ಹೊರ ಹೊಮ್ಮುತ್ತಿದೆ ಹೂಂಕಾರ ನಾದ, ಬ್ರಹ್ಮಾಂಡ ರಹಸ್ಯ ಭೇದಿಸಿದ ಭಾರತೀಯ ಖಗೋಳಶಾಸ್ತ್ರಜ್ಞರ ತಂಡ!

By Suvarna News  |  First Published Jul 1, 2023, 4:29 PM IST

ಬ್ರಹ್ಮಾಂಡದೊಳಗೆ ಹುದುಗಿರುವ ಹಲವು ರಹಸ್ಯಗಳನ್ನು ಶೋಧಿಸುವ, ಭೇದಿಸುವ ಕೆಲಸ ನಿರಂತರ ನಡೆಯುತ್ತಿದೆ. ಇದೀಗ ಆಲ್ಬರ್ಟ್ ಐನ್‌ಸ್ಟೈನ್ ಹೇಳಿದ ಕೆಲ ಸಿದ್ಧಾಂತಕ್ಕೆ ಪುಷ್ಠಿ ನೀಡುವ ಅಂಶಗಳನ್ನು ಭಾರತೀಯ ಖಗೋಳಶಾಸ್ತ್ರಜ್ಞರ ತಂಡ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬ್ರಹ್ಮಾಂಡದಿಂದ ಹೊಂಕಾರ ನಾದ ಹೊರಹೊಮ್ಮುತ್ತಿರುವ ಧ್ವನಿಯನ್ನು ಭಾರತೀಯ ಟೆಲಿಸ್ಕೋಪ್ ಪತ್ತೆ ಹಚ್ಚಿ ಮುದ್ರಿಸಿದೆ ಮಾಡಿದೆ.


ಪುಣೆ(ಜು.01) ಖಗೋಳಶಾಸ್ತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಬ್ರಹ್ಮಾಂಡದೊಳಗಿಂದ ಹಮ್ಮಿಂಗ್ ಸೌಂಡ್ ಹೊರಸೂಸುತ್ತಿರುವ ಮಹತ್ವದ ಅಂಶವನ್ನು ಭಾರತೀಯ ಟೆಲಿಸ್ಕೋಪ್ ಪತ್ತೆ ಹಚ್ಚಿದೆ. 7 ಮಂದಿಯ ಖಗೋಳಶಾಸ್ತ್ರಜ್ಞರ ತಂಡ ನಡೆಸಿದ ಮಹತ್ವದ ಸಂಶೋಧನೆಯಲ್ಲಿ ಬ್ರಹ್ಮಾಂಡದೊಳಗಿನಿಂದ ಹೂಂಕಾರ ನಾದ ಹೊರ ಹೊಮ್ಮುತ್ತಿರುವ ರಹಸ್ಯವನ್ನು ಭಾರತ ಬಯಲೆಗೆಳಿದಿದೆ.ಭಾರತ ಸೇರಿದಂತೆ ಹಲವು ದೇಶಗಳ ತಂಡಗಳು ಜಂಟಿಯಾಗಿ ಸಂಶೋಧನೆ ನಡೆಸಿತ್ತು. ಈ ಸಂಶೋಧನೆಯಲ್ಲಿ ಭಾರತ ಪ್ರಮುಖ ಪಾತ್ರ ನಿರ್ವಹಿಸಿದೆ.

