GM Crops: ಆಹಾರ ಭದ್ರತೆಗಾಗಿ ಜೀನ್ ಎಡಿಟೆಡ್ ಬೆಳೆಗಳ ಮೊರೆ ಹೋಗಲಿರುವ ಚೀನಾ!

By Suvarna News  |  First Published Jan 26, 2022, 11:47 AM IST

ಚೀನಾ ಇತ್ತೀಚೆಗೆ ಹೊಸ ನಿಯಮಾವಳಿಗಳನ್ನು ಅಂಗೀಕರಿಸಿದ್ದು ತಳೀಯವಾಗಿ ಮಾರ್ಪಡಿಸಿದ (GM) ಬೆಳೆಗಳಿಗೆ ಅನುಮೋದನೆಗಾಗಿ ಸ್ಪಷ್ಟ ಮಾರ್ಗಸೂಚಿಯನ್ನು ನಿಗದಿಪಡಿಸಿದೆ
 


Tech Desk: ತಳೀಯವಾಗಿ ಮಾರ್ಪಡಿಸಿದ ಸಸ್ಯಗಳ ಅನುಮೋದನೆಗಾಗಿ  ಪ್ರಾಯೋಗಿಕ ನಿಯಮಗಳನ್ನು (Trials) ಚೀನಾ ಪ್ರಕಟಿಸಿದೆ. ದೇಶದಲ್ಲಿ ಆಹಾರ ಭದ್ರತೆಯನ್ನು (Food Security) ಹೆಚ್ಚಿಸಲು ಪ್ರಯತ್ನಿಸುತ್ತಿವ ಬೆನ್ನಲ್ಲೇ ಜಿನೆಟಿಕಲಿ ಎಡಿಟೆಡ್ ಬೆಳೆಗಳಿಗೆ ಅನುಮೋದನೆಗಾಗಿ ಚೈನಾ ಸ್ಪಷ್ಟ ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ. ಜೀನ್ ಎಡಿಟಿಂಗ್ ಅಥವಾ ಅದರ ಕಾರ್ಯಕ್ಷಮತೆಯನ್ನು ಬದಲಾಯಿಸಲು ಅಥವಾ ಸುಧಾರಿಸಲು ಸಸ್ಯದ ಜೀನ್‌ಗಳನ್ನು ಬದಲಾಯಿಸುವುದು   ತಳೀಯವಾಗಿ ಮಾರ್ಪಡಿಸುವುದಕ್ಕಿಂತ ಕಡಿಮೆ ಅಪಾಯಕಾರಿ ಎಂದು ಕೆಲವು ವಿಜ್ಞಾನಿಗಳು ಪರಿಗಣಿಸುತ್ತಾರೆ. ಈ ಪ್ರಕ್ರಿಯೆ ಜೀನನ್ನು ವರ್ಗಾಯಿಸುವುವ ಪ್ರಕ್ರಿಯೆ ಒಳಗೊಂಡಿರುತ್ತದೆ.

ಚೀನಾದ ಬೀಜ ಉದ್ಯಮವನ್ನು ಕೂಲಂಕಷವಾಗಿ ಪರಿಶೀಲಿಸುವ  ಬೆನ್ನಲ್ಲೇ ಸೋಮವಾರ ತಡರಾತ್ರಿ ಕೃಷಿ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯವು  ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮೂಲಕ ವಿಶ್ವದಲ್ಲೇ ಅತಿದೊಡ್ಡ ಜನಸಂಖ್ಯೆ ಹೊಂದಿರುವ ದೇಶಕ್ಕೆ ಆಹಾರ ಭದ್ರತೆ ಖಚಿತಪಡಿಸಿಕೊಳ್ಳುವ  ಪ್ರಯತ್ನ ಮಾಡಲಾಗತ್ತಿದೆ.

Tap to resize

Latest Videos

undefined

ಇದನ್ನೂ ಓದಿ: Field Trials of GM Crops: 'ಆಹಾರ ಸುರಕ್ಷತೆ ಖಾತರಿಪಡಿಸಲು ಜಿಎಮ್ ಬೆಳೆಗಳ ಕ್ಷೇತ್ರ ಪ್ರಯೋಗಗಳು ಅಗತ್ಯ'

