ಇಂದು ಉಪಗ್ರಹ ಬೀಳಿಸುವ ಕಸರತ್ತು: ಫೆಸಿಫಿಕ್‌ ಸಾಗರದಲ್ಲಿ ಪತನಕ್ಕೆ ಇಸ್ರೋ ಭಾರಿ ಸಾಹಸ

By Kannadaprabha News  |  First Published Mar 7, 2023, 9:26 AM IST

1 ಟನ್‌ ತೂಕದ ಉಪಗ್ರಹ ಬೀಳಿಸಲು ಇಂದು ಇಸ್ರೋ ಸಾಹಸ ನಡೆಸಲಿದೆ. ನಿರುಪಯುಕ್ತ ಉಪಗ್ರಹದಲ್ಲಿ 125 ಕೇಜಿ ಇಂಧನವಿದ್ದು, ಪೆಸಿಫಿಕ್‌ ಸಾಗರದಲ್ಲಿ ಇದನ್ನು ಪತನಗೊಳಿಸಲು ಕಸರತ್ತು ನಡೆಯುತ್ತಿದೆ.


ಬೆಂಗಳೂರು (ಮಾರ್ಚ್‌ 7, 2023): ಅಂತರಿಕ್ಷದಲ್ಲಿ ನಿರುಪಯುಕ್ತವಾಗಿರುವ ಉಪಗ್ರಹವೊಂದನ್ನು ಮರಳಿ ಭೂ ವಾತಾವರಣಕ್ಕೆ ತಂದು ಸಾಗರದಲ್ಲಿ ಬೀಳಿಸುವ ಅತ್ಯಂತ ಸವಾಲಿನ ಪ್ರಯೋಗವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ನಡೆಸಲಿದೆ.

ಉಷ್ಣ ವಲಯದ ವಾತಾವರಣ ಹಾಗೂ ಹವಾಮಾನ ಅಧ್ಯಯನ ನಡೆಸಲು ಫ್ರಾನ್ಸ್‌ನ ಬಾಹ್ಯಾಕಾಶ ಸಂಸ್ಥೆ ಸಿಎನ್‌ಇಎಸ್‌ (CNES) ಜತೆಗೂಡಿ ಇಸ್ರೋ (ISRO) 2011ರ ಅಕ್ಟೋಬರ್‌ 12ರಂದು ಮೇಘ ಟ್ರಾಪಿಕ್ಸ್‌-1  (Megha-Tropiques-1) (MT1) ಎಂಬ ಕೆಳ ಭೂಕಕ್ಷೆ ಉಪಗ್ರಹವನ್ನು ಉಡಾವಣೆ ಮಾಡಿತ್ತು. ಅದರ ಜೀವಿತಾವಧಿ ಮೂರು ವರ್ಷಗಳಾಗಿತ್ತಾದರೂ, ಉಪಗ್ರಹ (Satellite) ಒಂದು ದಶಕ ಸೇವೆ ಸಲ್ಲಿಸಿದೆ. ಇದೀಗ ನಿರುಪಯುಕ್ತವಾಗಿರುವ 1 ಟನ್‌ ತೂಕದ ಉಪಗ್ರಹವನ್ನು ಮರಳಿ ಭೂಮಿಗೆ ತರಲು ಇಸ್ರೋ ಉದ್ದೇಶಿಸಿದೆ.

Tap to resize

Latest Videos

undefined

ಇದನ್ನು ಓದಿ: ಚಂದ್ರಯಾನ - 3ಗೆ ಬಲ: ಪ್ರಮುಖ ರಾಕೆಟ್ ಎಂಜಿನ್ ಪರೀಕ್ಷೆಯಲ್ಲಿ ISROಗೆ ಯಶಸ್ಸು

ಈ ಉಪಗ್ರಹದಲ್ಲಿ 125 ಕೆಜಿ ಇಂಧನವಿದ್ದು, ಮರಳಿ ಭೂಮಿಗೆ ಬರುವಾಗ ಎಡವಟ್ಟಾದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದಾಗ್ಯೂ ಪೆಸಿಫಿಕ್‌ ಸಾಗರದಲ್ಲಿ (Pacific Ocean) ಜನವಸತಿ ಇಲ್ಲದ ಕಡೆ ಈ ಉಪಗ್ರಹವನ್ನು ಬೀಳಿಸಲು ಇಸ್ರೋ ಸಕಲ ಸಿದ್ಧತೆಗಳನ್ನೂ ಕೈಗೊಂಡಿದೆ.

ಉಪಗ್ರಹದಲ್ಲಿರುವ ಇಂಧನವು ಅದನ್ನು ಭೂ ವಾತಾವರಣಕ್ಕೆ ಮರುಪ್ರವೇಶ ಮಾಡಿಸಿ, ನಿಯಂತ್ರಿತ ರೀತಿಯಲ್ಲಿ ಉದ್ದೇಶಿತ ಸ್ಥಳದಲ್ಲಿ ಬೀಳಿಸಲು ಸಹಕಾರಿಯಾಗಲಿದೆ. ಮಂಗಳವಾರ ಸಂಜೆ 4.30ರಿಂದ ರಾತ್ರಿ 7.30ರವರೆಗೆ ಈ ಕಾರ್ಯಾಚರಣೆಯನ್ನು ನಡೆಸಲು ಇಸ್ರೋ ಉದ್ದೇಶಿಸಿದೆ.

ಇದನ್ನೂ ಓದಿ: ಇಂಚಿಂಚೂ ಭೂಮಿ ಜಾಲಾಡುವ ‘ನಿಸಾರ್‌’ ಉಪಗ್ರಹ ಸಿದ್ಧ: ಇಸ್ರೋ ಸಾಧನೆ

click me!