ಆಲ್ಬರ್ಟ್ ಐನ್‌ಸ್ಟೈನ್ ತಮ್ಮ ಸಿದ್ಧಾಂತರದಲ್ಲಿ ಬ್ರಹ್ಮಾಂಡದೊಳಗೆ ಹೂಂಕಾರ ನಾದ ಹೊರಹೊಮ್ಮುತ್ತಿದೆ ಅನ್ನೋ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು. ಇದಕ್ಕೆ ಪುಷ್ಠಿ ನೀಡುವ ಅಂಶವನ್ನು ಇದೀಗ ಭಾರತೀಯ ಖಗೋಳಶಾಸ್ತ್ರಜ್ಞರ ತಂಡ ಪತ್ತೆ ಹಚ್ಚಿದೆ. ಪುಣೆಯಲ್ಲಿರುವ  ಜೈಂಟ್ ಮೆಟ್ರೆವೇವ್ ರೇಡಿಯೊ ಟೆಲಿಸ್ಕೋಪ್ (uGMRT) ಬಳಸಿ ಭಾರತೀಯ ಖಗೋಳಶಾಸ್ತ್ರಜ್ಞರ ತಂಡ ಹೂಂಕಾರ ನಾದವನ್ನು ಪತ್ತೆ ಹಚ್ಚಿದೆ. ಗುರುತ್ವಾಕರ್ಷಣೆ ಅಲೆಯ ಸ್ಫೋಟದ ಬಳಿಕ ಸೂಪರ್ಮಾಸಿವ್ ಕಪ್ಪು ರಂಧ್ರಗಳ ಘರ್ಷಣೆ ಹುಟ್ಟಿಕೊಳ್ಳುತ್ತದೆ. ಈ ವೇಳೆ ಬ್ರಹ್ಮಾಂಡದಿಂದ ಹೂಂಕಾರ ನಾದ ಹೊರಹೊಮ್ಮುತ್ತದೆ. ಈ ಹೂಂಕಾರ ನಾದವನ್ನು ಪುಣೆಯ ಅತ್ಯಾಧುನಿಕ ಟೆಲಿಸ್ಕೋಪ್ ಪತ್ತೆ ಹಚ್ಚಿದೆ.

Latest Videos

undefined

ಇನ್ಮುಂದೆ ಭಾರತದ್ದೇ ಜಿಪಿಎಸ್‌: ಇಸ್ರೋದಿಂದ ದಿಕ್ಸೂಚಿ ಉಪಗ್ರಹ ಯಶಸ್ವಿ ಉಡಾವಣೆ

ಇದೀಗ ಭಾರತದ ಈ ಆವಿಷ್ಕಾರದಿಂದ ಬೃಹತ್ ಕಪ್ಪು ರಂಧ್ರಗಳ ಹಾಗೂ ಗುರುತ್ವಾಕರ್ಷಣೆ ಕ್ರಿಯೆಗಳ ಸುತ್ತಿಲಿನ ರಹಸ್ಯಗಳನ್ನು ಬಿಚ್ಚಿಡುವ ನಿರೀಕ್ಷೆಗಳಿವೆ.2015ರಲ್ಲಿ  ಅಮೆರಿಕ ಹಾಗೂ ಇಟಲಿ ಖಗೋಳಶಾಸ್ತ್ರಜ್ಞರ ತಂಡ ಮಹತ್ವದ ಅಂಶವನ್ನು ಪ್ರತಿಪಾದಿಸಿತ್ತು. ಕಪ್ಪು ರಂದ್ರಗಳ ಘರ್ಷಣೆಯಿಂದ ರಚಸಿಲ್ಪಡುವ ಗುರುತ್ವಾಕರ್ಷಣೆ ಅಲೆಗಳನ್ನು ಅಮೆರಿಕ ಹಾಗೂ ಇಟಲಿ ಖಗೋಳಶಾಸ್ತ್ರಜ್ಞರ ತಂಡ ಪತ್ತೆ ಹಚ್ಚಿದ್ದರೂ ಈ ಸಿದ್ಧಾಂತಕ್ಕೆ ದೃಢೀಕರಿಸುವ ಅಂಶಗಳು ಪತ್ತೆಯಾಗಲಿಲ್ಲ.

