Genetically Modified Pigs: ಮಾನವ ಹೃದಯ ಕಸಿಗಾಗಿ ಕುಲಾಂತರಿ ಹಂದಿ ಅಭಿವೃದ್ಧಿ: ಜರ್ಮನ್‌ ಸಂಶೋಧಕರ ಹೊಸ ಪ್ರಯೋಗ!

Published : Feb 07, 2022, 11:50 AM ISTUpdated : Feb 07, 2022, 11:55 AM IST
Genetically Modified Pigs: ಮಾನವ ಹೃದಯ ಕಸಿಗಾಗಿ ಕುಲಾಂತರಿ ಹಂದಿ  ಅಭಿವೃದ್ಧಿ: ಜರ್ಮನ್‌ ಸಂಶೋಧಕರ ಹೊಸ ಪ್ರಯೋಗ!

ಸಾರಾಂಶ

ಈ ಹಿಂದೆ ಮನುಷ್ಯನಿಗೆ  ಹೃದಯ ಕಸಿ ಮಾಡಲು ಬಳಸಿದ್ದ ಹಂದಿಯಲ್ಲಿ ಬಳಸಲಾದ  ಸರಳ ಆವೃತ್ತಿಯನ್ನು ಆಧರಿಸಿ ಮಾನವರಿಗೆ ಹೃದಯ ಕಸಿಗಾಗಿ ಬಳಸಲು ಈ ವರ್ಷ ತಳೀಯವಾಗಿ ಮಾರ್ಪಡಿಸಿದ ಹಂದಿಗಳನ್ನು ಕ್ಲೋನ್ ಮಾಡಲು ಜರ್ಮನ್‌ ವಿಜ್ಞಾನಿಗಳು ಸಿದ್ದತೆ ನಡೆಸಿದ್ದಾರೆ.  

Tech Desk: 2022ರ ಜನವರಿಯಲ್ಲಿ ವೈದ್ಯಕೀಯ ಲೋಕದಲ್ಲಿ ಮೊದಲ ಪ್ರಯತ್ನವಾಗಿ  ವೈದ್ಯರು ಮನುಷ್ಯನಿಗೆ ಹಂದಿ ಹೃದಯ ಕಸಿ ಮಾಡಿ (Pig Heart) ಸಾವಿನಂಚಿನಲ್ಲಿದ್ದ ವ್ಯಕ್ತಿಯ ಜೀವ ಉಳಿಸಿದ್ದರು. ಅಮೆರಿಕಾದ ಶಸ್ತ್ರಚಿಕಿತ್ಸಕರು 57 ವರ್ಷ ವಯಸ್ಸಿನ ವ್ಯಕ್ತಿಗೆ ತಳೀಯವಾಗಿ ಮಾರ್ಪಡಿಸಿದ (Genetically Modified) ಹಂದಿಯ ಹೃದಯವನ್ನು ಯಶಸ್ವಿಯಾಗಿ ಅಳವಡಿಸಿದ್ದರು. ಈಗ  ಮನುಷ್ಯನಿಗೆ  ಹೃದಯ ಕಸಿ ಮಾಡಲು ಬಳಸಿದ್ದ ಹಂದಿಯಲ್ಲಿ ಬಳಸಲಾದ  ಸರಳ ಆವೃತ್ತಿಯನ್ನು ಆಧರಿಸಿ ಮಾನವರಿಗೆ ಹೃದಯ ಕಸಿಗಾಗಿ ಬಳಸಲು ಈ ವರ್ಷ ತಳೀಯವಾಗಿ ಮಾರ್ಪಡಿಸಿದ ಹಂದಿಗಳನ್ನು ಅಭಿವೃದ್ದೀಪಡಿಸಲು  ಜರ್ಮನ್‌ ವಿಜ್ಞಾನಿಗಳು ಸಿದ್ದತೆ ನಡೆಸಿದ್ದಾರೆ. 

