2030ರ ವೇಳೆಗೆ 50 ಲಕ್ಷ ಟನ್ ಗ್ರೀನ್ ಹೈಡ್ರೋಜನ್ ಉತ್ಪಾದಿಸುವ ಗುರಿ: ಕೇಂದ್ರ ಸರ್ಕಾರದ ಮಹತ್ವದ ನೀತಿ!

By Suvarna NewsFirst Published Feb 19, 2022, 11:55 AM IST
Highlights

ಕೇಂದ್ರ ಸರ್ಕಾರದ ಹೊಸ ನೀತಿಯು ಜುಲೈ 2025 ರ ಮೊದಲು ಹಸಿರು ಹೈಡ್ರೋಜನ್ ಉತ್ಪಾದನೆಗೆ ವಿದ್ಯುತ್ ಪೂರೈಸಲು ಸ್ಥಾಪಿಸಲಾದ ಯಾವುದೇ ಹೊಸ ನವೀಕರಿಸಬಹುದಾದ ಇಂಧನ ಸ್ಥಾವರಗಳಿಗೆ 25 ವರ್ಷಗಳ ಉಚಿತ ವಿದ್ಯುತ್ ಪ್ರಸರಣವನ್ನು ನೀಡಲಿದೆ. 

ನವದೆಹಲಿ (ಫೆ. 19): 2030 ರ ವೇಳೆಗೆ ಹಸಿರು ಹೈಡ್ರೋಜನ್‌ನ (Green Hydrogen) ದೇಶೀಯ ಉತ್ಪಾದನೆಯನ್ನು 5 ಮಿಲಿಯನ್ ಟನ್‌ಗಳಿಗೆ ಹೆಚ್ಚಿಸುವ ಮತ್ತು ಭಾರತವನ್ನು ಶುದ್ಧ ಇಂಧನಕ್ಕಾಗಿ ರಫ್ತು ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿರುವ ಹಸಿರು ಹೈಡ್ರೋಜನ್ ಮತ್ತು ಹಸಿರು ಅಮೋನಿಯಾ ನೀತಿಯನ್ನು ಕೇಂದ್ರ ಸರ್ಕಾರ ಗುರುವಾರ (ಫೆಬ್ರವರಿ 17) ಸೂಚಿಸಿದೆ. ಗ್ರೀನ್ ಹೈಡ್ರೋಜನನ್ನು ಸೌರ ಅಥವಾ ಗಾಳಿಯಂತಹ ನವೀಕರಿಸಬಹುದಾದ ಶಕ್ತಿ ಬಳಸಿ ಉತ್ಪಾದಿಸಲಾಗುತ್ತದೆ.

ಹಸಿರು ಹೈಡ್ರೋಜನ್ ಅಥವಾ ಅಮೋನಿಯ ತಯಾರಕರು ವಿದ್ಯುತ್ ವಿನಿಮಯದಿಂದ ನವೀಕರಿಸಬಹುದಾದ ಶಕ್ತಿಯನ್ನು ಖರೀದಿಸಬಹುದು ಅಥವಾ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ತಾವೇ ಅಥವಾ ಯಾವುದೇ ಡೆವಲಪರ್ ಮೂಲಕ ಎಲ್ಲಿ ಬೇಕಾದರೂ ಹೊಂದಿಸಬಹುದು ಎಂದು ಗುರುವಾರ ವಿದ್ಯುತ್ ಸಚಿವಾಲಯದ ಅಧಿಸೂಚನೆ ಹೇಳಿದೆ. 

ಇದನ್ನೂ ಓದಿPlastic Pollution: ಜೀವ ಸಂಕಟದಲ್ಲಿ ಜಲಚರ: ಸಮುದ್ರದ ಉದ್ದಗಲಕ್ಕೂ ಹಬ್ಬಿದ ಪ್ಲಾಸ್ಟಿಕ್‌ ಮಾಲಿನ್ಯ!

ಗ್ರೀನ್ ಹೈಡ್ರೋಜನ್ ಎಂದರೇನು?:‌ ಗ್ರೀನ್ ಹೈಡ್ರೋಜನ್ ನೀರಿನ ವಿದ್ಯುದ್ವಿಭಜನೆಯ ಮೂಲಕ ಉತ್ಪತ್ತಿಯಾಗುವ ಹೈಡ್ರೋಜನ್ ಅನಿಲವಾಗಿದೆ. ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಂಡು ನೀರನ್ನು ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ವಿಭಜಿಸುವ ಶಕ್ತಿಯ ತೀವ್ರ ಪ್ರಕ್ರಿಯೆ.