ಮುಂಚೂಣಿಯಲ್ಲಿ ಚೀನಾ: ಬೀಜಿಂಗ್ ಇತ್ತೀಚೆಗೆ ಹೊಸ ನಿಯಮಾವಳಿಗಳನ್ನು ಅಂಗೀಕರಿಸಿದೆ, ಅದು ತಳೀಯವಾಗಿ ಮಾರ್ಪಡಿಸಿದ (GM) ಬೆಳೆಗಳಿಗೆ ಅನುಮೋದನೆಗಾಗಿ ಸ್ಪಷ್ಟ ಮಾರ್ಗವನ್ನು ನಿಗದಿಪಡಿಸಿದೆ. ಆದರೆ ಜನರು ಮತ್ತು ಜಾನುವಾರುಗಳನ್ನು ಪೋಷಿಸಲು ಜಿಎಮ್ ಬೆಳೆಗಳನ್ನು ನೆಡುವುದನ್ನು ಅನುಮತಿಸಬೇಕೆ ಎಂಬುದರ ಬಗ್ಗೆ ಹಲವು ವರ್ಷಗಳ ಕಾಲ ಚರ್ಚಿಸಿದ್ದರೂ, ಜೀನ್ ಎಡಿಟೆಡ್ ಬೆಳೆಗಳಿಗೆ ಸ್ಪಷ್ಟ ಮತ್ತು ತುಲನಾತ್ಮಕವಾಗಿ ವೇಗದ ಕಾರ್ಯವಿಧಾನಗಳನ್ನು ಜಾರಿಗೊಳಿಸುವಲ್ಲಿ ಇದು ಕೆಲವು ರಾಷ್ಟ್ರಗಳಿಗಿಂತ ಮುಂದಿದೆ.

"ಜೀನೋಮ್ ಎಡಿಟಿಂಗ್‌ನಲ್ಲಿ ಚೀನಾ ಸರ್ಕಾರದ ಬಲವಾದ ಹೂಡಿಕೆಯನ್ನು ಗಮನಿಸಿದರೆ, ಮುಂಬರುವ ವರ್ಷಗಳಲ್ಲಿ ತುಲನಾತ್ಮಕವಾಗಿ ಮುಕ್ತ ನೀತಿಯ ಬಿಡುಗಡೆಯನ್ನು ನಾವು ನಿರೀಕ್ಷಿಸುತ್ತೇವೆ. ಚೀನಾದ ಸಂಶೋಧನಾ ಸಂಸ್ಥೆಗಳು ಈಗಾಗಲೇ ಮಾರುಕಟ್ಟೆ ಆಧಾರಿತ ಜೀನ್-ಎಡಿಟೆಡ್‌ ಬೆಳೆಗಳ ಕುರಿತು ಇತರ  ದೇಶಗಳಿಗಿಂತ ಹೆಚ್ಚಿನ ಸಂಶೋಧನೆಗಳನ್ನು ಪ್ರಕಟಿಸಿವೆ ಎಂದು ರಾಬೋಬ್ಯಾಂಕ್ (Rabobank) ಡಿಸೆಂಬರ್ ವರದಿಯಲ್ಲಿ ತಿಳಿಸಿದೆ. 

ಇದನ್ನೂ ಓದಿ: Pig Heart Implant: ಇದೇ ಮೊದಲ ಬಾರಿಗೆ ಮನುಷ್ಯನಿಗೆ ಹಂದಿ ಹೃದಯ ಕಸಿ: ಅಮೆರಿಕಾ ವೈದ್ಯರ ಐತಿಹಾಸಿಕ ಸಾಧನೆ!

ತಂತ್ರಜ್ಞಾನ ಬಳಕೆಯಿಂದಾಗಿ  ಸಾಂಪ್ರದಾಯಿಕ ತಳಿ ಅಥವಾ ಆನುವಂಶಿಕ ಮಾರ್ಪಾಡುಗಳಿಗಿಂತ ವೇಗವಾಗಿ ಅಭಿವೃದ್ಧಿಪಡಿಸಬಹುದ  ಮತ್ತು ಇದು ವೆಚ್ಚವನ್ನು ಕಡಿಮೆ ಮಾಡುತ್ತದೆ. ಯುನೈಟೆಡ್ ಸ್ಟೇಟ್ಸ್‌ನಂತಹ ಕೆಲವು ದೇಶಗಳಲ್ಲಿ ಈ ಬೆಳೆಗಳಿಗೆ ಪ್ರೋತ್ಸಾಹವಿದೆ , ಆದಾಗ್ಯೂ ಯುರೋಪಿಯನ್ ಯೂನಿಯನ್ ಇನ್ನೂ ತಂತ್ರಜ್ಞಾನವನ್ನು ಹೇಗೆ ನಿಯಂತ್ರಿಸಬೇಕೆಂದು ಪರಿಶೀಲಿಸುತ್ತಿದೆ.