ಮ್ಯೂನಿಚ್‌ನ (Munich) ಲುಡ್ವಿಗ್-ಮ್ಯಾಕ್ಸಿಮಿಲಿಯನ್ಸ್ ವಿಶ್ವವಿದ್ಯಾಲಯದ (LMU) ವಿಜ್ಞಾನಿ ಎಕಾರ್ಡ್ ವುಲ್ಫ್, ತಮ್ಮ ತಂಡವು ಆಕ್ಲೆಂಡ್ ದ್ವೀಪದ ತಳಿಯಿಂದ ಮಾರ್ಪಡಿಸಿದ ಹೊಸ ಪ್ರಭೇದಗಳನ್ನು 2025 ರ ವೇಳೆಗೆ ಕಸಿ ಪ್ರಯೋಗಗಳಿಗೆ ಸಿದ್ಧಗೊಳಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಕಳೆದ ತಿಂಗಳು ಐತಿಹಾಸಿಕ ಶಸ್ತ್ರಚಿಕಿತ್ಸೆ ಬಗ್ಗೆ  ಮೇರಿಲ್ಯಾಂಡ್ ಮೆಡಿಕಲ್ ಸ್ಕೂಲ್ ವಿಶ್ವವಿದ್ಯಾಲಯ ಮಾಹಿತಿ ನೀಡಿತ್ತು.

ಇದನ್ನೂ ಓದಿ: Pig Heart Implant: ಇದೇ ಮೊದಲ ಬಾರಿಗೆ ಮನುಷ್ಯನಿಗೆ ಹಂದಿ ಹೃದಯ ಕಸಿ: ಅಮೆರಿಕಾ ವೈದ್ಯರ ಐತಿಹಾಸಿಕ ಸಾಧನೆ!

 "ರೋಗಿಯ ಸಂಪೂರ್ಣ ಚೇತರಿಕೆಯ ಖಚಿತವಾಗಿಲ್ಲದಿದ್ದರೂ, ಇದು ಪ್ರಾಣಿಗಳಿಂದ ಮಾನವನ ಕಸಿ ಮಾಡುವಿಕೆಗೆ ಪ್ರಮುಖ ಮೈಲುಗಲ್ಲು ಆಗಲಿದೆ. ಡೇವಿಡ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಹೊಸ ಅಂಗವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರ್ಧರಿಸಲು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ" ಎಂದು ವೈದ್ಯರು ತಿಳಿಸಿದ್ದರು. ಈಗ ಇದೆ ತಂತ್ರಜ್ಞಾನ ಬಳಸಿ ಕುಲಾಂತರಿ ಹಂದಿ ಅಭಿವೃದ್ಧಿಗೆ ಮುಂದಾಗಿದ್ದಾರೆ ಜರ್ಮನ್‌ ಸಂಶೋಧಕರು. 

"ನಮ್ಮ ಪರಿಕಲ್ಪನೆಯು ಸರಳವಾದ ಮಾದರಿಯೊಂದಿಗೆ ಮುಂದುವರಿಯುವುದು, ಅವುಗಳೆಂದರೆ ಐದು ಆನುವಂಶಿಕ ಮಾರ್ಪಾಡುಗಳೊಂದಿಗೆ," ಎಂದು ವುಲ್ಫ್ ಹೇಳಿದ್ದಾರೆ. ಆದರೆ ವುಲ್ಪ್‌ರ ಈ  ಕೆಲಸವು  ಅತ್ಯಂತ ಯುರೋಪ್‌ನಲ್ಲಿ ಕಡಿಮೆ ಅಂಗಾಂಗ ದಾನ ದರ  ಮತ್ತು ಬಲವಾದ ಪ್ರಾಣಿ ಹಕ್ಕುಗಳ ಚಳುವಳಿ ಮಧ್ಯೆ ದೇಶದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಅಂಗಾಂಗ ಕಸಿಗಾಗಿ ಕಾಯುತ್ತಿರುವ  8,500  ಜನ: ಕಳೆದ 20 ವರ್ಷಗಳಿಂದ ಪ್ರಾಣಿಯಿಂದ ಮನುಷ್ಯರಿಗೆ ಕಸಿ ಮಾಡುವಿಕೆ ಬಗ್ಗೆ ಸಂಶೋಧಿಸುತ್ತಿರುವ ವುಲ್ಫ್, ತನ್ನ ತಂಡವು ಮೊದಲ ಹಂತದಲ್ಲಿ ಪ್ರಾಣಿಗಳನ್ನು ಉತ್ಪಾದಿಸಲು ಇನ್ನೂ ಅಸಮರ್ಥವಾದ ಕ್ಲೋನಿಂಗ್ ತಂತ್ರಜ್ಞಾನವನ್ನು ಬಳಸುತ್ತದೆ ಎಂದು ಹೇಳಿದ್ದಾರೆ. ಬಳಿಕ ಇದರಿಂದ ಭವಿಷ್ಯದಲ್ಲಿ ಒಂದೇ ರೀತಿಯ ಹಂದಿಗಳನ್ನು ಬೆಳೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Euthanasia: 'ಶೀಘ್ರದಲ್ಲಿ ಭೇಟಿಯಾಗೋಣ': ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯ ಇಚ್ಛಾಮರಣ!

