ಇನ್ಮುಂದೆ ಭಾರತದ್ದೇ ಜಿಪಿಎಸ್‌: ಇಸ್ರೋದಿಂದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡಾವಣೆ

By BK Ashwin  |  First Published May 29, 2023, 11:06 AM IST

ಅಮೆರಿಕದ ಜಿಪಿಎಸ್‌ ರೀತಿ ಭಾರತದ್ದೇ ಆದ ದಿಕ್ಸೂಚಿ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಇಸ್ರೋ ಹಾರಿಬಿಡುತ್ತಿರುವ ಸರಣಿ ಉಪಗ್ರಹಗಳ ಸಾಲಿನ ಮುಂದಿನ ತಲೆಮಾರಿನ ಉಪಗ್ರಹವನ್ನು ಸೋಮವಾರ ಉಡಾವಣೆ ಮಾಡಿದೆ.


ಶ್ರೀಹರಿಕೋಟಾ (ಮೇ 29, 2023):  ಇಸ್ರೋ ದಿಕ್ಸೂಚಿ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಜಿಎಸ್‌ಎಲ್‌ವಿ - ಎಫ್‌12 ಉಪಗ್ರಹ ಉಡಾವಣೆ ಮಾಡಿದೆ. ಭಾರತದ್ದೇ ಆದ ದಿಕ್ಸೂಚಿ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಇಸ್ರೋ ಹಾರಿಬಿಡುತ್ತಿರುವ ಸರಣಿ ಉಪಗ್ರಹಗಳ ಸಾಲಿನ ಮುಂದಿನ ತಲೆಮಾರಿನ ಐತಿಹಾಸಿಕ ಉಪಗ್ರಹ ಇದಾಗಿದೆ. ಬೆಳಗ್ಗೆ 10:42ಕ್ಕೆ ಸರಿಯಾಗಿ ಈ 2ನೇ ತಲೆಮಾರಿನ ಉಪಗ್ರಹವನ್ನುಉಡಾವಣೆ ಮಾಡಿದೆ. ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ಶ್ರೀಹರಿಕೋಟಾದ ಸತೀಶ್‌ ಧವನ್‌ ಸ್ಪೇನ್‌ ಸೆಂಟರ್‌ನಿಂದ ಈ ಉಪಗ್ರಹ ಉಡಾವಣೆಯಾಗಿದೆ. 

ಅಮೆರಿಕದ ಜಿಪಿಎಸ್‌ ರೀತಿ ಭಾರತದ್ದೇ ಆದ ದಿಕ್ಸೂಚಿ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಇಸ್ರೋ ಹಾರಿಬಿಡುತ್ತಿರುವ ಸರಣಿ ಉಪಗ್ರಹಗಳ ಸಾಲಿನ ಮುಂದಿನ ತಲೆಮಾರಿನ ಉಪಗ್ರಹವನ್ನು ಸೋಮವಾರ ಉಡಾವಣೆ ಮಾಡಿದೆ. ಇದಕ್ಕಾಗಿ ಭಾನುವಾರ ಮುಂಜಾನೆ 7.12 ಗಂಟೆಗೆ 27.5 ಗಂಟೆಗಳ ಕೌಂಟ್‌ಡೌನ್‌ ಅನ್ನು ಆರಂಭ ಮಾಡಿತ್ತು.

Tap to resize

Latest Videos

undefined

ಇದನ್ನು ಓದಿ: ಇಸ್ರೋ ಮತ್ತೊಂದು ಸಾಹಸ: ಪಿಎಸ್ಎಲ್‌ವಿ ರಾಕೆಟ್ ಮೂಲಕ ಸಿಂಗಾಪುರದ ಉಪಗ್ರಹ ಉಡಾವಣೆ

ನಾವಿಕ್‌ ಹೆಸರಿನ ಈ ದಿಕ್ಸೂಚಿ ವ್ಯವಸ್ಥೆ, ಭಾರತ ಅಷ್ಟೇ ಅಲ್ಲದೇ ಸುತ್ತಲಿನ 1,500 ಕಿ.ಮೀ. ವ್ಯಾಪ್ತಿಯಲ್ಲಿ ನಿಖರವಾದ ನಕ್ಷೆಯನ್ನು ಒದಗಿಸಲಿದೆ. ಬಳಕೆದಾರರಿಗೆ 20 ಮೀ. ಹತ್ತಿರದಿಂದ ಹಾಗೂ 50 ನ್ಯಾನೋಸೆಕೆಂಡ್‌ನಷ್ಟು ವೇಗದಲ್ಲಿ ಸೇವೆ ಒದಗಿಸಲು ಈ ಯೋಜನೆಯನ್ನು ಆರಂಭಿಸಲಾಗಿದೆ. 

