Mosquitoes are Seeing Red: ಸೊಳ್ಳೆ ಕಡಿತ ತಪ್ಪಿಸಬೇಕಾ? ಹಾಗಾದ್ರೆ ಈ ಬಣ್ಣದ ಬಟ್ಟೆ ಧರಿಸಬೇಡಿ ಎನ್ನುತ್ತೆ ಅಧ್ಯಯನ!

By Suvarna News  |  First Published Feb 7, 2022, 4:08 PM IST

ಮನುಷ್ಯನ ಉಸಿರು, ಬೆವರು ಮತ್ತು  ಚರ್ಮದ ಉಷ್ಣತೆಯು  ಸೊಳ್ಳೆಯನ್ನು ಆಕರ್ಷಿಸುತ್ತದೆ, ಆದರೆ ಹೊಸ ಅಧ್ಯಯನವೊಂದು ಕೆಂಪು ಬಣ್ಣವು ಸಹ ಸೊಳ್ಳೆಯನ್ನು ಕಚ್ಚಲು ಆಹ್ವಾನಿಸುತ್ತದೆ ಎಂಬ ಇಂಟರ್ಸ್ಟಿಂಗ್‌ ಮಾಹಿತಿಯನ್ನು ಬಹಿರಂಗಪಡಿಸಿದೆ. 
 


Tech Desk: ಕಳೆದ ಕೆಲವು ದಶಕಗಳಲ್ಲಿ, ಡೆಂಗ್ಯೂ ಮತ್ತು ಇತರ ಸೊಳ್ಳೆಗಳಿಂದ ಹರಡುವ ರೋಗಗಳ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿವೆ. ಪ್ರತಿ ವರ್ಷ ಪ್ರಕರಣಗಳ ತ್ವರಿತ ಹೆಚ್ಚಳದ ಮಧ್ಯೆ ಪ್ರತಿಯೊಬ್ಬರು ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಡೆಂಗ್ಯೂ ಅಥವಾ ಇತರ ರೋಗಗಳು ಹರಡದಂತೆ  ಮುನ್ನೆಚ್ಚರಿಕೆ ವಹಿಸುವುದು ಅತ್ಯವಶ್ಯಕ. ನಮ್ಮ ವಾಸಸ್ಥಳದ ಸುತ್ತಮುತ್ತಲಿನ ಪ್ರದಶೇವನ್ನು ಸ್ವಚ್ಛವಾಗಿಟ್ಟರೆ ಸೊಳ್ಳೆಗಳ ಅಪಾಯ ಕಡಿಮೆ. ಆದರೆ ಈ ಮಧ್ಯೆ ನಿಮ್ಮ ಬಟ್ಟೆಗಳ ಬಣ್ಣವೂ ಸೊಳ್ಳೆಗಳನ್ನು ಆಕರ್ಷಿಸುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. 

ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ನೇತೃತ್ವದ ಹೊಸ ಸಂಶೋಧನೆಯು ಸಾಮಾನ್ಯ ಸೊಳ್ಳೆ ಪ್ರಭೇದಗಳು  ನಾವು ಹೊರಹಾಕುವ ಟೆಲ್ಟೇಲ್ ಅನಿಲವನ್ನು (telltale gas) ಪತ್ತೆಹಚ್ಚಿದ ನಂತರ  ಕೆಂಪು, ಕಿತ್ತಳೆ, ಕಪ್ಪು ಮತ್ತು ಸಯಾನ್ ಸೇರಿದಂತೆ ನಿರ್ದಿಷ್ಟ ಬಣ್ಣಗಳ ಕಡೆಗೆ ಹಾರುತ್ತವೆ ಎಂದು ಸೂಚಿಸುತ್ತದೆ. ಸೊಳ್ಳೆಗಳು ಹಸಿರು, ನೇರಳೆ, ನೀಲಿ ಮತ್ತು ಬಿಳಿಯಂತಹ ಇತರ ಬಣ್ಣಗಳನ್ನು ನಿರ್ಲಕ್ಷಿಸುತ್ತವೆ ಎಂದು ಅಧ್ಯಯನ ಬಹಿರಂಗಪಡಿಸಿದೆ. 