ಇಂಥಹ ಹಂದಿಗಳ ಮೊದಲ ಪೀಳಿಗೆಯು ಈ ವರ್ಷ ಜನಿಸಬೇಕಾಗಿದೆ ಮತ್ತು ತಂಡವು ಎರಡು ಅಥವಾ ಮೂರು ವರ್ಷಗಳಲ್ಲಿ ಮಾನವರ ಕ್ಲಿನಿಕಲ್ ಪ್ರಯೋಗಕ್ಕೆ ಅನುಮೋದನೆ ಪಡೆಯುವ ಮೊದಲು ಅದರ ಹೃದಯಗಳನ್ನು ಬಬೂನ್‌ಗಳಲ್ಲಿ ಪರೀಕ್ಷಿಸಲಾಗುವುದು ಎಂದು ವುಲ್ಫ್ ತಿಳಿಸಿದ್ದಾರೆ. ದೇಶದ ಆರ್ಗನ್ ಟ್ರಾನ್ಸ್‌ಪ್ಲಾಂಟೇಶನ್ ಫೌಂಡೇಶನ್‌ನ ಮಾಹಿತಿಯ ಪ್ರಕಾರ, 2021 ರ ಕೊನೆಯಲ್ಲಿ ಜರ್ಮನಿಯಲ್ಲಿ ಅಂಗಾಂಗ ಕಸಿಗಾಗಿ ಕಾಯುತ್ತಿರುವ ಸುಮಾರು 8,500  ಜನರಿಗೆ ಈ ಕಸಿಗಳನ್ನು ಬಳಸಲಾಗುತ್ತದೆ.

ಪ್ರಾಣಿ ಪ್ರಿಯರ ವಿರೋಧ: ಪ್ರಾಣಿಗಳಿಂದ ಅಂಗಾಂಗ ಕಸಿ ಮಡುವುದರಿಂದ ಈ ಪಟ್ಟಿಯನ್ನು ಕಡಿಮೆ ಮಾಡಬಹುದು ಎಂದು ವುಲ್ಫ್ ಬೆಂಬಲಿಗರು ಹೇಳುತ್ತಾರೆ. ಆದರೆ ಪ್ರಾಣಿಪ್ರಿಯರು ಇದಕ್ಕೆ ವಿರೊಧ್ ವ್ಯಕ್ತಪಡಿಸಿದ್ದು "ಈ ತಂತ್ರಜ್ಞಾನವು ಪ್ರಾಣಿಗಳ ಹಕ್ಕುಗಳ ಮೇಲೆ ಒರಟುತನವನ್ನು ಹೊಂದಿದೆ, ಪರಿಣಾಮಕಾರಿಯಾಗಿ ಹಂದಿಗಳನ್ನು ಅಂಗ ಕಾರ್ಖಾನೆಗಳ ಸ್ಥಿತಿಗೆ ತಗ್ಗಿಸುತ್ತದೆ ಅಲ್ಲದೇ ಕಸಿ ಪ್ರಯೋಗಗಳಲ್ಲಿ ಬಳಸಿದ ಮಂಗಗಳು ಸಂಕಟದಿಂದ ಸಾಯುತ್ತವೆ" ಎಂದು ಹೇಳಿದ್ದಾರೆ. 

ಹೀಗಾಗಿ ಜರ್ಮನಿಯ ಅನಿಮಲ್ ವೆಲ್ಫೇರ್ ಅಸೋಸಿಯೇಶನ್‌ನ ಮ್ಯೂನಿಚ್ ಶಾಖೆಯ ವಕ್ತಾರರಾದ ಕ್ರಿಸ್ಟಿನಾ ಬರ್ಚ್‌ಟೋಲ್ಡ್, ಈ ಅಭ್ಯಾಸವನ್ನು "ನೈತಿಕವಾಗಿ ಬಹಳ ಪ್ರಶ್ನಾರ್ಹ, ಪ್ರಾಣಿಗಳು ಮನುಷ್ಯರಿಗೆ ಬಿಡಿ ಭಾಗಗಳಾಗಿ ಕಾರ್ಯನಿರ್ವಹಿಸಬಾರದು" ಎಂದು ಅವರು ಹೇಳಿದ್ದಾರೆ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