ಕ್ಷುದ್ರಗ್ರಹ ಪತ್ತೆ ಹಚ್ಚಿದ 14 ವರ್ಷದ ನೋಯ್ಡಾ ವಿದ್ಯಾರ್ಥಿ,ಬಾಲಕನ ಹೆಸರಿಡಲು ನಾಸಾ ಸಿದ್ಧತೆ

Published : Jan 28, 2025, 11:00 AM IST
ಕ್ಷುದ್ರಗ್ರಹ ಪತ್ತೆ ಹಚ್ಚಿದ 14 ವರ್ಷದ ನೋಯ್ಡಾ ವಿದ್ಯಾರ್ಥಿ,ಬಾಲಕನ ಹೆಸರಿಡಲು ನಾಸಾ ಸಿದ್ಧತೆ

ಸಾರಾಂಶ

ನಾಸಾ ಪ್ರಾಜೆಕ್ಟ್ ಮೂಲಕ 14 ವರ್ಷದ ವಿದ್ಯಾರ್ಥಿ ಗುರು ಹಾಗೂ ಮಂಗಳ ಗ್ರಹಗಳ ನಡುವೆ ಇರುವ ಕ್ಷುದ್ರಗ್ರಹವನ್ನು ಪತ್ತೆ ಹಚ್ಚಿದ್ದಾನೆ. ಇದೀಗ ನಾಸಾ ಈ ಗ್ರಹಕ್ಕೆ ವಿದ್ಯಾರ್ಥಿಯ ಹೆಸರಿಡಲು ಮುಂದಾಗಿದೆ.

ನೋಯ್ಡಾ(ಜ.28) ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಇಸ್ರೋ ಅದ್ವಿತೀಯ ಸಾಧನೆ ಮೂಲಕ ಮುನ್ನುಗ್ಗುತ್ತಿದೆ. ಉಪಗ್ರಹಗಳ ಯಶಸ್ವಿ ಉಡಾವಣೆ, ಚಂದ್ರನ ಮೇಲೆ ಅಧ್ಯಯನ, ಸೂರ್ಯನ ಅಧ್ಯಯನ ಸೇರಿದಂತೆ ಹಲವು ಯೋಜನೆಗಳ ಮೂಲಕ ಇಸ್ರೋ ವಿಶ್ವದಲ್ಲೇ ಗುರುತಿಸಿಕೊಂಡಿದೆ. ಇದೀಗ ನೋಯ್ಡಾದ ಶಿವ್ ನಾಡರ್ ಶಾಲೆಯ 14 ವರ್ಷದ ವಿದ್ಯಾರ್ಥಿ ಐತಿಹಾಸಿಕ ಸಾಧನೆ ಮಾಡಿದ್ದಾನೆ. ನಾಸಾ ವಿದ್ಯಾರ್ಥಿಗಳ ಪ್ರಾಜೆಕ್ಟ್ ಅಡಿಯಲ್ಲಿ ವಿದ್ಯಾರ್ಥಿ ದಕ್ಷ್ ಮಲಿಕ್ ಕ್ಷುದ್ರಗ್ರಹವನ್ನು ಪತ್ತೆ ಹಚ್ಚಿದ್ದಾನೆ. ಮಂಗಳ ಹಾಗೂ ಗುರು ಗ್ರಹಗಳ ನಡವೆ ಇರುವ ಈ ಸಣ್ಣ ಕ್ಷುದ್ರಗ್ರಹ ಪತ್ತೆ ಹಚ್ಚಿದ್ದಾನೆ. ಇದೀಗ ನಾಸಾ ಈ ಗ್ರಹಕ್ಕೆ ಹೆಸರು ಸೂಚಿಸಲು ವಿದ್ಯಾರ್ಥಿಯಲ್ಲಿ ಸೂಚಿಸಿದೆ. ಶೀಘ್ರದಲ್ಲೇ ನಾಸ ಈ ಹೆಸರು ಬಹಿರಂಗಗೊಳಿಸಲಿದೆ.

9ನೇ ತರಗತಿ ವಿದ್ಯಾರ್ಥಿ ದಕ್ಷ್ ಮಲಿಕ್ ಈ ಸಾಧನೆ ಮಾಡಿದ್ದಾನೆ. ಅಂತಾರಾಷ್ಟ್ರೀಯ ಕ್ಷುದ್ರಗ್ರಹ ಪತ್ತೆ ಯೋಜನೆ(IADP) ಅಡಿಯಲ್ಲಿ ನಾಸಾ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದ ಕೌತುಕ ಪತ್ತೆ ಹಚ್ಚುವ ಮಹತ್ವದ ಅವಕಾಶ ನೀಡಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಗ್ರಹಗಳ ಪತ್ತೆ ಯೋಜನೆ ನೀಡುತ್ತದೆ. ಹೀಗೆ 2022ರಲ್ಲಿ ನಾಸಾದ IADP ಯೋಜನೆಗೆ ಸೇರಿಕೊಂಡ ದಕ್ಷ್ ಮಲಿಕ್ ಹಾಗೂ ಮತ್ತಿಬ್ಬರು ವಿದ್ಯಾರ್ಥಿಗಳು ಈ ಯೋಜನೆಗೆ ಕೈಜೋಡಿಸಿದ್ದಾರೆ. ಈ ಯೋಜನೆ ಅಮೆರಿಕದ ಸ್ಪೇಸ್ ಎಜೆನ್ಸ ಅಸ್ಟ್ರೋನೊಮಿಕಲ್ ಸರ್ಚ್ ಕೊಲಬರೇಶನ್ ಯೋಜನೆಯಡಿ ಮಾಡಲಾಗಿದೆ.