ಬ್ರಹ್ಮಾಂಡ, ಆಕಾಶದಲ್ಲಿನ ರಹಸ್ಯಗಳನ್ನು ಭೇದಿಸುವ ಸಂಶೋಧನೆ ನಿರಂತರವಾಗಿ ನಡೆಯುತ್ತಿದೆ. ಇತ್ತೀಚೆಗೆ ದೈತ್ಯ ನಕ್ಷತ್ರ ಸ್ಫೋಟಗೊಳ್ಳುತ್ತಿರುವ ದೃಶ್ಯವನ್ನು ಸೆರೆಹಿಡಿಯಲಾಗಿತ್ತು. ಮೊಟ್ಟಮೊದಲಬಾರಿಗೆ ಸಂಶೋಧಕರು ದೂರದರ್ಶಕದ ಸಹಾಯದಿಂದ ಸೂರ‍್ಯನಿಗಿಂತ 10 ಪಟ್ಟು ದೊಡ್ಡದಾದ ದೈತ್ಯಾಕಾರದ ಕೆಂಪು ನಕ್ಷತ್ರವೊಂದು ಸ್ಫೋಟಗೊಂಡು ಚೂರು ಚೂರಾಗುವುದನ್ನು ಸೆರೆಹಿಡಿದಿದ್ದಾರೆ. ಭೂಮಿಯಿಂದ 1.20 ಕೋಟಿ ಬೆಳಕಿನ ವರ್ಷ ದೂರದಲ್ಲಿದ್ದ ನಕ್ಷತ್ರವು ನಾಟಕೀಯ ವಿಧಾನದಲ್ಲಿ ಪ್ರಕಾಶಮಾನವಾಗಿ ಉರಿದು, ಸ್ಪೋಟಗೊಂಡಿದೆ.

ಇನ್ನು 20 ವರ್ಷದಲ್ಲಿ ಜಗತ್ತಲ್ಲಿ ನಕ್ಷತ್ರಗಳೇ ಕಾಣಲ್ಲ! ಕಾರಣ ಹೀಗಿದೆ..

ನಕ್ಷತ್ರವು ಸ್ಫೋಟಕ್ಕೂ ಮೊದಲು ಸೂರ‍್ಯನಿಗಿಂತ 10 ಪಟ್ಟು ಬೃಹತ್‌ ಪ್ರಮಾಣದಲ್ಲಿತ್ತು.ಅದರಲ್ಲಿದ್ದ ಹೈಡ್ರೋಜನ್‌, ಹೀಲಿಯಂ ಮತ್ತಿತರ ಅನಿಲಗಳನ್ನು ಅಪಾರ ಪ್ರಮಾಣದಲ್ಲಿ ಹೊರಹಾಕಿದ ನಂತರ ಸ್ಪೋಟಗೊಂಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ನಕ್ಷತ್ರದ ವಿಚಿತ್ರವಾದ ಚಟುವಟಿಕೆಯನ್ನು ಖಗೋಳ ವಿಜ್ಞಾನಿಗಳು ಕಳೆದ 130 ದಿನಗಳ ಹಿಂದಷ್ಟೇ ಪತ್ತೆ ಮಾಡಿದ್ದರು ಎಂದು ವರದಿಯಾಗಿದೆ. ಹವಾಯಿ ವಿಶ್ವವಿದ್ಯಾನಿಲಯದ ಇನ್‌ಸ್ಟಿಟ್ಯೂಟ್‌ ಫಾರ್‌ ಆಸ್ಟೊ್ರೕನಮಿಯ ಪ್ಯಾನ್‌-ಸ್ಟಾರ್‌ ಟೆಲಿಸ್ಕೋಪ್‌ 2020ರಲ್ಲಿ ಪ್ರಕಾಶಮಾನವಾದ ವಿಕಿರಣವೊಂದನ್ನು ಪತ್ತೆ ಮಾಡಿತ್ತು. ನಂತರ ಇದೇ ಸ್ಥಳದಲ್ಲಿ ನಕ್ಷತ್ರವೊಂದರ ಸ್ಪೋಟವನ್ನು ವಿಜ್ಞಾನಿಗಳು ಕಂಡಿದ್ದರು. ಆಗ ನಕ್ಷತ್ರ ಸುತ್ತಲೂ ವಸ್ತವಿರುವುದನ್ನು ಗುರುತಿಸಿದ್ದರು.
 

click me!