ಎನ್‌ವಿಎಸ್‌-01 ಹೆಸರಿನ 2,232 ಕೆಜಿ ತೂಕದ ಉಪಗ್ರಹವನ್ನು ಹೊತ್ತ ಜಿಎಸ್‌ಎಲ್‌ವಿ ನೌಕೆ ಸೋಮವಾರ ಬೆಳಿಗ್ಗೆ 10.42ಕ್ಕೆ ನಭಕ್ಕೆ ಚಿಮ್ಮಿದೆ. ಸತೀಶ್‌ ಧವನ್‌ ಸ್ಪೇನ್‌ ಸೆಂಟರ್‌ನ 2ನೇ ಲಾಂಚ್‌ ಪ್ಯಾಡ್‌ನಿಂದ ಉಡಾವಣೆಗೊಳ್ಳುವ ರಾಕೆಟ್‌ 20 ನಿಮಿಷಗಳ ಯಾನದ ಬಳಿಕ 251 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಉಪಗ್ರಹವನ್ನು ಕಕ್ಷೆಗೆ ಸೇರಿದೆ. ಈ ಉಪಗ್ರಹ 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ.

ಇದನ್ನೂ ಓದಿ: ಇಸ್ರೋ ವಿಕ್ರಮ: ಚಿತ್ರದುರ್ಗದಲ್ಲಿ ಗಗನನೌಕೆ ರನ್‌ವೇ ಲ್ಯಾಂಡಿಂಗ್‌ ಯಶಸ್ವಿ 

NVS-01 ನ್ಯಾವಿಗೇಷನ್ ಪೇಲೋಡ್‌ಗಳಾದ L1, L5 ಮತ್ತು S ಬ್ಯಾಂಡ್‌ಗಳನ್ನು ಹೊತ್ತೊಯ್ದಿದೆ ಮತ್ತು ಹಿಂದಿನದಕ್ಕೆ ಹೋಲಿಸಿದರೆ, ಎರಡನೇ ತಲೆಮಾರಿನ ಉಪಗ್ರಹವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರುಬಿಡಿಯಮ್ ಪರಮಾಣು ಗಡಿಯಾರವನ್ನು ಸಹ ಹೊಂದಿದೆ. ಮೇ 29 ರ ಉಡಾವಣೆಯಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ರುಬಿಡಿಯಮ್ ಪರಮಾಣು ಗಡಿಯಾರವನ್ನು ಮೊದಲ ಬಾರಿಗೆ ಬಳಸಲಾಗುವುದು ಎಂದು ಇಸ್ರೋ ಹೇಳಿದೆ.

ದೇಶೀಯ ಆಟೋಮಿಕ್‌ ಗಡಿಯಾರ ಬಳಕೆ:
ಇದೇ ಮೊದಲ ಬಾರಿಗೆ ದೇಶಿಯವಾಗಿ ತಯಾರು ಮಾಡಲಾಗಿರುವ ರುಬೀಡಿಯಂ ಅಣು ಗಡಿಯಾರವನ್ನು ಕೌಂಟಿಂಗ್‌ಗೆ ಬಳಕೆ ಮಾಡಲಾಗುತ್ತಿದೆ. ಇದನ್ನು ಅಹಮದಾಬಾದ್‌ ಮೂಲದ ಸ್ಪೇಸ್‌ ಅಪ್ಲಿಕೇಶನ್‌ ಸೆಂಟರ್‌ ತಯಾರಿಸಿದೆ.

 ಇದನ್ನೂ ಓದಿ: ಒನ್‌ವೆಬ್‌ ಇಂಟರ್ನೆಟ್‌ ಸೇವೆ ಭಾರತದಲ್ಲಿ ದುಬಾರಿ: ಏರ್‌ಟೆಲ್‌ ಮುಖ್ಯಸ್ಥ ಮಿತ್ತಲ್‌

ಬಾಹ್ಯಾಕಾಶ ಸಂಸ್ಥೆಯ ಪ್ರಕಾರ, ವಿಜ್ಞಾನಿಗಳು ದಿನಾಂಕ ಮತ್ತು ಸ್ಥಳವನ್ನು ನಿರ್ಧರಿಸಲು ಆಮದು ಮಾಡಿಕೊಂಡ ರುಬಿಡಿಯಮ್ ಪರಮಾಣು ಗಡಿಯಾರಗಳನ್ನು ಬಳಸುತ್ತಿದ್ದರು. ಈಗ, ಅಹಮದಾಬಾದ್ ಮೂಲದ ಸ್ಪೇಸ್ ಅಪ್ಲಿಕೇಶನ್ ಸೆಂಟರ್ ಅಭಿವೃದ್ಧಿಪಡಿಸಿದ ರುಬಿಡಿಯಮ್ ಪರಮಾಣು ಗಡಿಯಾರವು ಮಂಡಳಿಯಲ್ಲಿದೆ. ಇದು ಬೆರಳೆಣಿಕೆಯ ದೇಶಗಳು ಮಾತ್ರ ಹೊಂದಿರುವ ಪ್ರಮುಖ ತಂತ್ರಜ್ಞಾನವಾಗಿದೆ ಎಂದೂ ಇಸ್ರೋ ಹೇಳಿದೆ.

ಇದನ್ನೂ ಓದಿ: ಇಸ್ರೋ ಮತ್ತೊಂದು ಸಾಧನೆ: ನಿರುಪಯುಕ್ತ ಉಪಗ್ರಹವನ್ನು ಯಶಸ್ವಿಯಾಗಿ ಇಳಿಸಿದ ಬಾಹ್ಯಾಕಾಶ ಸಂಸ್ಥೆ

click me!