ಗ್ರೀನ್ ಹೈಡ್ರೋಜನ್ ದೇಶೀಯ ಉತ್ಪಾದನೆ ಹೇಗೆ?: ಹೊಸ ನೀತಿಯು ಜುಲೈ 2025 ರ ಮೊದಲು ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ವಿದ್ಯುತ್ ಪೂರೈಸಲು ಸ್ಥಾಪಿಸಲಾದ ಯಾವುದೇ ಹೊಸ ನವೀಕರಿಸಬಹುದಾದ ಇಂಧನ ಸ್ಥಾವರಗಳಿಗೆ 25 ವರ್ಷಗಳ ಉಚಿತ ವಿದ್ಯುತ್ ಪ್ರಸರಣವನ್ನು ನೀಡುತ್ತದೆ. 

ಇದರರ್ಥ ಹಸಿರು ಹೈಡ್ರೋಜನ್ ಉತ್ಪಾದಕರು, ಅಸ್ಸಾಂನಲ್ಲಿರುವ ಹಸಿರು ಹೈಡ್ರೋಜನ್ ಸ್ಥಾವರಕ್ಕೆ ನವೀಕರಿಸಬಹುದಾದ ಶಕ್ತಿಯನ್ನು ಪೂರೈಸಲು ರಾಜಸ್ಥಾನದಲ್ಲಿ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ ಮತ್ತು ಇದಕ್ಕೆ ಯಾವುದೇ ಅಂತರ-ರಾಜ್ಯ ಪ್ರಸರಣ ಶುಲ್ಕವನ್ನು ಪಾವತಿಸಬೇಕಾಗಿಲ್ಲ

ಇದನ್ನೂ ಓದಿ: Mosquitoes are Seeing Red: ಸೊಳ್ಳೆ ಕಡಿತ ತಪ್ಪಿಸಬೇಕಾ? ಹಾಗಾದ್ರೆ ಈ ಬಣ್ಣದ ಬಟ್ಟೆ ಧರಿಸಬೇಡಿ ಎನ್ನುತ್ತೆ ಅಧ್ಯಯನ!

ತೈಲ ಸಂಸ್ಕರಣೆ, ರಸಗೊಬ್ಬರ ಮತ್ತು ಉಕ್ಕಿನ ಕ್ಷೇತ್ರಗಳಂತಹ ಹೈಡ್ರೋಜನ್ ಮತ್ತು ಅಮೋನಿಯದ ಪ್ರಮುಖ ಬಳಕೆದಾರರಿಗೆ ತಮ್ಮ ಸ್ವಂತ ಬಳಕೆಗಾಗಿ ಹಸಿರು ಹೈಡ್ರೋಜನನ್ನು ಉತ್ಪಾದಿಸಲು ಈ ಕ್ರಮವು ಹೆಚ್ಚು ಆರ್ಥಿಕವಾಗಿ ಪರಿಣಮಿಸುತ್ತದೆ. ಈ ವಲಯಗಳು ಪ್ರಸ್ತುತ ನೈಸರ್ಗಿಕ ಅನಿಲ ಅಥವಾ ನಾಫ್ತಾ ಬಳಸಿ ಉತ್ಪಾದಿಸಲಾದ ಬೂದು ಹೈಡ್ರೋಜನ್ ಅಥವಾ ಬೂದು ಅಮೋನಿಯಾವನ್ನು ಬಳಸುತ್ತವೆ. 

ಯೋಜನೆಯ ಲಾಭಗಳೇನು?: ಹಸಿರು ಹೈಡ್ರೋಜನ್ ಉತ್ಪಾದನೆಯನ್ನು ಸ್ಥಾಪಿಸಲು ಅಗತ್ಯವಿರುವ ಎಲ್ಲಾ ಕ್ಲಿಯರೆನ್ಸ್‌ಗಳಿಗೆ ಒಂದೇ ಪೋರ್ಟಲನ್ನು ಒದಗಿಸಲು ಸರ್ಕಾರವು ಸಜ್ಜಾಗಿದೆ ಮತ್ತು ಉತ್ಪಾದಕರಿಗೆ 30 ದಿನಗಳವರೆಗೆ ಡಿಸ್ಕಾಮ್‌ಗಳೊಂದಿಗೆ ಉತ್ಪತ್ತಿಯಾಗುವ ಯಾವುದೇ ಹೆಚ್ಚುವರಿ ನವೀಕರಿಸಬಹುದಾದ ಶಕ್ತಿಯನ್ನು ಬ್ಯಾಂಕ್ ಮಾಡಲು ಮತ್ತು ಅಗತ್ಯವಿರುವಂತೆ ಅದನ್ನು ಬಳಸುವ ಸೌಲಭ್ಯವನ್ನು ಒದಗಿಸುತ್ತದೆ.

