ಉಪವಾಸವಿದ್ದು ಸಾಮಾನ್ಯ ಮನುಷ್ಯ ಎಷ್ಟು ದಿನ ಇರಬಲ್ಲ? ಬಳಿಕ ದೇಹದಲ್ಲಿ ಆಗೋದೇನು? ವಿಜ್ಞಾನ ಹೇಳುವುದೇನು

Published : Jul 17, 2026, 02:10 PM IST
Hunger

ಸಾರಾಂಶ

ಸೋನಮ್ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ, ಆಹಾರವಿಲ್ಲದೆ ಮನುಷ್ಯ ಎಷ್ಟು ದಿನ ಬದುಕಬಲ್ಲ ಎಂಬ ವೈಜ್ಞಾನಿಕ ಚರ್ಚೆ ಆರಂಭವಾಗಿದೆ. ದೇಹವು ಗ್ಲೈಕೊಜೆನ್, ಸ್ನಾಯು ಪ್ರೋಟೀನ್, ಮತ್ತು ಕೀಟೋನ್‌ಗಳನ್ನು ಶಕ್ತಿಯಾಗಿ ಬಳಸುವ ಹಂತಗಳನ್ನು ಈ ಲೇಖನ ವಿವರಿಸುತ್ತದೆ. ದೀರ್ಘಕಾಲದ ಉಪವಾಸದಿಂದಾಗುವ ದೌರ್ಬಲ್ಯ, ಸ್ನಾಯು ನಷ್ಟ ಮತ್ತು ಆರೋಗ್ಯದ ಅಪಾಯಗಳ ಬಗ್ಗೆಯೂ ಇದು ಮಾಹಿತಿ ನೀಡುತ್ತದೆ.

ರಾಷ್ಟ್ರೀಯ ಪರೀಕ್ಷೆಗಳಲ್ಲಿ ನಡೆದಿರುವ ಪೇಪರ್ ಲೀಕ್ ಹಾಗೂ NEET UG ಅಕ್ರಮಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರಖ್ಯಾತ ಶಿಕ್ಷಣ ಸುಧಾರಕ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವು ಇಂದು 20ನೇ ದಿನಕ್ಕೆ ತಲುಪಿದೆ. ಈ ಸಂದರ್ಭದಲ್ಲಿ ಏನನ್ನೂ ಸೇವಿಸದೇ ಒಬ್ಬ ಮನುಷ್ಯ ಎಷ್ಟು ದಿನ ಜೀವಂತ ಇರಬಹುದು ಎನ್ನುವ ಬಗ್ಗೆ ವಿಜ್ಞಾನ ಏನು ಹೇಳುತ್ತದೆ, ನಮ್ಮ ದೇಹದಲ್ಲಿ ಯಾವೆಲ್ಲಾ ಬದಲಾವಣೆ ಆಗುತ್ತದೆ ಎನ್ನುವ ಬಗ್ಗೆ ಇದೀಗ ಸಾಕಷ್ಟು ಚರ್ಚೆ ಆರಂಭವಾಗಿವೆ.

ವಿಜ್ಞಾನದ ಪ್ರಕಾರ, ಒಬ್ಬ ವ್ಯಕ್ತಿ ಎಷ್ಟುದಿನ ಉಪವಾಸ ಇರಬಹುದು ಎನ್ನುವುದು ಆಯಾ ವ್ಯಕ್ತಿಯ ಶರೀರದ ಮೇಲೆ ಅವಲಂಬಿತವಾಗಿರುತ್ತದೆ. ಕೆಲವೊಮ್ಮೆ ವಿಜ್ಞಾನಕ್ಕೂ ಮೀರಿದ ಘಟನೆಗಳು ನಡೆಯುವುದು ಇದೆ. ಎಷ್ಟೋ ಉದಾಹರಣೆಗಳು ನಮ್ಮ ಕಣ್ಣಮುಂದೆಯೇಇರುತ್ತವೆ. ಮಹಾನ್​ ಸಾಧಕ ಸಾಧು-ಸಂತರು ಎಲ್ಲವನ್ನೂ ಮೀರಿ ಉಪವಾಸ ಮಾಡುವುದೂ ಇದೆ. ಆದರೆ ಸಾಮಾನ್ಯ ಜನರ ಬಗ್ಗೆ ಹೇಳುವುದಾದರೆ, ಏನನ್ನೂ ತಿನ್ನದೇ ಕುಡಿಯದೇ ಸಾಮಾನ್ಯ ವ್ಯಕ್ತಿಯೊಬ್ಬ 48 ಗಂಟೆಗಳ ಕಾಲ ಬದುಕಬಹುದಾಗಿದೆ. ಆದರೆ ಬಳಿಕ ಮನುಷ್ಯ ಬದುಕಿದರೂ ದೇಹದಲ್ಲಿ ಏನಾಗುತ್ತದೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

48 ಗಂಟೆಗಳವರೆಗೆ ಮನುಷ್ಯನ ಯಕೃತ್ತಿನಲ್ಲಿ ಸಂಗ್ರಹವಾಗಿರುವ ಗ್ಲೈಕೊಜೆನ್ ರಕ್ತಪ್ರವಾಹಕ್ಕೆ ಬಿಡುಗಡೆಯಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ಸ್ಥಿರವಾಗಿ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಹಸಿವಿನ ಸಮಯದಲ್ಲಿ ದೇಹದಲ್ಲಿ ಸಂಭವಿಸುವ ಮೊದಲ ಪ್ರಕ್ರಿಯೆ ಗ್ಲೈಕೊಜೆನೊಲಿಸಿಸ್. ಒಬ್ಬ ವ್ಯಕ್ತಿಯು ಎರಡು ದಿನಗಳಿಗಿಂತ ಹೆಚ್ಚು ಕಾಲ ಹಸಿವಿನಿಂದ ಬಳಲುತ್ತಿರುವಾಗ, ದೇಹವು ಎರಡನೇ ಹಂತವನ್ನು ಪ್ರವೇಶಿಸುತ್ತದೆ. ಅಲ್ಲಿಯವರೆಗೆ ಮನುಷ್ಯನಿಗೆ ಏನೂ ಆಗುವುದಿಲ್ಲ.