ಆಗಸದಿಂದ ಬಿತ್ತು ದೊಡ್ಡ ಲೋಹದ ಉಂಗುರ, ಗ್ರಾಮಸ್ಥರಲ್ಲಿ ಹೆಚ್ಚಿದ ಏಲಿಯನ್ ಆತಂಕ

ಪ್ರತಿ ವರ್ಷ ಈ ಯೋಜನೆಲ್ಲಿ ಸೇರಿಕೊಂಡು ನಾಸಾ ವಿದ್ಯಾರ್ಥಿಗಳ ಕ್ಷುದ್ರಗ್ರಹ ಪತ್ತೆ ಹಚ್ಚುವ ಯೋಜನೆಯಲ್ಲಿ ಪಾಲ್ಗೊಳ್ಳಲು ಪ್ರತಿ ವರ್, 6000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿದೆ. ಈ ಪೈಕಿ ದಕ್ಷ್ ಮಲಿಕ್ ಮಹತ್ವದ ಸಾಧನೆ ಮಾಡಿದ್ದಾನೆ. ನಾಸಾದ ಅಸ್ಟ್ರಾನಾಮಿಕ್ ವಿಶೇಷ ಆ್ಯಪ್ಲಿಕೇಶನ್ ಬಳಸಿ ಗ್ರಹಗಳ ಪತ್ತೆ ಹಚ್ಚುವ ಕಾರ್ಯ ಆರಂಭಿಸಿದ್ದಾನೆ. ಕಳೆದೊಂದು ವರ್ಷದಿಂದ ಗ್ರಹಗಳ ಪತ್ತ ಹಚ್ಚುವಿಕೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. 

ಸತತ ಅಧ್ಯಯನ, ಸಂಶೋಧನೆಯಲ್ಲಿ ಮಂಗಳ ಹಾಗೂ ಗುರುವಿನ ನಡುವ ಇರುವ ಕ್ಷುದ್ರಗ್ರಹವನ್ನು ದಕ್ಷ್ ಮಲಿಕ್ ಪತ್ತೆ ಹಚ್ಚಿದ್ದಾನೆ. ಬಳಿಕ ಈ  ಕ್ಷುದ್ರಗ್ರಹದ ಕುರಿತು ನಾಸಾ ಅಧಿಕಾರಿಗಲಿಗೆ ಸೂಚಿಸಿದ್ದಾನೆ. ಹೊಸ ಗ್ರಹದ ಫೋಟೋ, ಹಾಗೂ ಗ್ರಾಫ್ ತೆಗೆದು ದಾಖಲೆ ಮಾಡಿಕೊಂಡಿದ್ದಾನೆ. ಇದೀಗ ನಾಸಾ ಅಧಿಕಾರಿಗಳು ಈ ಕ್ಷುದ್ರಗ್ರಹದ ಪರಿಶೀಲನೆ ನಡೆಸಲಿದ್ದಾರೆ. ಸದ್ಯ ಈ ಗ್ರಹಕ್ಕೆ 2023 OG40 ಎಂದು ಹೆಸರಿಡಲಾಗಿದೆ. ನಾಸಾ ಅಧಿಕಾರಿಗಳು ಕ್ಷುದ್ರಗ್ರಹ ಖಚಿತಪಡಿಸಿದ್ದಾರೆ. ಆದರೆ ಸಂಪೂರ್ಣ ವೆರಿಫಿಕೇಶನ್ ಪ್ರಕ್ರಿಯೆಗೆ 4 ರಿಂದ 5 ವರ್ಷಗಳು ಬೇಕು. ಈ ಸುದೀರ್ಘ ಅವಧಿಯಲ್ಲಿ ನಾಸಾ ಹಿರಿಯ ವಿಜ್ಞಾನಿಗಳ ತಂಡ ಈ ಕ್ಷುದ್ರಗ್ರಹ ಕುರಿತು ಅಧ್ಯಯನ ನಡೆಸಲಿದ್ದಾರೆ.  ಇದೀಗ  ವಿದ್ಯಾರ್ಥಿ ದಕ್ಷ್ ಮಲಿಕ್‌ಗೆ ಈ ಗ್ರಹಕ್ಕೆ ಹೆಸರು ಸೂಚಿಸಲು ತಿಳಿಸಿದ್ದಾರೆ. ವಿದ್ಯಾರ್ಥಿ ಸೂಚಿಸುವ ಹೆಸರನ್ನು ಈ ಗ್ರಹಕ್ಕೆ ಇಡಲಾಗುತ್ತದೆ.

ಸಮೀಪಿಸಿದೆಯಾ ಭೂಮಿಯ ಅಂತ್ಯ? ಕಡಿಮೆಯಾಗ್ತಿದೆ ತಿರುಗುವಿಕೆ ವೇಗ!
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