ದೃಷ್ಟಿ ಹೀನರೂ ಇನ್ಮುಂದೆ ನೋಡಬಲ್ಲರು! ಹುಟ್ಟು ಕುರುಡರ ಬಾಳಲ್ಲಿ ಎಲಾನ್​ ಮಸ್ಕ್​ ಬೆಳಕು

By Suchethana D  |  First Published Sep 20, 2024, 4:21 PM IST

ಅಂಧರ ಬಾಳಿನಲ್ಲಿ ಹೊಸ ಭರವಸೆಯನ್ನು ಮೂಡಿಸಿರುವ ಉದ್ಯಮಿ ಎಲಾನ್ ಮಸ್ಕ್​, ಹುಟ್ಟು ಕುರುಡರು ಕೂಡ ನೋಡಲು ಯೋಗ್ಯರಾಗುವಂಥ ​ತಂತ್ರಜ್ಞಾನ ರೂಪಿಸಿದ್ದಾರೆ. ಏನಿದು? 
 


ಉದ್ಯಮಿ ಎಲಾನ್ ಮಸ್ಕ್ ತಂತ್ರಜ್ಞಾನ ಕ್ಷೇತ್ರದಲ್ಲಿ ಇದಾಗಲೇ ಹಲವಾರು ರೀತಿಯ ಆವಿಷ್ಕಾರಗಳನ್ನು ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರು ನ್ಯೂರಾಲಿಂಕ್ ಎಂಬ ಕಂಪೆನಿ ಹುಟ್ಟುಹಾಕಿದ್ದು, ಇದರ ಮೂಲಕ ಇದಾಗಲೇ ಹಲವಾರು ರೀತಿಯ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಇವರು, ಮಾನವನ ಮೆದುಳಿಗೆ ಕೃತಕ ಬುದ್ಧಿಮತ್ತೆ ಒಳಗೊಂಡಿರುವ ಬ್ರೇನ್​ ಚಿಪ್‌ ಅಳವಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಪ್ರಯೋಗವು ಭರವಸೆಯ ಫಲಿತಾಂಶವನ್ನು ನೀಡುತ್ತಿದೆ ಎಂದು ಎಲಾನ್​ ಮಸ್ಕ್ ಸೋಷಿಯಲ್​ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು.  ಮೊಬೈಲ್‌, ಕಂಪ್ಯೂಟರ್‌ ಸೇರಿದಂತೆ ಬಹುತೇಕ ಎಲ್ಲಾ ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ ಮೆದುಳಿನ ರೀತಿಯಲ್ಲಿ ಕೆಲಸ ಮಾಡುವುದು ಕಂಪ್ಯೂಟರ್‌ ಚಿಪ್‌ಗಳು. ಗಾತ್ರದಲ್ಲಿ ಸಣ್ಣದಿದ್ದರೂ, ಇಡೀ ಎಲೆಕ್ಟ್ರಾನಿಕ್‌ ಉಪಕರಣಗಳ ಜೀವನಾಡಿಗಳಿವು. ಇಂಥದ್ದೇ ಚಿಪ್‌ಗಳನ್ನು ಮಾನವನ ಮೆದುಳಿಗೂ ಅಳವಡಿಸಿ ಅದನ್ನು ಸಂವನದ ಮಾಧ್ಯಮವಾಗಿ ಬಳಸುವ ಎಲಾನ್ ಮಸ್ಕ್ ಐತಿಹಾಸಿಕ ಪ್ರಯೋಗವೊಂದು ಆರಂಭಿಕ ಯಶಸ್ಸು ಪಡೆದಿದ್ದರು.

ಇದೀಗ, ಇದೇ ರೀತಿ ಚಿಪ್​ ಅನ್ನು ಮೆದುಳಿನಲ್ಲಿ ಅಳವಡಿಸುವ ಮೂಲಕ ದೃಷ್ಟಿ ಹೀನರೂ ನೋಡಲು ಶಕ್ಯರಾಗುವಂಥ ಆವಿಷ್ಕಾರ ಒಂದನ್ನು ಎಲಾನ್​ ಮಸ್ಕ್​ ಮಾಡಿದ್ದಾರೆ. ನ್ಯೂರಾಲಿಂಕ್‌ನ ಪ್ರಾಯೋಗಿಕ ಬ್ಲೈಂಡ್‌ಸೈಟ್ ಸಾಧನವು ದೃಷ್ಟಿ ಕಳೆದುಕೊಂಡಿರುವ ವ್ಯಕ್ತಿಗಳಿಗೆ ಸಹಾಯ ಮಾಡುವ ರೀತಿಯಲ್ಲಿ  ವಿನ್ಯಾಸಗೊಳಿಸಲಾಗಿದೆ. ಕಣ್ಣುಗಳು ಮತ್ತು ಆಪ್ಟಿಕ್ ನರಗಳು ಇನ್ನು ಮುಂದೆ ಕಾರ್ಯನಿರ್ವಹಿಸದ ಸಂದರ್ಭಗಳಲ್ಲಿಯೂ ಸಹ ಇದು ನೆರವಾಗಲಿದೆ. ಅಂದರೆ ಆಪ್ಟಿಕ್ ನರ ಹಾನಿಯಿಂದಾಗಿ ಸಂಪೂರ್ಣ ಕುರುಡುತನದಂತಹ ಸ್ಥಿತಿಗಳನ್ನು ತಲುಪಿದ ರೋಗಿಗಳೂ  ತಮ್ಮ ದೃಷ್ಟಿಯನ್ನು ಮರಳಿ ಪಡೆಯಬಹುದು ಎಂದಿದ್ದಾರೆ ಎಲಾನ್​ ಮಸ್ಕ್​. 

