ಇಸ್ರೋದ 100ನೇ GSLV F15 ಉಪಗ್ರಹ ಉಡಾವಣೆ ಯಶಸ್ವಿ, ಐತಿಹಾಸಿಕ ಸಾಧನೆಗೆ ವಿಶ್ವವೇ ಮೆಚ್ಚುಗೆ

Published : Jan 29, 2025, 10:02 AM ISTUpdated : Jan 29, 2025, 10:19 AM IST
ಇಸ್ರೋದ 100ನೇ GSLV F15 ಉಪಗ್ರಹ ಉಡಾವಣೆ ಯಶಸ್ವಿ, ಐತಿಹಾಸಿಕ ಸಾಧನೆಗೆ ವಿಶ್ವವೇ ಮೆಚ್ಚುಗೆ

ಸಾರಾಂಶ

1963ರಲ್ಲಿ ಮೊದಲ ಉಪಗ್ರಹ ಉಡಾಯಿಸಿ ಅಂಬೆಗಾಲಿಟ್ಟ ಭಾರತದ ಇಸ್ರೋ ಇಂದು 100ನೇ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.  GSLV F15 ಉಪಗ್ರಹವನ್ನು ಕಕ್ಷೆಗೆ ಸೇರಿಸಿ ಇತಿಹಾಸ ರಚಿಸಿದೆ. 

ಶ್ರೀಹರಿಕೋಟಾ(ಜ.29) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ತನ್ನ 100ನೇ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇಂದು ಬೆಳಗ್ಗೆ ಬೆಳಿಗ್ಗೆ 6:23ಕ್ಕೆ GSLV-F15 ರಾಕೆಟ್ ಮೂಲಕ NVS-02 ಉಪಗ್ರಹವನ್ನು ಉಡಾಯಿಸಲಾಗಿದೆ. ಸ್ವದೇಶಿ ನಿರ್ಮಿತ ಕ್ರಯೋಜನಿಕ್‌ ಎಂಜಿನ್‌ ಹೊಂದಿರುವ ಜಿಯೋಸಿಂಕ್ರೋನಸ್‌ ಉಪಗ್ರಹ ಉಡ್ಡಯನ ವಾಹನ(ಜಿಎಸ್‌ಎಲ್‌ವಿ)ನ 17ನೇ ಉಡ್ಡಯನ ಇದಾಗಿದೆ. ಈ ಉಪಗ್ರಹವು ನ್ಯಾವಿಗೇಷನ್‌ ಸೆಟಲೈಟ್‌ ಎನ್‌ವಿಎಸ್‌-02(ಎರಡನೇ ತಲೆಮಾರಿನ ಎನ್‌ವಿಎಸ್‌ ಉಪಗ್ರಹ)ವನ್ನು ನಭಕ್ಕೆ ಹೊತ್ತೊಯ್ದಿದೆ. 

ಈ ಎನ್‌ವಿಎಸ್‌ ಸ್ಯಾಟಲೈಟ್‌ ಭಾರತದ ನ್ಯಾವಿಗೇಷನ್‌(ಸ್ವದೇಶಿ ಜಿಪಿಎಸ್‌) ಉಪಗ್ರಹಗಳ ಜಾಲದ ಎರಡನೇ ತಲೆಮಾರಿನ ಉಪಗ್ರಹವಾಗಿದೆ. ಇದು ಭಾರತೀಯ ಉಪಖಂಡ(ಜತೆಗೆ ಅದರಾಚೆಗಿನ 1500 ಕಿ.ಮೀ. ದೂರದವರೆಗೆ)ದ ಬಳಕೆದಾರರಿಗೆ ನಿಖರ ಸಮಯ, ಸ್ಥಾನ ಮತ್ತು ವೇಗವನ್ನು ನೀಡುವ ಗುರಿ ಹೊಂದಿದೆ.  ಈ ಹಿಂದೆ ಜಿಎಸ್‌ಎಲ್‌ವಿ-ಎಫ್‌12 ರಾಕೆಟ್‌ ಎನ್‌ವಿಎಸ್‌-01 ಉಪಗ್ರಹವನ್ನು ಮೇ 29, 2023ರಂದು ಯಶಸ್ವಿಯಾಗಿ ಗಗನಕ್ಕೆ ಕೂರಿಸಿತ್ತು. ಇದೀಗ 50.9 ಮೀಟರ್‌ ಎತ್ತರದ ಜಿಎಸ್‌ಎಲ್‌ವಿ-ಎಫ್‌15 ರಾಕೆಟ್‌ ಎರಡನೇ ತಲೆಮಾರಿನ ಎನ್‌ವಿಎಸ್‌ ಉಪಗ್ರಹದೊಂದಿಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. 