Tap to resize

Latest Videos

undefined

ಇದನ್ನೂ ಓದಿ: Genetically Modified Pigs: ಮಾನವ ಹೃದಯ ಕಸಿಗಾಗಿ ಕುಲಾಂತರಿ ಹಂದಿ ಅಭಿವೃದ್ಧಿ: ಜರ್ಮನ್‌ ಸಂಶೋಧಕರ ಹೊಸ ಪ್ರಯೋಗ!

ಸೊಳ್ಳೆಗಳಿಗೆ ಸಿಗ್ನಲ್: ಮಾನವನ ಚರ್ಮವು ಸೊಳ್ಳೆಗಳ ಕಣ್ಣುಗಳಿಗೆ ಬಲವಾದ ಕೆಂಪು ಕಿತ್ತಳೆ "ಸಿಗ್ನಲ್" ಅನ್ನು ರವಾನಿಸುವುದರಿಂದ, ಒಟ್ಟಾರೆ ವರ್ಣದ್ರವ್ಯವನ್ನು ಲೆಕ್ಕಿಸದೆಯೇ, ಈ ಸಂಶೋಧನೆಗಳು ಸೊಳ್ಳೆಗಳು ಹೇಗೆ ಅತಿಥೇಯಗಳನ್ನು ಕಂಡುಹಿಡಿಯುತ್ತವೆ ಎಂಬುದನ್ನು ವಿವರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ನಂಬಿದ್ದಾರೆ.

"ಸೊಳ್ಳೆಗಳು ಕಚ್ಚಲು ತಮ್ಮ ಹತ್ತಿರದಲ್ಲಿರುವು ವಸ್ತು ಅಥವಾ ವ್ಯಕ್ತಿಯನ್ನು ಪ್ರತ್ಯೇಕಿಸಲು ಸಹಾಯ ಮಾಡಲು ವಾಸನೆಯನ್ನು ಬಳಸುತ್ತವೆ. ಅವು ನಮ್ಮ ಉಸಿರಾಟದಿಂದ ಕಾರ್ಬನ್‌ ಡೈ ಆಕ್ಸೈಡ್ (CO2) ನಂತಹ ನಿರ್ದಿಷ್ಟ ಸಂಯುಕ್ತಗಳನ್ನು ವಾಸನೆಯನ್ನು ಹೀರಿದಾಗ, ಆ ಪರಿಮಳವು ಸೊಳ್ಳೆಯ ಕಣ್ಣುಗಳನ್ನು ಪ್ರಚೋದಿಸುತ್ತದೆ. ಸಂಭಾವ್ಯ ವಸ್ತುವಿನ ಸಂಯೋಜಿತವಾಗಿರುವ ನಿರ್ದಿಷ್ಟ ಬಣ್ಣಗಳು ಮತ್ತು ಇತರ ದೃಶ್ಯ ನಮೂನೆಗಳನ್ನು ಸ್ಕ್ಯಾನ್ ಮಾಡುವ ಮೂಲಕ ಸೊಳ್ಳೆಗಳು ಅಲ್ಲಿಗೆ ಹೋಗುತ್ತವೆ" ಎಂದು ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜೆಫ್ರಿ ರಿಫೆಲ್ ತಿಳಿಸಿದ್ದಾರೆ.

ಈ ಅಧ್ಯಯನವು ಸೊಳ್ಳೆಯ ವಾಸನೆ ಅಥವಾ  ಸಂವೇದನೆಯು ಬಣ್ಣಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ತೋರಿಸುತ್ತದೆ. ಯಾವ ಬಣ್ಣಗಳು ಹಸಿದ ಸೊಳ್ಳೆಗಳನ್ನು ಆಕರ್ಷಿಸುತ್ತವೆ ಮತ್ತು ಯಾವುದು ಆಕರ್ಷಿಸುವುದಿಲ್ಲ ಎಂಬ ಅಧ್ಯಯನವು ಸುಧಾರಿತ ಕೀಟ ನಿವಾರಕಗಳು, ಬಲೆಗಳು ಮತ್ತು ಇತರ ವಿಧಾನಗಳ ಅಭಿವೃದ್ಧಿಯಲ್ಲಿ ಸಹಾಯ ಮಾಡಬಹುದು ಎಂದು ಸಂಶೋಶಕರು ಅಭಿಪ್ರಾಯಪಟ್ಟಿದ್ದಾರೆ. 

