ಮೌನ ಯಾವತ್ತು ಶಾಂತಿ ನೀಡಲ್ಲ; ಪತ್ನಿ ಅರೋಪಗಳಿಗೆ ಪ್ರತಿಕ್ರಿಯಿಸಿದ ನವಾಜುದ್ದೀನ್ ಬೆಂಬಲಕ್ಕೆ ಕಂಗನಾ

By Shruthi Krishna  |  First Published Mar 7, 2023, 5:42 PM IST

ಪತ್ನಿ ಆಲಿಯಾ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ನವಾಜುದ್ದೀನ್ ಸಿದ್ದಿಕಿ ಪರ ಕಂಗನಾ ಬ್ಯಾಟ್ ಬೀಸಿದ್ದು ಮೌನ ಯಾವಾಗಲೂ ಶಾಂತಿ ನೀಡಲ್ಲ ಎಂದು ಹೇಳಿದ್ದಾರೆ. 


ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ದಾಂಪತ್ಯ ಕಲಹ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದೆ. ನವಾಜುದ್ದೀನ್ ಪತ್ನಿ ಅಲಿಯಾ ಸಾಲು ಸಾಲು ಅರೋಪಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಆಲಿಯಾ ಬೀದಿಯಲ್ಲಿ ನಿಂತು ವಿಡಿಯೋ ಮೂಲಕ ತನ್ನ ಗೋಳನ್ನು ಹೇಳಿಕೊಂಡಿದ್ದರು. ನವಾಜುದ್ದೀನ್ ಕುಟುಂಬ ತನ್ನ ಮತ್ತು ಮಕ್ಕಳನ್ನು ಹೊರಹಾಕಿದ್ದಾನೆ, ಮಕ್ಕಳು ಬೀದಿಗೆ ಬಂದಿದ್ದಾರೆ ಎಂದು ಪತ್ನಿ ಅಲಿಯಾ ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದರು. ಪತಿ  ಮತ್ತು ಅವರ ಕುಟುಂಬದ ವಿರುದ್ಧ ಆಲಿಯಾ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಇಷ್ಟು ದಿನ ಸೈಲೆಂಟ್ ಆಗಿದ್ದ ನಟ ನವಾಜುದ್ದೀನ್ ಇದೀಗ ಮೌನ ಮುರಿದಿದ್ದಾರೆ. ತನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನವಾಜುದ್ದೀನ್ ದಾಂಪತ್ಯ ಕಲಹದ ಬಗ್ಗೆ ಈಗ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ. 

ನಟಿ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, 'ನವಾಜುದ್ದೀನ್ ಸಿದ್ದಿಕಿ ಸಾಬ್ ಇದು ತುಂಬಾ ಅವಶ್ಯಕವಾಗಿತ್ತು. ಮೌನ ಯಾವಾಗಲೂ ನಮಗೆ ಶಾಂತಿ ನೀಡುವುದಿಲ್ಲ...ನೀವು ಈ ಹೇಳಿಕೆ ನೀಡಿರುವುದು ನನಗೆ ಖುಷಿ ತಂದಿದೆ' ಎಂದು ಹೇಳಿದ್ದಾರೆ. 

Queen ಚಿತ್ರಕ್ಕೆ 9 ವರ್ಷ: ಸೂಪರ್ ಹಿಟ್ ಸಿನಿಮಾ ಒಪ್ಪಿಕೊಂಡ ಅಸಲಿ ಕಾರಣ ಬಹಿರಂಗ ಪಡಿಸಿದ ನಟಿ ಕಂಗನಾ

