ಭೂಮಿಯ ಅತಿ ಸಮೀಪ ಹಾದುಹೋದ ಅಪಾಯಕಾರಿ ಕ್ಷುದ್ರಗ್ರಹ!

Published : Mar 22, 2021, 08:40 AM IST
ಭೂಮಿಯ ಅತಿ ಸಮೀಪ ಹಾದುಹೋದ ಅಪಾಯಕಾರಿ ಕ್ಷುದ್ರಗ್ರಹ!

ಸಾರಾಂಶ

ಅತಿ ದೊಡ್ಡ ಹಾಗೂ ಅಪಾಯಕಾರಿ ಕ್ಷುದ್ರ ಗ್ರಹ ಎಂದೇ ಪರಿಗಣಿಸಲ್ಪಟ್ಟಿದ್ದ ‘2001ಎಫ್‌032’ ಹೆಸರಿನ ಕ್ಷುದ್ರಗ್ರಹ| ಭೂಮಿಯ ಅತಿ ಸಮೀಪ ಹಾದುಹೋದ ಅಪಾಯಕಾರಿ ಕ್ಷುದ್ರಗ್ರಹ

ನ್ಯೂಯಾರ್ಕ್(ಮಾ.22): ಅತಿ ದೊಡ್ಡ ಹಾಗೂ ಅಪಾಯಕಾರಿ ಕ್ಷುದ್ರ ಗ್ರಹ ಎಂದೇ ಪರಿಗಣಿಸಲ್ಪಟ್ಟಿದ್ದ ‘2001ಎಫ್‌032’ ಹೆಸರಿನ ಕ್ಷುದ್ರಗ್ರಹ ಶನಿವಾರ ಭೂಮಿಯ ಅತ್ಯಂತ ಸಮೀಪದಿಂದ ಹಾದುಹೋಗಿದೆ. ಇದು ಭೂಮಿಗೆ ಅತ್ಯಂತ ಸಮೀಪದಲ್ಲೇ ಹಾದುಹೋಗುವ ಕಾರಣ ಅದನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು.

ಪ್ರತಿ 810 ದಿನಕ್ಕೊಮ್ಮೆ ಸೂರ್ಯನನ್ನು ಸುತ್ತುಹಾಕುವ ಇದನ್ನು 2001ರಲ್ಲೇ ವಿಜ್ಞಾನಿಗಳು ಗುರುತಿಸಿದ್ದರು. ಜೊತೆಗೆ 2021 ಮಾ.21ರಂದು ರಾತ್ರಿಯ ಭೂಮಿಯ ಅತ್ಯಂತ ಸನಿಹದಲ್ಲೇ ಹಾದು ಹೋಗಲಿದೆ ಎಂದು ಪಕ್ಕಾ ಲೆಕ್ಕಾಹಾಕಿದ್ದರು. ಅದರಂತೆ ಭಾರತೀಯ ಕಾಲಮಾನ ಶನಿವಾರ ರಾತ್ರಿ 9.30ರ ವೇಳೆಗೆ ಭೂಮಿಯ ಪಕ್ಕದಲ್ಲೇ ಹಾದು ಹೋಗಿದೆ.

ಈ ವೇಳೆ ಅದರ ವೇಗ ಗಂಟೆಗೆ 1.24 ಲಕ್ಷ ಕಿ.ಮೀನಷ್ಟಿದ್ದು, ಭೂಮಿ ಮತ್ತು ಕ್ಷುದ್ರಗ್ರಹದ ನಡುವಿನ ಅಂತರ 20 ಲಕ್ಷ ಕಿ.ಮೀನಷ್ಟಿತ್ತು. ಈ ಕ್ಷುದ್ರಗ್ರಹ 440-680 ಮೀಟರ್‌ನಷ್ಟುಅಗಲವಿದೆ ಎಂದು ವಿಜ್ಞಾನಿಗಳು ಲೆಕ್ಕಹಾಕಿದ್ದಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಸೂರ್ಯ ಮುಳುಗೋದನ್ನು ನೋಡಿದ್ದೀರಿ, ಭೂಮಿ ಮುಳುಗೋದನ್ನು ನೋಡಿದ್ದೀರಾ? ಆರ್ಟೆಮಿಸ್‌-2 ಕ್ಯಾಮೆರಾದಲ್ಲಿ ಸೆರೆಯಾದ ಅಪರೂಪದ ಕ್ಷಣ!
India news live: ಕನ್ನಡದಲ್ಲಿಯೇ ಮಾತನಾಡಿದ ನಟ ವಿಜಯ ದೇವರಕೊಂಡ - ಕೊಡವರ ಮನಗೆದ್ದ Rashmika Mandanna ಪತಿ