ಇದನ್ನೂ ಓದಿಪ್ರಪಂಚದ 90 ದೇಶಗಳಲ್ಲಿ ಒಟ್ಟು 44 ಮಿಲಿಯನ್ ಮರಗಳು: 73,300 ಪ್ರಭೇದಗಳನ್ನು ಗುರುತಿಸಿದ ವಿಜ್ಞಾನಿಗಳು!

ಸೊಳ್ಳೆಗಳು ಮನುಷ್ಯರನ್ನು ಕಚ್ಚಲು ಕೆಂಪು ಬಣ್ಣ ನಾಲ್ಕನೇ ಕಾರಣ: ಅಧ್ಯಯನದಲ್ಲಿ, ಸೊಳ್ಳೆಗಳು ಮೂರು ವಿಷಯಗಳಿಗೆ ಆಕರ್ಷಿತವಾಗುತ್ತವೆ ಎಂದು ರಿಫೆಲ್ ಹೇಳುತ್ತಾರೆ. ನಿಮ್ಮ ಉಸಿರು, ನಿಮ್ಮ ಬೆವರು ಮತ್ತು ನಿಮ್ಮ ಚರ್ಮದ ಉಷ್ಣತೆ. ವಿಜ್ಞಾನಿಗಳ ಪ್ರಕಾರ, ಈ ಅಧ್ಯಯನದಲ್ಲಿ ತಂಡವು ನಾಲ್ಕನೇ ಸುಳಿವನ್ನು ಕಂಡುಹಿಡಿಯಲು ಸಾಧ್ಯವಾಯಿತು. ಕೆಂಪು ಬಣ್ಣ, ಇದು ನಿಮ್ಮ ಬಟ್ಟೆಗಳ ಮೇಲೆ ಮಾತ್ರವಲ್ಲದೆ ಪ್ರತಿಯೊಬ್ಬರ ಚರ್ಮದ ಮೇಲೂ ಕಂಡುಬರುತ್ತದೆ. 

ಚರ್ಮವು ಯಾವ ಬಣ್ಣದ್ದಾಗಿದೆ ಎಂಬುದು ಮುಖ್ಯವಲ್ಲ. ಪ್ರತಿಯೊಬ್ಬರ ಚರ್ಮದ ಬಲವಾದ ಕೆಂಪು ಬಣ್ಣ ಕಂಡುಬರುತ್ತದೆ. ಸೊಳ್ಳೆ ಕಡಿತವನ್ನು ತಪ್ಪಿಸಲು ಮತ್ತೊಂದು ತಂತ್ರವೆಂದರೆ ನಮ್ಮ ಚರ್ಮದಲ್ಲಿ ಅಂತಹ ಆಕರ್ಷಕ ಬಣ್ಣಗಳನ್ನು ಫಿಲ್ಟರ್ ಮಾಡುವುದು ಅಥವಾ ಆ ಬಣ್ಣಗಳನ್ನು ತಪ್ಪಿಸುವ ಉಡುಪುಗಳನ್ನು ಧರಿಸುವುದು ಎಂದು ಅಧ್ಯಯನ ಹೇಳುತ್ತದೆ. 

