ಬಾಹ್ಯಾಕಾಶದ ಒಂದು ಟೊಮ್ಯಾಟೋ ಕಥೆ, 8 ತಿಂಗಳ ಹಿಂದೆ ಕಳೆದುಹೋಗಿದ್ದ ಹಣ್ಣು ಸಿಕ್ಕಿದ್ದೇಗೆ?

By Santosh Naik  |  First Published Dec 9, 2023, 5:44 PM IST

ಅಂದಾಜು 8 ತಿಂಗಳ ಹಿಂದೆ ಕಳೆದುಹೋಗಿದ್ದ ಟೊಮ್ಯಾಟೋವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕೊನೆಗೂ ಪತ್ತೆ ಮಾಡಲಾಗಿದೆ. ಬಾಹ್ಯಾಕಾಶದಲ್ಲಿಯೇ ಬೆಳೆದ ಈ ಟೊಮ್ಯಾಟೋವನ್ನು ಗಗನಯಾತ್ರಿಯೊಬ್ಬ ತಿಂದಿರಬಹುದು ಎಂದು ಆರೋಪ ಮಾಡಲಾಗಿತ್ತು.
 


ನವದೆಹಲಿ (ಡಿ.9): ಕಳೆದ ಎಂಟು ತಿಂಗಳಿನಿಂದ ನಾಪತ್ತೆಯಾಗಿದ್ದ ಟೊಮ್ಯಾಟೋವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕೊನೆಗೂ ಪತ್ತೆ ಮಾಡಲಾಗಿದೆ. ಮಾರ್ಚ್ 2023 ರಲ್ಲಿ, ಗಗನಯಾತ್ರಿ ಫ್ರಾಂಕ್ ರೂಬಿಯೊ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಮೊದಲ ಬಾರಿಗೆ ಟೊಮೆಟೊಗಳನ್ನು ಬೆಳೆದಿದ್ದರು. ಇದರ ನಂತರ ಅವರು ಅಧ್ಯಯನಕ್ಕಾಗಿ ಈ ಟೊಮ್ಯಾಟೋಗಳನ್ನು ಕಿತ್ತಿದ್ದರು. ಉಳಿದ ಟೊಮೆಟೊಗಳನ್ನು ಬಾಹ್ಯಾಕಾಶ ನಿಲ್ದಾಣದ ಗಗನಯಾತ್ರಿಗಳ ನಡುವೆ ಹಂಚಿಕೆ ಮಾಡಲಾಗಿತ್ತು. ನಾನು ನನ್ನ ಟೊಮೆಟೊಗಳನ್ನು ಸಣ್ಣ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡಿದ್ದೇನೆ. ನನ್ನ ಸ್ನೇಹಿತರೊಬ್ಬರು ಶಾಲಾ ಮಕ್ಕಳೊಂದಿಗೆ ಆನ್‌ಲೈನ್ ಈವೆಂಟ್‌ನಲ್ಲಿ ಭಾಗಿಯಾಗಿದ್ದರು. ಅವರಿಗೆ ತೋರಿಸಲು ಟೊಮೇಟೊ ತೆಗೆದುಕೊಳ್ಳಲು ಹೋದಾಗ ಅದು ಮಾಯವಾಗಿತ್ತು. ವಾಸ್ತವವಾಗಿ, ಬಾಹ್ಯಾಕಾಶದಲ್ಲಿರುವ ಎಲ್ಲವನ್ನೂ ಕೆಲವು ವಸ್ತುಗಳ ಸಹಾಯದಿಂದ ಅಲ್ಲಿರುವ ಗೋಡೆಗೆ ಅಂಟಿಸರಬೇಕು. ಇಲ್ಲದಿದ್ದರೆ ಅದು ಗುರುತ್ವಾಕರ್ಷಣೆ ಬಲ ಇಲ್ಲದೇ ಇರುವ ಪ್ರದೇಶದಲ್ಲಿ ತೇಲುತ್ತಲೇ ಇರುತ್ತದೆ.

ಫ್ರಾಂಕ್ ಹೇಳುವ ಪ್ರಕಾರ, ಅವರು ಮುಂದಿನ 6 ತಿಂಗಳಲ್ಲಿ ಸುಮಾರು 20 ಗಂಟೆಗಳ ಕಾಲ ಈ ಟೊಮ್ಯಾಟೋಗಾಗಿ  ಹುಡುಕಿದರು. ಆದರೆ, ಎಲ್ಲಿಯೂ ಟೊಮ್ಯಾಟೋ ಸಿಕ್ಕಿರಲಿಲ್ಲ. ಈ ಸಮಯದಲ್ಲಿ, ಅವರ ಸಹೋದ್ಯೋಗಿಗಳು ಫ್ರಾಂಕ್ ಟೊಮೆಟೊಗಳನ್ನು ತಿಂದು ಅದನ್ನು ಮರೆತುಬಿಟ್ಟಿದ್ದಾರೆ ಎಂದು ಆರೋಪ ಮಾಡಿದ್ದರು. ಇದೇ ವಿಚಾರದಲ್ಲಿ ಅವರು ಫ್ರಾಂಕ್ ಅನ್ನು ಅನೇಕ ಬಾರಿ ಗೇಲಿ ಮಾಡಿದ್ದರು. ಆದರೆ, ಫ್ರಾಂಕ್‌ ಮಾತ್ರ ನಾನು ಟೋಮ್ಯಾಟೋವನ್ನು ತಿಂದಿಲ್ಲ. ಅದನ್ನು ಹುಡುಕುತ್ತೇನೆ. ಹುಡುಕಿ ನಾನು ತಿಂದಿಲ್ಲ ಎನ್ನುವುದನ್ನು ಸಾಬೀತು ಮಾಡುತ್ತೇನೆ ಎಂದಿದ್ದರು.

