Aditya-L1 Mission: ನಿಗದಿತ ಕಕ್ಷೆ ಸೇರಿದ ಆದಿತ್ಯ ಎಲ್‌1, ನೌಕೆಯಿಂದ ಬೇರ್ಪಟ್ಟ ಉಪಗ್ರಹ!

By Santosh NaikFirst Published Sep 2, 2023, 1:16 PM IST
Highlights

ಶ್ರೀಹರಿಕೋಟಾದಿಂದ ಉಡಾವಣೆಗೊಂಡ ಅಂದಾಜು 1 ಗಂಟೆಗಳ ಬಳಿಕ ಪಿಎಸ್‌ಎಲ್‌ವಿ ಸಿ57 ರಾಕೆಟ್‌ ಆದಿತ್ಯ ಎಲ್‌1 ನಿಗದಿತ ಕಕ್ಷೆಗೆ ಸೇರ್ಪಡೆಗೊಂಡಿದೆ ಎಂದು ಇಸ್ರೋ ತಿಳಿಸಿದೆ.

ಶ್ರೀಹರಿಕೋಟಾ (ಸೆ.2): ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿದ್ದ ಆದಿತ್ಯ ಎಲ್‌1 ಮಿಷನ್‌ ಯಶಸ್ವಿಯಾಗಿ ನಿಗದಿತ ಕಕ್ಷೆ ಸೇರಿದೆ ಎಂದು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ತಿಳಿಸಿದ್ದಾರೆ. ಶಾರ್‌ನಿಂದ ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ಮೂಲಕ ಉಡಾವಣೆಗೊಂಡಿದ್ದ ಆದಿತ್ಯ ಎಲ್‌1 ಅಂದಾಜು 1 ಗಂಟೆಗಳ ಸುದೀರ್ಘ ಪ್ರಯಾಣದ ಬಳಿಕ ನಿಗದಿತ ಕಕ್ಷೆ ಸೇರಿದೆ. ರಾಕೆಟ್‌ನಿಂದ ಉಪ್ರಹ ಬೇರ್ಪಟ್ಟು ತನ್ನ ನಿಗದಿತ ಪಥದಲ್ಲಿ ಸಾಗಲು ಆರಂಭ ಮಾಡಿದಂತೆ ಮಿಷನ್‌ ಕಂಟ್ರೋಲ್‌ ರೂಮ್‌ನಲ್ಲಿ ಕುಳಿತಿದ್ದ ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌ ಸಂಭ್ರಮಿಸಲು ಆರಂಭ ಮಾಡಿದರು.  'PSLV-C57 ಮೂಲಕ ಆದಿತ್ಯ-L1 ಉಡಾವಣೆ ಯಶಸ್ವಿಯಾಗಿ ನೆರವೇರಿದೆ. ರಾಕೆಟ್‌ ಉಪಗ್ರಹವನ್ನು ನಿಖರವಾಗಿ ಅದರ ಉದ್ದೇಶಿತ ಕಕ್ಷೆಗೆ ಇರಿಸಿದೆ. ಭಾರತದ ಮೊದಲ ಸೌರ ವೀಕ್ಷಣಾಲಯವು ಸೂರ್ಯ-ಭೂಮಿಯ L1 ಪಾಯಿಂಟ್‌ನ ಗಮ್ಯಸ್ಥಾನಕ್ಕೆ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ' ಎಂದು ಇಸ್ರೋ ಕೂಡ ಟ್ವೀಟ್‌ ಮಾಡಿದೆ. ಆದಿತ್ಯ L-1 ರ ಯಶಸ್ವಿ ಉಡಾವಣೆ ಕುರಿತು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಮಾತನಾಡಿದ್ದು "ಆದಿತ್ಯ L1 ಬಾಹ್ಯಾಕಾಶ ನೌಕೆಯನ್ನು ದೀರ್ಘವೃತ್ತದ ಕಕ್ಷೆಯಲ್ಲಿ ಇರಿಸಲಾಗಿದೆ. ಪಿಎಸ್‌ಎಲ್‌ವಿಯಿಂದ ನಿಖರವಾಗಿ ಉದ್ದೇಶಿಸಲಾಗಿದೆ. ಆದಿತ್ಯ ಎಲ್‌1 ಮಿಷನ್‌ಅನ್ನು ಸರಿಯಾದ ಕಕ್ಷೆಯಲ್ಲಿ ಇರಿಸಲು ಪಿಎಸ್‌ಎಲ್‌ವಿ ಭಿನ್ನವಾದ ವಿಧಾನವನ್ನು ಅನುಸರಿಸಿ ಯಶಸ್ವಿಯಾಗಿದ್ದಕ್ಕೆ ಧನ್ಯವಾದ ಹೇಳುತ್ತೇನೆ' ಎಂದು ಹೇಳಿದ್ದಾರೆ.

