Diphallia Disease: 2 ಶಿಶ್ನಗಳೊಂದಿಗೆ ಮಗು ಜನನ: ಶಸ್ತ್ರಚಿಕಿತ್ಸೆ ಮೂಲಕ ದೊಡ್ಡದನ್ನು ಕತ್ತರಿಸಿದ ವೈದ್ಯರು

By Suvarna News  |  First Published Apr 24, 2022, 2:48 PM IST

ಈ ಅಪರೂಪದ ವೈದ್ಯಕೀಯ ಸ್ಥಿತಿಯ ವಿವರವಾದ ವರದಿಯು ಜರ್ನಲ್ ಆಫ್ ಪೀಡಿಯಾಟ್ರಿಕ್ ಯುರಾಲಜಿಯಲ್ಲಿ ಪ್ರಕಟಗೊಂಡಿದೆ. ಹುಡುಗನ ಎರಡು ಶಿಶ್ನಗಳು ಅಕ್ಕಪಕ್ಕದಲ್ಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ. 


ಬ್ರೆಜಿಲ್‌ (ಏ. 24):  ಬ್ರೆಜಿಲ್‌ನಲ್ಲಿ ನವಜಾತ ಶಿಶುವಿನ ಜನನವು ದೇಶದಾದ್ಯಂತ ವೈದ್ಯರನ್ನು ಬೆಚ್ಚಿಬೀಳಿಸಿದೆ. ಈ ಅಪರೂಪದ ಶಿಶು ಎರಡು ಶಿಶ್ನಗಳೊಂದಿಗೆ ಜನಿಸಿದ್ದು, ಒಂದನ್ನು ತೆಗೆಯಲು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. "ಈ ಹುಡುಗ ಎರಡನೇ ಶಿಶ್ನದೊಂದಿಗೆ ಜನಿಸಿದ ಅಪರೂಪದ ಶಿಶುಗಳಲ್ಲಿ ಒಬ್ಬನಾಗಿದ್ದಾನೆ ಮತ್ತು ಚಿಕಿತ್ಸೆಗೆ ದೊಡ್ಡ ಶಿಶ್ನವನ್ನು ತೆಗೆದುಹಾಕಬೇಕಾಗುತ್ತದೆ" ಎಂದು ವೈದ್ಯರು ಹೇಳಿದ್ದಾರೆ. ಹುಡುಗ ಅಪರೂಪದ ವೈದ್ಯಕೀಯ ಸ್ಥಿತಿಯಿಂದ ಬಳಲುತ್ತಿದ್ದು ಇದನ್ನು ಡಿಫಾಲಿಯಾ (Diphallia) ಎಂದು ಕರೆಯಲಾಗುತ್ತದೆ. 

ಈ ಸ್ಥಿತಿಯು ಸಾಮಾನ್ಯವಾಗಿ ಒಂದು ಮಿಲಿಯನ್ ಶಿಶುಗಳಲ್ಲಿ ಒಬ್ಬರಲ್ಲಿ ಮಾತ್ರ ಕಂಡುಬರುತ್ತದೆ. ಡಿಫಾಲಿಯಾ ಎಂಬುದು ಜನನದ ಸಮಯದಲ್ಲಿ ಇರುವ ಒಂದು ಆನುವಂಶಿಕ ಸ್ಥಿತಿಯಾಗಿದ್ದು, ಇದರಲ್ಲಿ ವ್ಯಕ್ತಿಯು ಎರಡು ಶಿಶ್ನಗಳನ್ನು ಹೊಂದಿರುತ್ತಾನೆ. ಸಾವೊ ಪಾಲೊದಲ್ಲಿನ ವೈದ್ಯರ ಪ್ರಕಾರ, ವೈದ್ಯಕೀಯ ಸಾಹಿತ್ಯದ ಇತಿಹಾಸದಲ್ಲಿ ಕೇವಲ 100 ಪುರುಷರು ಮಾತ್ರ ಈ ಸ್ಥಿತಿಯನ್ನು ಹೊಂದಿದ್ದಾರೆಂದು ವರದಿಯಾಗಿದೆ.