"ಇದು ನಿಜವಾಗಿಯೂ ಸಸ್ಯ ಸಂತಾನೋತ್ಪತ್ತಿಗೆ ಬಾಗಿಲು ತೆರೆಯುತ್ತದೆ. ಬೆಳೆಗಳನ್ನು ಹೆಚ್ಚು ನಿಖರವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಸುಧಾರಿಸಲು ಇದು ಅನಂತ ಅವಕಾಶವಾಗಿದೆ" ಎಂದು ಬೀಜ ಕಂಪನಿ ಒರಿಜಿನ್ ಅಗ್ರಿಟೆಕ್ನ ಅಧ್ಯಕ್ಷ ಹಾನ್ ಗೆಂಗ್ಚೆನ್ ಹೇಳಿದ್ದಾರೆ.  ಗ್ಲೋಬಲ್ ಟೈಮ್ಸ್ ವರದಿಯ ಪ್ರಕಾರ, ಚೀನೀ ಸಂಶೋಧಕರು ವಿಟಮಿನ್ ಸಿ ಮತ್ತು ಸಸ್ಯನಾಶಕ-ನಿರೋಧಕ ಅಕ್ಕಿಯಲ್ಲಿ ಸಮೃದ್ಧವಾಗಿರುವ ಲೆಟಿಸ್ ಬೀಜಗಳನ್ನು ರಚಿಸಲು ಜೀನ್-ಎಡಿಟಿಂಗ್ ಅನ್ನು ಬಳಸಿದ್ದಾರೆ. ಚೀನಾ ತನ್ನ ತರಕಾರಿ ಬೀಜಗಳ ಗಮನಾರ್ಹ ಪಾಲನ್ನು ಆಮದು ಮಾಡಿಕೊಳ್ಳುತ್ತದೆ ಹೀಗಾಗಿ  ಅದರ ಅವಲಂಬನೆಯನ್ನು ಕಡಿಮೆ ಮಾಡಲು ಈ ಯೋಜನೆಗಳನ್ನು ಜಾರಿಗೊಳಿಸಿದೆ.

ಜಿಎಮ್ ಬೆಳೆಗಳ ಅಗತ್ಯ:  ಜಿಇ ತಂತ್ರಜ್ಞಾನಗಳು, ವೈವಿಧ್ಯಮಯವಾದ ಸೂಕ್ಷ್ಮಾಣುಗಳ ವಂಶವಾಹಿ ಮಾಹಿತಿಯನ್ನು ಸಸ್ಯದೊಳಕ್ಕೆ ಅಳವಡಿಸಿಕೊಳ್ಳುವುದಕ್ಕೆ  ಅನುವುಮಾಡಿಕೊಟ್ಟರೆ, ಜೀನ್ ಎಡಿಟಿಂಗ್‍ನಿಂದ ಗುರಿಯಿರಿಸಲಾದ ವಂಶವಾಹಿಯಲ್ಲಿ ಬದಲಾವಣೆಗಳನ್ನು ಸೃಷ್ಟಿಸಬಹುದು. ಜಿಇ ಮತ್ತು ಜೀನ್ ಎಡಿಟಿಂಗ್ ತಂತ್ರಜ್ಞಾನಗಳು, ಬೆಳೆಗಳನ್ನು ಕೀಟಗಳು ಮತ್ತು ರೋಗಕಾರಕಗಳಿಂದ ಸಂರಕ್ಷಿಸಿ ಅವುಗಳ ಪೌಷ್ಟಿಕಾಂಶ ಮೌಲ್ಯವನ್ನು  ಸುಧಾರಿಸುತ್ತವೆ ಎಂದು  ಈಗಾಗಲೇ ತೋರಿಸಿವೆ. ಜಿಇ ಬೆಳೆಗಳು ಹಾಗೂ ಜಿನೋಮ್ ಎಡಿಟಿಂಗ್ ತಂತ್ರಜ್ಞಾನದಲ್ಲಿ ಜಾಗತಿಕ ಬೆಳವಣಿಗೆಗಳಾಗಿವೆ. ಜಿಇ ಬೆಳೆಗಳ ಬಗ್ಗೆ ಈ ಮೊದಲು ವಿರೋಧ ವ್ಯಕ್ತಪಡಿಸಿದ್ದ ಜಪಾನ್‍ನಂತಹ ದೇಶಗಳು ಈಗಾಗಲೇ ಜೀನ್ ಎಡಿಟೆಡ್(ಜಿಇ) ಬೆಳೆಗಳನ್ನು ಬಿಡುಗಡೆ ಮಾಡಿವೆ. ಕೃಷಿಯಲ್ಲಿ ಆಧುನಿಕತೆ ಸಾಧಿಸಿರುವ ಯುಎಸ್‍ಎ, ಕೆನಡ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ಕೂಡ ಜೀನ್ ಎಡಿಟೆಡ್ ಬೆಳೆಗಳ ಜೈವಿಕ ಸುರಕ್ಷತಾ ಅಗತ್ಯಗಳಿಗೆ ವಿನಾಯಿತಿ ನೀಡಿವೆ.

click me!