ಏನಿದು ಎರಡನೆಯ ಹಂತ?

ಒಬ್ಬ ವ್ಯಕ್ತಿಯು ಹಲವಾರು ದಿನಗಳವರೆಗೆ ಆಹಾರವಿಲ್ಲದೆ ಇದ್ದಾಗ, ದೇಹವು ತನ್ನ ಶಕ್ತಿಯ ಅಗತ್ಯಗಳನ್ನು ಪೂರೈಸಲು ಸ್ನಾಯು ಪ್ರೋಟೀನ್ ಅನ್ನು ಬಳಸಲು ಪ್ರಾರಂಭಿಸಬಹುದು. ಈ ಸಂದರ್ಭದಲ್ಲಿ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತವೆ. ದೌರ್ಬಲ್ಯ, ತಲೆತಿರುಗುವಿಕೆ, ಕಡಿಮೆ ರಕ್ತದ ಸಕ್ಕರೆ ಮತ್ತು ಸ್ನಾಯುವಿನ ಬಲವನ್ನು ಕಡಿಮೆ ಮಾಡುತ್ತದೆ. ಹೀಗೆ ದೇಹದಲ್ಲಿ ಬೇರೆ ಬೇರೆ ರೀತಿಯ ಸಮಸ್ಯೆಗಳು ತಲೆದೋರಲು ಆರಂಭವಾಗುತ್ತವೆ. ದೇಹವು ಹಲವಾರು ದಿನಗಳವರೆಗೆ ಹಸಿವಿನಿಂದ ಇರುವಾಗ, ಯಕೃತ್ತು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಮತ್ತು ಕೊಬ್ಬಿನಾಮ್ಲಗಳನ್ನು ಕೀಟೋನ್ ದೇಹಗಳಾಗಿ ಪರಿವರ್ತಿಸುತ್ತದೆ. ಇದು ದೇಹದಲ್ಲಿ ಚಯಾಪಚಯ ಬಿಕ್ಕಟ್ಟನ್ನು ಪ್ರಚೋದಿಸುತ್ತದೆ. ಗ್ಲೂಕೋಸ್ ಕೊರತೆಯಿಂದಾಗಿ ದೇಹವು ಕೀಟೋನ್‌ಗಳನ್ನು ಶಕ್ತಿಯಾಗಿ ಬಳಸುತ್ತದೆ.

ಹೆಚ್ಚು ದಿನ ಉಪವಾಸ ಇದ್ದರೆ ಏನಾಗುತ್ತದೆ?

ಸಾಮಾನ್ಯ ಮನುಷ್ಯನೊಬ್ಬ 10-12 ದಿನಗಳವರೆಗೆ ಸತತ ಉಪವಾಸವಿದ್ದರೆ, ದೇಹದ ಪ್ರೋಟೀನ್ ಶಕ್ತಿಗಾಗಿ ಬಳಸಲು ಪ್ರಾರಂಭಿಸುತ್ತದೆ. ಇದು ಸ್ನಾಯು ನಷ್ಟ ಮತ್ತು ತ್ವರಿತ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಇದು ಹಾರ್ಮೋನುಗಳ ಅಸಮತೋಲನ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ದುರ್ಬಲತೆಗೆ ಕಾರಣವಾಗುತ್ತದೆ. ಇದು ವ್ಯಕ್ತಿಯನ್ನು ಸೋಂಕಿನ ಹೆಚ್ಚಿನ ಅಪಾಯಕ್ಕೆ ಸಿಲುಕಿಸುತ್ತದೆ. ಆಹಾರವಿಲ್ಲದೆ ದೇಹವು ಎಷ್ಟು ಸಮಯದವರೆಗೆ ಶಕ್ತಿಯನ್ನು ಉತ್ಪಾದಿಸಬಹುದು ಎಂದು ಹೇಳುವುದು ಕಷ್ಟ. ವಯಸ್ಸು, ಆರೋಗ್ಯ ಮತ್ತು ಇತರ ಅಂಶಗಳನ್ನು ಅವಲಂಬಿಸಿ, ವ್ಯಕ್ತಿಯ ಜೀವಿತಾವಧಿ ಬದಲಾಗಬಹುದು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ISRO: 1 ವರ್ಷದಲ್ಲೇ 120 ಸೈಂಟಿಸ್ಟ್ ರಾಜೀನಾಮೆ! ವಿಜ್ಞಾನಿಗಳು ಬರ್ತಾರೆ ಹೋಗ್ತಾರೆ ಎಂದ ಇಸ್ರೋ ಅಧ್ಯಕ್ಷ
ಗಗನಯಾನಕ್ಕೆ ಸಿದ್ಧತೆ ಮಾಡುವಾಗಲೇ ಇಸ್ರೋದಲ್ಲಿ ಬಿಕ್ಕಟ್ಟು; ಬಾಹ್ಯಾಕಾಶ ಸಂಸ್ಥೆ ತೊರೆದ 100ಕ್ಕೂ ಅಧಿಕ ವಿಜ್ಞಾನಿಗಳು!