ಇಸ್ರೋ ಉಡಾವಣೆಗೆ ಈಗ ಶತಕ ಸಂಭ್ರಮ: ಗಿರೀಶ್‌ ಲಿಂಗಣ್ಣ

ಈ ಎನ್‌ವಿಎಸ್‌-02 ಉಪಗ್ರಹವನ್ನು ಯು.ಆರ್‌.ಸ್ಯಾಟಲೈಟ್‌ ಸೆಂಟರ್‌ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದೆ. ಈ ಉಪಗ್ರಹವು 2,250 ಕೆ.ಜಿ.ಭಾರವಿದ್ದು, ಎಲ್‌1, ಎಲ್‌5 ನ್ಯಾವಿಗೇಷನ್‌ ಪೇ ಲೋಡ್‌ ಮತ್ತು ಸಿ ಬ್ಯಾಂಡ್‌ ಜೊತೆಗೆ ಹೆಚ್ಚುವರಿಯಾಗಿ ಎಸ್‌ ಬ್ಯಾಂಡ್‌ಗಳನ್ನು ಹೊಂದಿದೆ. ಈ ಉಪಗ್ರಹವು ಭೂಮಿ, ವಾಯು ಮತ್ತು ಸಾಗರ ಸಂಚಾರ, ಕೃಷಿ, ನೌಕೆಗಳ ನಿರ್ವಹಣೆ, ಮೊಬೈಲ್‌ ಲೊಕೇಷನ್‌ ಆಧಾರಿತ ಸೇವೆಗಳು, ಸ್ಯಾಟಲೈಟ್‌ಗಳ ಕಕ್ಷೆಯ ನಿರ್ಧಾರ, ಇಂಟರ್ನೆಟ್‌ ಆಫ್‌ ಥಿಂಗ್ಸ್‌((IoT)) ಆಧಾರಿತ ಅಪ್ಲಿಕೇಷನ್‌ಗಳು, ತುರ್ತು ಮತ್ತು ಸಮಯಾಧಾರಿತ ಸೇವೆಗಳಿಗೆ ನೆರವು ನೀಡಲಿದೆ.
 
ಭಾರತೀಯ ಪ್ರಾದೇಶಿಕ ಸಂಚರಣೆ ಉಪಗ್ರಹ ವ್ಯವಸ್ಥೆಯ (IRNSS) ಉಪಗ್ರಹ ತಾರಾಮಂಡಲವು ಒಟ್ಟು 7 ಉಪಗ್ರಹಗಳನ್ನು ಹೊಂದಿರುತ್ತದೆ. 100ನೇ ಉಡಾವಣೆಯೊಂದಿಗೆ, ಭಾರತವು ಈಗ 7 ರಲ್ಲಿ 5 ಅನ್ನು ಬಾಹ್ಯಾಕಾಶದಲ್ಲಿ ಹೊಂದಿದೆ. ನ್ಯಾವಿಗೇಷನ್ ವಿಥ್ ಇಂಡಿಯನ್ ಕಾನ್ಸ್ಟೆಲ್ಲೇಷನ್ (NavIC) ಭಾರತದ ಸ್ವತಂತ್ರ ಪ್ರಾದೇಶಿಕ ಸಂಚರಣೆ ಉಪಗ್ರಹ ವ್ಯವಸ್ಥೆಯಾಗಿದ್ದು, ಭಾರತದಲ್ಲಿ ಮತ್ತು ಭಾರತೀಯ ಭೂಪ್ರದೇಶದಿಂದ ಸುಮಾರು 1500 ಕಿ.ಮೀ.ವರೆಗೆ ವಿಸ್ತರಿಸಿರುವ ಪ್ರದೇಶದಲ್ಲಿ ಬಳಕೆದಾರರಿಗೆ ನಿಖರವಾದ ಸ್ಥಾನ, ವೇಗ ಮತ್ತು ಸಮಯ (PVT) ಸೇವೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. 

ಸಮೀಪಿಸಿದೆಯಾ ಭೂಮಿಯ ಅಂತ್ಯ? ಕಡಿಮೆಯಾಗ್ತಿದೆ ತಿರುಗುವಿಕೆ ವೇಗ!
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