ಸಿಡಿಲು ಬೀಳುವುದನ್ನು ಮೊದಲೇ ಸೂಚಿಸುವ ತಂತ್ರಜ್ಞಾನ ಪತ್ತೆ ಮಾಡಿದ ಇಸ್ರೋ

ಇಸ್ರೋ ಸಿಡಿಲು ಎಲ್ಲಿ ಬೀಳುತ್ತೆ ಅಂತ ಮೊದಲೇ ಕಂಡುಹಿಡಿಯಲು ಹೊಸ ತಂತ್ರಜ್ಞಾನ ಕಂಡುಹಿಡಿದಿದೆ. ಈ ತಂತ್ರಜ್ಞಾನದಿಂದ ಮಳೆಗಾಲದಲ್ಲಿ ಕೃಷಿ ಕೆಲಸ ಮಾಡುವ ಜನರಿಗೆ ಸಿಡಿಲಿನ ಬಗ್ಗೆ ಮೊದಲೇ ಎಚ್ಚರಿಕೆ ನೀಡಬಹುದು.


ಮಳೆಗಾಲದಲ್ಲಿ ಸಿಡಿಲು ಮಿಂಚಿಗೆ ಅನೇಕ ಕೃಷಿಕರು ಬಲಿಯಾಗ್ತಾರೆ.  ಹಠಾತನೇ ಜೋರಾಗಿ ಧೋ ಎಂದು ಸುರಿಯುವ ಮಳೆಯಿಂದ ರಕ್ಷಣೆ ಪಡೆಯುವುದಕ್ಕೆ ಅನೇಕ ರೈತಾಪಿ ಜನರು, ಕುರಿಗಾಹಿಗಳು ಮರದ ಕೆಳಗೆ ಆಶ್ರಯ ಪಡೆಯುತ್ತಾರೆ. ಆದರೆ ಸಿಡಿಲು ಮರಕ್ಕೆ ಬಿದ್ದು, ಅನೇಕ ರೈತರು, ಕುರಿಗಳು ಹಸುಗಳು ಪ್ರಾಣ ಕಳೆದುಕೊಳ್ಳುತ್ತವೆ. ಆದರೆ ಈಗ ಭಾರತೀಯ ದೂರ ಸಂವೇದಿ ಕೇಂದ್ರ(NRSC)ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ಈ ಮಿಂಚು ಬಂದು ಸಿಡಿಲು ಬಡಿಯುವುದನ್ನು ಮೊದಲೇ ಪತ್ತೆ ಮಾಡಲು ಹೊಸ ತಂತ್ರಜ್ಞಾನವೊಂದನ್ನು ಕಂಡು ಹಿಡಿದಿದೆ. ಈ ತಂತ್ರಜ್ಞಾನದಿಂದ ಸಿಡಿಲು ಎಲ್ಲಿ ಬೀಳುವುದು ಎಂಬುದನ್ನು ಮೊದಲೇ ಪತ್ತೆ ಮಾಡಬಹುದು. ಹಾಗೂ ಮಳೆಯ ಸಮಯದಲ್ಲಿ ಕೃಷಿ ಕೆಲಸದಲ್ಲಿ ತೊಡಗಿರುವ ಜನರಿಗೆ ಮೊದಲೇ ಎಚ್ಚರಿಕೆ ನೀಡಿ ಅವರನ್ನು ಸುರಕ್ಷಿತ ಜಾಗಕ್ಕೆ ತೆರಳಲು ಸೂಚಿಸಬಹುದಾಗಿದೆ. 