Tap to resize

Latest Videos

undefined

ನವಾಜುದ್ದೀನ್ ಸಿದ್ದಕಿ ಹೇಳಿಕೆ 

ಇದು ಆರೋಪವಲ್ಲ, ತನ್ನ ಭಾವನೆಗಳು ಎಂದಿರುವ ನಟ ನವಾಜುದ್ದೀನ್, ಇನ್ಸ್ಟಾಗ್ರಾಮ್ ನಲ್ಲಿ ದೀರ್ಘವಾದ ಪೋಸ್ಟ್ ಹಾಕಿದ್ದಾರೆ. 'ನನ್ನ ಮೌನದಿಂದ ನಾನು ಎಲ್ಲಾ ಕಡೆ ವ್ಯಕ್ತಿ ಎಂದು ಬಿಂಬಿತವಾಗುತ್ತಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು, ಪ್ರೆಸ್ ಮತ್ತು ಕೆಲವು ಜನರು ಈ ಏಕಪಕ್ಷೀಯ ಮತ್ತು ತಿರುಚಿದ ವೀಡಿಯೊಗಳನ್ನು ನೋಡಿ ಎಲ್ಲಾ ಆನಂದಿಸುತ್ತಿದ್ದಾರೆ. ಆದರೆ ಇಲ್ಲಿ ನಾನು ಕೆಲವು ಅಂಶಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಮೊದಲನೆಯದಾಗಿ, ನಾನು ಮತ್ತು ಆಲಿಯಾ ಹಲವಾರು ವರ್ಷಗಳಿಂದ ಒಟ್ಟಿಗೆ ಇಲ್ಲ, ನಾವು ಈಗಾಗಲೇ ವಿಚ್ಛೇದನ ಪಡೆದಿದ್ದೇವೆ. ಆದರೆ ನಾವು ಖಂಡಿತವಾಗಿಯೂ ನಮ್ಮ ಮಕ್ಕಳಿಗೆ ಮಾತ್ರ ತಿಳುವಳಿಕೆಯನ್ನು ಹೊಂದಿದ್ದೇವೆ. ಯಾರಿಗಾದರೂ ತಿಳಿದಿದೆಯೇ, ನನ್ನ ಮಕ್ಕಳು ಭಾರತದಲ್ಲೇ ಉಳಿದುಕೊಂಡಿದ್ದಾರೆ ಏಕೆ ಎಂದು 45 ದಿನಗಳಿಂದ ಶಾಲೆಗೆ ಹೋಗುತ್ತಿಲ್ಲ. ಬಹಳ ಸಮಯದಿಂದ ಗೈರುಹಾಜರಾಗಿದ್ದಾರೆ ಎಂದು ಪ್ರತಿದಿನ ಪತ್ರಗಳನ್ನು ಕಳುಹಿಸುತ್ತಿದೆ. ನನ್ನ ಮಕ್ಕಳನ್ನು ಕಳೆದ 45 ದಿನಗಳಿಂದ ಒತ್ತೆಯಾಳುಗಳನ್ನಾಗಿ ಮಾಡಲಾಗಿದೆ ಮತ್ತು ದುಬೈನಲ್ಲಿ ಅವರ ಶಾಲೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ' ಎಂದು ಬರೆದುಕೊಂಡಿದ್ದರು. 

ನನ್ನ ಮತ್ತು ಮಕ್ಕಳನ್ನು ಬೀದಿಗೆ ತಳ್ಳಿದ, ಮಗಳು ಅಳುತ್ತಿದ್ದಾಳೆ; ಖ್ಯಾತ ನಟನ ವಿರುದ್ಧ ಪತ್ನಿ ಕಿಡಿ

'ದುಬೈಗೆ ತೆರಳುವ ಮೊದಲು ಆಕೆಗೆ ಕಳೆದ 2 ವರ್ಷಗಳಿಂದ ತಿಂಗಳಿಗೆ ಸರಾಸರಿ 10 ಲಕ್ಷ ಮತ್ತು ತಿಂಗಳಿಗೆ 5-7 ಲಕ್ಷ ನೀಡಿದ್ದೀನಿ. ನಾನು ಅವಳ 3 ಚಿತ್ರಗಳಿಗೆ ನನಗೆ ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡಿದ್ದೇನೆ, ಅವಳ ಆದಾಯದ ಮಾರ್ಗವನ್ನು ಹೊಂದಿಸಲು ಸಹಾಯ ಮಾಡುತ್ತೇನೆ, ಏಕೆಂದರೆ ಅವಳು ನನ್ನ ಮಕ್ಕಳ ತಾಯಿ. ನನ್ನ ಮಕ್ಕಳಿಗಾಗಿ ಆಕೆಗೆ ಐಷಾರಾಮಿ ಕಾರುಗಳನ್ನು ನೀಡಲಾಯಿತು, ಆದರೆ ಅವಳು ಅವುಗಳನ್ನು ಮಾರಿ ಹಣವನ್ನು ತಾನೇ ಖರ್ಚು ಮಾಡಿದಳು. ನಾನು ನನ್ನ ಮಕ್ಕಳಿಗಾಗಿ ಮುಂಬೈನ ವರ್ಸೋವಾದಲ್ಲಿ  ಅಪಾರ್ಟ್ಮೆಂಟ್ ಅನ್ನು ಸಹ ಖರೀದಿಸಿದೆ. ನನ್ನ ಮಕ್ಕಳು ಚಿಕ್ಕವರಾಗಿರುವುದರಿಂದ ಆಲಿಯಾಳನ್ನು ಆ ಅಪಾರ್ಟ್‌ಮೆಂಟ್‌ನ ಸಹ-ಮಾಲೀಕರನ್ನಾಗಿ ಮಾಡಲಾಗಿದೆ. ನಾನು ನನ್ನ ಮಕ್ಕಳಿಗೆ ದುಬೈನಲ್ಲಿ ಬಾಡಿಗೆ ಅಪಾರ್ಟ್ಮೆಂಟ್ ನೀಡಿದ್ದೇನೆ, ಅಲ್ಲಿ ಅವಳು ಆರಾಮವಾಗಿ ವಾಸಿಸುತ್ತಿದ್ದಳು. ಆಕೆಗೆ ಹೆಚ್ಚಿನ ಹಣ ಮಾತ್ರ ಬೇಕು ಮತ್ತು ಆದ್ದರಿಂದ ನನ್ನ ಮತ್ತು ನನ್ನ ತಾಯಿಯ ಮೇಲೆ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದಾಳೆ ಇದೇ ಅವಳ ದಿನಚರಿಯಾಗಿದೆ' ಎಂದು ಬರೆದುಕೊಂಡಿದ್ದರು. 

click me!