ಅಂತಿಮವಾಗಿ, ಫ್ರಾಂಕ್ ಈ ವರ್ಷ ಸೆಪ್ಟೆಂಬರ್ 27 ರಂದು ಬಾಹ್ಯಾಕಾಶ ನಿಲ್ದಾಣದಲ್ಲಿ 371 ದಿನಗಳನ್ನು ಕಳೆದ ನಂತರ ಭೂಮಿಗೆ ಮರಳಿದರು. ಅವರು ಬಾಹ್ಯಾಕಾಶದಲ್ಲಿ ಟೊಮ್ಯಾಟೋ ಕಳೆದ ಎಂಟು ತಿಂಗಳ ಬಳಿಕ ಡಿಸೆಂಬರ್‌ 6 ರಂದು ಗಗನಯಾತ್ರಿಗಳು ಕಳೆದುಹೋದ ಈ ಟೊಮ್ಯಾಟೋವನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಬಾಹ್ಯಾಕಾಶ ನಿಲ್ದಾಣದ 24 ನೇ ವಾರ್ಷಿಕೋತ್ಸವದ ನೇರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗಗನಯಾತ್ರಿ ಜಾಸ್ಮಿನ್ ಮೊಗ್ಬೆಲಿ 'ನಾವು ಟೊಮೆಟೊಗೆ ಫ್ರಾಂಕ್ ಅವರನ್ನು ದೂಷಿಸಿದ್ದೇವೆ, ಆದರೆ ಈಗ ಅವರು ಈ ಆರೋಪಗಳಿಂದ ಮುಕ್ತರಾಗಬಹುದು. ಕಳೆದುಹೋದ ಟೊಮೆಟೊವನ್ನು ನಾವು ಬಾಹ್ಯಾಕಾಶ ನಿಲ್ದಾಣದಲ್ಲಿ ಹುಡುಕಿದ್ದೇವೆ' ಎಂದು ಹೇಳಿದ್ದಾರೆ.

ಮೊಘ್ಬೆಲಿ ಅವರು ಟೊಮೆಟೊವನ್ನು ಎಲ್ಲಿ ಅಥವಾ ಯಾವ ಸ್ಥಿತಿಯಲ್ಲಿ ಪತ್ತೆ ಮಾಡಿದ್ದೇವೆ ಎಂದು ಹೇಳಿಲ್ಲ. ಬಾಹ್ಯಾಕಾಶ ನಿಲ್ದಾಣದಲ್ಲಿ ತೇವಾಂಶವು ಸುಮಾರು 17% ಎಂದು ತಿಳಿಸಿರುವ ಫ್ರಾಂಕ್‌, ಇಷ್ಟೊತ್ತಿಗೆ ಟೊಮೇಟೊ ಕೊಳೆತು ಹೋಗಿದ್ದು, ಯಾರೋ ತಿಳಿಯದೆ ಚೀಲವನ್ನು ಎಸೆದು ಹೋಗಿರಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಫ್ರಾಂಕ್ ಭೂಮಿಗೆ ಹಿಂದುರಿಗಿದ್ದು ಕೂಡ ಐತಿಹಾಸಿಕ ಕ್ಷಣವಾಗಿತ್ತು. ಅವರು ಆರಂಭದಲ್ಲಿ ಕೇವಲ 6 ತಿಂಗಳುಗಳನ್ನು ಬಾಹ್ಯಾಕಾಶದಲ್ಲಿ ಕಳೆಯಬೇಕಾಗಿತ್ತು, ಆದರೆ ಅವರು ಸೆಪ್ಟೆಂಬರ್‌ನಲ್ಲಿ ಹಿಂದಿರುಗಿದಾಗ, ಅವರು 371 ದಿನಗಳನ್ನು ಪೂರ್ಣಗೊಳಿಸಿದ್ದರು. ಇದರೊಂದಿಗೆ ಬಾಹ್ಯಾಕಾಶದಲ್ಲಿ ದೀರ್ಘಕಾಲ ತಂಗಿದ್ದ ಅಮೆರಿಕದ ಮೊದಲ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Tap to resize

Latest Videos

undefined

ಗಗನಯಾನ ಪರೀಕ್ಷೆ ಜತೆ ಮುಂದಿನ ವರ್ಷದಲ್ಲಿ ಇಸ್ರೋದಿಂದ 16 ಮಹತ್ವದ ಉಡಾವಣೆ

ಕಳೆದ ವರ್ಷದ ಆರಂಭದಲ್ಲಿ ಚೀನಾದ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಭತ್ತ ಬೆಳೆದಿದ್ದರು. ಅದರ ವಿಡಿಯೋವನ್ನೂ ಬಿಡುಗಡೆ ಮಾಡಿದ್ದರು. ಚೀನಾದ ಗಗನಯಾತ್ರಿಗಳು ಭತ್ತವನ್ನು ನಾಟಿ ಮಾಡಿದ್ದರು.. ಇದರೊಂದಿಗೆ ಎಲೆಕೋಸು ಮತ್ತು ಬ್ರಸೆಲ್ಸ್ ಮೊಗ್ಗುಗಳಂತಹ ಹಸಿರು ತರಕಾರಿಗಳನ್ನು ಪ್ರತಿನಿಧಿಸುವ ಥಾಲ್ ಕ್ರೆಸ್ ಎಂಬ ಸಸ್ಯವನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದರು.

ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತದ ಗಗನಯಾತ್ರಿಯನ್ನು ಕಳಿಸಲಿದೆ ನಾಸಾ!

click me!