ಸಿಡಿಲು ಬಡಿಯುವ ಗಂಟೆಗಳ ಮುಂಚೆ ಬರುತ್ತೆ ಅಲರ್ಟ್: 
ಇಸ್ರೋ ಸಿಡಿಲು ಬೀಳೋದನ್ನ ಗಂಟೆಗಳ ಮೊದಲೇ ಹೇಳೋಕೆ ಒಂದು ಟೆಕ್ನಾಲಜಿ ಕಂಡು ಹಿಡಿದಿದೆ.  ಇಸ್ರೋ ವಿಜ್ಞಾನಿಗಳು ಇನ್ಸಾಟ್-3D ಸ್ಯಾಟಲೈಟ್​ನಿಂದ ಬಂದ ಡೇಟಾ (ಭಾರತದ ಭೂಸ್ಥಿರ ಉಪಗ್ರಹಗಳ ದತ್ತಾಂಶ) ಬಳಸಿಕೊಂಡು ಸಿಡಿಲು ಬಡಿಯುವ ಮೊದಲೇ ಮುನ್ಸೂಚನೆ ನೀಡಬಹುದಾಗಿದೆ. ಉಪಗೃಹದಲ್ಲಿ 'ಔಟ್​ಗೋಯಿಂಗ್ ಲಾಂಗ್​ವೇವ್ ರೇಡಿಯೇಷನ್' (OLR) ಕಡಿಮೆ ಇದ್ರೆ, ಸಿಡಿಲು ಬೀಳೋ ಚಾನ್ಸ್ ಜಾಸ್ತಿ ಇರುತ್ತೆ ಎಂದು ಅರ್ಥ. ಈ ಹೊಸ ಟೆಕ್ನಾಲಜಿಯಿಂದ ವಿಜ್ಞಾನಿಗಳಿಗೆ ಎರಡೂವರೆ ಗಂಟೆ ಮುಂಚೆ ಸಿಡಿಲು ಬೀಳುವ ಬಗ್ಗೆ ಮುನ್ಸೂಚನೆ ಸಿಗುವುದು. ಇದರಿಂದ ಇಸ್ರೋ ಟೆಕ್ನಾಲಜಿ ಡಿಸಾಸ್ಟರ್ ಮ್ಯಾನೇಜ್ಮೆಂಟ್​ಗೆ ತುಂಬಾ ಸಹಾಯ ಆಗುವುದರ ಜೊತೆಗೆ ಜನರ  ಪ್ರಾಣವನ್ನು ಉಳಿಸಬಹುದಾಗಿದೆ. ಇದು ಅತೀ ಹೆಚ್ಚು ಸಿಡಿಲಿನಿಂದ ಬಾಧಿತವಾದ ಪ್ರದೇಶಗಳಲ್ಲಿ ಜೀವ ರಕ್ಷಣೆಗೆ ಪ್ರಮುಖ ಮೈಲಿಗಲ್ಲಾಗುವ ಸಾಧ್ಯತೆ ಇದೆ ಎಂದು ಇಸ್ರೋ ಹೇಳಿದೆ.

Latest Videos

ಈ ತಂತ್ರಜ್ಞಾನದಿಂದ ಮತ್ತಷ್ಟು ನಿಖರ ಮಾಹಿತಿ ಪಡೆಯಲು ವಿಜ್ಞಾನಿಗಳು ಭೂಮಿ ಮೇಲ್ಮೈ ಟೆಂಪರೇಚರ್ (LST) ಮತ್ತೆ ಗಾಳಿಗೆ ಸಂಬಂಧಪಟ್ಟ ಡೇಟಾ ಕೂಡ ಸೇರಿಸಿದ್ದಾರೆ. ಇದರಿಂದ ಹವಾಮಾನ ಇಲಾಖೆ ಎರಡೂವರೆ ಗಂಟೆ ಮೊದಲು ಸಿಡಿಲು ಎಲ್ಲಿ ಬೀಳುತ್ತೆ ಅಂತ ಹೇಳಬಹುದಾಗಿದೆಯಂತೆ. 

ಇಸ್ರೋದಿಂದ ಮತ್ತೊಂದು ಮೈಲಿಗಲ್ಲು, ಕೆರೋಸಿನ್‌ ಎಂಜಿನ್ ಅಭಿವೃದ್ಧಿ ಯಶಸ್ವಿ

ಡಿಆರ್‌ಡಿಒ ಮತ್ತು ನೌಕಾಪಡೆಯಿಂದ VLSRSAM ಪರೀಕ್ಷೆ ಯಶಸ್ವಿ

tags
click me!