ಇಸ್ರೋದಿಂದ ಮತ್ತೊಂದು ಮೈಲಿಗಲ್ಲು, ಕೆರೋಸಿನ್‌ ಎಂಜಿನ್ ಅಭಿವೃದ್ಧಿ ಯಶಸ್ವಿ

ಸೆಮಿ-ಕ್ರಯೋಜೆನಿಕ್ ಎಂಜಿನ್‌ ಅನ್ನು ಭವಿಷ್ಯದ ಉಡಾವಣಾ ವಾಹನಗಳ ಪೇಲೋಡ್‌ಗಳನ್ನು ಉತ್ತಮಗೊಳಿಸಲು ಮತ್ತು ಬೂಸ್ಟರ್ ಹಂತಗಳಿಗೆ ಶಕ್ತಿ ತುಂಬಲು ಬಳಸಲಾಗುತ್ತದೆ.


ಬೆಂಗಳೂರು(ಮಾ.30) ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮಹತ್ವದ ಸಾಧನೆಯೊಂದನ್ನು ಮಾಡಿದೆ. ಉಡಾವಣಾ ವಾಹನವಾದ ಮಾರ್ಕ್-3ರ ಬೂಸ್ಟರ್ ಹಂತಕ್ಕೆ ಶಕ್ತಿ ತುಂಬಲು ದ್ರವರೂಪದ ಆಮ್ಲಜನಕ ಅಥವಾ ಕೆರೋಸಿನ್‌ ಬಳಸುವ ಸೆಮಿ-ಕ್ರಯೋಜೆನಿಕ್ ಎಂಜಿನ್‌ (ಕೆರೋಸಿನ್‌ ಎಂಜಿನ್‌) ಅಭಿವೃದ್ಧಿಪಡಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.

ಇದರ ಪರೀಕ್ಷೆಯನ್ನು ಶುಕ್ರವಾರ ನಡೆಸಲಾಗಿದ್ದು, ಈ ವೇಳೆ 2.5 ಸೆಕೆಂಡುಗಳ ಕಾಲ ಸುಗಮ ದಹನ ಮತ್ತು ಬೂಸ್ಟ್‌ಸ್ಟ್ರಾಪ್ ಮೋಡ್ ಕಾರ್ಯಾಚರಣೆ(ಬಾಹ್ಯ ಶಕ್ತಿಗಳ ಸಹಾಯವಿಲ್ಲದೆ ದಹನ ಮುಂದುವರೆಸುವುದು ಮತ್ತು ಅದಕ್ಕಾಗಿ ತನ್ನ ಆಂತರಿಕ ಒತ್ತಡ, ಶಕ್ತಿ ಬಳಸುವುದು)ಯನ್ನು ಎಂಜಿನ್‌ ಪ್ರದರ್ಶಿಸಿರುವುದಾಗಿ ಇಸ್ರೋ ತಿಳಿಸಿದೆ.

Latest Videos

ಡಿಆರ್‌ಡಿಒ ಮತ್ತು ನೌಕಾಪಡೆಯಿಂದ VLSRSAM ಪರೀಕ್ಷೆ ಯಶಸ್ವಿ

ಈ ಮೂಲಕ ಪ್ರೀ-ಬರ್ನರ್‌, ಟರ್ಬೋ ಪಂಪ್‌, ಆರಂಭಿಕ ವ್ಯವಸ್ಥೆ ಮತ್ತು ನಿಯಂತ್ರಣ ಉಪಕರಣಗಳಂತಹ ನಿರ್ಣಾಯಕ ಉಪವ್ಯವಸ್ಥೆಯ ಸಮಗ್ರ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗಿದೆ. ಈ ಸಂಬಂಧ ಇನ್ನೂ ಅನೇಕ ಪರೀಕ್ಷೆಗಳು ನಡೆಯಲಿವೆ.

2 ಸಾವಿರ ಕಿಲೋನ್ಯೂಟನ್‌ನಷ್ಟು ಥ್ರಸ್ಟ್‌(ಮುಂದೆ ಚಲಿಸಲು ಅಗತ್ಯವಾದ ಶಕ್ತಿ) ನೀಡುವ ಸೆಮಿ-ಕ್ರಯೋಜೆನಿಕ್ ಎಂಜಿನ್‌ ಅನ್ನು ಭವಿಷ್ಯದ ಉಡಾವಣಾ ವಾಹನಗಳ ಪೇಲೋಡ್‌ಗಳನ್ನು ಉತ್ತಮಗೊಳಿಸಲು ಮತ್ತು ಬೂಸ್ಟರ್ ಹಂತಗಳಿಗೆ ಶಕ್ತಿ ತುಂಬಲು ಬಳಸಲಾಗುತ್ತದೆ. ಇದರಿಂದ ಪೇಲೋಡ್‌ನ ಸಾಮರ್ಥ್ಯ 4 ಟನ್‌ನಿಂದ 5 ಟನ್‌ಗೆ ಹೆಚ್ಚಳವಾಗಲಿದೆ.

ಸೆಮಿ-ಕ್ರಯೋಜೆನಿಕ್ ಎಂಜಿನ್‌ ಅನ್ನು ಮೊದಲ ಬಾರಿ ಮಾ.28ರಂದು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು.

ಪ್ರಯೋಜನವೇನು? 
ಸಾಮಾನ್ಯವಾಗಿ ಕ್ರಯೋಜೆನಿಕ್ ಎಂಜಿನ್‌ಗಳು ದ್ರವ ರೂಪದ ಹೈಡ್ರೋಜನ್‌ ಬಳಸುತ್ತವೆ. ಆದರೆ ಸೆಮಿ-ಕ್ರಯೋಜೆನಿಕ್ ಎಂಜಿನ್‌ಗಳು ಕೆರೋಸಿನ್‌ ಬಳಸಲಿದ್ದು, ಇದು ದ್ರವ ರೂಪದ ಇಂಧನಕ್ಕಿಂತ ಹಗುರವಿರುತ್ತದೆ. ಜೊತೆಗೆ ಸಾಮಾನ್ಯ ತಾಪಮಾನದಲ್ಲೂ ಇದನ್ನು ಶೇಖರಿಸಿಡುವುದು ಸುಲಭ.

ಇಸ್ರೋದಿಂದ ಗುಡ್ ನ್ಯೂಸ್, ಚಂದ್ರಯಾನ 5 ಮಿಷನ್‌ಗೆ ಮೋದಿ ಸರ್ಕಾರದ ಅನುಮತಿ
 

tags
click me!