"ಈ ಯೋಜನೆಗಳಿಗೆ ಸಮಯ ಮಿತಿಯ ಅನುಮತಿಗಳ ಅವಶ್ಯಕತೆಯು ಹೂಡಿಕೆಯನ್ನು ಉತ್ತೇಜಿಸುತ್ತದೆ ಆದರೆ ಆದ್ಯತೆಯ ಮೇಲೆ ಗ್ರಿಡ್ ಸಂಪರ್ಕವು ಕಾರ್ಯಾಚರಣೆಯ ಪ್ರಕ್ರಿಯೆಗಳನ್ನು ಸರಾಗಗೊಳಿಸುತ್ತದೆ" ಎಂದು ಗ್ರೀನ್ ಹೈಡ್ರೋಜನ್‌ನ CII ಟಾಸ್ಕ್‌ಫೋರ್ಸ್‌ನ ಅಧ್ಯಕ್ಷ ಮತ್ತು ಟೊಯೊಟಾ ಕಿರ್ಲೋಸ್ಕರ್‌ನ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸರ್ ಹೇಳಿದರು.

ಇದನ್ನೂ ಓದಿ: Brain Health: ದೇಶದಲ್ಲೇ ಮೊದಲು, ಕರ್ನಾಟಕ ಮೆದುಳು ಆರೋಗ್ಯ, ಮಹತ್ವ ತಿಳಿಸಿದ ಸುಧಾಕರ್

ಗ್ರೀನ್ ಹೈಡ್ರೋಜನ್/ಅಮೋನಿಯಾವನ್ನು ಉತ್ಪಾದಿಸಲು ಸ್ಥಾಪಿಸಲಾದ ಇಂಧನ ಸ್ಥಾವರಗಳಿಗೆ ಆದ್ಯತೆಯ ಆಧಾರದ ಮೇಲೆ ಗ್ರಿಡ್‌ಗೆ ಸಂಪರ್ಕವನ್ನು ನೀಡಲಾಗುವುದು ಎಂದು ವಿದ್ಯುತ್ ಸಚಿವಾಲಯ ಹೇಳಿದೆ. ವಿದ್ಯುತ್ ವಿತರಣಾ ಕಂಪನಿಗಳು ಗ್ರೀನ್ ಹೈಡ್ರೋಜನ್ ಉತ್ಪಾದಕರಿಗೆ ಪೂರೈಸಲು ನವೀಕರಿಸಬಹುದಾದ ಶಕ್ತಿಯನ್ನು ಸಂಗ್ರಹಿಸಬಹುದು ಆದರೆ ಹೊಸ ನೀತಿಯ ಅಡಿಯಲ್ಲಿ ರಾಜ್ಯ ಆಯೋಗವು ನಿರ್ಧರಿಸಿದಂತೆ ಸಂಗ್ರಹಣೆಯ ವೆಚ್ಚ, ವೀಲಿಂಗ್ ಶುಲ್ಕಗಳು ಮತ್ತು ಸಣ್ಣ ಮಾರ್ಜಿನನ್ನು ಮಾತ್ರ ಒಳಗೊಂಡಿರುವ ರಿಯಾಯಿತಿ ದರದಲ್ಲಿ ಅದನ್ನು ಮಾಡಬೇಕಾಗುತ್ತದೆ. 

ರಫ್ತಿಗೆ ಬೆಂಬಲ: ನೀತಿಯ ಅನ್ವಯ ಬಂದರು ಅಧಿಕಾರಿಗಳು ರಫ್ತು ಮಾಡುವ ಮೊದಲು ಸಂಗ್ರಹಣೆಗಾಗಿ ಬಂದರುಗಳ ಬಳಿ ಬಂಕರ್‌ಗಳನ್ನು ಸ್ಥಾಪಿಸಲು ಗ್ರೀನ್ ಹೈಡ್ರೋಜನ್ ಮತ್ತು ಗ್ರೀನ್‌ ಅಮೋನಿಯಾ ಉತ್ಪಾದಕರಿಗೆ ಅನ್ವಯವಾಗುವ ಶುಲ್ಕಗಳಲ್ಲಿ ಭೂಮಿಯನ್ನು ಒದಗಿಸುತ್ತಾರೆ. ಭಾರತದಲ್ಲಿ ಉತ್ಪಾದನೆಯಾಗುವ ಹಸಿರು ಹೈಡ್ರೋಜನ್‌ಗೆ ಜರ್ಮನಿ ಮತ್ತು ಜಪಾನ್ ಪ್ರಮುಖ ಮಾರುಕಟ್ಟೆಯಾಗಬಹುದು ಎಂದು ಪವರ್ ಮಿನಿಸ್ಟರ್ ಆರ್‌ಕೆ ಸಿಂಗ್ ಈ ಹಿಂದೆ ಹೇಳಿದ್ದರು.

click me!