ಇನ್ನು 20 ವರ್ಷದಲ್ಲಿ ಜಗತ್ತಲ್ಲಿ ನಕ್ಷತ್ರಗಳೇ ಕಾಣಲ್ಲ! ಕಾರಣ ಹೀಗಿದೆ..

By Kannadaprabha News  |  First Published May 29, 2023, 1:11 PM IST

ರಾತ್ರಿ ವೇಳೆ ಭೂಮಿಯಲ್ಲಿ ಬಳಸಲಾಗುವ ಅತಿ ಪ್ರಕಾಶಮಾನವಾದ ಬೆಳಕು ಅಥವಾ ಲೈಟ್‌ಗಳ ಉರಿಯುವಿಕೆ ಸಾಮಾನ್ಯವಾಗಿ ರಾತ್ರಿಯನ್ನು ಬೆಳಕಿನಿಂದಲೇ ತುಂಬಿಸುತ್ತವೆ. ಹೀಗಾಗಿ ಹಗಲಿನ ಬೆಳಕಲ್ಲಿ ನಮಗೆ ಹೇಗೆ ನಕ್ಷತ್ರಗಳು ಗೋಚರವಾಗುವುದಿಲ್ಲವೋ ಅದೇ ಸ್ಥಿತಿ ರಾತ್ರಿಯೂ ಮುಂದುವರೆಯುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.


ನವದೆಹಲಿ (ಮೇ 29, 2023) : ಹೆಚ್ಚುತ್ತಿರುವ ಬೆಳಕಿನ ಮಾಲಿನ್ಯದಿಂದಾಗಿ ಇನ್ನು 20 ವರ್ಷಗಳಲ್ಲಿ ಆಕಾಶದಲ್ಲಿನ ನಕ್ಷತ್ರಗಳು ಅಗೋಚರವಾಗಲಿವೆ. ಮಾಲಿನ್ಯದಿಂದ ಅವುಗಳನ್ನು ನೋಡಲು ಸಾಧ್ಯವಾಗುವುದಿಲ್ಲ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಅಂದರೆ ರಾತ್ರಿ ವೇಳೆ ಭೂಮಿಯಲ್ಲಿ ಬಳಸಲಾಗುವ ಅತಿ ಪ್ರಕಾಶಮಾನವಾದ ಬೆಳಕು ಅಥವಾ ಲೈಟ್‌ಗಳ ಉರಿಯುವಿಕೆ ಸಾಮಾನ್ಯವಾಗಿ ರಾತ್ರಿಯನ್ನು ಬೆಳಕಿನಿಂದಲೇ ತುಂಬಿಸುತ್ತವೆ. ಹೀಗಾಗಿ ಹಗಲಿನ ಬೆಳಕಲ್ಲಿ ನಮಗೆ ಹೇಗೆ ನಕ್ಷತ್ರಗಳು ಗೋಚರವಾಗುವುದಿಲ್ಲವೋ ಅದೇ ಸ್ಥಿತಿ ರಾತ್ರಿಯೂ ಮುಂದುವರೆಯುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Tap to resize

Latest Videos

undefined

ಇದನ್ನು ಓದಿ: ಇನ್ಮುಂದೆ ಭಾರತದ್ದೇ ಜಿಪಿಎಸ್‌: ಇಸ್ರೋದಿಂದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡಾವಣೆ

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಬ್ರಿಟಿಷ್‌ ಖಗೋಳಶಾಸ್ತ್ರಜ್ಞ, ರಾಯಲ್‌ ಮಾರ್ಟಿನ್‌ ರೀಸ್‌ ‘ಕಳೆದ ಹಲಾವರು ವರ್ಷಗಳಲ್ಲಿ ಬೆಳಕಿನ ಮಾಲಿನ್ಯವು ತೀವ್ರವಾಗಿದೆ. 2016 ರಿಂದ ಕ್ಷೀರಪಥವು ಪ್ರಪಂಚದ ಮೂರನೇ ಒಂದು ಭಾಗದಷ್ಟುಜನರಿಗೆ ಗೋಚರವಾಗುವುದಿಲ್ಲ ಎಂದು ಖಗೋಳಶಾಸ್ತ್ರಜ್ಞರು ವರದಿ ಮಾಡಿದ್ದರು. 

ಮುಂದಿನ ಪೀಳಿಗೆಯ ಮಕ್ಕಳು ರಾತ್ರಿ ಆಕಾಶವನ್ನು ಅದರ ಪ್ರಕಾಶತೆ ಮತ್ತು ನಕ್ಷತ್ರಗಳನ್ನು ನೋಡಲು ಸಾಧ್ಯವಿಲ್ಲ ಎಂಬುದು ಗಂಭೀರ ವಿಷಯವಾಗಿದೆ’ ಎಂದಿದ್ದಾರೆ. ಈ ಬೆಳಕಿನ ಮಾಲಿನ್ಯವು ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿದೆ.

ಇದನ್ನೂ ಓದಿ: ಇಸ್ರೋ ಮತ್ತೊಂದು ಸಾಹಸ: ಪಿಎಸ್ಎಲ್‌ವಿ ರಾಕೆಟ್ ಮೂಲಕ ಸಿಂಗಾಪುರದ ಉಪಗ್ರಹ ಉಡಾವಣೆ

click me!