Tap to resize

Latest Videos

undefined

ವೈದ್ಯಕೀಯ ಇತಿಹಾಸದಲ್ಲಿ ಈ ಅಪರೂಪದ ಸ್ಥಿತಿಯನ್ನು ಸ್ವಿಸ್ ವೈದ್ಯ ಜೋಹಾನ್ಸ್ ಜಾಕೋಬ್ ವೆಕರ್  (Johannes Jacob Wecker) 1609 ರಲ್ಲಿ ಪತ್ತೆ ಮಾಡಿದ್ದರು. ಜನನಾಂಗಗಳ ಬೆಳವಣಿಗೆಯ ಸಮಯದಲ್ಲಿ. ಡಿಫಾಲಿಯಾ ಕಾಣಿಸಿಕೊಳ್ಳುತ್ತದೆ.  

ಎರಡು ವರ್ಷದವನಿದ್ದಾಗ ಶಸ್ತ್ರ ಚಿಕಿತ್ಸೆ:  ಈ ಅಪರೂಪದ ವೈದ್ಯಕೀಯ ಸ್ಥಿತಿಯ ವಿವರವಾದ ವರದಿಯು ಜರ್ನಲ್ ಆಫ್ ಪೀಡಿಯಾಟ್ರಿಕ್ ಯುರಾಲಜಿಯಲ್ಲಿ ಪ್ರಕಟಗೊಂಡಿದೆ. ಹುಡುಗನ ಎರಡು ಶಿಶ್ನಗಳು ಅಕ್ಕಪಕ್ಕದಲ್ಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ವೈದ್ಯಕೀಯ ಜರ್ನಲ್ ವರದಿಯ ಪ್ರಕಾರ, ಹುಡುಗ ಎರಡು ವರ್ಷದವನಿದ್ದಾಗ ಎರಡನೇ ಶಿಶ್ನವನ್ನು ತೆಗೆದುಹಾಕಲಾಗಿದೆ. ಆದರೆ ಈ ಶಸ್ತ್ರಚಿಕತ್ಸೆ ಇಷ್ಟು ವಿಳಂಬಗೊಳಿಸಲು ಕಾರಣವೇನು ಎಂಬುದರ ಕುರಿತು ಯಾವುದೇ ಮಾಹಿತಿ ನೀಡಿಲ್ಲ. 

ಇದನ್ನೂ ಓದಿ: ಜಪಾನ್‌ನಲ್ಲಿ Penis Festival ! ಈ ವಿಚಿತ್ರ ಆಚರಣೆ ಬಗ್ಗೆ ನಿಮಗ್ಗೊತ್ತಾ?

ಹುಡುಗನ ಸ್ಥಿತಿಯ ಆಧಾರದ ಮೇಲೆ, ವೈದ್ಯರು ಮೊದಲು ಸಣ್ಣ ಶಿಶ್ನವನ್ನು ತೆಗೆದುಹಾಕಲು ನಿರ್ಧರಿಸಿದ್ದರು, ಆದರೆ ಹುಡುಗನಿಗೆ ದೊಡ್ಡ ಶಿಶ್ನದಿಂದ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಆದ್ದರಿಂದ ವೈದ್ಯರು ದೊಡ್ಡ ಶಿಶ್ನವನ್ನು ತೆಗೆದುಹಾಕಲು ನಿರ್ಧರಿಸಿದರು. ಶಿಶ್ನವನ್ನು ಕಾರ್ಯವಿಧಾನ ಆಧರಿಸಿ ಕತ್ತರಿಸಲಾಗಿದೆ ಹೊರತು ಗಾತ್ರದ ಮೇಲೆ ಅಲ್ಲ ಎಂದು ವರದಿ ತಿಳಿಸಿದೆ. 

ಜರ್ನಲ್ ವರದಿಯು ವೈದ್ಯಕೀಯ ವಿಧಾನವನ್ನು ವಿವರವಾಗಿ ವಿವರಿಸಿದ್ದು ಕಾರ್ಯಾಚರಣೆಯು ಯಶಸ್ವಿಯಾಗಿದೆ ಎಂದು ತಿಳಿಸಿದೆ. ಹುಡುಗನಿಗೆ ಈಗ ಉಳಿದ ಶಿಶ್ನದಲ್ಲಿ ಒಂದೇ ಒಂದು ನಿಮಿರುವಿಕೆಯ ಕೋಣೆ ಇದೆ ಎಂದು ವರದಿ ತಿಳಿಸಿದೆ. ಎರಡು ಶಿಶ್ನವನ್ನು ಹೊಂದಿರುವ ಹೆಚ್ಚಿನ ಪುರುಷರು ಇನ್ನೂ ಸಾಮಾನ್ಯ ಲೈಂಗಿಕ ಜೀವನ ಮತ್ತು  ಮಕ್ಕಳನ್ನು ಆನಂದಿಸಬಹುದು ಎಂದು ವೈದ್ಯರು ಪ್ರತಿಪಾದಿಸುತ್ತಾರೆ. ಆದರೆ ಅಂತಹ ಪುರುಷರು ಮೂತ್ರಪಿಂಡ ವ್ಯವಸ್ಥೆಯಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಮೆಡಿಕಲ್‌ನ್ಯೂಸ್‌ಟುಡೇ ಹೇಳಿದೆ. 

