಯನ್ನು 'ಡಲ್ಕೋಫ್ಲೆಕ್ಸ್' ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಬಾಹ್ಯಾಕಾಶ ಪ್ರಯಾಣ ಎಷ್ಟೇ ಅದ್ಭುತವಾಗಿದ್ದರೂ, ಅಲ್ಲಿಯೂ ಮನುಷ್ಯನ ಹೊಟ್ಟೆ ಮತ್ತು ಜೀರ್ಣಕ್ರಿಯೆ ಭೂಮಿಯ ನಿಯಮಗಳನ್ನೇ ಪಾಲಿಸುತ್ತದೆ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ಇದರಿಂದಾಗಿ ಕರುಳಿನ ಚಲನೆ ತುಂಬಾ ನಿಧಾನವಾಗುತ್ತದೆ. ಜೊತೆಗೆ ಗಗನಯಾತ್ರಿಗಳಿಗೆ ಅಲ್ಲಿ ಓಡಾಡಲು ಜಾಗ ಕಡಿಮೆ. ಹೀಗಾಗಿ ಅವರು ವಿಶೇಷ ಆಹಾರವನ್ನು ಮಾತ್ರ ಸೇವಿಸಬೇಕಾಗುತ್ತದೆ. ಇವೆಲ್ಲಾ ಕಾರಣಗಳಿಂದ ಅವರಿಗೆ ಮಲಬದ್ಧತೆ ಸಮಸ್ಯೆ ಕಾಡುವುದು ಸಾಮಾನ್ಯ. ಹೀಗಾಗಿಯೇ ನಾಸಾ ಈ ನಂಬಿಕಾರ್ಹ ಔಷಧಿಯನ್ನು ಜೊತೆಗೆ ಕಳುಹಿಸಿದೆ.
ಹೊಟ್ಟೆಯುಬ್ಬರ, ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ನೀಡಲು ನಾಸಾದ ಪ್ರಥಮ ಚಿಕಿತ್ಸಾ ಕಿಟ್‌ನಲ್ಲಿರುವ ಏಕೈಕ ಬ್ರ್ಯಾಂಡ್ 'ಡಲ್ಕೋಲಾಕ್ಸ್' (ಭಾರತದಲ್ಲಿ ಡಲ್ಕೋಫ್ಲೆಕ್ಸ್). ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಹಲವು ದಶಕಗಳಿಂದ ಗಗನಯಾತ್ರಿಗಳು ಇದನ್ನು ಬಳಸುತ್ತಿದ್ದಾರೆ. ಇದರಲ್ಲಿರುವ 'ಬಿಸಾಕೋಡಿಲ್' ಎಂಬ ಅಂಶವು ಕರುಳಿನ ಸಹಜ ಚಲನೆಯನ್ನು ಉತ್ತೇಜಿಸಿ, ಕೇವಲ 6 ಗಂಟೆಗಳಲ್ಲಿ ನಿರಾಳತೆ ನೀಡುತ್ತದೆ. ಇದು ಚಟವಾಗುವ ಔಷಧಿ ಅಲ್ಲದೇ ಇರುವುದರಿಂದ ಇದು ಬಳಕೆಗೆ ಅತ್ಯಂತ ಸುರಕ್ಷಿತವಾಗಿದೆ.
ಈ ಬಗ್ಗೆ ಮಾತನಾಡಿರುವ ಒಪೆಲ್ಲಾ ಇಂಡಿಯಾ ಕಂಪನಿಯ ನಿರ್ದೇಶಕಿ ನೂಪುರ್ ಗುರ್ಬಕ್ಸಾನಿ, "ನಾಸಾದ ಈ ಮಹತ್ವದ ಯೋಜನೆಯಲ್ಲಿ ನಮ್ಮ ಬ್ರ್ಯಾಂಡ್ ಸೇರ್ಪಡೆಯಾಗಿರುವುದು ವೈದ್ಯರು ಮತ್ತು ಗ್ರಾಹಕರು ನಮ್ಮ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷ, ಮನೆಯಿಂದ ಹಿಡಿದು ಬಾಹ್ಯಾಕಾಶದವರೆಗೂ, ಎಲ್ಲೆಡೆಯೂ ಪರಿಣಾಮಕಾರಿಯಾಗಿ ಕೆಲಸ ಮಾಡುವ ವಿಶ್ವಾಸಾರ್ಹ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಇದು ಎತ್ತಿ ತೋರಿಸುತ್ತದೆ,” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಭೂಮಿಯ ಮೇಲಿರುವಾಗಲೂ ಒತ್ತಡ, ದೀರ್ಘಕಾಲದ ಪ್ರಯಾಣ ಅಥವಾ ದಿನಚರಿಯಲ್ಲಿ ಬದಲಾವಣೆಯಾದಾಗ ಜನರಿಗೆ ಮಲಬದ್ಧತೆ ಕಾಡುತ್ತದೆ. ಇಂತಹ ಸಮಯದಲ್ಲಿಯೂ ಇದು ಅತ್ಯುತ್ತಮ ಪರಿಹಾರವಾಗಿದೆ.
ಭಾರತದಲ್ಲಿ 2017ರಲ್ಲಿ 'ಡಲ್ಕೋಲಾಕ್ಸ್' ಹೆಸರನ್ನು 'ಡಲ್ಕೋಫ್ಲೆಕ್ಸ್' ಎಂದು ಬದಲಾಯಿಸಲಾಯಿತು. ಪ್ರತಿಯೊಬ್ಬರ ಅಗತ್ಯಕ್ಕೆ ತಕ್ಕಂತೆ ಇದು ವಿವಿಧ ರೂಪಗಳಲ್ಲಿ ಲಭ್ಯವಿದೆ:
* 5 mg ಮಾತ್ರೆ: ರಾತ್ರಿ ಸೇವಿಸಿದರೆ 6-8 ಗಂಟೆಗಳಲ್ಲಿ ಅಂದರೆ ಬೆಳಗಾಗುವಷ್ಟರಲ್ಲಿ ಸುಗಮ ಪರಿಹಾರ ನೀಡುತ್ತದೆ.
* 5 mg ಸಪೊಸಿಟರಿ: 0 ದಿಂದ 10 ವರ್ಷದೊಳಗಿನ ಮಕ್ಕಳಿಗೆ ಇದು ಶೀಘ್ರ ಪರಿಹಾರ ನೀಡುತ್ತದೆ.
* 10 mg ಸಪೊಸಿಟರಿ : 10 ವರ್ಷ ಮೇಲ್ಪಟ್ಟವರಿಗೆ ಹಾಗೂ ವಯಸ್ಕರಿಗೆ ತಕ್ಷಣದ ಪರಿಹಾರ ನೀಡಲು ಇದು ಉಪಯುಕ್ತವಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.