ಪ್ಲಾಸ್ಟಿಕ್ ಮುಕ್ತ ಪ್ರಪಂಚ ಸಾಧ್ಯವಿದೆ, ಸೌತೆಕಾಯಿ ಸಿಪ್ಪೆಯೇ ಸಾಕು!

By madhusoodhan A  |  First Published Apr 2, 2021, 9:59 PM IST

ಪ್ಲಾಸ್ಟಿಕ್ ಬಳಕೆಯಿಂದ ಸಂಪೂರ್ಣ ಹೊರಗೆ ಬರಬಹುದು/ ಸೌತೆಕಾಯಿ ಸಿಪ್ಪೆಯನ್ನು ಬಳಸಿ ಪರಿಸರ ಸ್ನೇಹಿ ಪ್ಲಾಸ್ಟಿಕ್/ ಸಂಶೋಧನೆ ಮಾಡಿದ ವಿದ್ಯಾರ್ಥಿಗಳು/   ಹೊಸ ಸಂಶೋಧನೆಯಿಂದ ಏನೆಲ್ಲ ಲಾಭ


ನವದೆಹಲಿ(ಏ.  02)  ಇನ್ನು ಮುಂದೆ ನಾವು ವೇಸ್ಟ್ ಎಂದು ಚೆಲ್ಲುವ ಸೌತೆಕಾಯಿ ಸಿಪ್ಪೆ ಕೂಡ ಉಪಯೋಗಕ್ಕೆ ಬರಲಿದೆ. ಯಾಕಂದ್ರೆ  ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಖರಗ್ಪುರ, ಸೌತೆಕಾಯಿ ಸಿಪ್ಪೆಯಿಂದ ಆಹಾರ ಪ್ಯಾಕ್ ಮಾಡುವ ವಸ್ತುಗಳನ್ನು ತಯಾರು ಮಾಡಿದೆ

ಸಂಶೋಧಕರ ಪ್ರಕಾರ ಬೇರೆ ಸಿಪ್ಪೆಗಳಿಗೆ ಹೋಲಿಸಿದರೆ ಸೌತೆಕಾಯಿ ಸಿಪ್ಪೆಯಲ್ಲಿ ಅತಿ ಹೆಚ್ಚು ಸೆಲ್ಯೂಲೋಸ್ ಪ್ರಮಾಣ ಇದೆ. ಈ ಸಿಪ್ಪೆಗಳಿಂದ ಪಡೆದುಕೊಂಡ ಪದಾರ್ಥಗಳನ್ನು ಆಹಾರ ಪ್ಯಾಕ್ ಮಾಡುವ ವಸ್ತುಗಳ ಉತ್ಪಾದನೆಗೆ ಬಳಸಬಹುದು. ಈ ವಸ್ತುಗಳು ಕೊಳೆಯುವ ಗುಣಗಳನ್ನು ಹೊಂದಿದ್ದು ಪರಿಸರಕ್ಕೂ ಯಾವ ರೀತಿಯೂ ತೊಂದರೆ ಉಂಟು ಮಾಡುವುದಿಲ್ಲ.

Tap to resize

Latest Videos

undefined

ಭಾರತದಲ್ಲಿ ಸೌತೆಕಾಯಿಯನ್ನು ಹಲವಾರು ಪದಾರ್ಥಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ. ಸೌತೆಕಾಯಿಯನ್ನು ಸಲಾಡ್ ಮತ್ತು ಅಡುಗೆಯಲ್ಲಿ ಅತ್ಯಧಿಕವಾಗಿ ಬಳಸಲಾಗುತ್ತದೆ ಅಲ್ಲದೇ ಸೌತೆಕಾಯಿಯನ್ನು ಹಸಿಯಾಗಿ ಕೂಡ ತಿನ್ನಲಾಗುತ್ತದೆ. ಹಾಗಾಗಿ ಪ್ರತಿ ಬಾರಿ ಅಧಿಕ ಪ್ರಮಾಣದಲ್ಲಿ ಸೆಲ್ಯೂಲೋಸ್ ಇರುವ ಸೌತೆಕಾಯಿ ಸಿಪ್ಪೆ ಕಸದ ಪಾಲಾಗುತ್ತಿದೆ.

ನಾವು ಹೇಳಿದ್ದೆಲ್ಲಾ ಸುಳ್ಳಾ? ಪತಂಜಲಿ ಪಂಚ್

ಜನರು ಒಮ್ಮೆ ಮಾತ್ರ ಬಳಕೆ ಮಾಡಬಹುದಾದಂತಹ ಪ್ಲಾಸ್ಟಿಕ್ ಉಪಯೋಗವನ್ನು ಕಡಿಮೆ ಮಾಡುತ್ತಿದ್ದಾರೆ. ಆದರೆ ಈಗಲೂ ಆಹಾರ ಪದಾರ್ಥಗಳನ್ನು ಪ್ಯಾಕ್ ಮಾಡಲು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಪ್ಲಾಸ್ಟಿಕ್ ನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತಿದೆ ಎಂದು ಖರಗ್ಪುರ್ ಪ್ರಾಧ್ಯಾಪಕಿ ಜಯಿತಾ ಮಿತ್ರಾ ಹೇಳುತ್ತಾರೆ.

ನಾವು ಸೌತೆಕಾಯಿ ಸಿಪ್ಪೆಯಲ್ಲಿರುವ ಸೆಲ್ಯೂಲೋಸ್, ಹೆಮಿ ಸೆಲ್ಯೂಲೋಸ್, ಪೆಕ್ಟಿನ್ಗಳಿಂದ ಹೊಸ ನೈಸರ್ಗಿಕ ವಸ್ತುಗಳನ್ನು ತಯಾರಿಸುತ್ತೇವೆ ಎಂದು ಜಯಿತಾ ತಿಳಿಸಿದ್ದಾರೆ. 

ಸಂಶೋಧನೆಯ ಬಗ್ಗೆ ಮಾತನಾಡುತ್ತ  ನಮ್ಮ ಸಂಶೋಧನೆಯ ಪ್ರಕಾರ ಸೌತೆಕಾಯಿ ಸಿಪ್ಪೆಯಿಂದ ಸಿಕ್ಕಿರುವ ಸೆಲ್ಯೂಲೋಸ್ ಬದಲಾಯಿಸಬಹುದಾದಂತಹ ಗುಣಗಳನ್ನು ಹೊಂದಿದೆ. ಹಾಗಾಗಿ ಇಂತಹ ಪದಾರ್ಥಗಳು ಅತ್ಯಂತ ಬಿರುಸಾಗಿರುತ್ತವೆ ಅಲ್ಲದೇ ಇವುಗಳ ಮರುಬಳಕೆಗೆ ಉಪಯುಕ್ತವಾಗಿವೆ. ಹಾಗಾಗಿ  ಇದರಿಂದ ತಯಾರಿಸಿದ ವಸ್ತುಗಳನ್ನು ಆಹಾರ ಪ್ಯಾಕ್ ಮಾಡಲು ಬಳಸಬಹುದು ಎನ್ನುತ್ತಾರೆ. 

 

click me!