Latest Videos

undefined

ಹೊಸ, ಹಳೆಯ ರೇಷನ್​ ಕಾರ್ಡ್​ ಪಡೆಯಲು ಕ್ಯೂ ನಿಲ್ಲಬೇಕಿಲ್ಲ: ಮನೆಯಲ್ಲಿಯೇ ಕುಳಿತು ಹೀಗೆ ಮಾಡಿ

ಅವರ ಪ್ರಕಾರ, ಈ ಸಾಧನವು ಮೆದುಳಿನ ದೃಷ್ಟಿಗೋಚರ ಕಾರ್ಟೆಕ್ಸ್ ಅನ್ನು ಗುರಿಯಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಅಂಧರಿಗೆ ದೃಷ್ಟಿ ಬರುತ್ತದೆ. ಆರಂಭದಲ್ಲಿ ವಸ್ತುಗಳು ಅಸ್ಪಷ್ಟವಾಗಿ ಕಂಡರೂ, ಕ್ರಮೇಣ ಇದು ಸ್ಪಷ್ಟವಾಗಿ ಗೋಚರಿಸುತ್ತದೆ.   ಈ ವರ್ಷದ ಆರಂಭದಲ್ಲಿ, ನ್ಯೂರಾಲಿಂಕ್ ತನ್ನ ಮೆದುಳಿನ ಚಿಪ್‌ಗಳಲ್ಲಿ ಒಂದನ್ನು ಎರಡನೇ ರೋಗಿಗೆ ಯಶಸ್ವಿಯಾಗಿ ಅಳವಡಿಸಿತು, ಅವರು ವೀಡಿಯೊ ಗೇಮ್‌ಗಳನ್ನು ಆಡಲು ಮತ್ತು ತಮ್ಮ ಮನಸ್ಸನ್ನು ಮಾತ್ರ ಬಳಸಿಕೊಂಡು ಡಿಜಿಟಲ್ ವಸ್ತುಗಳೊಂದಿಗೆ ಸಂವಹನ ನಡೆಸಲು ಸಮರ್ಥರಾಗಿದ್ದಾರೆ. ಅದರ ಮುಂದುವರೆದ ಭಾಗವಾಗಿ ದೃಷ್ಟಿಹೀನರಿಂದ ತಾವು ನೆರವಾಗಲಿದ್ದೇವೆ ಎಂದಿದ್ದಾರೆ. 

2023ರ ಸೆಪ್ಟೆಂಬರ್ ತಿಂಗಳಲ್ಲಿ ಮಾನವನ ಮೆದುಳಿಗೆ ಚಿಪ್ ಅಳವಡಿಯೆಕ ಎಲಾನ್ ಮಸ್ಕ್ ಅವರ ಮಹತ್ವಾಕಾಂಕ್ಷಿ ಯೋಜನೆಗೆ ನ್ಯೂರಾಲಿಂಕ್‌ಗೆ ಅನುಮತಿ ನೀಡಿತ್ತು.  ನ್ಯೂರಾಲಿಂಕ್‌ ಕಂಪನಿ, ವಿಶ್ವದಲ್ಲೇ ಮೊದಲ ಬಾರಿಗೆ ಮಾನವನ ಮೆದುಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಅದರೊಳಗೆ ಚಿಪ್‌ ಕೂರಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಆರಂಭಿಕ ಯಶಸ್ಸು ಪಡೆದಿರುವ ನ್ಯೂರಾಲಿಂಕ್, ಸಂಪೂರ್ಣ ಯಶಸ್ವಿಯಾದರೆ ಪಾರ್ಶ್ವವಾಯು ಸೇರಿದಂತೆ ದೈಹಿಕವಾಗಿ ನ್ಯೂನತೆ ಹೊಂದಿರುವ ವ್ಯಕ್ತಿಗಳು ತಮ್ಮ ಹಲವು ಕೆಲಸಗಳನ್ನು ಯಾರ ಸಹಾಯವೂ ಇಲ್ಲದೇ ಕೇವಲ ತಲೆಯಲ್ಲಿ ಯೋಚಿಸುವ ಮೂಲಕವೇ ಮಾಡಬಹುದಾಗಿದೆ. ಹೀಗಾಗಿಯೇ ಈ ಪ್ರಯೋಗದ ಫಲಿತಾಂಶದ ಕುರಿತು ಇಡೀ ವಿಶ್ವವೇ ಕುತೂಹಲದ ಕಣ್ಣಿಟ್ಟಿದೆ. 

 ವಾಟ್ಸ್​ಆ್ಯಪ್​ ಹ್ಯಾಕ್ ಆಗಿದೆಯಂದ ಸ್ವರಾ ಭಾಸ್ಕರ್, ಇಬ್ರೂ ಸೇರಿ ಪೇಜರ್ ಬಳಸಿ ಎನ್ನೋದಾ ಕಮೆಂಟಿಗರು?
  
 

click me!