ಅಧ್ಯಯನಕ್ಕಾಗಿ, ಸಂಶೋಧಕರು ಹೆಣ್ಣು ಹಳದಿ ಜ್ವರ ಸೊಳ್ಳೆಯಾದ ಈಡಿಸ್ ಈಜಿಪ್ಟಿಯನ್ನು, ವಿವಿಧ ದೃಶ್ಯ ಮತ್ತು ಸಂಕೇತಗಳಿಗೆ ಒಡ್ಡಿಕೊಂಡಾಗ ಅವುಗಳ ನಡವಳಿಕೆಯನ್ನು ಅಧ್ಯಯನ ಮಾಡಿದರು. ಎಲ್ಲಾ ಸೊಳ್ಳೆ ಪ್ರಭೇದಗಳಂತೆ ಹೆಣ್ಣು ಸೊಳ್ಳೆಗಳು ಮಾತ್ರ ರಕ್ತವನ್ನು ಸೇವಿಸುತ್ತವೆ ಮತ್ತು ಈಡಿಸ್ ಈಜಿಪ್ಟಿಯ ಕಚ್ಚುವಿಕೆಯು ಡೆಂಗ್ಯೂ ಜ್ವರ, ಹಳದಿ ಜ್ವರ, ಚಿಕೂನ್‌ಗುನ್ಯಾ ಮತ್ತು ಝಿಕಾವನ್ನು ಹರಡುತ್ತದೆ. ಪ್ರತ್ಯೇಕ ಸೊಳ್ಳೆಗಳನ್ನು ಪರೀಕ್ಷಾ ಕೊಠಡಿಗಳಲ್ಲಿ ವಿಭಿನ್ನ ಸುಗಂಧವನ್ನು ಸಿಂಪಡಿಸಿ, ಬಣ್ಣದ ಚುಕ್ಕೆ ಅಥವಾ ರುಚಿಕರವಾದ ಮಾನವ ಕೈಗಳಂತಹ ವಿವಿಧ ದೃಶ್ಯ ಮಾದರಿಗಳನ್ನು ಪ್ರದರ್ಶಿಸಿ ಅಧ್ಯಯನ ಮಾಡಲಾಯಿತು. 

ಸೊಳ್ಳೆಗಳು ಸಾಮಾನ್ಯವಾಗಿ ಯಾವುದೇ ವಾಸನೆಯ ಸಂಕೇತದ ಅನುಪಸ್ಥಿತಿಯಲ್ಲಿ, ಬಣ್ಣವನ್ನು ಲೆಕ್ಕಿಸದೆ ಕೋಣೆಯ ಕೆಳಭಾಗದಲ್ಲಿದ್ದ ಒಂದು ಚುಕ್ಕೆ ನಿರ್ಲಕ್ಷಿಸುತ್ತವೆ.  ಕಾರ್ಬನ್‌ ಡೈ ಆಕ್ಸೈಡನ್ನು ಕೊಠಡಿಯೊಳಗೆ ಚಿಮುಕಿಸಿದ ನಂತರ, ಸೊಳ್ಳೆಗಳು ಹಸಿರು, ನೀಲಿ ಅಥವಾ ನೇರಳೆ ಬಣ್ಣದ ಚುಕ್ಕೆಯನ್ನು ನಿರ್ಲಕ್ಷಿಸುವುದನ್ನು ಮುಂದುವರೆಸಿದವು.  

ಆದರೆ ಮತ್ತೊಂದೆಡೆ, ಕೆಂಪು, ಕಿತ್ತಳೆ, ಕಪ್ಪು ಅಥವಾ ಸಯಾನ್ ಬಣ್ಣವಾಗಿದ್ದಾಗ ಚುಕ್ಕೆಗೆ ಸೊಳ್ಳೆಗಳು ಆಕರ್ಷಿತವಾಗಿವೆ. CO2 ನಾವು ಮತ್ತು ಇತರ ಪ್ರಾಣಿಗಳು ಪ್ರತಿ ಉಸಿರಿನೊಂದಿಗೆ ಹೊರಹಾಕುವ ಅನಿಲ. ಇದರ ವಾಸನೆ ತಿಳಿಯಲು ಮನುಷ್ಯರಿಗೆ ಸಾಧ್ಯವಿಲ್ಲ ಆದರೆ ಸೊಳ್ಳೆಗಳು ವಾಸನೆ ಗ್ರಹಿಸಲು ಸಮರ್ಥವಾಗಿವೆ.

click me!