ಚಂದ್ರಯಾನ-3 ಯಶಸ್ಸಿನ ನಂತರ ಭಾರತ ತನ್ನ ಬಾಹ್ಯಾಕಾಶ ಯಾನವನ್ನು ಮುಂದುವರೆಸಿದೆ. ಭಾರತದ ಮೊದಲ ಸೌರ ಮಿಷನ್, ಆದಿತ್ಯ -L1 ನ ಯಶಸ್ವಿ ಉಡಾವಣೆಗಾಗಿ ಇಸ್ರೋದಲ್ಲಿನ ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಅಭಿನಂದನೆಗಳು. ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಬ್ರಹ್ಮಾಂಡದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ನಮ್ಮ ದಣಿವರಿಯದ ವೈಜ್ಞಾನಿಕ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ. ಆದಿತ್ಯ ಎಲ್‌1 ಈಗಾಗಲೇ ಶಕ್ತಿಯನ್ನು ಉತ್ಪಾದಿಸಲು ಆರಂಭಿಸಿದೆ. ಅದರ ಸೋಲಾರ್‌ ಪ್ಯಾನೆಲ್‌ಗಳನ್ನು ನಿಯೋಜನೆ ಮಾಡಲಾಗಿದೆ. ಸೆಪ್ಟೆಂಬರ್‌ 3 ರಂದು ಬೆಲಗ್ಗೆ 11.45ಕ್ಕೆ ಮೊದಲ ಭೂ ಕಕ್ಷೆ ಏರಿಸುವ ಕಾರ್ಯ ನಡೆಯಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಸೂರ್ಯನ ಅಧ್ಯಯನ ನಡೆಸುವ ಆದಿತ್ಯ ಎಲ್1 ಉಪಗ್ರಹದ ಯಶಸ್ವಿ ಉಡಾವಣೆಗೈದಿರುವ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳಿಗೆ ತುಂಬುಹೃದಯದ ಅಭಿನಂದನೆಗಳು. ಇದರೊಂದಿಗೆ ಸೂರ್ಯನ ಅಧ್ಯಯನ ನಡೆಸುವ ಇಸ್ರೋ ವಿಜ್ಞಾನಿಗಳ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ದೊರೆತಿದ್ದು, ಈ ಯೋಜನೆಯ ಮುಂದಿನ ಎಲ್ಲಾ ಹಂತಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಆದಿತ್ಯ ಎಲ್ -1 ರ ಯಶಸ್ವಿ ಉಡಾವಣೆ ಕುರಿತು ಆದಿತ್ಯ ಎಲ್ -1 ರ ಯೋಜನಾ ನಿರ್ದೇಶಕ ನಿಗರ್ ಶಾಜಿ ಮಾತನಾಡಿದ್ದು "ಇಂದು ಕನಸು ನನಸಾಗಿದೆ. ಆದಿತ್ಯ ಎಲ್ -1 ಅನ್ನು ಪಿಎಸ್ ಎಲ್ ವಿ ಇಂಜೆಕ್ಟ್ ಮಾಡಿರುವುದು ನನಗೆ ತುಂಬಾ ಸಂತೋಷವಾಗಿದೆ. ಆದಿತ್ಯ ಎಲ್ -1 ತನ್ನ 125 ದಿನಗಳ ಸುದೀರ್ಘ ಪ್ರಯಾಣವನ್ನು ಪ್ರಾರಂಭಿಸಿದೆ. ಆದಿತ್ಯ L-1 ಕಾರ್ಯಾರಂಭ ಮಾಡಿದ ನಂತರ, ಅದು ದೇಶಕ್ಕೆ ಮತ್ತು ಜಾಗತಿಕ ವೈಜ್ಞಾನಿಕ ಭ್ರಾತೃತ್ವಕ್ಕೆ ಆಸ್ತಿಯಾಗಲಿದೆ. ಈ ಮಿಷನ್ ಸಾಧ್ಯವಾಗಿಸುವಲ್ಲಿ ಅವರ ಬೆಂಬಲ ಮತ್ತು ಮಾರ್ಗದರ್ಶನಕ್ಕಾಗಿ ನಾನು ಇಡೀ ತಂಡಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ' ಎಂದಿದ್ದಾರೆ.

ಸೂರ್ಯನತ್ತ ಆದಿತ್ಯ L-1 ಉಡಾವಣೆ: ಬೆಂಗಳೂರು ಮೂಲದ IIA ಸಂಸ್ಥೆಯಿಂದ ಪೆಲೋಡ್‌ ತಯಾರಿಕೆ

ಆದಿತ್ಯ ಎಲ್ 1 ಮಿಷನ್‌ನ ಯಶಸ್ವಿ ಉಡಾವಣೆ ಕುರಿತು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಪ್ರತಿಕ್ರಿಯೆ ನೀಡಿದ್ದು "ಇದು ನಿಜಕ್ಕೂ ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ. ಭಾರತೀಯ ವಿಜ್ಞಾನಿಗಳು ದಿನವಿಡೀ ದುಡಿಯುತ್ತಿದ್ದರು, ಶ್ರಮಿಸುತ್ತಿದ್ದರು.ಅದರ ಫಲ ಈಗ ಸಿಕ್ಕಿದೆ. ರಾಷ್ಟ್ರಕ್ಕೆ ಪ್ರತಿಜ್ಞೆಯನ್ನು ಪಡೆದುಕೊಳ್ಳುವ ಕ್ಷಣ. ಆದಿತ್ಯ L1 ನ ಯಶಸ್ವಿ ಉಡಾವಣೆಯು ಸಂಪೂರ್ಣ-ವಿಜ್ಞಾನ ಮತ್ತು ಸಂಪೂರ್ಣ-ರಾಷ್ಟ್ರದ ವಿಧಾನಕ್ಕೆ ಸಾಕ್ಷಿಯಾಗಿದೆ' ಎಂದಿದ್ದಾರೆ.

Breaking: ಭಾರತದ ಹಿರಿಮೆಯನ್ನು ಸೂರ್ಯನ ಎತ್ತರಕ್ಕೆ ಏರಿಸಿದ ಇಸ್ರೋ, ಸೂರ್ಯಯಾನ ಆರಂಭಿಸಿದ ADITYA-L1

click me!