James Webb Space Telescope: ಶನಿಯ ಸ್ವರ್ಣದುಂಗುರ, ಈ ಬ್ರಹ್ಮಾಂಡ ಎಷ್ಟು ಸುಂದರ

Published : Jul 01, 2023, 04:17 PM IST
James Webb Space Telescope: ಶನಿಯ ಸ್ವರ್ಣದುಂಗುರ, ಈ ಬ್ರಹ್ಮಾಂಡ ಎಷ್ಟು ಸುಂದರ

ಸಾರಾಂಶ

ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ ಕಳಿಸಿರುವ ಚಿತ್ರದಲ್ಲಿ ಶನಿಯ ಸ್ವರ್ಣದುಂಗುರ ಮಾತ್ರವಲ್ಲದೆ, ಈ ಗ್ರಹದ 145 ತಿಳಿದಿರುವ ಚಂದ್ರಗಳಲ್ಲಿ ಮೂರು ಪ್ರಮುಖವಾದ ಎನ್ಸೆಲಾಡಸ್, ಡಿಯೋನ್ ಮತ್ತು ಟೆಥಿಸ್ ಕೂಡ ಸೆರೆಯಾಗಿದೆ.  

ನವದೆಹಲಿ (ಜು.1): ಬ್ರಹ್ಮಾಂಡ ಎಷ್ಟು ವಿಶಾಲವೆಂದರೆ, ಬಹುಶಃ ಮಾನವನ ಎಣಿಕೆಗೂ ಅದು ಮೀರಿದ್ದು. ಆದರೆ, ಬ್ರಹ್ಮಾಂಡವನ್ನು ಅರಿಯುವ ಮನುಷ್ಯನ ಕುತೂಹಲಕ್ಕೆ ಕೊನೆಯೇ ಇಲ್ಲ ಅದಕ್ಕಾಗಿ ಕೆಲ ವರ್ಷಗಳ ಹಿಂದೆ ನಮ್ಮ ಸೌರಮಂಡಲದ ಕಟ್ಟಕೊನೆಯಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ದೂರದರ್ಶಕ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ಅನ್ನು ಪ್ರತಿಷ್ಠಾಪನೆ ಮಾಡಿತ್ತು. ಅಂದಿನಿಂದ ನಮ್ಮ ಸೌರವ್ಯೂಹದೊಂದಿಗೆ. ಸೌರವ್ಯೂಹದ ಆಚೆಯ ಚಿತ್ರಗಳನ್ನು ತೆಗೆದು ಭೂಮಿಗೆ ಕಳಿಸುತ್ತಿದೆ. ಪ್ರತಿ ಬಾರಿ ಜೇಮ್ಸ್ ವೆಬ್‌ ಟೆಲಿಸ್ಕೋಪ್‌ ಚಿತ್ರ ಕಳಿಸಿದಾಗ ಭೂಮಿಯ ಮೇಲಿರುವ ಮನುಷ್ಯ ಅಚ್ಚರಿಗಣ್ಣಿನಿಂದ ಕಾಣುತ್ತಾನೆ. ಅದಕ್ಕೆ ಕಾರಣ, ನಾವು ನಿರೀಕ್ಷೆಯೇ ಮಾಡಿರದಷ್ಟು ಆಳ ಈ ಬ್ರಹ್ಮಾಂಡದಲ್ಲಿದೆ ಅನ್ನೋದು. ಇತ್ತೀಚೆಗೆ ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌, ನಮ್ಮ ಸೌರಮಂಡಲದ ಆರನೇ ಗ್ರಹ, ಗುರುವಿನ ಬಳಿಕ ಅತಿದೊಡ್ಡ ಗ್ರಹವಾಗಿರುವ ಶನಿಯ ಚಿತ್ರವನ್ನು ಕಳಿಸಿಕೊಟ್ಟಿದೆ. ನಿಮಗೆ ನೆನಪಿರಲಿ ಶನಿಗ್ರಹ ಭೂಮಿಗಿಂತ ಒಂಭತ್ತೂವರೆ ಪಟ್ಟು ದೊಡ್ಡದಾಗಿದೆ. ಈ ಗ್ರಹವನ್ನು ಬಹಳ ವಿಶೇಷ ಮಾಡಿರುವುದು ಅದರ ಸುತ್ತಲಿನ ಸುಂದರ ಉಂಗುರ. ಶನಿಯ ಈ ಇನ್ಫ್ರಾರೆಡ್‌ ಚಿತ್ರವು ಅದರ ವಾತಾವರಣದಲ್ಲಿ ಆಶ್ಚರ್ಯಕರ ಮಾದರಿಗಳನ್ನು ವಿಜ್ಞಾನಿಗಳಿಗೆ ಬಹಿರಂಗಪಡಿಸಿದೆ. ಏಕೆಂದರೆ ಉಂಗುರಗಳು ಶನಿಯ ಉಂಗುರು ವಿಲಕ್ಷಣವಾಗಿ ಹೊಳೆಯುತ್ತಿದೆ.