ಡಿಫಾಲಿಯಾ ಹೇಗೆ ಕಾಣಿಸಿಕೊಳ್ಳುತ್ತದೆ?: ಡಿಫಾಲಿಯಾದೊಂದಿಗೆ ಗಂಡು ಮಗು ಜನಿಸಿದಾಗ, ವೈದ್ಯರು ಅವನ ಶಿಶ್ನ, ಸ್ಕ್ರೋಟಮ್ ಅಥವಾ ವೃಷಣಗಳಲ್ಲಿ ಅಸಹಜತೆಗಳನ್ನು ಗಮನಿಸಬಹುದು. ಹ್ಯೂಮನ್ ಫಿನೋಟೈಪ್ ಆಂಟಾಲಜಿ ಪ್ರಕಾರ, ಈ ಸ್ಥಿತಿಯು ಪ್ರಕಟಗೊಳ್ಳುವ ಎರಡು ಸಾಮಾನ್ಯ ವಿಧಾನಗಳನ್ನು ಕೆಳಗೆ ನೀಡಲಾಗಿದೆ. 80 ಮತ್ತು 99 ಪ್ರತಿಶತದಷ್ಟು ಜನರು ಡಿಫಾಲಿಯಾ ಹೊಂದಿರುವವರು ಈ ಒಂದು ಅಥವಾ ಎರಡೂ ಲಕ್ಷಣಗಳನ್ನು ಪ್ರದರ್ಶಿಸುತ್ತಾರೆ ಎಂದು ಹೆಲ್ತ್‌ಲೈನ್ ವರದಿ ಹೇಳಿದೆ

  • ಶಿಶ್ನ ಎರಡು ಭಾಗಗಳಾಗಿ ವಿಂಗಡಣೆಯಾಗುತ್ತದೆ (ಇದನ್ನು ಪೆನಿಸ್‌ ಡುಪ್ಲಿಕೇಶನ್ ಎಂದು ಕರೆಯಲಾಗುತ್ತದೆ)
  • ಸ್ಕ್ರೋಟಮ್(ವೃಷಣಗಳನ್ನು ಹೊಂದಿರುವ ಚರ್ಮದ ಚೀಲ) ಎರಡು ಭಾಗಗಳಾಗಿ ವಿಂಗಡಣೆಯಾಗುತ್ತದೆ (ಇದನ್ನೂ ಕ್ಲೆಫ್ಟ್‌ ಸ್ಕ್ರೋಟಮ್ಎಂದು ಕರೆಯಲಾಗುತ್ತದೆ)

ಎರಡು ಶಿಶ್ನಗಳನ್ನು ಹೊಂದಿರುವ ಸ್ಥಿತಿಯು ಅಪಾಯಕಾರಿ ಅಲ್ಲ. ಆದಾಗ್ಯೂ, ಡಿಫಾಲಿಯಾ ವೈದ್ಯಕೀಯ ಸಮಸ್ಯೆಗಳನ್ನು ಉಂಟುಮಾಡುವ ಅನೇಕ ಇತರ ಪರಿಸ್ಥಿತಿಗಳೊಂದಿಗೆ ಸಂಬಂಧಿಸಿದೆ. ಡಿಫಾಲಿಯಾ ಹೊಂದಿರುವ ಜನರು ಸಾಮಾನ್ಯವಾಗಿ ಜೀರ್ಣಕಾರಿ ಮತ್ತು ಮೂತ್ರನಾಳದ ಸಮಸ್ಯೆಗಳನ್ನು ಒಳಗೊಂಡಂತೆ ಇತರ ಜನ್ಮಜಾತ ದೋಷಗಳನ್ನು ಅನುಭವಿಸುತ್ತಾರೆ.

click me!