"ದೂರದರ್ಶಕದಿಂದ ಗಮನಿಸಲಾದ ಇನ್ಫ್ರಾರೆಡ್‌ ಚಿತ್ರದಲ್ಲಿ ಶನಿಯು ಅತ್ಯಂತ ಗಾಢವಾಗಿ ಕಾಣುತ್ತಿದ್ದಾರೆ. ಏಕೆಂದರೆ, ಶನಿಗ್ರಹದಲ್ಲಿ ಅಪಾರವಾಗಿ ಮೀಥೇನ್‌ ಅನಿಲವಿದೆ. ಇದು ವಾತಾವರಣದ ಮೇಲೆ ಬೀಳುವ ಬಹುತೇಕ ಎಲ್ಲಾ ಸೂರ್ಯ ಬೆಳಕನ್ನು ಹೀರಿಕೊಳ್ಳುತ್ತಿದೆ ಆದರೆ,  ಹಿಮಾವೃತವಾಗಿರುವ ಉಂಗುರಗಳಲ್ಲಿ ಇದರ ಪ್ರಮಾಣ ಅಷ್ಟಿಲ್ಲ. ಹಾಗಾಗಿ ಇದರು ಪ್ರಕಾಶಮಾನವಾಗಿ ಕಂಡಿದೆ. ಇದು ವೆಬ್ ಚಿತ್ರದಲ್ಲಿ ಶನಿಯ ಅಸಾಮಾನ್ಯ ನೋಟಕ್ಕೆ ಕಾರಣವಾಗಿದೆ' ಎಂದು ನಾಸಾ ಹೇಳಿದೆ.

ಚಿತ್ರವನ್ನು ಬಗ್ಗೆ ವಿವರಣೆ ನೀಡಿರುವ ನಾಸಾ, ಇನ್ಸ್‌ಟಾಗ್ರಾಮ್‌ ಪುಟದಲ್ಲಿ ಬರೆದುಕೊಂಡಿದ್ದು, "ಶನಿಗ್ರಹದ ವೆಬ್ ಚಿತ್ರವಿದು. ಅದರ ಉಂಗುರಗಳು ಮತ್ತು ಚಂದ್ರಗಳ ಮೂಲಕ ಎರಡು ಭಾಗಗಳನ್ನು ನೀವು ನೋಡುತ್ತೀರಿ. ಶನಿಯ ಹಿನ್ನೆಲೆ ಹೆಚ್ಚಾಗಿ ಕತ್ತಲೆಯಾಗಿದೆ. ಶನಿಯು ಗಾಢವಾದ ಕಿತ್ತಳೆ-ಕಂದು ವೃತ್ತದಂತೆ ಕಾಣುತ್ತದೆ (ಎರಡು ಚಿತ್ರಗಳನ್ನೂ ಗಮನಿಸಿ) , ಹಲವಾರು ಪ್ರಜ್ವಲಿಸುವ ಪ್ರಕಾಶಮಾನವಾದ, ದಪ್ಪವಾದ, ಸಮತಲವಾದ ಬಿಳಿಯ ಉಂಗುರಗಳಿಂದ ಆವೃತವಾಗಿದೆ' ಎಂದು ವಿವರಣೆ ನೀಡಿದೆ.

ಶತಕೋಟಿ ವರ್ಷದ ಹಿಂದಿನ ಗೆಲಾಕ್ಸಿ ಚಿತ್ರ ತೆಗೆದ James Webb Space Telescope!

20 ಗಂಟೆಗಳ ಶನಿ ವೀಕ್ಷಣಾ ಕಾರ್ಯಾಚರಣೆಯಲ್ಲಿ ಜೇಮ್ಸ್ ವೆಬ್ ದೂರದರ್ಶಕದಿಂದ ಚಿತ್ರವನ್ನು ತೆಗೆಯಲಾಗಿದೆ. ಗ್ರಹ ಮತ್ತು ಅದರ ಉಂಗುರಗಳನ್ನು ಸುತ್ತುವ ಮಸುಕಾದ ಚಂದ್ರಗಳನ್ನು ಗುರುತಿಸುವ ದೂರದರ್ಶಕದ ಸಾಮರ್ಥ್ಯವನ್ನು ಪರೀಕ್ಷಿಸಲು ಶನಿಯ ಹಲವಾರು ದೀರ್ಘವಾದ ಮಾನ್ಯತೆಗಳನ್ನು ಪ್ರೋಗ್ರಾಂನಲ್ಲಿ ಸೇರಿಸಲಾಗಿದೆ. "ಯಾವುದೇ ಹೊಸದಾಗಿ ಪತ್ತೆಯಾದ ಚಂದ್ರಗಳು ಶನಿಯ ಇತಿಹಾಸ ಮತ್ತು ಪ್ರಸ್ತುತ ವ್ಯವಸ್ಥೆಗಳ ಸಂಪೂರ್ಣ ಚಿತ್ರವನ್ನು ನಿರ್ಮಿಸಲು ಸಹಾಯ ಮಾಡಬಹುದು" ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಚಿತ್ರವು ಶನಿಯ 145 ತಿಳಿದಿರುವ ಚಂದ್ರಗಳಲ್ಲಿ ಮೂರು ಎನ್ಸೆಲಾಡಸ್, ಡಿಯೋನ್ ಮತ್ತು ಟೆಥಿಸ್ ಚಿತ್ರಗನ್ನೂ ತೆಗೆದಿದೆ.

ಇದು ಚಂದ್ರನ ಈವರೆಗಿನ ಅತ್ಯಂತ ಸ್ಪಷ್ಟ ಚಿತ್ರ, ಒಂದು ಚಿತ್ರಕ್ಕಾಗಿ ಎರಡು ವರ್ಷ ಶ್ರಮ!

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